Back
Home » ಬಾಲಿವುಡ್
ಗಾಂಧಿ ಜಯಂತಿ ದಿನ ಅಭಿಮಾನಿಗಳಿಗೆ ವಿಶೇಷ ಸಂದೇಶ ನೀಡಿದ ನಟ ಸಲ್ಮಾನ್ ಖಾನ್
Oneindia | 2nd Oct, 2019 01:11 PM

ಮಹಾತ್ಮ ಗಾಂಧೀಜಿ ಹುಟ್ಟಿದ ದಿನ. ರಾಷ್ಟ್ರಪಿತನ ಹುಟ್ಟಹಬ್ಬವನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಗಾಂಧಿ ಜಯಂತಿಗೆ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ. ಸಾಕಷ್ಟು ಸೆಲೆಬ್ರಿಟಿಗಳು ಸಹ ಗಾಂಧಿ ಜಯಂತಿಗೆ ಶುಭಕೋರುತ್ತಿದ್ದಾರೆ.

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಸಹ ವಿಶೇಷವಾಗಿ ಶುಭಕೋರುವ ಜೊತೆಗೆ ಅಭಿಮಾನಿಗಳಿಗೆ ಮುಖ್ಯವಾದ ಸಂದೇಶ ನೀಡಿದ್ದಾರೆ. ಹೌದು, ಚುಲ್ ಬುಲ್ ಪಾಂಡೆ ಅಭಿಮಾನಿಗಳಿಗೆ ಯಾವಾಗಲು ಫಿಟ್ ಆಗಿರಿ ಅಲ್ಲದೆ ಸ್ವಚ್ಚ ಭಾರತದ ಕಡೆ ಗಮನ ಕೊಡಿ ಎಂದು ಹೇಳಿದ್ದಾರೆ.

ಬ್ಯಾನ್ ಮಾಡ್ಕೋ ಹೋಗು : ಫೋಟೋಗ್ರಾಫರ್ ವಿರುದ್ಧ ಸಲ್ಮಾನ್ ಗರಂ

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿರುವ ಸಲ್ಮಾನ್ ವಿಡಿಯೋದಲ್ಲಿ " ಅಕ್ಬೋಬರ್ 2 ಗಾಂಧಿ ಜಯಂತಿ. ಮಹಾತ್ಮ ಗಾಂಧಿ ರಾಷ್ಟ್ರದ ಪಿತಾಮಹ. ಎಲ್ಲರು ಸಂಭ್ರಮದಿಂದ ಗಾಂಧಿ ಜಯಂತಿ ಆಚರಣೆ ಮಾಡಿ. ಜೊತೆಗೆ ಸ್ವಲ್ಪ ಅಲ್ಲ ತುಂಬ ಜಾಸ್ತಿನೇ ಫಿಟ್ ಇಂಡಿಯಾ ಕಡೆಗಮನ ಹರಿಸಿ. ಅಲ್ಲದೆ ಭಾರತವನ್ನು ಸ್ವಚ್ಛ ಭಾರತವನ್ನಾಗಿಸಲು ಪ್ರತಿಯೊಬ್ಬರೂ ಶ್ರಮಿಸಿ. ಕ್ಲೀನ್ ಇಂಡಿಯ, ಕ್ಲೀನ್ ಇಂಡಿಯನ್ಸ್, ಫಿಟ್ ಇಂಡಿಯಾ, ಫಿಟ್ ಇಂಡಿಯನ್ಸ್" ಎಂದು ಹೇಳಿದ್ದಾರೆ.

ಈ ವಿಡಿಯೋ ವನ್ನು ಶೇರ್ ಮಾಡುವ ಜೊತೆಗೆ ಒಂದು ಕ್ಯಾಪ್ಷನ್ ಅನ್ನು ಹಾಕಿದ್ದಾರೆ. "ಗಾಂಧಿ ಜಯಂತಿ ಸಂದರ್ಭದಲ್ಲಿ ಅಭಿಮಾನಿಗಳಿಗೆ ಮೆಸೇಜ್ ರವಾನಿಸಲು ಭಾಯ್ ಹೇಳಿದ್ದಾರೆ. ಹಾಗಾಗಿ ಚುಲ್ ಬುಲ್ ಪಾಂಡೆ ಕೂಡ ರೆಡಿಯಾಗಿದ್ದಾನೆ" ಎಂದು ಬರೆದುಕೊಂಡಿದ್ದಾರೆ.

ಸಲ್ಮಾನ್ ಖಾನ್ ಸದ್ಯ ದಬಾಂಗ್-3 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರೀಕರಣದ ಕೊನೆಯ ಹಂತದಲ್ಲಿದೆ ದಬಾಂಗ್-3. ಸಲ್ಮಾನ್ ಖಾನ್ ಜೊತೆ ಸ್ಯಾಂಡಲ್ ವುಡ್ ಮಾಣಿಕ್ಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಸಲ್ಮಾನ್ ಗೆ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ ಸುದೀಪ್. ಚಿತ್ರ ಈ ವರ್ಷದ ಕೊನೆಯಲ್ಲಿ ಡಿಸೆಂಬರ್ 20ಕ್ಕೆ ತೆರೆಗೆ ಬರುತ್ತಿದೆ.

   
 
ಹೆಲ್ತ್