Back
Home » ಆರೋಗ್ಯ
ಗಾಂಧಿ ಜಯಂತಿ ವಿಶೇಷ: ಗಾಂಧೀಜಿಯವರಿಂದ ಕಲಿಯಬೇಕಾದ ಆರೋಗ್ಯ ಮತ್ತು ಫಿಟ್ನೆಸ್ ಪಾಠಗಳು
Boldsky | 1st Oct, 2019 01:15 PM
 • 1. ಅಹಿಂಸೆ ಪ್ರತಿಪಾದಿಸಿ

  ಗಾಂಧೀಜಿ ಅವರು ಅಹಿಂಸೆಯಲ್ಲಿ ನಂಬಿಕೆಯನ್ನು ಇಟ್ಟಿದ್ದರು. ಅಹಿಂಸೆ ಎನ್ನುವ ಪದವು ಎಲ್ಲಾ ಜೀವಿಗಳನ್ನು ಗೌರವಿಸುವುದು ಮತ್ತು ಜೀವನದಲ್ಲಿ ಅಹಿಂಸೆಯ ಮಾರ್ಗದಿಂದ ಮುನ್ನಡೆಯುವುದು. ನಾವು ಕೂಡ ಇದೇ ರೀತಿಯ ಮಂತ್ರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಆಗ ತುಂಬಾ ಶಾಂತವಾಗಿರಬಹುದು, ಅಧಿಕ ರಕ್ತದೊತ್ತಡ ಕಡಿಮೆ ಮಾಡಬಹುದು, ಹೃದಯನಾಳದ ಕಾಯಿಲೆಗಳು ತಗ್ಗುವುದು ಮತ್ತು ಮಾನಸಿಕ ಆರೋಗ್ಯವು ಸುಧಾರಣೆ ಆಗುವುದು. ಈ ನೀತಿಯಿಂದಾಗಿ ನಾವು ಒತ್ತಡಕ್ಕೆ ಸಿಲುಕಿದ ವೇಳೆ ಅತಿಯಾಗಿ ತಿನ್ನುವುದು ಮತ್ತು ಜಂಕ್ ಫುಡ್ ತಿನ್ನುವುದು ತಪ್ಪುವುದು.


 • 2. ಬೇಗ ಮಲಗಿ ಮತ್ತು ಬೇಗ ಎದ್ದೇಳಿ

  ಮಹಾತ್ಮ ಗಾಂಧಿ ಅವರು ಪ್ರತಿನಿತ್ಯ ಕೇವಲ 4-5 ಗಂಟೆಗಳ ಕಾಲ ಮಾತ್ರ ನಿದ್ರಿಸುತ್ತಿದ್ದರು ಮತ್ತು ಮುಂಜಾನೆ ಸೂರ್ಯ ಮೂಡುವ ಮೊದಲು ಎದ್ದೇಳುತ್ತಿದ್ದರು. ಆದರೆ ಇಂದಿನ ತಜ್ಞರು ಹೇಳುವ ಪ್ರಕಾರ ವಯಸ್ಕರಿಗೆ ದಿನದಲ್ಲಿ 8 ಗಂಟೆ ನಿದ್ರೆ ಬೇಕು. ಇದರಿಂದ ನೀವು ಪ್ರತಿನಿತ್ಯ ಬೇಗ ಮಲಗಿ ಮತ್ತು ಬೇಗ ಎದ್ದೇಳಿ. ಮುಂಜಾನೆ ಬೇಗ ಎದ್ದರೆ ಆಗ ಉತ್ಪಾದಕತೆಯು ಹೆಚ್ಚಾಗುವುದು ಮತ್ತು ಒತ್ತಡ ಕಡಿಮೆ ಆಗುವುದು.


 • 3. ಉತ್ತಮ ಆರೋಗ್ಯಕ್ಕಾಗಿ ಉಪವಾಸ

  ಉಪವಾಸವು ಹಲವಾರು ಆರೋಗ್ಯ ಲಾಭಗಳನ್ನು ನೀಡುತ್ತದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಉಪವಾಸದಿಂದಾಗಿ ನಮ್ಮ ದೈನಂದಿನ ಜೀವನದಲ್ಲಿ ಶಿಸ್ತನ್ನು ಸ್ಥಾಪಿಸಬಹುದು ಮತ್ತು ಹಲವಾರು ರೀತಿಯ ದೈಹಿಕ ಲಾಭಗಳು ಕೂಡ ಇದೆ. ಉಪವಾಸ ಮಾಡಿದರೆ ಅದರಿಂದ ದೇಹವು ವಿಷವನ್ನು ಹೊರಗೆ ಹಾಕುವುದು, ಹೊಟ್ಟೆಯನ್ನು ಶುದ್ಧೀಕರಿಸುವುದು ಮತ್ತು ದೇಹದಲ್ಲಿ ಇರುವಂತಹ ಬಳಕೆ ಆಗದೆ ಇರುವಂತಹ ಕೊಬ್ಬು ಮತ್ತು ಪೋಷಕಾಂಶವನ್ನು ಇದು ಬಳಸಿಕೊಳ್ಳುವುದು. ಇದರಿಂದ ಪ್ರತಿರೋಧಕ ವ್ಯವಸ್ಥೆಯು ಬಲಗೊಳ್ಳುವುದು. ಉಪವಾಸದಿಂದ ಸೋಂಕನ್ನು ದೂರವಿಡಬಹುದು ಮತ್ತು ಕರುಳಿನ ಕ್ರಿಯೆಯನ್ನು ನಿಯಂತ್ರಿಸಬಹುದು.


 • 4. ಏನು ತಿನ್ನುತ್ತೀರಿ ಎನ್ನುವ ಬಗ್ಗೆ ಗಮನಹರಿಸಿ

  ಇಂದು ನಮ್ಮ ಮುಂದೆ ಸಾವಿರಾರು ಆಯ್ಕೆಗಳು ಇರುವ ಕಾರಣದಿಂದಾಗಿ ನಾವು ಜಂಕ್ ಫುಡ್ ಮತ್ತು ಸಂಸ್ಕರಿತ ಆಹಾರದ ಕಡೆ ಹೆಚ್ಚು ಆಕರ್ಷಿತರಾಗುತ್ತೇವೆ. ಇದರಿಂದ ಆರೋಗ್ಯಕರ ಹಾಗೂ ತಾಜಾ ಆಹಾರವನ್ನು ಕಡೆಗಣಿಸುತ್ತೇವೆ. ``ನಾಲಗೆ ರುಚಿಗಾಗಿ ನಾವು ಬೇಕಿರುವಂತಹ ಆಹಾರವನ್ನು ಸೇವಿಸಿ ದೇಹವನ್ನು ಕಸದ ಬುಟ್ಟಿ ರೀತಿ ನೋಡಬಾರದು'' ಎಂದು ಗಾಂಧೀಜಿ ಹೇಳಿದ್ದಾರೆ. ಗಾಂಧೀಜಿ ಅವರು ಆರು ವರ್ಷಗಳ ಕಾಲ ತರಕಾರಿ ಸೇವನೆ ಮಾಡಿದ್ದರು ಮತ್ತು ಅವರು ಈ ಆಹಾರ ಕ್ರಮವು ತುಂಬಾ ಆರೋಗ್ಯಕರ ಮತ್ತು ಸ್ವಯಂ ನಿಗ್ರಹಕ್ಕೆ ಪರಿಣಾಮಕಾರಿ ಎಂದು ಸಾಬೀತು ಮಾಡಿದ್ದರು.


 • 5. ನೀವು ಬಯಸಿದಂತೆ ನಡೆಯಿರಿ

  ದಂಡಿ ಸತ್ಯಾಗ್ರಹವು ನಮಗೆಲ್ಲರಿಗೂ ತಿಳಿದಿದೆ. ಅಲ್ಲಿಗೆ ಗಾಂಧೀಜಿ ಅವರು ಸುಮಾರು 390 ಕಿ.ಮೀ. ಪಾದಯಾತ್ರೆ ಮಾಡಿದ್ದರು. ಸುಮಾರು ಹತ್ತು ಸಾವಿರ ಜನರು ಇದರಲ್ಲಿ ಭಾಗಿಯಾಗಿದ್ದರು. ಪ್ರತಿಭಟನೆಗೋ ಅಥವಾ ಅಲ್ಲವೋ ಗೊತ್ತಿಲ್ಲ, ಆದರೆ ಪಾದಯಾತ್ರೆಯು ನಮಗೆ ತುಂಬಾ ಸಹಕಾರಿ ಆಗಿರಲಿದೆ. ಪ್ರತಿನಿತ್ಯ ನಾವು ಒಂದು ಗಂಟೆ ಕಾಲ ನಡೆಯಬೇಕು ಎಂದು ಪೋಷಕಾಂಶ ತಜ್ಞರು ಕೂಡ ಹೇಳಿದ್ದರು.


 • 6. ಆಲ್ಕೋಹಾಲ್ ಮತ್ತು ತಂಬಾಕು ತ್ಯಜಿಸಿ

  ಆಲ್ಕೋಹಾಲ್ ಮತ್ತು ತಂಬಾಕು ಆರೋಗ್ಯಕ್ಕೆ ಹಾನಿಕರ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೂ ಇದನ್ನು ಬಿಡಲು ದೃಢ ಮನಸ್ಸು ಮಾತ್ರ ಮಾಡುವುದಿಲ್ಲ. ತಂಬಾಕು ಸೇವನೆಯಿಂದಾಗಿ ಶ್ವಾಸಕೋಶದ ಕ್ಯಾನ್ಸರ್, ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯು ಬರಬಹುದು. ಆಲ್ಕೋಹಾಲ್ ನಿಂದಾಗಿ ಹೃದಯದ ಕಾಯಿಲೆ, ಹಲವಾರು ರೀತಿಯ ಕ್ಯಾನ್ಸರ್ ಮತ್ತು ಮಧುಮೇಹ ಬರಬಹುದು. ಇದರಿಂದ ಇವುಗಳನ್ನು ತ್ಯಜಿಸುವುದು ಒಲಿತು.


 • 7. ಶಾಂತವಾಗಿರಲು ಧ್ಯಾನ

  ಭಾರತದಲ್ಲಿ ಅನಾದಿ ಕಾಲದಿಂದಲೂ ಧಾನ್ಯ ಎನ್ನುವುದು ಇತ್ತು. ಇದನ್ನು ಋಷಿಮುನಿಗಳು ಕರಗತ ಮಾಡಿಕೊಂಡಿದ್ದರು. ಧ್ಯಾನ ಮಾಡಿದರೆ ಆಗ ಆತಂಕ ಮತ್ತು ಒತ್ತಡ ಕಡಿಮೆ ಆಗುವುದು. ಪ್ರತಿನಿತ್ಯ ಧ್ಯಾನ ಮಾಡಿದರೆ ಅದರಿಂದ ಶಾಂತವಾಗಿರಲು, ಅಧಿಕ ರಕ್ತದೊತ್ತಡ ಕಡಿಮೆ ಮಾಡಲು ಮತ್ತು ಆರೋಗ್ಯಕರ ಹಾಗೂ ಸಂತೋಷದ ಜೀವನ ಸಾಗಿಸಲು ನೆರವಾಗುವುದು.


 • 8. ಧನಾತ್ಮಕವಾಗಿ ಚಿಂತಿಸಿ

  ಆಲೋಚನೆಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುವುದು. ದ್ವೇಷ, ಕೋಪ ಇಟ್ಟುಕೊಳ್ಳುವುದು, ನಕಾರಾತ್ಮಕವಾಗಿ ಆಲೋಚನೆ ಮಾಡುವುದು ನಮ್ಮ ಜೀವನದ ಮೇಲೆ ಪರಿಣಾಮ ಬೀರುವುದು. ``ಮನುಷ್ಯ, ಆತನ ಆಲೋಚನೆಗಳ ಉತ್ಪನ್ನ. ಆತ ಏನು ಯೋಚಿಸುತ್ತಾನೆಯಾ, ಹಾಗೆ ಆಗುತ್ತಾನೆ'' ಎಂದು ಗಾಂಧೀಜಿ ಹೇಳಿದ್ದರು. ಇದು ಇಂದಿಗೂ ಪ್ರಾಮುಖ್ಯತೆ ಪಡೆದಿದೆ. ಇದರಿಂದ ನಾವು ಧನಾತ್ಮಕವಾಗಿ ಆಲೋಚನೆ ಮಾಡುವಂತೆ ಮನಸ್ಸನ್ನು ತಯಾರು ಮಾಡಬೇಕು. ಪ್ರತಿಯೊಂದು ಪರಿಸ್ಥಿತಿಗೆ ಹೊಂದಿಕೊಳ್ಳಲು ಮತ್ತು ಜೀವನದಲ್ಲಿ ಧನಾತ್ಮಕವಾಗಿ ಇರಲು ಪ್ರಯತ್ನಿಸಿದರೆ ಆಗ ಖಂಡಿತವಾಗಿಯೂ ನಮಗೆ ಸಮಸ್ಯೆಗೆ ಪರಿಹಾರ ಸಿಗುವುದು. ಇದರಿಂದ ಉತ್ಪಾದಕತೆ, ಮಾನಸಿಕ ಆರೋಗ್ಯ ಮತ್ತು ಸಂಪೂರ್ಣ ಸಾಮಾಜಿಕ ಕೌಶಲ್ಯಗಳು ವೃದ್ಧಿಸುವುದು.


 • 9. ಬೇರೆಯವರನ್ನು ಮತ್ತು ನಿಮ್ಮನ್ನು ಕ್ಷಮಿಸಿಬಿಡಿ

  ಕ್ಷಮೆ ಎನ್ನುವುದು ಅಷ್ಟು ಸುಲಭದ ಮಾತಲ್ಲ. ವರ್ಷಗಳ ಕಾಲ ನಾವು ಇದನ್ನು ಅಳವಡಿಸಿಕೊಂಡು ಬಂದರೆ ಮಾತ್ರ ಕ್ಷಮಿಸಲು ಸಾಧ್ಯವಾಗುವುದು. ಗಾಂಧೀಜಿ ಅವರು ಶಾಂತಿಯ ಮೇಲೆ ನಂಬಿಕೆಯನ್ನಿಟ್ಟಿದ್ದರು. ಅವರು ಹೇಳುವ ಪ್ರಕಾರ``ದುರ್ಬಲರು ಯಾವತ್ತಿಗೂ ಕ್ಷಮಿಸುವುದಿಲ್ಲ, ಬಲಿಷ್ಠರಿಗೆ ಕ್ಷಮಿಸುವುದು ಅವರ ಗುಣವಾಗಿರುವುದು.'' ದ್ವೇಷ ಮತ್ತು ಕೋಪ ಇದ್ದರೆ ಆಗ ನಮ್ಮ ಮನಸ್ಸಿನಲ್ಲಿ ಹೊಸ ಹಾಗೂ ಧನಾತ್ಮಕ ವಿಚಾರಗಳಿಗೆ ತುಂಬಾ ಕಡಿಮೆ ಜಾಗವಿರುವುದು. ಇದರಿಂದ ನಮ್ಮ ಮೇಲೆ ಒತ್ತಡವು ಹೆಚ್ಚಾಗುವುದು. ಇದು ನಮ್ಮ ಮಾನಸಿಕ ಆರೋಗ್ಯದ ಮೇಲೆ ಹಾಗೂ ದೈಹಿಕವಾಗಿಯೂ ಪರಿಣಾಮ ಬೀರುವುದು. ಕ್ಷಮೆಯಿಂದಾಗಿ ಖಿನ್ನತೆ, ಆತಂಕ ಮತ್ತು ನಿಶ್ಯಕ್ತಿಯಿಂದ ದೂರವಿರಬಹುದು.


 • 10. ಸಹಾನೂಭೂತಿ

  ಆಧುನಿಕ ಯುಗದಲ್ಲಿ ಸಹಾನೂಭೂತಿ ಎನ್ನುವುದೇ ಇರಲ್ಲ. ಸಹಾನೂಭೂತಿ ಬಗ್ಗೆ ನಾವು ಎಲ್ಲರೂ ತಪ್ಪಾಗಿ ಅರ್ಥೈಸಿಕೊಂಡಿದ್ದೇವೆ ಮತ್ತು ಇತರರ ಮೇಲೆ ಇದು ನಮ್ಮ ಹೆಚ್ಚುವರಿ ಪ್ರಯತ್ನದ ಭಾಗವೆಂದು ತಿಳಿದಿದ್ದೇವೆ. ಆದರೆ ಸಹಾನೂಭೂತಿಯಿಂದಾಗಿ ಹಲವಾರು ವೈಯಕ್ತಿಕ ಲಾಭಗಳು ಕೂಡ ಇದೆ ಎಂದು ಅರ್ಥ ಮಾಡಿಕೊಂಡಿಲ್ಲ. ಸಹಾನೂಭೂತಿ ಇದ್ದರೆ ಆಗ ತೀರ್ಪು ನೀಡುವುದು ಕಡಿಮೆ ಆಗುವುದು, ಇತರರ ಬಗ್ಗೆ ಹೆಚ್ಚು ಅನುಭೂತಿ ಇರುವುದು. ಸಹಾನೂಭೂತಿ ಇದ್ದರೆ ಆಗ ಮನಸ್ಸು ಕೂಡ ಮುಕ್ತವಾಗಿರುವುದು.
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ತನ್ನ ಸರಳತೆ, ಅಹಿಂಸೆ ಇತ್ಯಾದಿಗಳಿಂದ ವಿಶ್ವದೆಲ್ಲೆಡೆಯಲ್ಲಿ ಜನಪ್ರಿಯರಾದವರು. ಗುಂಡಿಗೆ ಹೆದರದ ಬ್ರಿಟಿಷರನ್ನು ಅಹಿಂಸೆಯ ಮಾರ್ಗದ ಮೂಲಕವಾಗಿ ದೇಶ ಬಿಟ್ಟು ತೊಗಲುವಂತೆ ಮಾಡಿದರು. ಮಹಾತ್ಮ ಗಾಂಧಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾಗೆ ಅವರ ಜೀವನದ ಕೆಲವೊಂದು ಅಂಶಗಳು ಕೂಡ ನಮಗೆಲ್ಲರಿಗೂ ತುಂಬಾ ಪ್ರೇರಣೆ ನೀಡುವುದು. ಯಾಕೆಂದರೆ ದೈಹಿಕವಾಗಿ ದೊಡ್ಡ ಶಕ್ತಿಯನ್ನು ಹೊಂದಿರದ ಮಹಾತ್ಮ ಗಾಂಧಿ ಅವರು ತನ್ನ ಆತ್ಮಸ್ಥೈರ್ಯದ ಮೂಲಕವೇ ಜನರನ್ನು ಒಟ್ಟುಗೂಡಿಸಿ, ಬ್ರಿಟಿಷರು ಭಾರತ ಬಿಟ್ಟು ಹೋಗುವಂತೆ ಮಾಡಿದರು.

ಬಾಹ್ಯವಾಗಿ ಶಕ್ತಿಹೀನವಾಗಿ ಕಾಣಿಸಿದರೂ ಆಂತರಿಕವಾಗಿ ತುಂಬಾ ಬಲಿಷ್ಠರಾಗಿದ್ದ ಮಹಾತ್ಮ ಗಾಂಧಿ ಅವರು ವಾರಗಳ ಕಾಲ ಉಪವಾಸ ನಡೆಸುತ್ತಿದ್ದರು. ತನ್ನ ಉಪವಾಸ ಸತ್ಯಾಗ್ರಹದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಮಹಾತ್ಮ ಗಾಂಧಿ ಅವರು ತನ್ನ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಿದ್ದರು ಎಂದು ಅವರ ಬಗ್ಗೆ ಬಂದಿರುವ ಹಲವಾರು ಪುಸ್ತಕಗಳು ಹೇಳಿವೆ. ಗಾಂಧೀಜಿ ಅವರ ಆರೋಗ್ಯಕರ ಜೀವನದ ಕೆಲವೊಂದು ಸಲಹೆಗಳನ್ನು ನಾವು ಕೂಡ ಪಾಲಿಸಿಕೊಂಡು ಹೋದರೆ ಆಗ ಜೀವನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಗಾಂಧೀಜಿ ಅವರು ಪಾಲಿಸುತ್ತಿದ್ದ ಕ್ರಮಗಳು ಯಾವುದು ಎಂದು ತಿಳಿಯುವ...

 
ಹೆಲ್ತ್