Back
Home » ಸಮ್ಮಿಲನ
ಶನಿವಾರದ ದಿನ ಭವಿಷ್ಯ (5-10-2019)
Boldsky | 5th Oct, 2019 07:15 AM
 • ಮೇಷ: 21 ಮಾರ್ಚ್ 19 ಏಪ್ರಿಲ್

  ನಿಮ್ಮ ಭೂತಕಾಲದ ಕೆಲವು ಸಂಗತಿಗಳು ಭವಿಷ್ಯಕ್ಕೆ ಗೊಂದಲವನ್ನು ಉಂಟುಮಾಡುವುದು. ನೀವು ಎಲ್ಲಾ ಸಂಗತಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಕಲಿಯಬೇಕಿದೆ. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸೂಕ್ತ ಸಮತೋಲನವನ್ನು ಕಾಯ್ದುಕೊಳ್ಳಬೇಕು. ನಿಮ್ಮ ತಪ್ಪಿನ ಬಗ್ಗೆ ಸೂಕ್ತ ವಿಶ್ಲೇಷಣೆ ಕೈಗೊಳ್ಳಿ. ಸುಧಾರಣೆಯ ಕುರಿತು ಚಿಂತನೆ ನಡೆಸಿ. ಶಾಂತಿಯುತವಾಗಿ ಬದುಕಲು ನೀವು ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಹಣಕಾಸಿನ ವಿಷಯದಲ್ಲಿ ಅನುಕೂಲಕರವಾದ ಸ್ಥಿತಿಯಿರುತ್ತದೆ. ಭವಿಷ್ಯದ ಬಗ್ಗೆ ನೀವು ಯೋಜಿಸುತ್ತೀರಿ. ಕುಟುಂಬದ ವಿಷಯದಲ್ಲಿ ಇಂದು ಸಾಮಾನ್ಯವಾದ ದಿನ. ಆರೋಗ್ಯದಲ್ಲಿ ಸುಧಾರಣೆ ಉಂಟಾಗುತ್ತಿದೆ ಎಂದು ಭಾವಿಸುವಿರಿ.
  ಅದೃಷ್ಟ ಬಣ್ಣ: ಗುಲಾಬಿ
  ಅದೃಷ್ಟ ಸಂಖ್ಯೆ: 28
  ಅದೃಷ್ಟ ಸಮಯ: ಬೆಳಿಗ್ಗೆ 7:35 ರಿಂದ ಸಂಜೆ 7:30 ರವರೆಗೆ


 • ವೃಷಭ: 20 ಏಪ್ರಿಲ್-20 ಮೇ

  ಕುಟುಂಬದ ಕೆಲವು ಜವಾಬ್ದಾರಿಯನ್ನು ನೀವು ನಿರ್ವಹಿಸಬೇಕಾಗುವುದು. ಅವು ದಿನಪೂರ್ತಿ ನಿಮ್ಮನ್ನು ಹಿಡಿದಿಡುವಂತೆ ಮಾಡುವ ಸಾಧ್ಯತೆಗಳು ಇವೆ. ನಿಮ್ಮ ಪಾಲಕರ ಹಾಗೂ ಸಹೋದರರ ಸಲಹೆಯನ್ನು ಪಡೆದುಕೊಳ್ಳುವಿರಿ. ನಿಮ್ಮ ಸಂಗಾತಿಯು ಅತ್ಯಂತ ಜವಾಬ್ದಾರಿ ವರ್ತನೆಯನ್ನು ತೋರುವರು. ನಿಮ್ಮ ಮಕ್ಕಳು ಪರಾಕ್ರಮಿಗಳಾಗುವುದರಿಂದ ಅವರನ್ನು ನಿರ್ಬಂಧಿಸುವ ಗೋಜಿಗೆ ಹೋಗದಿರಿ. ಕಲೆ ಹಾಗೂ ಕ್ರೀಡೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಇರುವವರು ಉತ್ತಮ ಪ್ರದರ್ಶನವನ್ನು ನೀಡುವರು. ಕೆಲಸದ ಬಗ್ಗೆ ಸೂಕ್ತ ಮಾರ್ಗದರ್ಶನವನ್ನು ಪಡೆದುಕೊಳ್ಳುವಿರಿ. ಕೆಲವರು ಉದ್ಯೋಗದಲ್ಲಿ ಬದಲಾವಣೆ ಯೋಜನೆಯನ್ನು ಕೈಗೊಳ್ಳುವರು. ವ್ಯವಹಾರದಲ್ಲಿ ಕೆಲವು ಸುಧಾರಣೆಯನ್ನು ಮಾಡಿಕೊಳ್ಳುವಿರಿ. ಉದ್ಯೋಗ ಕ್ಷೇತ್ರದಲ್ಲಿ ಗಾಸಿಪ್ ಮಾಡುವುದನ್ನು ನಿಲ್ಲಿಸಿ. ನಿಮ್ಮ ಮುಂಜಾನೆ ಉತ್ತಮ ನಡಿಗೆಯಿಂದ ದಿನವನ್ನು ಆರಂಭಿಸಿ.
  ಅದೃಷ್ಟ ಬಣ್ಣ: ಹಸಿರು
  ಅದೃಷ್ಟ ಸಂಖ್ಯೆ: 20
  ಅದೃಷ್ಟ ಸಮಯ: ಸಂಜೆ 7:45 ರಿಂದ 10:30 ರವರೆಗೆ


 • ಮಿಥುನ: 21 ಮೇ-20 ಜೂನ್

  ನಿಮ್ಮ ತಪ್ಪು ಅಥವಾ ಅಸಭ್ಯ ವರ್ತನೆಯು ಸಂಗಾತಿಗೆ ನೋವನ್ನುಂಟುಮಾಡುವುದು. ಸಣ್ಣ ಪುಟ್ಟ ವಿಷಯಗಳು ಸಹ ನಿಮಗೆ ಅಸಮಧಾನವನ್ನು ಉಂಟುಮಾಡುತ್ತವೆ. ಸಮಸ್ಯೆಗಳಿಂದ ಹೊರ ಬರಲು ನಿಮ್ಮ ಸ್ನೇಹಿತರು ಸೂಕ್ತ ಸಲಹೆ ಹಾಗೂ ಸಹಾಯವನ್ನು ಮಾಡುವರು. ಈಗಾಗಲೇ ಯೋಜಿಸಿಕೊಂಡ ಪ್ರವಾಸವನ್ನು ನೀವು ರದ್ದು ಮಾಡಬೇಕಾಗುವುದು. ಇದು ನಿಮ್ಮ ಮಕ್ಕಳಿಗೆ ನಿರಾಸೆಯನ್ನುಂಟುಮಾಡುವುದು. ಹಣವನ್ನು ದುರುಪಯೋಗ ಪಡಿಸಿಕೊಂಡರೆ ಎಲ್ಲರಲ್ಲೂ ಕಳವಳ ಉಂಟಾಗುವುದು. ಹೆಚ್ಚುವರಿ ಆದಾಯಕ್ಕೆ ದೀರ್ಘಕಾಲದ ಸೂಕ್ತ ಯೋಜನೆ ಕೈಗೊಳ್ಳುವುದು ಮುಖ್ಯ. ಬಾಕಿ ಉಳಿದ ಕೆಲಸವನ್ನು ನಿರ್ವಹಿಸುವಿರಿ. ಒಂದಿಷ್ಟು ವಿಶ್ರಾಂತಿಯು ನಿಮಗೆ ದೊರೆಯುವುದು. ಉದ್ಯಮಿಗಳು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುವುದು.
  ಅದೃಷ್ಟ ಬಣ್ಣ: ಪಚ್ಚೆ
  ಅದೃಷ್ಟ ಸಂಖ್ಯೆ: 20
  ಅದೃಷ್ಟ ಸಮಯ: ಸಂಜೆ 6:45 ರಿಂದ 10:30 ರವರೆಗೆ


 • ಕರ್ಕ: 21 ಜೂನ್ 22 ಜುಲೈ

  ಆರೋಗ್ಯವಾಗಿರುವಿದರಿಂದ ಪಡೆದುಕೊಳ್ಳುವ ಲಾಭ ಹಾಗೂ ಮಹತ್ವವನ್ನು ತಿಳಿದುಕೊಳ್ಳುವಿರಿ. ಅನಗತ್ಯ ಔಷಧಗಳಿಂದ ದೂರವಿರಿ. ವ್ಯಾಯಾಮಕ್ಕಾಗಿ ನೀವು ಹೆಚ್ಚು ಶ್ರಮವನ್ನು ವಹಿಸಿ. ಅದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಆರೋಗ್ಯ ಪ್ರಜ್ಞೆಯನ್ನು ಹೊಂದುತ್ತೀರಿ ಎಂದರೆ ಅದು ಸಮೃದ್ಧಿಯ ಸಂಕೇತವಾಗಿರುತ್ತದೆ. ಕೆಲಸದ ವಿಷಯದಲ್ಲಿ ನಿಮಗೆ ಯಶಸ್ವಿಯ ದಿನವಾಗಿರುತ್ತದೆ. ನಿಮ್ಮ ಸಹೋದ್ಯೋಗಿಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಸಹಾಯವನ್ನು ಮಾಡುವಿರಿ. ವೃತ್ತಿ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕ ಚಿಂತನೆ ನಡೆಸಿದರೆ ಗೊಂದಲ ಉಂಟಾಗುವುದು. ಉದ್ಯಮ ಮತ್ತು ನಿಮ್ಮ ಕಾರ್ಯಕ್ಕೆ ಸೂಕ್ತ ಆದ್ಯತೆ ನೀಡಬೇಕು. ಇದು ಕುಟುಂಬದ ವಿಷಯದಲ್ಲಿ ವಿಶ್ರಾಂತಿಯನ್ನು ಪಡೆಯುವ ದಿನವಾಗಿರುತ್ತದೆ. ಒಡಹುಟ್ಟಿದವರ ಬಂಧವು ವಿಶೇಷವಾಗಿರುತ್ತದೆ.
  ಅದೃಷ್ಟ ಬಣ್ಣ: ಮರೂನ್
  ಅದೃಷ್ಟ ಸಂಖ್ಯೆ: 6
  ಅದೃಷ್ಟ ಸಮಯ: ಬೆಳಿಗ್ಗೆ 8:35 ರಿಂದ ಮಧ್ಯಾಹ್ನ 3:30 ರವರೆಗೆ


 • ಸಿಂಹ: 23 ಜುಲೈ-22 ಆಗಸ್ಟ್

  ಕೆಲಸಕ್ಕೆ ಸಂಬಂಧಿಸಿದಂತೆ ಇಂದು ನಿಮಗೆ ಕಠಿಣವಾದ ದಿನ. ಆಯಾಸವು ನಿಮ್ಮನ್ನು ದುರ್ಬಲಗೊಳಿಸುತ್ತದೆ. ಅತಿಯಾದ ಕೆಲಸವು ನಿಮಗೆ ಒತ್ತಡ ನೀಡುತ್ತದೆ. ವ್ಯವಹಾರದಲ್ಲಿ ವಿಷಯಗಳು ಉತ್ತಮವಾಗಿರುತ್ತವೆ. ಕುಟುಂಬದಲ್ಲಿ ಸಂತೋಷದ ಸಮಯವನ್ನು ಕಳೆಯುವಿರಿ. ವಿದ್ಯಾರ್ಥಿಗಳು ಶೈಕ್ಷಣಿಕ ವಿಷಯದಲ್ಲಿ ಪ್ರಕಾಶಮಾನವಾದ ಪ್ರದರ್ಶನ ನೀಡುವರು. ನಿಮ್ಮ ಪ್ರೀತಿಯೊಂದಿಗಿನ ಬಂಧವು ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯ ಸಹಾಯದಿಂದ ನೀವು ಕುಟುಂಬದ ಅನೇಕ ಸಂಗತಿಗಳನ್ನು ಸರಿಪಡಿಸುವಿರಿ. ಹೊಟ್ಟೆ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದವರಿಗೆ ಕೊಂಚ ಸುಧಾರಣೆ ಉಂಟಾಗುವುದು.
  ಅದೃಷ್ಟ ಬಣ್ಣ: ಹಳದಿ
  ಅದೃಷ್ಟ ಸಂಖ್ಯೆ: 17
  ಅದೃಷ್ಟ ಸಮಯ: ಮಧ್ಯಾಹ್ನ 1.30 ರಿಂದ 6:45 ರವರೆಗೆ


 • ಕನ್ಯಾ: 23 ಆಗಸ್ಟ್ -22 ಸಪ್ಟೆಂಬರ್

  ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮ ಸಾಮಥ್ರ್ಯವನ್ನು ಪ್ರಶಂಸಿಸಲಾಗುವುದು. ಕಾರ್ಪೋರೇಟ್ ವಲಯದಲ್ಲಿ ಕೆಲಸ ಮಾಡುವವರು ಕಷ್ಟದ ಸಂಗತಿಗಳನ್ನು ಎದುರಿಸಬೇಕಾಗುವುದು. ದೀರ್ಘ ಕಾಲದಿಂದ ಕಾಡುತ್ತಿದ್ದ ಕಾನೂನು ಸಮಸ್ಯೆಗಳು ನಿವಾರಣೆಯನ್ನು ಹೊಂದುತ್ತವೆ. ಒಂದಿಷ್ಟು ನಿರಾಳತೆಯ ಭಾವನೆಯನ್ನು ಪಡೆದುಕೊಳ್ಳುವಿರಿ. ಕುಟುಂಬದ ವಿಷಯದಲ್ಲಿ ಇಂದು ನಿಮಗೆ ಅತ್ಯಂತ ಪ್ರಮುಖವಾದ ದಿನ. ಕುಟುಂಬದ ವಿಷಯಕ್ಕೆ ಸಂಬಂಧಿಸಿದ ನಿಮ್ಮ ತಪ್ಪುಗಳಿಗೆ ನೀವೇ ಕ್ಷಮೆ ಕೇಳುವಿರಿ. ಪ್ರೇಮಿಯೊಂದಿಗೆ ಸಂಜೆ ಸುಂದರ ಭೋಜನವನ್ನು ಹೊಂದುವಿರಿ. ಸಾರ್ವಜನಿಕ ಕ್ಷೇತ್ರದಲ್ಲಿ ಇರುವವರು ಹೆಚ್ಚು ಜಾಗರೂಕರಾಗಿರಬೇಕು.
  ಅದೃಷ್ಟ ಬಣ್ಣ: ಕೇಸರಿ
  ಅದೃಷ್ಟ ಸಂಖ್ಯೆ: 16
  ಅದೃಷ್ಟ ಸಮಯ: ಬೆಳಿಗ್ಗೆ 6:00 ರಿಂದ ಸಂಜೆ 4:20


 • ತುಲಾ: 23 ಸಪ್ಟೆಂಬರ್-22 ಅಕ್ಟೋಬರ್

  ಇಷ್ಟು ದಿನ ನಿರ್ಬಂಧಿತವಾಗಿದ್ದ ಹಣ ಇಂದು ನಿಮ್ಮ ಕೈ ಸೇರುವುದು. ಆರ್ಥಿಕವಾಗಿ ಅದೃಷ್ಟದ ದಿನ ಎನ್ನಬಹುದು. ಹೆಚ್ಚುವರಿ ಆದಾಯವು ನಿಮ್ಮ ದಾರಿಯಲ್ಲಿ ಬರುವುದು. ಪೋಷಕರ ಸಹಾಯದ ಮೇರೆಗೆ ಒಂದಿಷ್ಟು ನಿರ್ಧಾರ ಕೈಗೊಳ್ಳುವುದು ಸೂಕ್ತ. ಅತಿಯಾದ ನಿರೀಕ್ಷೆಯನ್ನು ಯಾವ ಸಂಗತಿಯ ಮೇಲೂ ಇಟ್ಟುಕೊಳ್ಳದಿರಿ. ಅತಿಯಾದ ನಿರೀಕ್ಷೆಯನ್ನು ಹೊಂದಿದ್ದರೆ ಅದು ನಿಮಗೆ ಹೆಚ್ಚಿನ ನೋವನ್ನು ನೀಡುತ್ತದೆ. ಕೆಲಸದ ವಿಷಯದಲ್ಲಿ ಉತ್ತಮವಾದ ದಿನ. ಕೆಲಸಕ್ಕೆ ಸಂಬಂಧಿಸಿದ ಪ್ರವಾಸವನ್ನು ನೀವು ಕೈಗೊಳ್ಳುವಿರಿ. ನಿಮ್ಮ ಸುತ್ತಲಿನ ವ್ಯಕ್ತಿಗಳಿಗೆ ಉಚಿತವಾದ ಸಲಹೆ ನೀಡುವುದನ್ನು ತಪ್ಪಿಸಿ.
  ಅದೃಷ್ಟ ಬಣ್ಣ: ಕಂದು
  ಅದೃಷ್ಟ ಸಂಖ್ಯೆ: 10
  ಅದೃಷ್ಟ ಸಮಯ: ಬೆಳಿಗ್ಗೆ 8:50 ರಿಂದ ಸಂಜೆ 6:05 ರವರೆಗೆ


 • ವೃಶ್ಚಿಕ: 23 23 ಅಕ್ಟೋಬರ್-21 ನವೆಂಬರ್

  ನಿಮ್ಮ ತಿಳುವಳಿಕೆ ಮತ್ತು ಬೆಂಬಲದ ಸ್ವಭಾವವು ಇತರರಿಗೆ ಸಹಕಾರಿಯಾಗುವುದು. ಅದರಿಂದ ನಿಮಗೆ ಒಂದಿಷ್ಟು ಗೌರವವೂ ದೊರೆಯುವುದು. ನಿಮ್ಮ ಆಪ್ತರಿಂದ ಅಥವಾ ಸ್ನೇಹಿತರಿಂದ ಪ್ರಮುಖ ಪ್ರಗತಿಯನ್ನು ಸಹ ಪಡೆದುಕೊಳ್ಳುವಿರಿ. ಕಷ್ಟ ಪಟ್ಟು ದುಡಿಯುವ ಸ್ವಭಾವವು ನಿಮಗೆ ಮಾನ್ಯತೆ ಮತ್ತು ಗೌರವವನ್ನು ತಂದುಕೊಡುವುದು. ನಿಮ್ಮ ಸಮಸ್ಯೆಗಳನ್ನು ನಿಮ್ಮದೇ ಆದ ರೀತಿಯಲ್ಲಿ ಪರಿಹರಿಸಿಕೊಳ್ಳುವುದರ ಮೂಲಕ ಯಶಸ್ಸನ್ನು ಪಡೆಯುವಿರಿ. ಹಿಂದಿನ ಸಂಗತಿಗಳ ಬಗ್ಗೆ ಕೈಬಿಡಿ. ಆಗ ನೀವು ಒತ್ತಡ ಮುಕ್ತ ಜೀವನವನ್ನು ಸುಲಭವಾಗಿ ನಡೆಸಬಹುದು. ಕೆಲವು ಜವಾಬ್ದಾರಿಗಳು ನಿಮ್ಮ ಹೆಗಲೇರುವ ಸಾಧ್ಯತೆಗಳಿವೆ. ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಎಲ್ಲವೂ ಸಾಮಾನ್ಯ ಸ್ಥಿತಿಗೆ ನಿಧಾನವಾಗಿ ಮರುಕಳಿಸುವುದು. ಸಂಜೆಯ ಹೊತ್ತಿಗೆ ನಿಮ್ಮ ಕೊರತೆಯು ನಿಮ್ಮನ್ನು ಕಾಡಬಹುದು. ಅದರ ಬಗ್ಗೆ ಹೆಚ್ಚು ಭಯಪಡುವ ಅಗತ್ಯವಿಲ್ಲ.
  ಅದೃಷ್ಟ ಬಣ್ಣ: ಕೆಂಪು
  ಅದೃಷ್ಟ ಸಂಖ್ಯೆ: 12
  ಅದೃಷ್ಟ ಸಮಯ: ಸಂಜೆ 4:30 ರಿಂದ 11:20 ರವರೆಗೆ


 • ಧನು: 22 ನವೆಂಬರ್ -21 ಡಿಸೆಂಬರ್

  ಕೆಲಸದ ವಿಷಯದಲ್ಲಿ ಹೊಸ ಅವಕಾಶಗಳನ್ನು ಪಡೆದುಕೊಳ್ಳುವಿರಿ. ಅದು ನಿಮ್ಮನ್ನು ಆಕ್ರಮಿಸಿಕೊಂಡಿರುತ್ತದೆ. ನಿಮ್ಮ ವ್ಯವಹಾರದಲ್ಲಿ ನಷ್ಟ ಉಂಟಾಗಬಹುದು. ಹಾಗಾಗಿ ಆದಷ್ಟು ಜಾಗರೂಕರಾಗಿ ಇರಬೇಕು. ನಿಮ್ಮ ನಿರ್ಲಕ್ಷ್ಯ ಧೋರಣೆಯು ನಿಮಗೆ ಹೆಚ್ಚಿನ ಅಪಾಯವನ್ನು ತರುವುದು. ಕುಟುಂಬಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಹೆಚ್ಚಿನ ಯೋಚನೆ ಕೈಗೊಳ್ಳುವುದನ್ನು ನಿಲ್ಲಿಸಿ. ವಿಷಯಗಳಿಗೆ ಮೊದಲ ಆದ್ಯತೆ ನೀಡಿ. ಅತಿಯಾದ ಖರ್ಚು ಇಂದು ನಿಮ್ಮ ಹಾದಿಯಲ್ಲಿ ಇದೆ. ಹಿರಿಯರ ಆರೋಗ್ಯದಲ್ಲಿ ಕಳವಳ ಉಂಟಾಗಬಹುದು. ನಿಮ್ಮ ಆತ್ಮೀಯರು ಹಾಗೂ ನೀವು ಧಾರ್ಮಿಕ ಚಿಂತನೆಯ ಕಡೆಗೆ ಹೆಚ್ಚಿನ ಒಲವನ್ನು ತೋರುವಿರಿ. ಪ್ರೀತಿಯ ಸಂಬಂಧವು ಈ ದಿನ ಸುಗಮವಾಗಿ ಸಾಗುವುದು. ಮಕ್ಕಳ ಅತ್ಯುತ್ತಮ ಪ್ರದರ್ಶನ ಪಾಲಕರಿಗೆ ಹೆಮ್ಮೆಯನ್ನು ತಂದುಕೊಡುವುದು.
  ಅದೃಷ್ಟ ಬಣ್ಣ: ಕಿತ್ತಳೆ
  ಅದೃಷ್ಟ ಸಂಖ್ಯೆ: 3
  ಅದೃಷ್ಟ ಸಮಯ: ಮಧ್ಯಾಹ್ನ 12:15 ರಿಂದ 5:40 ರವರೆಗೆ


 • ಮಕರ: 22 ಡಿಸೆಂಬರ್ -19 ಜನವರಿ

  ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ತೊಂದರೆಗಳು ಎದುರಾಗಬಹುದು. ನೀವು ಯಾವುದೇ ಹೊಸ ಯೋಜನೆ ಅಥವಾ ತಕ್ಷಣದ ಯೋಜನೆಗಳಿಗೆ ಹೂಡಿಕೆ ಮಾಡಲು ಮುಂದಾಗದಿರಿ. ಇದರಿಂದ ಅಧಿಕ ಹಾನಿಯನ್ನು ಅನುಭವಿಸಬೇಕಾಗುವುದು. ದೂರದ ಸ್ಥಳಗಳಿಗೆ ದೀರ್ಘ ಪ್ರಯಾಣವನ್ನು ಕೈಗೊಳ್ಳದಿರಿ. ಸಂಜೆ ಕುಟುಂಬದ ಸದಸ್ಯರೊಂದಿಗೆ ಭೋಜನವನ್ನು ಸವಿಯುವಿರಿ. ಅದು ನಿಮಗೆ ಉತ್ತಮ ಅನುಭವವನ್ನು ನೀಡುತ್ತದೆ. ವಿವಾಹಿತರು ಪ್ರಣಯದ ಸಮಯವನ್ನು ಹೆಚ್ಚಾಗಿ ಅನುಭವಿಸುವರು. ನಿಮ್ಮ ಸಂಗಾತಿಯು ನಿಮಗೆ ವಿಶೇಷ ಉಡುಗೊರೆಯನ್ನು ನೀಡಬಹುದು. ಅದು ನಿಮ್ಮಿಬ್ಬರ ನಡುವೆ ಹೆಚ್ಚಿನ ಉಲ್ಲಾಸವನ್ನು ಕಲ್ಪಿಸುವುದು. ನಿಮ್ಮ ಶ್ರಮಕ್ಕೆ ಹಾಗೂ ಪ್ರಯತ್ನಕ್ಕೆ ಉತ್ತಮ ಪ್ರಶಂಸೆ ದೊರೆಯುವುದು. ಸಂಧಿವಾತ ಇರುವವರು ಆದಷ್ಟು ಎಚ್ಚರಿಕೆಯಿಂದ ಇರಬೇಕು. ತಂಗಳು ಆಹಾರವನ್ನು ಸೇವಿಸದಿರಿ.
  ಅದೃಷ್ಟ ಬಣ್ಣ: ಕ್ರೀಮ್
  ಅದೃಷ್ಟ ಬಣ್ಣ: 14
  ಅದೃಷ್ಟ ಸಮಯ: ರಾತ್ರಿ 9:30 ರಿಂದ 1:45 ರವರೆಗೆ


 • ಕುಂಭ: 20 ಜನವರಿ -18 ಫೆಬ್ರವರಿ

  ಹಣಕಾಸಿಗೆ ಸಂಬಂಧಿಸಿದಂತೆ ಇಂದು ನಿಮಗೆ ಕಠಿಣವಾದ ದಿನ. ನೀವು ಹಣವನ್ನು ವ್ಯಯಿಸುವಾಗ ಅಥವಾ ಖರ್ಚುಮಾಡುವಾಗ ಸಾಕಷ್ಟು ಬುದ್ಧಿಯನ್ನು ಉಪಯೋಗಿಸಬೇಕು. ಯೋಜನೆಯ ಮೂಲಕ ಕೆಲಸ ಮಾಡುವುದರಿಂದ ನಿಮಗೆ ಒಂದಿಷ್ಟು ಪ್ರಯೋಜ ದೊರೆಯುವುದು. ಕೆಲಸಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಉತ್ಸಾಹ ಹಾಗೂ ಹೊಸ ಯೋಜನೆಯನ್ನು ಕೈಗೊಳ್ಳುವಿರಿ. ಮೇಲಾಧಿಕಾರಿಗಳಿಗೆ ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತದೆ. ಒಡ ಹುಟ್ಟಿದವರ ನಡುವೆ ಇರುವ ತಪ್ಪು ತಿಳುವಳಿಕೆ ದೂರವಾಗುವುದು. ನಿಮ್ಮ ಪೋಷಕರು ನಿರಾಳವಾಗಿರುತ್ತಾರೆ. ಸಣ್ಣ ಪ್ರವಾಸವನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಮ್ಮೆಯನ್ನು ಪಡುತ್ತಾರೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುವುದು.
  ಅದೃಷ್ಟ ಬಣ್ಣ: ತಿಳಿ ಹಳದಿ
  ಅದೃಷ್ಟ ಸಂಖ್ಯೆ: 54
  ಅದೃಷ್ಟ ಸಮಯ: ಬೆಳಿಗ್ಗೆ 9: 45 ರಿಂದ ಮಧ್ಯಾಹ್ನ 1:50


 • ಮೀನ: 19 ಫೆಬ್ರುವರಿ-20 ಮಾರ್ಚ್

  ಇಂದು ನಿಮಗೆ ಒಡಹುಟ್ಟಿದವರ ದಿನವಾಗುವುದು. ಏಕೆಂದರೆ ದೀರ್ಘ ಸಮಯದ ನಂತರ ಪುನಃ ಒಡ ಹುಟ್ಟಿದವರೆಲ್ಲಾ ಒಂದೆಡೆ ಸೇರುವಿರಿ. ನವ ವಿವಾಹಿತ ಜೋಡಿಗಳು ಪ್ರೇಮದ ಗಾಳಿಯಲ್ಲಿ ತೇಲುವರು. ವ್ಯವಹಾರದಲ್ಲಿಯೂ ನೀವು ಏಳಿಗೆಯನ್ನು ಕಾಣುವಿರಿ. ನಿಮ್ಮ ಕಠಿಣವಾದ ಪರಿಶ್ರಮಕ್ಕೆ ಪ್ರತಿಫಲ ದೊರೆಯುವುದು. ಒಟ್ಟಾರೆಯಾಗಿ ಒಂದಿಷ್ಟು ಸಂತೋಷವನ್ನು ಅನುಭವಿಸುವಿರಿ. ಇಂದಿನ ಅದೃಷ್ಟವು ನಿಮಗೆ ಅನುಕೂಲವನ್ನು ತಂದುಕೊಡುವುದು. ಕೆಲಸಕ್ಕೆ ಸಂಬಂಧಿಸಿದಂತೆ ಒಂದಿಷ್ಟು ವಿಶ್ರಾಂತಿಯೂ ಸಹ ದೊರೆಯುವುದು. ಉದ್ಯೋಗ ಬದಲಾವಣೆಗೆ ಸಂಬಂಧಿಸಿದಂತೆ ನಿಮಗೆ ಆಯ್ಕೆಗಳು ದೊರೆಯುವುದು. ಆರೋಗ್ಯವು ಉತ್ತಮವಾಗಿರುತ್ತದೆ. ನೀವು ನಿಮ್ಮ ದಿನವನ್ನು ವ್ಯಾಯಾಮದಿಂದ ಆರಂಭಿಸಿ.
  ಅದೃಷ್ಟ ಬಣ್ಣ: ಆಕಾಶ ನೀಲಿ
  ಅದೃಷ್ಟ ಸಂಖ್ಯೆ: 31
  ಅದೃಷ್ಟ ಸಮಯ: ಸಂಜೆ 7:30 ರಿಂದ 8:45 ರವರೆಗೆ
ಶನಿವಾರದ ದಿನ ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ. ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ನೂರು ಯೋಜನ ವಿಸ್ತಾರದ ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ, ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ ನೆರವಾಗುತ್ತಾನೆ.

ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದರಿಂದ ಮನೆಯಲ್ಲಿನ ಕಷ್ಟಗಳು ದೂರಾಗುತ್ತವೆ ಹಾಗೂ ಮನೆಯಲ್ಲಿ ದುಷ್ಟಶಕ್ತಿಗಳು ಸುಳಿಯುವುದಿಲ್ಲ, ಮಕ್ಕಳು ಚಂಡಿ ಹಿಡಿದರೆ ದೇವಸ್ಥಾನಕ್ಕೆ ಭೇಟಿ ನೀಡಿ ತಾಯತ ಹಾಕಿಸಿಕೊಳ್ಳುವುದರಿಂದ ಮಕ್ಕಳಲ್ಲಿರುವ ಗೊಂದಲ ಹಾಗೂ ತೊಂದರೆಗಳು ಇಲ್ಲವಾದಂತೆ ಆಗುತ್ತದೆ. ಈ ಆಂಜನೇಯನನ್ನು ಪ್ರಾರ್ಥಿಸುವುದರಿಂದ ಗಾಳಿ ಹಿಡಿಯುವುದು ಅಂದರೆ ಭೂತ ಪಿಶಾಚಿಗಳ ಮುಷ್ಟಿಗೆ ಒಳಪಡುವುದರಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.ವಾಹನ, ಮನೆಯ ಮೇಲೆ ಬೀಳುವ ದೃಷ್ಟಿಯನ್ನು ಗಾಳಿ ಆಂಜನೇಯ ಸ್ವಾಮಿ ದೂರ ಮಾಡುತ್ತಾನೆಂಬ ನಂಬಿಕೆಯಿಂದಲೇ ಪ್ರತೀ ನಿತ್ಯ ತಮ್ಮ ವಾಹನಗಳಿಗೆ ಪೂಜೆ ಮಾಡಿಸುತ್ತಾರೆ. ಆಂಜನೇಯ ವಾಯುಪುತ್ರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.

 
ಹೆಲ್ತ್