Back
Home » Business
ನಿಮ್ಮ ಮನೆ - ಕಚೇರಿಯ ಹಣ, ಸಂಪತ್ತು ಹೆಚ್ಚಿಸುವ ಸಸ್ಯಗಳು ಇಲ್ಲಿವೆ
Good Returns | 5th Oct, 2019 11:18 AM
 • ಮನಿ ಪ್ಲ್ಯಾಂಟ್

  ಮನೆ/ಕಚೇರಿಗಳಲ್ಲಿ ಸಸ್ಯ ಬೆಳೆಸುವವರಿಗೆ ಅದೃಷ್ಟ ತರುವ ಸಸ್ಯ ಮನಿ ಪ್ಲ್ಯಾಂಟ್. "ಯಾವ ಸಸ್ಯವು ಮನೆಗೆ ಅದೃಷ್ಟಶಾಲಿಯಾಗಿದೆ" ಎಂದು ನೀವು ತುಂಬಾ ಜನರನ್ನು ಕೇಳಿರಬಹುದು. ಅದಕ್ಕೆ ಉತ್ತರ ಮನಿ ಪ್ಲಾಂಟ್ ಅಂತಾ ಬಂದಿರಬಹುದು. ಮನಿ ಪ್ಲಾಂಟ್ ಒಳ್ಳೆಯದು ಎಂದು ಫೆಂಗ್ ಶೂಯಿ ಹೇಳುತ್ತದೆ. ಇದು ಹಣ ಸಂಪತ್ತು, ಅದೃಷ್ಟ ಮತ್ತು ಧನತ್ಮಕತೆಯನ್ನು ತರುತ್ತದೆ.
  ಅದೃಷ್ಟ ಕೆಲಸ ಮಾಡಬೇಕೆಂದರೆ ನೀವು 3 ರಿಂದ 5 ಎಳೆಗಳನ್ನು ಹೆಣೆದಂಥ ಸಸ್ಯಗಳನ್ನು ಇಟ್ಟುಕೊಳ್ಳಬೇಕು. ನಾಲ್ಕು ದುರದೃಷ್ಟದ ಸಂಖ್ಯೆ ಎಂಬುದು ಮನಸ್ಸಿನಲ್ಲಿರಲಿ. ಇದರೊಂದಿಗೆ ಅದೃಷ್ಟಕ್ಕಾಗಿ ಈ ಸಸ್ಯದ ಎಲೆಗಳು ಐದು ಅಥವಾ ಅದಕ್ಕಿಂತ ಹೆಚ್ಚಿನ ಬೆರಳುಗಳನ್ನು ಹೊಂದಿರಬೇಕು. ಇವು ಮನೆಯೊಳಗೆ ಚೆನ್ನಾಗಿ ಬೆಳೆಯುತ್ತದೆ. ಹೂಕುಂಡದಲ್ಲಿ ಇದನ್ನು ಬೆಳೆಸಬಹುದು. ಇದು ವಿಕಿರಣ ಹೀರಿ ಎನರ್ಜಿ ತುಂಬುವುದು. ಮನೆ, ಕಚೇರಿಗಳಲ್ಲಿ ಒತ್ತಡ ಕಡಿಮೆ ಮಾಡಿ ಸಮೃದ್ಧಿ, ಸಂಪತ್ತು ತರುತ್ತವೆ ಎಂದು ಫೆಂಗ್ ಶುಯಿ ಶಾಸ್ತ್ರ ಹೇಳಿದೆ.


 • ಅದೃಷ್ಟದ ಬಿದಿರು - Lucky Bamboo

  ಇದು ಪಂಚಭೂತಗಳನ್ನು ಪ್ರತಿನಿಧಿಸುವ ಕಾರಣದಿಂದಾಗಿ ಮನೆಯ ಒಳಗೆ ಸಮೃದ್ಧಿ ಹಾಗೂ ಅದೃಷ್ಟವನ್ನು ತರುತ್ತದೆ ಎನ್ನಲಾಗಿದೆ. ಫೆಂಗ್ ಶುಯ್ ಪ್ರಕಾರ ಬಿದಿರು ಎಷ್ಟು ಕಾಂಡ ಹೊಂದಿರುತ್ತದೆನ್ನುವುದು ಪ್ರಮುಖವಾಗಿ ಗಮನಿಸಬೇಕು.
  ಫೆಂಗ್ ಶುಯ್ ಪ್ರಕಾರ, 3 ಎಳೆಯ ಬಿದಿರು ಸಂತೋಷ, ಧೀರ್ಘಾಯಸ್ಸು ಹಾಗೂ ಸಮೃದ್ಧಿಯನ್ನು ಸೂಚಿಸುತ್ತದೆ. 5 ಎಳೆಗಳು ಹಣಕ್ಕಾಗಿ, 6 ಎಳೆಗಳು ಅದೃಷ್ಟಕ್ಕಾಗಿ, ಏಳು ಕಾಂಡದ್ದು ಆರೋಗ್ಯ, 8 ಎಳೆಗಳಿದ್ದರೆ ಬೆಳವಣಿಗೆ ಹಾಗೂ 10 ಎಳೆಗಳಿದ್ದರೆ ಸಂಪೂರ್ಣತೆಯನ್ನು ಸೂಚಿಸುತ್ತದೆ. 21 ಕಾಂಡಗಳ ಬಿದಿರು ಸಿಕ್ಕರೆ ಆರೋಗ್ಯ, ಅತ್ಯುತ್ತಮ ಸಂಪತ್ತು ನಿಮ್ಮದಾಗುವುದು.


 • ಹವಾಯನ್ ಟಿ ಪ್ಲ್ಯಾಂಟ್

  ಹವಾಯನ್ ಸಸ್ಯವು ಹಲವಾರು ಸುಂದರ ಬಣ್ಣಗಳಲ್ಲಿ ಸಿಗುತ್ತದೆ. ಇದಕ್ಕೆ ನಿಗೂಢವಾದ ಶಕ್ತಿಯಿದ್ದು, ಮನೆಯೊಳಗೆ ಇದನ್ನು ಬೆಳೆಸುವುದರಿಂದ ಕುಟುಂಬದವರಿಗೆ ಒಳ್ಳೆಯದಾಗುತ್ತದೆ ಎನ್ನಲಾಗಿದೆ. ಎರಡು ಕಾಂಡಗಳ ಸಸ್ಯ ಬೆಳೆಸುವುದರಿಂದ ಅದೃಷ್ಟ ಡಬಲ್ ಆಗುವ ಜೊತೆಗೆ ತಮ್ಮ ಪ್ರೀತಿ ಕೂಡಾ ಫಲಿಸುತ್ತದೆ.


 • ಜೇಡ್ ಪ್ಲಾಂಟ್

  ಸಾಂಪ್ರದಾಯಿಕವಾಗಿ ಸಾಮಾನ್ಯವಾಗಿ ವ್ಯವಹಾರಗಳ ಮಾಲೀಕರಿಗೆ ಉಡುಗೊರೆಯಾಗಿ ನೀಡಲಾಗುವ ಈ ಸಸ್ಯವು ಮಧ್ಯಮ ಗಾತ್ರದ್ದು ಮತ್ತು ಮನೆಗಳ ಪ್ರವೇಶದ್ವಾರದಲ್ಲಿ ಇಡಲು ಸೂಕ್ತವಾಗಿರುತ್ತದೆ. ಇದು ಸಂಪತ್ತು ಮತ್ತು ಯಶಸ್ಸನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿದೆ. ವೃತ್ತಾಕಾರದ ಎಲೆಗಳನ್ನು ಹೊಂದಿರುವ ಸಸ್ಯಗಳೆಲ್ಲವೂ ಮನೆಗೆ ಒಳಿತು ಮಾಡುತ್ತದೆ ಎಂಬುದು ಫೆಂಗ್ ಶುಯ್ ನಂಬಿಕೆ. ಸಾಮಾನ್ಯವಾಗಿ ಇದನ್ನು ಹೊಸದಾಗಿ ಉದ್ಯೋಗ ಆರಂಭಿಸುವವರಿಗೆ ಉಡುಗೊರೆಯಾಗಿ ಕೊಡುವ ಸಂಪ್ರದಾಯ ಬೆಳೆದುಕೊಂಡು ಬಂದಿದೆ. ಕಚೇರಿ ಸ್ಥಳದ ಪ್ರವೇಶದ್ವಾರದಲ್ಲಿಡುವುದರಿಂದ ಯಶಸ್ಸು ಹಾಗೂ ಸಮೃದ್ಧಿಯಾಗುವುದು ಖಚಿತ ಎನ್ನಲಾಗುತ್ತದೆ.


 • ತುಳಸಿ

  ಹಿಂದು ಧರ್ಮದಲ್ಲಿ ಅತೀ ಪವಿತ್ರವೆಂದು ಪರಿಗಣಿಸಲ್ಪಟ್ಟ ಹಲವಾರು ಸಸ್ಯಗಳಲ್ಲಿ ಇದು ಪ್ರಮುಖವಾದದ್ದು. ಮಂಜಾರಿ, ಲಕ್ಷ್ಮಿ ತುಳಸಿ, ಕೃಷ್ಣ ತುಳಸಿ, ರಾಮ್ ತುಳಸಿ, ಕಪೂರ್ ತುಳಸಿ, ತ್ರಿಟ್ಟಾವು ತುಳಸಿಯ ವಿಧಗಳಾಗಿದ್ದು, ಭಾರತಿಯರು ಕಾಲಕಾಲದಿಂದಲೂ ಪೂಜಿಸುತ್ತಿದ್ದಾರೆ. ತುಳಸಿ ನಿರೋಧಕ ಶಕ್ತಿ ಹೆಚ್ಚಿಸುತ್ತವೆ. ಅದಕ್ಕಾಗಿಯೇ ಭಾರತೀಯರ ಮನೆಯಂಗಳದಲ್ಲಿ ತುಳಸಿ ಉತ್ತಮ ಸ್ಥಾನ ಪಡೆದಿದೆ. ವಾಸ್ತು ಪ್ರಕಾರ ಇದು ಮನೆಗೆ ಪ್ರೀತಿ, ಆಸ್ತಿ, ಅದೃಷ್ಟ ಹಾಗೂ ಆರೋಗ್ಯ ತರುತ್ತದೆ. ಜೊತೆಗೆ, ಕೆಲವೊಂದು ರೀತಿಯ ಕ್ರಿಮಿಕೀಟಗಳನ್ನು ಕೂಡಾ ಮನೆಯೊಳಗೆ ಬರದಂತೆ ನೋಡಿಕೊಳ್ಳುತ್ತದೆ. ಕಡಿಮೆ ಪ್ರಯತ್ನದಲ್ಲಿ ಆರ್ಥಿಕವಾಗಿ ಹೆಚ್ಚು ಯಶಸ್ಸು ಸಾಧಿಸಲು ತುಳಸಿ ನೆರವಾಗುತ್ತದೆ.


 • ಸ್ನೇಕ್ ಪ್ಲ್ಯಾಂಟ್

  ಸ್ನೇಕ್ ಪ್ಲ್ಯಾಂಟ್ ಸಸ್ಯವನ್ನು ಮದರ್ ಇನ್ ಲಾ (ಅತ್ತೆ) ಸಸ್ಯವೆಂದೂ ಕರೆಯುತ್ತರೆ! ಗಾಳಿಯಲ್ಲರುವ ವಿಷಾನಿಲಗಳನ್ನು ಹೀರಿಕೊಳ್ಳುವ ಗುಣದಿಂದಾಗಿ ಇದು ಸಲಹಿದವರಿಗೆ ಕೇವಲ ಉತ್ತಮ ಗಾಳಿಯನ್ನಷ್ಟೇ ಉಳಿಸುತ್ತದೆ. ಗಾಳಿಯಲ್ಲಿರುವ ಫಾರ್ಮಾಲ್‌ಡಿಹೈಡ್, ಬೆಂಜೀನ್‌ನಂಥ ವಿಷವನ್ನು ಇದು ತೆಗೆದುಹಾಕುತ್ತದೆ. ಇದರೊಂದಿಗೆ ಪ್ರಾಕೃತಿಕವಾಗಿ ತೇವಾಂಶ ಉಳಿಸಲು ಕೂಡಾ ಈ ಸಸ್ಯ ನೆರವಾಗುತ್ತದೆ. ಎಲ್ಲೆಡೆ ಮಲಿನ ಗಾಳಿಯಿಂದ ಕಾಯಿಲೆಗಳು ಹರಡುತ್ತಿರುವ ದಿನಗಳಲ್ಲಿ ಸ್ವಚ್ಛ ಗಾಳಿಯನ್ನು, ಆರೋಗ್ಯ ಹಾಗೂ ಸಂತೋಷ ತರುತ್ತದೆ.


 • ಪಾಮ್ಸ್

  ಪಾಮ್ಸ್ ಹಾನಿಕಾರಕ ಧೂಳಿನ ಅಂಶಗಳನ್ನು ತೆಗೆದುಹಾಕುವಲ್ಲಿ ಅತ್ಯುತ್ತಮವಾಗಿವೆ. ಅದೃಷ್ಟದ ಒಳಾಂಗಣ ಸಸ್ಯಗಳ ಪೈಕಿ ಇದು ಮುಖ್ಯವಾದದ್ದು. ಇದು ಮನೆ, ಕಚೇರಿಗಳಲ್ಲಿ ಧನಾತ್ಮಕ ವಾತಾವರಣ ಸೃಷ್ಟಿಸುತ್ತದೆ.


 • ಮಲ್ಲಿಗೆ

  ಮಲ್ಲಿಗೆಯು ಮನೆಯಂಗಳಕ್ಕೆ ಪರಿಮಳ ಲೇಪ ಮಾಡುವುದಷ್ಟೇ ಅಲ್ಲ, ಇದು ಪ್ರೀತಿ ಹಾಗೂ ಹಣವನ್ನು ಆಕರ್ಷಿಸುತ್ತದೆ.
ನಮ್ಮ ನಮ್ಮ ಮನೆ ಮತ್ತು ಕಚೇರಿಗಳಲ್ಲಿ ಶಾಂತಿ, ಸಮೃದ್ದಿ, ಸಂಪತ್ತು, ಆರೋಗ್ಯ, ಹಣ ನೆಲೆಗೊಳ್ಳಬೇಕು ಎಂಬ ಬಯಕೆ ಎಲ್ಲರದ್ದು! ಅದಕ್ಕಾಗಿ ಹಲವರು ಅನೇಕ ಮಾರ್ಗಗಳನ್ನು ಆಯ್ದುಕೊಳ್ಳುತ್ತಾರೆ.

ಸಸ್ಯಗಳಲ್ಲಿ ಹಲವಾರು ಧನಾತ್ಮಕ, ಸಮೃದ್ದ ಗುಣಗಳಿರುತ್ತವೆ. ಮನಸ್ಸಿಗೆ ಸಂತೋಷ, ನೆಮ್ಮದಿ ತರುತ್ತವೆ ಎಂಬುದು ನಿಮ್ಮ ಅನುಭವಕ್ಕೂ ಬಂದಿರುತ್ತದೆ. ಫೆಂಗ್ ಶುಯ್ ವಾಸ್ತುಶಾಸ್ತ್ರ ಸಸ್ಯಗಳ ಮಹತ್ವದ ಬಗ್ಗೆ ತಿಳಿಸಿದೆ. ಇವು ಮನಸ್ಸಿಗೆ ಶಾಂತಿ, ಆರೋಗ್ಯ, ಸಂಪತ್ತು, ಹಣ ವೃದ್ದಿ ನೀಡುವ ಸಸ್ಯಗಳನ್ನು ಮನೆಯ ಹೊರಗೆ ಹಾಗು ಒಳಗೆ ಕೂಡಾ ಬೆಳೆಸಬೇಕು ಎಂದು ಹೇಳಿದೆ.

ಮನೆಯ ಒಳ ಮತ್ತು ಹೊರಾಂಗಣಗಳಲ್ಲಿ ಸದಾ ಹಸಿರಾಗಿರುವ ಸಸ್ಯಗಳನ್ನು ಬೆಳೆಸಿ. ಹಲವಾರು ಸಸ್ಯಗಳು ಮನೆಯಲ್ಲಿ/ಕಚೇರಿಯಲ್ಲಿ ಪಾಸಿಟಿವ್ ಎನರ್ಜಿ, ಸಂಪತ್ತು ವೃದ್ದಿ, ಆರೋಗ್ಯ ತರಬಲ್ಲವು. ಅವುಗಳ ಬಗ್ಗೆ ತಿಳಿಯೋಣ ಬನ್ನಿ..

   
 
ಹೆಲ್ತ್