Back
Home » ಆರೋಗ್ಯ
ಅತಿಯಾದ ಮಾಂಸಾಹಾರ ಸೇವನೆಯಿಂದ ಎದುರಾಗಬಹುದಾದ 9 ಅಚ್ಚರಿಯ (ದುಶ್)ಪರಿಣಾಮಗಳು
Boldsky | 5th Oct, 2019 11:23 AM
 • 1. ನಿರ್ಜಲೀಕರಣ

  ಹೆಚ್ಚಿನ ಪ್ರೋಟೀನ್ ಆಹಾರದಿಂದ ಮೂತ್ರಪಿಂಡಗಳು ಹೆಚ್ಚು ಸಾಂದ್ರತೆಯ ಮೂತ್ರವನ್ನು ಉತ್ಪತ್ತಿ ಮಾಡಲು ಕಾರಣವಾಗಬಹುದು ಮತ್ತು ಇದರಿಂದ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ ಎಂದು ಕಂಡುಕೊಳ್ಳಲಾಗಿದೆ. ದೈನಂದಿನ ಆರೋಗ್ಯದ ಪ್ರಕಾರ, ಇದು ನಿಮ್ಮ ಶಕ್ತಿಯ ಮಟ್ಟ, ನಿಮ್ಮ ತ್ವಚೆಗೆ, ಆಹಾರ ಸೇವನೆಯ ಬಯಕೆ ಹೆಚ್ಚುವುದು ಮತ್ತು ಸ್ನಾಯು ಸೆಳೆತದವರೆಗೆ ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ.


 • 2. ದೇಹದ ದುರ್ಗಂಧ

  ಬೆವರಿನ ವಾಸನೆ ಹೊಡೆಯುತ್ತಿದ್ದರೆ ನಾವು ಅನುಸರಿಸುವ ಸುಲಭ ಉಪಾಯವೆಂದರೆ ಸುಗಂಧವನ್ನು ಚಿಮುಕಿಸಿಕೊಳ್ಳುವುದು. ಕೆಮಿಕಲ್ ಸೆನ್ಸಸ್ ಎಂಬ ಮಾಧ್ಯಮದ ಪ್ರಕಾರ ಮಾಂಸಾಹಾರವನ್ನು ಸೇವಿಸಿದ ಜನರಲ್ಲಿ ದೇಹದ ದುರ್ಗಂಧವೂ ಹೆಚ್ಚು ಇರುತ್ತದೆ ಎಂದು ಪ್ರಕಟಿಸಲಾಗಿದೆ. ಅಚ್ಚರಿ ಎಂದರೆ ಸಸ್ಯಾಹಾರಿಗಳ ಬೆವರಿನ ಗಂಧ ಮಾಂಸಾಹಾರಿಗಳ ಬೆವರಿನ ಗಂಧಕ್ಕಿಂತಲೂ ಆಹ್ಲಾದಕರವಾಗಿರುತ್ತದಂತೆ!


 • 3. ಮಲಬದ್ದತೆ

  ಹೆಚ್ಚಿನ ಮಾಂಸಾಹಾರ ಎಂದರೆ ಹೆಚ್ಚಿನ ಕಾರ್ಬೋಹೈಡ್ರೇಟುಗಳು, ಎಂದರೆ ಹೆಚ್ಚಿನ ಮಲಬದ್ದತೆ. ಏಕೆಂದರೆ ಮಾಂಸದಲ್ಲಿ ಕರಗದ ನಾರು ಇರುವುದೇ ಇಲ್ಲ, ಹಾಗಾಗಿ ಜೀರ್ಣಗೊಂಡ ಆಹಾರ ಸುಲಭವಾಗಿ ಚಲಿಸದೇ ಮಲಬದ್ದತೆ ಎದುರಾಗುತ್ತದೆ. ಹಾಗಾಗಿ ಮಲಬದ್ದತೆ ಎದುರಾಗದೇ ಇರಲು ಮಾಂಸಾಹಾರದ ಪ್ರಮಾಣವನ್ನು ಕಡಿಮೆ ಮಾಡಬೇಕು ಹಾಗೂ ಸಂಯುಕ್ತ ಕಾರ್ಬೋಹೈಡ್ರೇಟುಗಳನ್ನು ಹೆಚ್ಚಿಸಬೇಕು, ಅಂದರೆ ಹೆಚ್ಚು ಹೆಚ್ಚಾಗಿ ನಾರುಯುಕ್ತ ಹಣ್ಣು ಮತ್ತು ತರಕಾರಿಗಳನ್ನೂ ಸೇವಿಸಬೇಕು.


 • 4. ತಲೆನೋವು

  ಮಾಂಸವು ಹೆಚ್ಚು ನಿರ್ಜಲೀಕರಣವಾಗಬಹುದು ಎಂದು ಪರಿಗಣಿಸಿದಾಗ ಇದು ತಲೆನೋವನ್ನೂ ಉಂಟುಮಾಡುವುದರಲ್ಲಿ ಆಶ್ಚರ್ಯವೇನಿಲ್ಲ. ಹೆಚ್ಚುವರಿಯಾಗಿ, ಕಾರ್ಬೋಹೈಡ್ರೇಟುಗಳು ಮೆದುಳಿಗೆ ಇಂಧನವಾಗಿದೆ, ಆದ್ದರಿಂದ ನಾವು ಹೆಚ್ಚು ಹೆಚ್ಚಾದ ಮಾಂಸವನ್ನು ಸೇವಿಸಿ ಸಾಕಷ್ಟು ಕಾರ್ಬೋಹೈಡ್ರೇಟುಗಳನ್ನು ಸೇವಿಸದೇ ಇದ್ದರೆ, ಇದು ತಲೆನೋವು ಮತ್ತು ಮಾನಸಿಕ ಕ್ಷಮತೆ ಉಡುಗಲು ಕಾರಣವಾಗಬಹುದು.


 • 5. ದೃಷ್ಟಿ ಕುಂದುವ ಸಾಧ್ಯತೆಯಲ್ಲಿ ಹೆಚ್ಚಳ

  ಕೆಂಪು ಮಾಂಸವನ್ನು ಹೆಚ್ಚು ಹೆಚ್ಚಾಗಿ ಸೇವಿಸುವ ಮೂಲಕ ಜೀವಕೋಶಗಳ ಮರುಹುಟ್ಟುವಿಕೆಯ ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತದೆ. ಅಂದರೆ ವೃದ್ದಾಪ್ಯದ ಲಕ್ಷಣಗಳು. ಇದು ಕಣ್ಣಿನ ಜೀವಕೋಶಗಳಿಗೂ ಅನ್ವಯಿಸುವ ಮೂಲಕ ಕಣ್ಣಿನ ಕ್ಷಮತೆಯೂ ಕಡಿಮೆಯಾಗುತ್ತಾ ಹೋಗುತ್ತದೆ. ಕಣ್ಣಿನ ದೃಷ್ಟಿಗೂ ಕೆಂಪು ಮಾಂಸಕ್ಕೂ ಏನು ಬಾದಾರಾಯಣ ಸಂಬಂಧ ಎಂಬ ಪ್ರಶ್ನೆಗೆ ತಜ್ಞರು ಹೀಗೆ ಹೇಳುತ್ತಾರೆ " ಕೆಂಪು ಮಾಂಸದಲ್ಲಿರುವ ಸಂತೃಪ್ತ ಕೊಬ್ಬು ಕಣ್ಣುಗಳಲ್ಲಿರುವ ಅತಿ ಸೂಕ್ಷ್ಮವಾದ ನರಗಳಿಗೆ ಹಾನಿಕರ, ಅಂದರೆ ಈ ಮಾಂಸಗಳೇ ನೇರವಾಗಿ ಪ್ರಭಾವ ಬೀರುವುದಿಲ್ಲ, ಬದಲಿಗೆ ಮಾಂಸವನ್ನು ಸಂಸ್ಕರಿಸಲು ಬಳಸುವ ಕೆಲವು ರಾಸಾಯನಿಕಗಳು, ವಿಶೇಷವಾಗಿ ನೈಟ್ರೊಸಮೈನ್ ಗಳು (nitrosamines) ಕಣ್ಣುಗಳಿಗೆ ಹಾನಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ"


 • 6. ಶಿಥಿಲವಾಗುವ ಮೂಳೆಗಳು

  ಆಹಾರದಲ್ಲಿ ಪ್ರೋಟೀನು ಹೆಚ್ಚಿದಷ್ಟೂ ಇವನ್ನು ಸಂಸ್ಕರಿಸಿ ಜೀವರಾಸಾಯನಿಕ ಕ್ರಿಯೆಯನ್ನು ಪೂರ್ಣಗೊಳಿಸುವಾಗ ಮೂತ್ರದ ಪ್ರಮಾಣವೂ ಸ್ವಾಭಾವಿಕವಾಗಿಯೇ ಹೆಚ್ಚುತ್ತದೆ. ಆದರೆ ಹೀಗೆ ಕಡಿಮೆ ಸಮಯದಲ್ಲಿ ಹೆಚ್ಚು ಮೂತ್ರ ದೇಹದಿಂದ ಹೊರಹೋಗುವಾಗ ಆಹಾರದಲ್ಲಿದ್ದ ಕ್ಯಾಲ್ಸಿಯಂ ಅನ್ನು ಬಳಸಿಕೊಳ್ಳುವ ಮುನ್ನವೇ ಹೊರಹೋಗಿಬಿಡುತ್ತದೆ. ಆ ಪ್ರಕಾರ, ನಾವು ಸಾಕಷ್ಟು ಕ್ಯಾಲ್ಸಿಯಂ ಯುಕ್ತ ಆಹಾರಗಳನ್ನು ಸೇವಿಸಿದ ಬಳಿಕವೂ ಇದನ್ನು ಬಳಸಿಕೊಳ್ಳಲಾಗದೇ ಹೋಗುತ್ತೇವೆ. ಹಾಗಾಗಿ ಕ್ಯಾಲ್ಸಿಯಂ ಕೊರತೆಯಿಂದ ಮೂಳೆಗಳು ತಮ್ಮ ಬಲವನ್ನು ಕಳೆದುಕೊಂಡು ಹೆಚ್ಚು ಹೆಚ್ಚು ಶಿಥಿಲವಾಗುತ್ತಾ ಹೋಗುತ್ತದೆ.


 • 7. ಸುಸ್ತು

  ಸಾಕಷ್ಟು ವಿಶ್ರಾಂತಿ ಪಡೆದ ಬಳಿಕವೂ ಒಂದು ವೇಳೆ ನಿಮಗೆ ಸುಸ್ತು ಆವರಿಸಿಯೇ ಇದ್ದರೆ ಇದಕ್ಕೆ ನಿಮ್ಮ ನಿದ್ದೆ ಅಥವಾ ಚಟುವಟಿಕೆ ಕಾರಣವಾಗಿರಲಿಕ್ಕಿಲ್ಲ, ನಿಮ್ಮ ಆಹಾರವನ್ನು ಕೊಂಚ ಪರಿಶೀಲಿಸಿ ಎಂದು ಡಾ. ಗೇಬ್ರಿಯಲ್ ತಿಳಿಸುತ್ತಾರೆ. ಏಕೆಂದರೆ ಅತಿ ಹೆಚ್ಚಿನ ಪ್ರೋಟೀನ್ ಅನ್ನು ಜೀರ್ಣಿಸಲು ನಮ್ಮ ಜೀರ್ಣವ್ಯವಸ್ಥೆಗೆ ಅತಿ ಹೆಚ್ಚಿನ ಶಕ್ತಿ ಮತ್ತು ಪೋಷಕಾಂಶಗಳ ಅಗತ್ಯವಿದ್ದು ದೇಹದಲ್ಲಿರುವ ಹೆಚ್ಚಿನ ಶಕ್ತಿಯನ್ನೆಲ್ಲಾ ಇದಕ್ಕಾಗಿಯೇ ವಿನಿಯೋಗಿಸಿಬಿಟ್ಟರೆ ಉಳಿದ ಕೆಲಸಗಳಿಗೆ ಶಕ್ತಿ ಸಾಲದೇ ಹೋಗುತ್ತದೆ. ಇದೇ ಸುಸ್ತು ಆವರಿಸಲು ಕಾರಣ.


 • 8. ಬಾಯಿಯ ದುರ್ವಾಸನೆ

  ನಿಮ್ಮ ಬಾಯಲ್ಲಿ ಸತತ ದುರ್ವಾಸನೆ ಕಾಡುತ್ತಿದೆಯೇ? ಇದಕ್ಕೆ ನಿಮ್ಮ ಆಹಾರಕ್ರಮವೂ ಕಾರಣವಾಗಿರಬಹುದು. ಸಾಕಷ್ಟು ಕಾರ್ಬೋಹೈಡ್ರೇಟ್‌ಗಳಿಲ್ಲದ ಪ್ರೋಟೀನ್ ಮತ್ತು ಕೊಬ್ಬಿನಂಶವುಳ್ಳ ಆಹಾರದ ಸೇವನೆಯಿಂದ ದೇಹದಲ್ಲಿ ಕೀಟೋನ್ ಗಳನ್ನು ಉತ್ಪಾದಿಸಲು ಕಾರಣವಾಗಬಹುದು. "ಕೀಟೋನ್ ಗಳು ಉಸಿರಾಟದ ಮೂಲಕ ಬಿಡುಗಡೆಯಾಗುತ್ತವೆ ಮತ್ತು ಅದು ಅಸಿಟೋನ್ ನಂತಹ ವಾಸನೆಯನ್ನು ಸೂಸುತ್ತವೆ"


 • 9. ಜೀರ್ಣಕ್ರಿಯೆಯ ತೊಂದರೆಗಳು

  ನಮ್ಮ ಕರುಳಿನಲ್ಲಿರುವ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾವು ನಮ್ಮ ಆರೋಗ್ಯದ ಮೇಲೆ ಗಾಢ ಪರಿಣಾಮ ಬೀರುತ್ತದೆ ಮತ್ತು ನಮ್ಮ ಉತ್ತಮ ಬ್ಯಾಕ್ಟೀರಿಯಾವು ಕೆಟ್ಟದ್ದನ್ನು ಮೀರಿಸುತ್ತದೆ ಎಂದು ಖಚಿತಪಡಿಸಿಕೊಳ್ಳುವಲ್ಲಿ ನಾವು ಏನು ತಿನ್ನುತ್ತಿದ್ದೇವೆ ಎನ್ನುವುದು ಮುಖ್ಯ. ಅವು ಅಭಿವೃದ್ಧಿ ಹೊಂದಲು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಬೇಕಾಗುತ್ತವೆ, ನಿರ್ದಿಷ್ಟವಾಗಿ ಹಣ್ಣು, ತರಕಾರಿಗಳು ಮತ್ತು ಧಾನ್ಯಗಳಿಂದ ಕರಗದ ನಾರು ಲಭಿಸುತ್ತದೆ. ಹೆಚ್ಚಿನ ಪ್ರೋಟೀನ್ ಯುಕ್ತ ಆಹಾರಗಳಲ್ಲಿ ಈ ಅಂಶ ಸಾಮಾನ್ಯವಾಗಿ ಕಡಿಮೆ, ಮತ್ತು ಇದು ಕರುಳಿನ ಬ್ಯಾಕ್ಟೀರಿಯಾದಲ್ಲಿನ ಕಳಪೆ ವೈವಿಧ್ಯತೆಗೆ ಸಂಬಂಧಿಸಿದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.


 • 10. ತೂಕದಲ್ಲಿ ಹೆಚ್ಚಳ ಕಂಡುಬರುವುದು

  ಹೆಚ್ಚಿನ ಪ್ರೋಟೀನ್ ಯುಕ್ತ ಆಹಾರವು ತೂಕದಲ್ಲಿ ಇಳಿಕೆಯನ್ನೇನೋ ತೋರಬಹುದು, ಆದರೆ ಈ ಬಗೆಯ ಇಳಿಕೆ ಅಲ್ಪಾವಧಿಗೆ ಮಾತ್ರ ಇರಬಹುದು. ಸೇವಿಸುವ ಹೆಚ್ಚುವರಿ ಪ್ರೋಟೀನ್ ಅನ್ನು ಸಾಮಾನ್ಯವಾಗಿ ಕೊಬ್ಬಿನಂತೆ ಸಂಗ್ರಹಿಸಲಾಗುತ್ತದೆ, ಆದರೆ ಅಮೈನೋ ಆಮ್ಲಗಳ ಹೆಚ್ಚುವರಿ ಅಂಶವನ್ನು ಹೊರಹಾಕಲಾಗುತ್ತದೆ. ಇದು ಕಾಲಾನಂತರದಲ್ಲಿ ತೂಕ ಹೆಚ್ಚಾಗಲು ಕಾರಣವಾಗಬಹುದು, ವಿಶೇಷವಾಗಿ ನಿಮ್ಮ ಪ್ರೋಟೀನ್ ಸೇವನೆಯನ್ನು ಹೆಚ್ಚಿಸಲು ಪ್ರಯತ್ನಿಸುವಾಗ ನೀವು ಹೆಚ್ಚಿನ ಕ್ಯಾಲೊರಿಗಳನ್ನು ಸೇವಿಸಿದರೆ. ತೂಕದಲ್ಲಿ ಏರಿಕೆ ಪ್ರೋಟೀನ್ ಬದಲಿಗೆ ಕಾರ್ಬೋಹೈಡ್ರೇಟ್‌ಗಳ ಆಹಾರಕ್ರಮದೊಂದಿಗಿನ ಸೇವನೆ ಗಮನಾರ್ಹವಾಗಿ ಸಂಬಂಧಿಸಿದೆ ಎಂದು 2016 ರ ಅಧ್ಯಯನವೊಂದು ಕಂಡುಕೊಂಡಿದೆ.


 • 11. ಉಸಿರಿನಲ್ಲಿ ದುರ್ವಾಸನೆ

  ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಯುಕ್ತ ಆಹಾರಗಳನ್ನು ಸೇವಿಸುವ ಮೂಲಕ ಉಸಿರಾಟದಲ್ಲಿ ಕೆಟ್ಟ ವಾಸನೆ ಬರಲು ಕಾರಣವಾಗಬಹುದು, ವಿಶೇಷವಾಗಿ ನಿಮ್ಮ ಕಾರ್ಬೋಹೈಡ್ರೇಟ್ ಸೇವನೆಯನ್ನು ನೀವು ನಿರ್ಬಂಧಿಸಿದರೆ. ಒಂದು ಸಮೀಕ್ಷೆಯ ಪ್ರಕಾರ ಹೆಚ್ಚು ಪ್ರೋಟೀನ್ ಸೇವಿಸುವವರಲ್ಲಿ 40 ಪ್ರತಿಶತ ಜನರು ಉಸಿರಾಟದಲ್ಲಿ ಕೆಟ್ಟ ವಾಸನೆ ಇದೆ ಎಂದು ವರದಿ ಮಾಡಿದ್ದಾರೆ. ಇದು ಭಾಗಶಃ ಆಗಿರಬಹುದು ಏಕೆಂದರೆ ನಿಮ್ಮ ದೇಹವು ಕೀಟೋಸಿಸ್ ಎಂಬ ಜೀವರಾಸಾಯನಿಕ ಸ್ಥಿತಿಯನ್ನು ಅನುಸರಿಸುವಾಗ ಇದು ಕೆಲವು ರಾಸಾಯನಿಕಗಳನ್ನು ಉತ್ಪಾದಿಸುತ್ತದೆ, ಅದು ಅಹಿತಕರ ಹಣ್ಣಿನ ವಾಸನೆಯನ್ನು ನೀಡುತ್ತದೆ. ಹಲ್ಲುಜ್ಜುವುದು ಮತ್ತು ಹಲ್ಲುಗಳ ನಡುವೆ ಸ್ವಚ್ಛಗೊಳಿಸುವ ಮೂಲಕವೂ ಈ ವಾಸನೆಯನ್ನು ತೊಡೆದುಹಾಕಲಾಗುವುದಿಲ್ಲ. ಇದರಿಂದ ಪಾರಾಗಲು ನಿಮ್ಮ ನೀರಿನ ಸೇವನೆಯನ್ನು ನೀವು ದ್ವಿಗುಣಗೊಳಿಸಬಹುದು, ನಿಮ್ಮ ಹಲ್ಲುಗಳನ್ನು ಹೆಚ್ಚಾಗಿ ಬ್ರಷ್ ಮಾಡಬಹುದು ಮತ್ತು ಈ ಕೆಲವು ಪರಿಣಾಮಗಳನ್ನು ಎದುರಿಸಲು ಗಮ್ ಅನ್ನೂ ಅಗಿಯಬಹುದು.


 • 12. ಕ್ಯಾನ್ಸರ್ ಎದುರಾಗುವ ಸಾಧ್ಯತೆಯಲ್ಲಿ ಹೆಚ್ಚಳ

  ಕೆಂಪು ಮಾಂಸ ಆಧಾರಿತ ಪ್ರೋಟೀನ್‌ನಲ್ಲಿ ವಿಶೇಷವಾಗಿ ಅತಿಹೆಚ್ಚು ಪ್ರಮಾಣದಲ್ಲಿ ಪ್ರೋಟೀನ್ ಇರುವ ಆಹಾರಗಳು ಕ್ಯಾನ್ಸರ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ಅಪಾಯಕ್ಕೆ ಸಂಬಂಧಿಸಿವೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ. ಹೆಚ್ಚು ಕೆಂಪು ಮತ್ತು / ಅಥವಾ ಸಂಸ್ಕರಿಸಿದ ಮಾಂಸವನ್ನು ತಿನ್ನುವುದು ಕರುಳು-ಗುದನಾಳ, ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನೊಂದಿಗೆ ಸಂಬಂಧ ಹೊಂದಿದೆ. ಆದರೆ, ವ್ಯಂಗ್ಯವೋ ಎಂಬಂತೆ, ಮಾಂಸದ ಹೊರತಾಗಿ ಇತರ ಮೂಲಗಳಿಂದ ಪಡೆಯುವ ಪ್ರೋಟೀನ್ ಸೇವನೆ ಕ್ಯಾನ್ಸರ್ ಎದುರಾಗುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಕಂಡುಕೊಳ್ಳಲಾಗಿದೆ. ಹಾಗಾಗಿ ಮಾಂಸದಲ್ಲಿರುವ ಪ್ರೋಟೀನ್ ನ ಹೊರತಾಗಿ ಇದರಲ್ಲಿರುವ ರಸದೂತಗಳು, ಕ್ಯಾನ್ಸರ್ ಕಾರಕ ಸಂಯುಕ್ತಗಳು, ಕೊಬ್ಬುಗಳು ಮತ್ತು ಇತರ ಅಂಶಗಳೇ ಈ ಕ್ಯಾನ್ಸರ್ ಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ಅನುಮಾನಿಸುತ್ತಾರೆ.
ನಾವು ಮಿಶ್ರಾಹಾರಿಗಳು, ಎಂದರೆ ಸಸ್ಯಾಹಾರವನ್ನೂ ಮಾಂಸಾಹಾರವನ್ನೂ ಹಾಗೇಯೇ ಜೀರ್ಣಿಸಿಕೊಳ್ಳಲು ಅಸಮರ್ಥರಾದವರು. ಹಾಗಾಗಿ ಇವನ್ನು ಬೇಯಿಸಿ ಮೆದುಗೊಳಿಸಿಯೇ ಸೇವಿಸಬೇಕಾಗುತ್ತದೆ. ಮಾಂಸಹಾರದಿಂದ ಅಗಾಧ ಪ್ರಮಾಣದ ಪ್ರೋಟೀನ್ ಲಭ್ಯವಾಗುವ ಕಾರಣ ಇದರ ಸೇವನೆಯಲ್ಲಿ ಮಿತಿ ಇರುವುದು ಅವಶ್ಯ. ಆದರೆ ಮಾಂಸಾಹಾರದ ರುಚಿ ಒಮ್ಮೆ ಹತ್ತಿದರೆ ಇದನ್ನು ಹತ್ತಿಕ್ಕುವುದು ಕಷ್ಟ ಹಾಗೂ ಈಗಂತೂ ಸಿದ್ಧ ರೂಪದಲ್ಲಿ ಲಭ್ಯವಿರುವ ಅತ್ಯಂತ ಸುಂದರ ಮತ್ತು ಸ್ವಾದಿಷ್ಟವಾದ ಖಾದ್ಯಗಳನ್ನು ತಿನ್ನದೇ ಇರಲು ಸಾಧ್ಯವೇ ಇಲ್ಲ. ರುಚಿಗೆ ಮನಸೋತವರ ಸೊಂಟದ ಗಾತ್ರವೂ ಹೆಚ್ಚುವುದರಲ್ಲಿ ಅನುಮಾನವಿಲ್ಲ. ಆದರೆ ಅತಿಯಾದ ಮಾಂಸಾಹಾರದ ಸೇವನೆಯಿಂದ ತೂಕದಲ್ಲಿ ಹೆಚ್ಚಳ, ಸ್ಥೂಲಕಾಯ ಆವರಿಸುವುದು ಮೊದಲಾದ ತೊಂದರೆಗಳ ಜೊತೆಗೇ ಅಚ್ಚರಿ ತರಿಸುವ ಇನ್ನೂ ಕೆಲವರು ಪರಿಣಾಮಗಳನ್ನೂ ಎದುರಿಸಬೇಕಾಗಿ ಬರಬಹುದು. ಆರೋಗ್ಯಕ್ಕೆ ಮಿತಪ್ರಮಾಣದ ಮಾಂಸಾಹಾರವೂ ಅಗತ್ಯವೇ ಇರುವ ಕಾರಣ ಏಕಾಏಕಿ ಮಾಂಸಾಹಾರ ಸೇವನೆಯನ್ನೇ ಇಲ್ಲವಾಗಿಸುವುದೂ ಇನ್ನೊಂದು ಬಗೆಯ ತೊಂದರೆಗೆ ದಾರಿ ಮಾಡಿಕೊಡುತ್ತದೆ.

ಮಾಂಸಾಹಾರ ಕೆಟ್ಟದ್ದಲ್ಲದಿದ್ದರೂ ಸೇವನೆಯ ಮಾಂಸದ ಗುಣಮಟ್ಟ ಮತ್ತು ಪ್ರಮಾಣವನ್ನು ಅನುಸರಿಸಿ ಇದರ ಪರಿಣಾಮಗಳೂ ಎದುರಾಗುತ್ತವೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಉತ್ತಮ ಗುಣಮಟ್ಟದ ಮಾಂಸವಾದರೆ ಒಂದು ದಿನಕ್ಕೆ ನಿಮ್ಮ ಮುಷ್ಟಿಯಷ್ಟು ಪ್ರಮಾಣದ ಮಾಂಸ ಅಥವಾ ಮೂರು ಔನ್ಸುಗಳಷ್ಟು ಪ್ರಮಾಣಕ್ಕೂ ಮೀರಬಾರದು. ವಿಶೇಷವಾಗಿ ಇಂದಿನ ದಿನಗಳಲ್ಲಿ ಗ್ರಾಹಕರು ತಾವು ತಿನ್ನುವ ಮಾಂಸದ ಪ್ರಮಾಣವನ್ನು ಗಮನಿಸುತ್ತಿಲ್ಲ ಹಾಗೂ ರೆಸ್ಟುರಾಗಳಲ್ಲಿಯೂ ಮಾಂಸದ ಪ್ರಮಾಣವನ್ನು ಹೆಚ್ಚಿಸಿ ಹೆಚ್ಚು ಹೊತ್ತು ಕುಳ್ಳಿರಿಸಲಾಗುವಂತೆ ಮಾಡಲಾಗುತ್ತಿದೆ.

ಹಾಗಾಗಿ ಅತಿಯಾದ ಮಾಂಸಾಹಾರ ಸೇವನೆಯಿಂದ ಏನೆಲ್ಲಾ ತೊಂದರೆಗಳು ಎದುರಾಗಬಹುದು ಎಂದು ಮುಂಚಿತವಾಗಿ ತಿಳಿದುಕೊಂಡರೆ ಹೆಚ್ಚಿನ ಪ್ರಮಾಣದ ಸೇವನೆಗೆ ನಿಮ್ಮ ಮನವೇ ತಡೆಯೊಡ್ಡುತ್ತದೆ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಬನ್ನಿ, ಈ ಬಗ್ಗೆ ಒಂಭತ್ತು ಅಮೂಲ್ಯ ಮಾಹಿತಿಗಳನ್ನು ಅರಿಯೋಣ:

 
ಹೆಲ್ತ್