Back
Home » ಬಾಲಿವುಡ್
'ಜೀರೋ' ಸೋಲಿನ ಬಳಿಕ ಅಚ್ಚರಿ ನಿರ್ಧಾರ ತಗೊಂಡ ಶಾರೂಖ್ ಖಾನ್
Oneindia | 29th Sep, 2019 05:59 PM

ಜೀರೋ ಸಿನಿಮಾದ ಬಳಿಕ ಶಾರೂಖ್ ಖಾನ್ ಯಾವ ಚಿತ್ರ ಮಾಡಲಿದ್ದಾರೆ ಎಂಬುದು ಭಾರಿ ಕುತೂಹಲ ಮೂಡಿಸಿದೆ. ಸಾಲು ಸಾಲು ಪ್ರಾಜೆಕ್ಟ್ ಗಳು ಶಾರೂಖ್ ಬಳಿ ಬಂದರೂ, ಯಾವುದನ್ನೂ ಒಪ್ಪಿಕೊಳ್ಳುತ್ತಿಲ್ಲ. ಕಾರಣ, ಸತತವಾಗಿ ಕಾಣುತ್ತಿರುವ ಸೋಲು.

'ಹ್ಯಾಪಿ ನ್ಯೂ ಇಯರ್' ಚಿತ್ರದ ಬಳಿಕ ಮಾಡಿದ ಯಾವ ಚಿತ್ರಗಳು ಶಾರೂಖ್ ಕೈಹಿಡಿಯಲಿಲ್ಲ. ಇದರಿಂದ ಶಾರೂಖ್ ಕೂಡ ಚಿಂತೆಗೆ ಒಳಗಾಗಿದ್ದರು. ಈ ಮಧ್ಯೆ ಡಾನ್-3 ಮಾಡ್ತಾರೆ ಎನ್ನಲಾಗುತ್ತಿದೆ. ಆದರೆ, ಡಾನ್ 3 ಗೂ ಮುಂಚೆ ಇನ್ನೊಂದು ಸಿನಿಮಾ ಮಾಡುವ ಕಡೆ ಕಿಂಗ್ ಖಾನ್ ಆಸಕ್ತಿ ತೋರಿದ್ದಾರಂತೆ.

ನಿಮ್ಮಪ್ಪನ ಮರ್ಯಾದೆ ಕಳೆಯಬೇಡ: ಹಾಫ್ ಫೋಟೋ ಹಾಕಿದ ಶಾರೂಖ್ ಪುತ್ರಿಗೆ ಕ್ಲಾಸ್

ಹೌದು, ಹಾಲಿವುಡ್ ನ 'ಕಿಲ್ ಬಿಲ್' ಚಿತ್ರದ ರೀಮೇಕ್ ಮಾಡಲು ಮುಂದಾಗಿರುವ ಶಾರೂಖ್ ಖಾನ್, ಈ ಚಿತ್ರದಲ್ಲಿ ನೆಗಿಟೀವ್ ಶೇಡ್ ಪಾತ್ರ ಮಾಡಲು ಮನಸ್ಸು ಮಾಡಿದ್ದಾರಂತೆ.

ಶಾರೂಖ್ ಖಾನ್ ಕಾಮೆಂಟ್ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ವಿಜಯ್ ಸೇತುಪತಿ

ನಿಖಿಲ್ ದ್ವಿವೇದಿ ಅವರು ಕಿಲ್ ಬಿಲ್ ಚಿತ್ರದ ರೀಮೇಕ್ ಹಕ್ಕು ಖರೀದಿ ಮಾಡಿದ್ದು, ಅನುರಾಗ್ ಕಶ್ಯಪ್ ನಿರ್ದೇಶನ ಮಾಡುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ನೆಗಿಟೀವ್ ಪಾತ್ರ ಮಾಡುವಂತೆ ಶಾರೂಖ್ ಗೆ ಅಪ್ರೋಚ್ ಮಾಡಲಾಗಿದೆಯಂತೆ.

ಕ್ವಾಂಟಿನ್ ಟ್ಯಾರಂಟಿನೊ ನಿರ್ದೇಶನದ ಈ ಚಿತ್ರದಲ್ಲಿ ಉಮಾ ಥರ್ಮನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.

   
 
ಹೆಲ್ತ್