Back
Home » ಆರೋಗ್ಯ
ಒಂದೇ ಒಂದು ರಕ್ತ ಪರೀಕ್ಷೆಯಿಂದ ನಮ್ಮ ದೇಹದ ಎಷ್ಟೆಲ್ಲಾ ವಿಷಯಗಳನ್ನು ಪತ್ತೆ ಮಾಡಬಹುದು ಗೊತ್ತೆ?
Boldsky | 4th Oct, 2019 12:06 PM
 • ತುಂಬಾ ಪ್ರಬಲ ಪರೀಕ್ಷೆ

  ಸರಾಸರಿ ರಕ್ತ ಪರೀಕ್ಷೆ ಮಾಡಲು ಸುಮಾರು 3-10 ಮಿ.ಲೀ. ರಕ್ತವನ್ನು ಸೂಜಿ ಮೂಲಕ ತೆಗೆಯಲಾಗುತ್ತದೆ. ಇದು ಸಣ್ಣ ಪ್ರಮಾಣವಾದರೂ ಇದರಿಂದಲೇ ವೈದ್ಯರು ಎಲ್ಲವನ್ನು ತಿಳಿದುಕೊಳ್ಳುವರು. ಸಂಪೂರ್ಣ ರಕ್ತ ಪರೀಕ್ಷೆ(ಸಿಬಿಸಿ) ಸಾಮಾನ್ಯವಾಗಿ ವಾರ್ಷಿಕ ತಪಾಸಣೆ ವೇಳೆ ಸೂಚಿಸಲಾಗುತ್ತದೆ, ಇದು ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು ಮತ್ತು ಪ್ಲೇಟ್ ಲೆಟ್ ಗಳ ಬಗ್ಗೆ ಮಾಹಿತಿ ನೀಡುವುದು. ಇದು ನಿಮ್ಮ ಸಂಪೂರ್ಣ ಆರೋಗ್ಯವನ್ನು ತಿಳಿಸುವುದು ಮತ್ತು ವಿವಿಧ ರೀತಿಯ ಆರೋಗ್ಯ ಸಮಸ್ಯೆಯನ್ನು ಪತ್ತೆ ಹಚ್ಚಬಲ್ಲದು. ವೈರಸ್, ಹಾರ್ಮೋನ್ ಮತ್ತು ಬೇರೆ ರೀತಿಯ ರೋಗಗಳಿಗೆ ವಿವಿಧ ರೀತಿಯ ಪರೀಕ್ಷೆಗಳನ್ನು ವೈದ್ಯರು ಸೂಚಿಸುವರು. ಇದರಲ್ಲಿ ಕೆಲವೊಂದು ನಿಮಗೆ ತಿಳಿಯದೆ ಇರಬಹುದು. ಇದು ಯಾವುದು ಎಂದು ನೀವು ಈ ಲೇಖನ ಮೂಲಕ ತಿಳಿಯಿರಿ.


 • ನೀವು ಗರ್ಭಿಣಿ (ಋತುಚಕ್ರ ಆಗದೆ ಇರುವ ಮೊದಲು)

  ಮೂತ್ರ ಪರೀಕ್ಷೆಯು ನಿಮ್ಮ ಋತುಚಕ್ರವು ಆರಂಭವಾಗುವ ಒಂದು ಅಥವಾ ಎರಡು ದಿನದ ಬಳಿಕ ಗರ್ಭಧಾರಣೆ ಹಾರ್ಮೋನ್ (ಎಚ್ ಸಿಜಿ) ನ್ನು ಪತ್ತೆ ಮಾಡುವುದು. ಆದರೆ ರಕ್ತ ಪರೀಕ್ಷೆಯು ಎಚ್ ಸಿಜಿ ನ್ನು ಮೂತ್ರ ಪರೀಕ್ಷೆ ಪತ್ತೆ ಮಾಡಲು ಕೆಲವು ಹಂತದ ಮೊದಲೇ ಇದನ್ನು ಪತ್ತೆ ಮಾಡುವುದು. ಹೀಗಾಗಿ ನಿಮಗೆ ಕೆಲವು ದಿನಗಳ ಮೊದಲೇ ನೀವು ಗರ್ಭಿಣಿಯೇ ಎಂಬುದನ್ನು ಇದು ತಿಳಿಸುತ್ತದೆ. ಇನ್ನು ಮುಂದೆ ನೀವು ಗರ್ಭಿಣಿಯೇ ಎಂದು ಮುಟ್ಟಿಗೂ ಮುಂಚೆಯೇ ತಿಳಿಯಬೇಕೆಂದಿದ್ದರೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ.


 • ಫಲವತ್ತತೆ

  ರಕ್ತ ಪರೀಕ್ಷೆಯಿಂದಾಗಿ ಸಂತಾನೋತ್ಪತ್ತಿ ಬಗ್ಗೆ ನೀವು ತಿಳಿದುಕೊಳ್ಳಬಹುದು. ತಾಯಿಯ ಅಂಡಾಣುವಿನ ಕೋಶಗಳ ವಯಸ್ಸಿನ ಬಗ್ಗೆ ಕೂಡ ಹೇಳಬಹುದು. ಇದರಿಂದ ಆಕೆಗೆ ಗರ್ಭಧಾರಣೆ ಮಾಡುವುದು ಕಷ್ಟವೇ ಅಥವಾ ಅಲ್ಲವೇ ಎನ್ನುವುದು ತಿಳಿಯಲು ಸಾಧ್ಯವಾಗುವುದು.


 • ನಿಮ್ಮ ಜೈವಿಕ ವಯಸ್ಸು

  ಹುಟ್ಟಿದ ದಿನಾಂಕವು ನಿಮ್ಮ ದಾಖಲೆಗಳನ್ನು ತೋರಿಸಬಹುದು. ಆದರೆ ಕೆಲವೊಂದು ಜೀವನಶೈಲಿ ಮತ್ತು ಅನುವಂಶೀಯತೆಯಿಂದಾಗಿ ಜೈವಿಕ ವಯಸ್ಸು ಹೆಚ್ಚಾಗಬಹುದು ಅಥವಾ ಕಡಿಮೆ ಆಗಬಹುದು. ನಿಮ್ಮ ವಯಸ್ಸಿನವರಿಗೆ ಹೋಲಿಕೆ ಮಾಡಿದರೆ ದೇಹಕ್ಕೆ ಎಷ್ಟು ವಯಸ್ಸಾಗಿದೆ ಎಂದು ತಿಳಿಯಬಹುದು. ತುಂಬಾ ಆರೋಗ್ಯಕರವಾಗಿರುವ 60ರ ಹರೆಯದ ವ್ಯಕ್ತಿಯೊಬ್ಬರು ಪೋಷಕಾಂಶಗಳ ಆಹಾರ ತಿಂದು, ವ್ಯಾಯಾಮ ಮಾಡುತ್ತಾ, ಯಾವುದೇ ದುರಾಭ್ಯಾಸವಿಲ್ಲದೆ ಇದ್ದರೆ ಆಗ ಅವರ ವಯಸ್ಸು ಜೈವಿಕ ವಯಸ್ಸು 50 ಆಗಿರಬಹುದು. ರಕ್ತ ಪರೀಕ್ಷೆಯಲ್ಲಿ ಜೀವಕೋಶಗಳು ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದು ತಿಳಿಯಲಾಗುತ್ತದೆ ಎಂಬುದು ನಿಮಗೆ ಗೊತ್ತೆ. ವಯಸ್ಸಿಕ್ಕಿಂತಲೂ ಹೆಚ್ಚು ನೀವು ವಯಸ್ಸಾದವರಂತೆ ಕಂಡುಬಂದರೆ ಆಗ ನಿಮ್ಮ ಜೀವನಶೈಲಿ ಬದಲಾವಣೆ ಮಾಡಿಕೊಳ್ಳುವುದು ಅತೀ ಅಗತ್ಯ.


 • ಖಿನ್ನತೆ ಅಥವಾ ಆತಂಕ

  ರಕ್ತ ಪರೀಕ್ಷೆಯು ಕೇವಲ ದೈಹಿಕ ಆರೋಗ್ಯವನ್ನು ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನು ಸಹ ಹೇಳುತ್ತದೆ. ಅಲ್ಲದೆ, ಕೆಲವೊಂದು ಸೂಚನೆಗಳನ್ನು ಕೂಡ ನೀಡಲು ಸಮರ್ಥವಾಗಿರುವುದು. ಕೆಲವೊಂದು ಮನಸ್ಥಿತಿ ಬದಲಾವಣೆ ಮಾಡುವಂತಹ ಸಿರೋಟೊನಿನ್ ನ್ನು ರಕ್ತದ ಮೂಲಕ ಪರೀಕ್ಷೆ ಮಾಡಬಹುದು. ಸಿರೋಟೊನಿನ್ ಎನ್ನುವುದು ರಕ್ತದ ಪ್ಲೇಟ್ ಲೆಟ್ ಮತ್ತು ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಕಂಡುಬರುವುದು. ಇದು ಕಡಿಮೆ ಇರುವಂತಹ ಜನರು ಖಿನ್ನತೆ ಹಾಗೂ ಆತಂಕದಿಂದ ಬಳಲುವರು.


 • ಬುದ್ಧಿಮಾಂದ್ಯತೆಯ ಅಧಿಕ ಅಪಾಯ

  ಅಲ್ಝೈಮರ್ ಕಾಯಿಲೆ ಅಥವಾ ಇನ್ನೊಂದು ರೀತಿಯ ಬುದ್ಧಿಮಾಂದ್ಯತೆಯಾಗಿರಬಹುದು, ಇದರು ಹಲವಾರು ಅಪಾಯಗಳನ್ನು ಹೊಂದಿಕೊಂಡಿರುವುದು. ಆದರೆ ರಕ್ತ ಪರೀಕ್ಷೆ ಮಾಡಿಸಿಕೊಂಡರೆ ಆಗ ಕೆಲವೊಂದು ರಾಸಾಯನಿಕಗಳಿಂದ ವ್ಯಕ್ತಿಗೆ ಈ ಅಪಾಯದ ಮಟ್ಟವು ಎಷ್ಟಾಗಿದೆ ಎಂದು ತಿಳಿಯಬಹುದು. ಅಮೈಲಾಯ್ಡ್ ಬೀಟಾ ಎನ್ನುವ ಪ್ರೋಟೀನ್ ನ್ನು ಬುದ್ಧಿಮಾಂದ್ಯತೆ ಬರುವ 20 ವರ್ಷಗಳ ಮೊದಲೇ ಪತ್ತೆ ಮಾಡಬಹುದು ಎನ್ನುವುದು ರಕ್ತ ಪರೀಕ್ಷೆಯ ಬಹುದೊಡ್ಡ ಲಾಭ. ಪಾಸಿಟಿವ್ ಪರೀಕ್ಷೆಯಿಂದಾಗಿ ನಿಮಗೆ ಬುದ್ಧಿಮಾಂದ್ಯತೆ ಬರುವುದು ಖಚಿತ ಎಂದು ಹೇಳಲಾಗದು ಎಂದು ಡಾ. ನುಂಜಿಯಾಟೊ-ಘೋಬಾಶಿ ಹೇಳುತ್ತಾರೆ. ನಿಮಗೆ ಇದು ಬರುವ ಸಾಧ್ಯತೆಗಳು ಇದೆ ಎಂದು ಹೇಳಬಹುದು. ಆದರೆ ನಿಮ್ಮ ಬದುಕನ್ನು ಉಳಿಸುವಂತಹ ಕೆಲವೊಂದು ವೈದ್ಯಕೀಯ ಪರೀಕ್ಷೆಗಳನ್ನು ನೀವು ತಪ್ಪಿಸಿಕೊಳ್ಳಬಾರದು.


 • ಸಂಘರ್ಷಣೆ

  ನೀವು ಸಂಘರ್ಷಣೆಗೆ ಒಳಗಾಗಿದ್ದೀರಾ ಎಂದು ತಿಳಿಯಲು ವೈದ್ಯರು ನರಪರೀಕ್ಷೆ, ಮೆದುಳಿನ ಪರೀಕ್ಷೆ ಮತ್ತು ಇತರ ಪರೀಕ್ಷೆ ಮಾಡಬಹುದು. ಆದರೆ ರಕ್ತ ಪರೀಕ್ಷೆಯಿಂದ ಸೀರಮ್ ವಿದ್ಯುದ್ವಿಚ್ಛೇದಗಳ ಸ್ಥಿತಿ ಬಗ್ಗೆ ತಿಳಿದುಬರಲಿದೆ.


 • ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ?

  ಕಿಡ್ನಿಯು ನಮ್ಮ ದೇಹದ ಪ್ರಮುಖ ಅಂಗವಾಗಿದೆ. ಇದು ದೇಹದಲ್ಲಿರುವಂತಹ ಕಲ್ಮಷ ಹಾಗೂ ವಿಷಕಾರಿ ಅಂಶಗಳನ್ನು ಮೂತ್ರದ ಮೂಲಕ ಹೊರಹಾಕಲು ನೆರವಾಗುವುದು. ಆದರೆ ಕೆಲವೊಂದು ಸಲ ವಿಷಕಾರಿ ಅಂಶಗಳು ಹೊರಹಾಕಲು ಸಾಧ್ಯವಾಗದು. ಮುಖ್ಯವಾಗಿ ವ್ಯಾಯಾಮ ಮಾಡಿದ ಬಳಿಕ ಸ್ನಾಯುಗಳೂ ಕ್ರಿಯೇಟಿನೈನ್ ಎನ್ನುವ ಅಂಶವನ್ನು ಬಿಡುಗಡೆ ಮಾಡುವುದು. ಇದನ್ನು ಕಿಡ್ನಿಯು ಶುದ್ಧೀಕರಿಸುವುದು. ಕ್ರಿಯೇಟಿನೈನ್ ಮಟ್ಟವು ಮಹಿಳೆಯರಲ್ಲಿ 1.2 ಮತ್ತು ಪುರುಷರಲ್ಲಿ 1.4 ಕ್ಕಿಂತ ಹೆಚ್ಚಾದರೆ ಆಗ ಇದು ಕಿಡ್ನಿಗೆ ಸಮಸ್ಯೆಯಾಗುವುದು ಎಂದು ನ್ಯಾಶನಲ್ ಕಿಡ್ನಿ ಫೌಂಡೇಶನ್ ಹೇಳಿದೆ. ಇದರಿಂದ ರಕ್ತದ ಯೂರಿಯಾ ನಿಟ್ರೋಜನ್(ಬಿಯುಎನ್) ಮತ್ತು ಗ್ಲೊಮೆರ್ಯೂಕಲ್ ಫಿಲ್ಟರೇಷನ್ ರೇಟ್(ಜಿಎಫ್ ಆರ್) ತುಂಬಾ ಕಡಿಮೆ ಇರುವುದು. ಇದೆಲ್ಲವನ್ನು ರಕ್ತ ಪರೀಕ್ಷೆಯಲ್ಲಿ ಕಂಡುಹಿಡಿಯಬಹುದು. ಇದರಿಂದಾಗಿ ನಿಮಗೆ ಬಾಹ್ಯ ಅಂದರೆ ನಿರ್ಜಲೀಕರಣ ಅಥವಾ ಆಂತರಿಕ ಅಂದರೆ ಕಿಡ್ನಿ ಕಲ್ಲಿನ ಸಮಸ್ಯೆಯು ಬರಬಹುದು.


 • ಮಧುಮೇಹದ ಚಿಕಿತ್ಸೆಯು ಸರಿಯಾದ ಮಾರ್ಗದಲ್ಲಿದೆಯಾ?

  ಎ1ಸಿ ರಕ್ತ ಪರೀಕ್ಷೆಯು ವೈದ್ಯರಿಗೆ ರಕ್ತದಲ್ಲಿನ ದಿನನಿತ್ಯದ ಸಕ್ಕರೆ ಮಟ್ಟವು ಯಾವ ರೀತಿಯಲ್ಲಿದೆ ಎಂದು ತಿಳಿದುಬರಲಿದೆ ಮತ್ತು ಮಧುಮೇಹವನ್ನು ಇದರಿಂದ ಸರಿಯಾಗಿ ಅರ್ಥ ಮಾಡಬಹುದು. 4-5.6 ಮಟ್ಟವು ಸಾಮಾನ್ಯ, 5.7ರಿಂದ 6.4 ರ ಮಟ್ಟದ ಮಧುಮೇಹ ಬರುವಂತಹ ಸಾಧ್ಯತೆಯ ಅಪಾಯವು ಅತಿಯಾಗಿದೆ ಮತ್ತು 6.5 ಅಥವಾ ಅದಕ್ಕಿಂತ ಹೆಚ್ಚು ಇದ್ದರೆ ಆಗ ಮಧುಮೇಹ ಬಂದಿದೆ ಎಂದು ಹೇಳಬಹುದು. ಮಧುಮೇಹವು ಪತ್ತೆ ಮಾಡಿದ ಬಳಿಕವೂ ಇದೇ ಪರೀಕ್ಷೆಯು ತುಂಬಾ ಉಪಕಾರಿ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಕಳೆದ ಮೂರು ತಿಂಗಳಿನ ರಕ್ತದ ಸರಾಸರಿಯನ್ನು ಇದು ಪರಿಗಣಿಸುತ್ತದೆ.


 • ಅತಿಯಾಗಿ ವಿಟಮಿನ್ ಸೇವಿಸುತ್ತಿದ್ದೀರಿ

  ವಿಟಮಿನ್ ಕೊರತೆ ಇದೆಯಾ ಎಂದು ತಿಳಿಯುವುದು ಅತೀ ಅಗತ್ಯವಾಗಿರುವುದು. ಆದರೆ ವಿಟಮಿನ್ ಅತಿಯಾದರೆ ಆಗ ಏನು ಎನ್ನುವ ಪ್ರಶ್ನೆ ಬರುವುದು. ರಕ್ತ ಪರೀಕ್ಷೆ ಮೂಲಕವಾಗಿ ವಿಟಮಿನ್ ಅತಿಯಾಗಿದೆಯಾ ಎಂದು ಪತ್ತೆ ಮಾಡಬಹುದು. ಹೆಚ್ಚಿನ ವಿಟಮಿನ್ ಗಳು ನೀರಿನಲ್ಲಿ ಕರಗುವುದು. ಇದರಿಂದ ನೀವು ಇದನ್ನು ಸೇವಿಸಿದರೆ ಆಗ ಅದು ದೇಹದಲ್ಲಿ ಹಾಗೆ ಹಾದು ಹೋಗುವುದು. ಆದರೆ ವಿಟಮಿನ್ ಎ, ಡಿ, ಇ ಮತ್ತು ಕೆ ಕೊಬ್ಬು ಹೀರಿಕೊಳ್ಳುವುದು. ಇದರಿಂದಾಗಿ ಇದು ವ್ಯವಸ್ಥೆಯಲ್ಲೇ ಇರುವುದು ಮತ್ತು ಇದು ಅತಿಯಾಗಬಹುದು. ವಿಟಮಿನ್ ಅತಿಯಾದರೆ ಆ ಪರಿಸ್ಥಿತಿಯನ್ನು ಹೈಪರ್ ವಿಟಮಿನೊಸಿಸ್ ಎಂದು ಕರೆಯುವರು. ಇದು ಕೆಲವೊಂದು ಸಮಸ್ಯೆಗಳನ್ನು ಉಂಟು ಮಾಡಬಹುದು. ಇದು ವಾಕರಿಯಿಂದ ಹಿಡಿದು ಯಕೃತ್ ಗೆ ಹಾನಿ ಉಂಟು ಮಾಡಬಹುದು. ಮುಂದಿನ ಸಲ ಮೌನ ಸಂಕೇತಗಳನ್ನು ನೀವು ಅರಿತುಕೊಂಡು ಚಿಕಿತ್ಸೆ ಪಡೆಯಿರಿ.
ಅನಾರೋಗ್ಯವೆಂದು ವೈದ್ಯರ ಬಳಿಗೆ ಹೋದಾಗ ಏನಾದರೂ ಸಮಸ್ಯೆಯಿದ್ದರೆ ಆಗ ರಕ್ತ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸುವರು. ರಕ್ತ ಪರೀಕ್ಷೆಯಿಂದ ದೇಹದಲ್ಲಿ ಯಾವುದೇ ರೀತಿಯ ಅನಾರೋಗ್ಯವು ತಿಳಿದುಬರುವುದು ಅಥವಾ ಅದರ ಸುಳಿವು ನೀಡುವುದು. ಹೀಗಾಗಿ ರಕ್ತ ಪರೀಕ್ಷೆಯು ವೈದ್ಯಕೀಯ ಲೋಕದ ಒಂದು ವರದಾನವೆಂದು ಹೇಳಬಹುದು. ವೈದ್ಯರು ಹೆಚ್ಚಾಗಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಸರಿಯಾದ ಕಾಯಿಲೆಯನ್ನು ಪತ್ತೆ ಮಾಡಿ ಇದರ ಬಳಿಕ ಚಿಕಿತ್ಸೆ ಆರಂಭಿಸುವರು. ಇದರಿಂದ ಆ ರೋಗಿಗೆ ಸರಿಯಾಗಿ ಚಿಕಿತ್ಸೆ ಸಿಗಲು ಸಾಧ್ಯವಾಗುವುದು. ಒಂದು ಹನಿ ರಕ್ತದಿಂದ ವೈದ್ಯರು ಯಾವೆಲ್ಲಾ ರೋಗಗಳನ್ನು ಪತ್ತೆ ಮಾಡಬಲ್ಲರು ಎಂದು ಕೇಳಿದರೆ ನಿಮಗೆ ಖಂಡಿತವಾಗಿಯೂ ಅಚ್ಚರಿಯಾಗಬಹುದು. ಈ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ನೀವು ಇದನ್ನು ತಿಳಿಯಲು ತಯಾರಾಗಿ.

 
ಹೆಲ್ತ್