Back
Home » ಬಾಲಿವುಡ್
ಕಲೆಕ್ಷನ್ ನಲ್ಲಿ ದಾಖಲೆ ನಿರ್ಮಿಸಿದ ಹೃತಿಕ್ ಮತ್ತು ಟೈಗರ್ 'ವಾರ್'
Oneindia | 5th Oct, 2019 03:41 PM

ಬಾಲಿವುಡ್ ಗ್ರೀಕ್ ಗಾಡ್ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅಭಿನಯದ 'ವಾರ್' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸುತ್ತಿದೆ. ಸಿನಿಮಾ ರಿಲೀಸ್ ಆದ ಮೊದಲ ದಿನವೆ ದಾಖಲೆ ಕಲೆಕ್ಷನ್ ಮಾಡಿ ಬಾಲಿವುಡ್ ಮಂದಿ ನಿಬ್ಬೆರಗಾಗುವಂತೆ ಮಾಡಿದೆ. ಮೂರನೆ ದಿನವೂ ವಾರ್ ನ ನಾಗಾಲೋಟ ಮುಂದುವರೆದಿದೆ.

ವಾರ್ ಚಿತ್ರದ ಮೂರನೆ ದಿನದ ಕಲೆಕ್ಷನ್ 100 ಕೋಟಿ ದಾಡುವ ಮೂಲಕ ಕೇವಲ ಮೂರೆ ದಿನದಲ್ಲಿ ಶತಕೋಟಿ ಕ್ಲಬ್ ಸೇರಿದೆ. ವಿಶೇಷ ಅಂದ್ರೆ ಯಶ್ ರಾಜ್ ನಿರ್ಮಾಣದ ಸಿನಿಮಾದಲ್ಲಿ ಮೂರನೆ ದಿನದಲ್ಲಿ ಶತಕೋಟಿ ದಾಟಿದ 5ನೇ ಸಿನಿಮಾ ಇದಾಗಿದೆ.

ಮೊದಲ ದಿನದಲ್ಲೇ ದಾಖಲೆ ಬರೆದ ಹೃತಿಕ್-ಟೈಗರ್ ಶ್ರಾಫ್

ದೂಮ್-3, ಸುಲ್ತಾನ್, ಟೈಗರ್ ಜಿಂದಾ ಹೈ, ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾಗಳು 3 ದಿನದಲ್ಲಿ 100 ಕೋಟಿ ಕ್ಲಬ್ ಸೇರಿತ್ತು. ಈಗ ಅದೆ ಸಾಲಿಗೆ ವಾರ್ ಸಿನಿಮಾ ಕೂಡ ಸೇರಿದೆ. ಗಾಂಧಿ ಜಯಂತಿ ದಿನ ತೆರೆಗೆ ಬಂದ ವಾರ್ ಮೊದಲ ದಿನವೆ 53 ಕೋಟಿ ಬಾಚಿಕೊಂಡಿತ್ತು.

ವಾರ್ ಹಿಂದಿ, ತಮಿಳು ಮತ್ತು ತೆಲುಗಿನಲ್ಲೂ ತೆರೆಗೆ ಬಂದಿದೆ. ಒಟ್ಟು 400 ಸ್ಕ್ರೀನ್ ಗಳಲ್ಲಿ ವಾರ್ ಪ್ರದರ್ಶನವಾಗುತ್ತಿದೆ. ದಕ್ಷಿಣ ಭಾರತದಲ್ಲಿ ವಾರ್ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇತ್ತು. ಆದ್ರೆ ಸೈ ರಾ ನರಸಿಂಹ ರೆಡ್ಡಿ ತೆರೆಗೆ ಬಂದ ಕಾರಣ ವಾರ್ ಕಲೆಕ್ಷನ್ ಕೊಂಚ ಹೊಡೆತ ಬಿದ್ದಿದೆ. ಸೈರಾ ಕೂಡ ಉತ್ತಮ ಓಪನಿಂಗ್ ಪಡೆದುಕೊಂಡಿದೆ.

   
 
ಹೆಲ್ತ್