Back
Home » ಬಾಲಿವುಡ್
ಮಾಜಿ ವಿಶ್ವ ಸುಂದರಿಯ ನಯಾ ಲುಕ್ ಗೆ ಅಭಿಮಾನಿಗಳು ಫಿದಾ
Oneindia | 29th Sep, 2019 10:53 AM

ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ರ್ಯಾಂಪ್ ವಾಕ್ ಮಾಡಿ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಪರ್ಪಲ್ ಕಲರ್ ಗೌನ್ ನಲ್ಲಿ ಮಿಂಚಿರುವ ಐಶ್ವರ್ಯ ರೈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಪ್ಯಾರೀಸ್ ನಲ್ಲಿ ನಡೆದ ಫ್ಯಾಷನ್ ವೀಕ್ ನಲ್ಲಿ ಬಾಲಿವುಡ್ ನ ಬ್ಯೂಟಿಫುಲ್ ನಟಿ ಐಶ್ವರ್ಯ ಕ್ಯಾಟ್ ವಾಕ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಪರ್ಪಲ್ ಕಲರ್ ಕಾಸ್ಟ್ಯೂಮ್ ಧರಿಸಿರುವ ಐಶ್ ಜೊತೆಗೆ ಪರ್ಪಲ್ ಬಣ್ಣದ ಐ ಮೇಕಪ್ ಕೂಡ ಅಭಿಮಾನಿಗಳ ಮನ ಸೆಳೆಯುತ್ತಿದೆ. ಆರಾಧ್ಯಾಗೆ ಜನ್ಮ ನೀಡಿದ ನಂತರ ಐಶ್ವರ್ಯ ಎರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಐಶ್ವರ್ಯ ಕಮ್ ಬ್ಯಾಕ್ ಸಿನಿಮಾಗಳು ಹೇಳಿಕೊಳ್ಳುವಷ್ಟು ಹೆಸರು ಮಾಡಿಲ್ಲ.

ಐಶ್ವರ್ಯ ರೈ ಕೆಣಕಿ ತಪ್ಪು ಮಾಡಿದ್ದ ವಿವೇಕ್ ಒಬೆರಾಯ್ ಕ್ಷಮೆಯಾಚನೆ

ಆದ್ರೆ ಅಪರೂಪಕೊಮ್ಮೆ ರ್ಯಾಂಪ್ ಮೇಲೆ ಹೆಜ್ಜೆ ಹಾಕುವ ಮೂಲಕ ಐಶ್ವರ್ಯ ವಿಭಿನ್ನ ಮತ್ತು ಆಕರ್ಷಕ ಕಾಸ್ಟ್ಯೂಮ್ ನಲ್ಲಿ ಕಂಗೊಳಿಸುತ್ತಾರೆ. ಐಶ್ವರ್ಯ ಸದ್ಯ ಬಾಲಿವುಡ್ ನಿಂದ ಕಾಲಿವುಡ್ ಚಿತ್ರರಂಗಕ್ಕೆ ಹಾರಿದ್ದಾರೆ. ಬಾಲಿವುಡ್ ನಲ್ಲಿ ಹೇಳಿಕೊಳ್ಳುವಷ್ಟು ಸಕ್ಸಸ್ ಸಿಗದ ಹಿನ್ನಲೆ ಮತ್ತೆ ಕಾಲಿವುಡ್ ಕಡೆ ಪಯಣ ಬೆಳೆಸಿದ್ದಾರೆ.

ಬಾಲಿವುಡ್ ನ ಫನ್ನೆ ಖಾನ್ ಚಿತ್ರದ ನಂತರ ಐಶ್ವರ್ಯ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿಲ್ಲ. ಆದ್ರೀಗ ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಚಿತ್ರದಲ್ಲಿ ಐಶ್ವರ್ಯ ಬಣ್ಣ ಹಚ್ಚುತ್ತಿದ್ದಾರೆ. ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ಐಶ್ವರ್ಯ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

   
 
ಹೆಲ್ತ್