Back
Home » ಸಮ್ಮಿಲನ
ಭಾನುವಾರದ ದಿನ ಭವಿಷ್ಯ (6-10-2019)
Boldsky | 6th Oct, 2019 04:00 AM
  • ಮೇಷ: 21 ಮಾರ್ಚ್ 19 ಏಪ್ರಿಲ್

    ಈ ಹಿಂದೆ ಅಂದುಕೊಂಡ ಕೆಲಸ ಕಾರ್ಯಗಳು ಹಾಗೂ ಯೋಜನೆಗಳು ಇಂದು ಕೈಗೂಡಿ ಬರುತ್ತವೆ. ಹಾಗಾಗಿ ಇಂದು ನಿಮಗೆ ವಿಶಿಷ್ಟ ಫಲಪ್ರದ ದಿನವಾಗುವುದು. ನಿಮ್ಮಲ್ಲಿರುವ ಪರೋಪಕಾರ ಗುಣವನ್ನು ಸುತ್ತಲಿನ ಜನರು ಮೆಚ್ಚುತ್ತಾರೆ. ನಿಮ್ಮ ಮೇಲಾಧಿಕಾರಿಗಳು ಹಾಗೂ ಸುತ್ತಲಿನ ಜನರು ನಿಮ್ಮ ಅಭಿಪ್ರಾಯವನ್ನು ಕೇಳಲು ಬಯಸುವರು. ಆತ್ಮವಿಶ್ವಾಸವು ಹೆಚ್ಚುವುದು. ಹಣಕಾಸಿನ ವಿಷಯದಲ್ಲಿ ಇಂದು ನಿಮಗೆ ಲಾಭದ ದಿನವಾಗಿರುತ್ತದೆ. ಉದ್ಯಮದ ನಿಮಿತ್ತ ದೂರದ ಸ್ಥಳಕ್ಕೆ ಪ್ರಯಣ ಕೈಗೊಳ್ಳುವ ಸಾಧ್ಯತೆಗಳಿವೆ. ಪೋಷಕರು ಮತ್ತು ಸಂಗಾತಿಯು ನಿರಾಳ ಮನೋಭಾವವನ್ನು ಹೊಂದಿರುತ್ತಾರೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ವಿಷಯದಲ್ಲಿ ಒಂದಿಷ್ಟು ಸವಾಲುಗಳು ಎದುರಾಗಬಹುದು. ಸಂಬಂಧದಲ್ಲಿ ಇರುವವರಿಗೆ ಇದು ವಿಶೇಷ ದಿನವಾಗಿರುತ್ತದೆ. ಆರೋಗ್ಯವೂ ಉತ್ತಮವಾಗಿ ಉಳಿಯುತ್ತದೆ. ನಿಮ್ಮ ತೀವ್ರವಾದ ವೇಳಾ ಪಟ್ಟಿಯಿಂದ ನೀವು ಸಂಜೆಯ ಹೊತ್ತಿಗೆ ಆಲಸ್ಯ ಮನೋಭಾವ ಹೊಂದುವ ಸಾಧ್ಯತೆಗಳಿವೆ.
    ಅದೃಷ್ಟ ಬಣ್ಣ: ಕಪ್ಪು ಹಸಿರು
    ಅದೃಷ್ಟ ಸಂಖ್ಯೆ: 13
    ಅದೃಷ್ಟ ಸಮಯ: ಬೆಳಿಗ್ಗೆ 8:30 ರಿಂದ ಮಧ್ಯಾಹ್ನ 2:15 ರವರೆಗೆ


  • ವೃಷಭ: 20 ಏಪ್ರಿಲ್-20 ಮೇ

    ಆರ್ಥಿಕ ಸ್ಥಿತಿಗೆ ಸಂಬಂಧಿಸಿದಂತೆ ಇಂದು ಅತ್ಯುತ್ತಮವಾದ ದಿನ. ಅಧಿಕ ಲಾಭವನ್ನು ಸಹ ಪಡೆದುಕೊಳ್ಳುವಿರಿ. ಭವಿಷ್ಯದ ಯೋಜನೆಯೊಂದಿಗೆ ಒಂದಿಷ್ಟು ಹೊಸ ಹೂಡಿಕೆಯಲ್ಲಿ ತೊಡಗಿಕೊಳ್ಳುವಿರಿ. ಇದು ಸಹೋದ್ಯೋಗಿಯೊಂದಿಗೆ ಅಸ್ವಸ್ಥತೆಯನ್ನು ಎದುರಿಸಬಹುದಾದ ದಿನ. ಸಾರ್ವಜನಿಕ ವಲಯದಲ್ಲಿರುವವರು ವಿಶೇಷ ಉತ್ಸಾಹವನ್ನು ಪಡೆದುಕೊಳ್ಳುವರು. ಇತರರು ನಿಮ್ಮ ಸಹಾಯದೊಂದಿಗೆ ಲಾಭವನ್ನು ಪಡೆದುಕೊಳ್ಳುವರು. ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣವನ್ನು ಕೈಗೊಳ್ಳಬಹುದು. ಅವು ಅದ್ಭುತ ಲಾಭವನ್ನು ತಂದುಕೊಡುತ್ತವೆ. ಪ್ರಮುಖ ಲಾಭಗಳು ಸಹ ನಿಮ್ಮ ಹಾದಿಗೆ ಬರಬಹುದು. ನಿಮ್ಮ ಸಂಗಾತಿಗೆ ಸೂಕ್ತ ಸಮಯ ನೀಡದೆ ಇರುವುದಕ್ಕೆ ದೂರಬಹುದು. ಸಕಾರಾತ್ಮಕ ಮನೋಭಾವವು ನಿಮ್ಮನ್ನು ಉಲ್ಲಾಸದಲ್ಲಿ ಇರುವಂತೆ ಮಾಡುವುದು. ಆರೋಗ್ಯದಲ್ಲಿ ಏರಿಳಿತ ಉಂಟಾಗಬಹುದು.
    ಅದೃಷ್ಟ ಬಣ್ಣ: ಹಸಿರು
    ಅದೃಷ್ಟ ಸಂಖ್ಯೆ: 7
    ಅದೃಷ್ಟ ಸಮಯ: ಬೆಳಿಗ್ಗೆ 9:20 ರಿಂದ ಸಂಜೆ 4:30 ರವರೆಗೆ


  • ಮಿಥುನ: 21 ಮೇ-20 ಜೂನ್

    ನಿಮ್ಮ ಮುಂದೆ ಬಹಳ ಹತ್ತಿರದ ವ್ಯಕ್ತಿಗಳಂತೆ ಕೆಲವರು ವರ್ತಿಸಿ, ನಿಮ್ಮಿಂದ ಉಂಟಾಗುವ ಉಪಯೋಗವನ್ನು ಪಡೆದುಕೊಳ್ಳುವರು. ಹಾಗಾಗಿ ಕುಟುಂಬದ ವಿಷಯದಲ್ಲಿ ನೀವು ಜಾಗರೂಕರಾಗಿರಿ. ನಿಮ್ಮ ಚಾಣಾಕ್ಷತೆಯು ಅದ್ಭುತವನ್ನು ಮಾಡುತ್ತದೆ. ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಸಂಗಾತಿಯು ಚಿಂತೆಗೆ ಒಳಗಾಗಬಹುದು. ಕುಟುಂಬಕ್ಕೆ ಸಂಬಂಧಿಸಿದಂತೆ ತೊಂದರೆಗಳು ತಲೆ ದೂರಬಹುದು. ಮೇಲಾಧಿಕಾರಿಗಳಿಂದ ಉತ್ತಮ ಸಹಾಯ ದೊರೆಯುವುದರಿಂದ ಕೆಲಸದ ಕ್ಷೇತ್ರದಲ್ಲಿ ಉತ್ತಮ ಸ್ಥಿತಿ ಮುಂದುವರಿಯುವುದು. ಆಪ್ತರಿಂದ ಸಹಾಯ ಪಡೆದುಕೊಳ್ಳುವಿರಿ. ಆರ್ಥಿಕ ಸ್ಥಿತಿಯು ನಿಧಾನವಾಗಿ ಅನುಕೂಲಕರ ಸ್ಥಿತಿಗೆ ಬರುವುದು. ಆರೋಗ್ಯವು ಸುಧಾರಣೆಯನ್ನು ಕಾಣುತ್ತದೆ. ದಿನದ ಕೊನೆಯಲ್ಲಿ ವಿಶ್ರಾಂತಿಯನ್ನು ಪಡೆದುಕೊಳ್ಳುವಿರಿ.
    ಅದೃಷ್ಟ ಬಣ್ಣ: ಕಿತ್ತಳೆ
    ಅದೃಷ್ಟ ಸಂಖ್ಯೆ: 11
    ಅದೃಷ್ಟ ಸಮಯ: ಬೆಳಿಗ್ಗೆ 11: 45 ರಿಂದ ಸಂಜೆ 6:30 ರವರೆಗೆ


  • ಕರ್ಕ: 21 ಜೂನ್ 22 ಜುಲೈ

    ಸುಗಮ ಹಾಗೂ ಸರಳವಾದ ಜೀವನ ನಡೆಸಲು ವಿಷಯಗಳನ್ನು ಸರಳವಾಗಿ ಸ್ವೀಕರಿಸಲು ಕಲಿಯಬೇಕು. ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳುವಿರಿ. ಅದು ನಿಮ್ಮ ಭವಿಷ್ಯಕ್ಕೆ ಅನುಕೂಲವಾಗುವುದು. ಶೀಘ್ರದಲ್ಲಿಯೇ ಪ್ರಯೋಜನವನ್ನು ಪಡೆದುಕೊಳ್ಳುವಿರಿ. ಸಕಾರಾತ್ಮಕ ಮನೋಭಾವವು ನಿಮ್ಮನ್ನು ಯಶಸ್ವಿಗೊಳಿಸುತ್ತದೆ. ಅತಿಯಾದ ಕೆಲಸದ ಒತ್ತಡದ ನಡುವೆಯೂ ನಿಮ್ಮ ಆಸಕ್ತ ವಿಷಯಗಳಿಗೆ ಸಮಯವನ್ನು ನೀಡುವಿರಿ. ವಾರಾಂತ್ಯದಲ್ಲಿ ಇನ್ನಷ್ಟು ಸಂತೋಷವನ್ನು ಪಡೆದುಕೊಳ್ಳುವಿರಿ. ಹಿರಿಯರಿಗೆ ನಿಮ್ಮ ಬಗ್ಗೆ ವಿಶೇಷ ಭಾವನೆ ಮೂಡುವುದು. ಹಳೆಯ ಸ್ನೇಹಿತರನ್ನು ಭೇಟಿಯಾಗುವುದರಿಂದ ಉತ್ತಮ ಸಂಪರ್ಕವನ್ನು ಪಡೆದುಕೊಳ್ಳುವಿರಿ. ಹೊಸದಾಗಿ ವಿವಾಹವಾದವರು ಜಾಲಿಯ ಜೀವನ ನಡೆಸುವರು. ಸಂಗಾತಿಯ ಸ್ನೇಹ ಪರ ವರ್ತನೆಯನ್ನು ತೋರುವರು. ನಿಮಗೆ ಹೆಚ್ಚಿನ ಆನಂದ ದೊರೆಯುವುದು. ಆರೋಗ್ಯದಲ್ಲೂ ಉತ್ತಮ ಬದಲಾವಣೆ ಉಂಟಾಗುವುದು.
    ಅದೃಷ್ಟ ಬಣ್ಣ: ಕಂದು
    ಅದೃಷ್ಟ ಸಂಖ್ಯೆ: 2
    ಅದೃಷ್ಟ ಸಮಯ: ಮಧ್ಯಾಹ್ನ 1:30 ರಿಂದ 9:15 ರವರೆಗೆ


  • ಸಿಂಹ: 23 ಜುಲೈ-22 ಆಗಸ್ಟ್

    ಕೆಲಸಕ್ಕೆ ಸಂಬಂಧಿಸಿದಂತೆ ನಿಮಗೆ ಇಂದು ಅನುಕೂಲಕರವಾದ ದಿನ. ನಿಮ್ಮ ಕೆಲಸ ಕಾರ್ಯವನ್ನು ಮೇಲಾಧಿಕಾರಿಗಳು ಹಾಗೂ ಸಹೋದ್ಯೋಗಿಗಳು ಪ್ರಶಂಸಿಸುತ್ತಾರೆ. ಸಮಯಗಳೊಂದಿಗೆ ವಿಷಯಗಳು ಉತ್ತಮವಾಗುತ್ತವೆ. ಕೆಲಸದ ಬದಲಾವಣೆ ನಿಮ್ಮ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುವುದು. ಕಾನೂನು ಸಂಬಂಧಿತ ಸಮಸ್ಯೆಗಳಿಂದ ಮುಕ್ತರಾಗುವಿರಿ. ಸಂಬಂಧಗಳಲ್ಲಿ ಸಣ್ಣ ತೊಡಕು ಅಥವಾ ವ್ಯತ್ಯಾಸಗಳನ್ನು ಕಂಡುಕೊಳ್ಳಬಹುದು. ವಿಷಯಗಳನ್ನು ಸಾಮಾನ್ಯವಾಗಿರಿಸಲು ಮತ್ತು ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿ. ದಿನದ ಅಂತ್ಯದ ವೇಳೆ ನಿಮಗೆ ಒಂದಿಷ್ಟು ಆಯಾಸ ಆಗುವ ಸಾಧ್ಯತೆಗಳಿವೆ. ನಿಮ್ಮ ಆರೋಗ್ಯ ದೃಷ್ಟಿಯಿಂದ ವಿಶ್ರಾಂತಿ ತೆಗೆದುಕೊಳ್ಳಲು ಸಮಯವನ್ನು ಮೀಸಲಿಡಿ.
    ಅದೃಷ್ಟ ಬಣ್ಣ: ನೀಲಿ
    ಅದೃಷ್ಟ ಸಂಖ್ಯೆ: 14
    ಅದೃಷ್ಟ ಸಮಯ: ಬೆಳಿಗ್ಗೆ 9:20 ರಿಂದ ಸಂಜೆ 4:30 ರವರೆಗೆ


  • ಕನ್ಯಾ: 23 ಆಗಸ್ಟ್ -22 ಸಪ್ಟೆಂಬರ್

    ನೀವು ಹೋರಾಡುತ್ತಿರುವ ಸಂಗತಿಯಲ್ಲಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವಿರಿ. ವಿಶೇಷವಾಗಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವಿಷಯದಲ್ಲಿ ಹೆಚ್ಚು ಶ್ರಮವನ್ನು ವಹಿಸುವರು. ಜನರು ಸಹ ನಿಮ್ಮ ಉತ್ತಮ ಗುಣಗಳನ್ನು ಹಾಗೂ ವರ್ತನೆಗಳನ್ನು ಅನುಕರಣೆ ಮಾಡುವರು. ವೃತ್ತಿ ಕ್ಷೇತ್ರದಲ್ಲಿ ಮೇಲಾಧಿಕಾರಿಗಳು ಅತ್ಯಂತ ಸಹಕಾರಿ ವರ್ತನೆಯನ್ನು ತೋರುವರು. ಪ್ರಮುಖ ವಿಷಯಗಳು ಹಾಗೂ ಕೆಲಸ ನಿರ್ವಹಣೆ ಮಾಡಲು ನಿಮಗೆ ಹೇಳುವರು. ವಿಶೇಷವಾದ ದೂರ ಪ್ರಯಾಣವನ್ನು ತಪ್ಪಿಸುವುದು ಒಳ್ಳೆಯದು. ಪ್ರೀತಿ ಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯುವುದು ನಿಮಗೆ ಸಂತೋಷವನ್ನು ನೀಡುತ್ತದೆ. ನಿಮ್ಮ ಪ್ರಾಯೋಗಿಕ ಸ್ವಭಾವವು ಕುಟುಂಬಕ್ಕೆ ಉತ್ತಮವಾಗಿರುತ್ತದೆ. ಸಂಬಂಧಗಳ ಬಗ್ಗೆ ಆದಷ್ಟು ಜಾಗರೂಕರಾಗಿರಬೇಕು. ಯೋಗ ಅಥವಾ ವ್ಯಾಯಾಮದಿಂದ ದಿನವನ್ನು ಆರಂಭಿಸಿ.
    ಅದೃಷ್ಟ ಬಣ್ಣ: ಆಕಾಶ ನೀಲಿ
    ಅದೃಷ್ಟ ಸಂಖ್ಯೆ: 39
    ಅದೃಷ್ಟ ಸಮಯ: ಮಧ್ಯಾಹ್ನ 12:45 ರಿಂದ 3:45 ರವರೆಗೆ


  • ತುಲಾ: 23 ಸಪ್ಟೆಂಬರ್-22 ಅಕ್ಟೋಬರ್

    ಯೋಗ ಮತ್ತು ವ್ಯಾಯಾಮಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಹೆಚ್ಚು ಚಟುವಟಿಯಿಂದ ಕೂಡಿರುವವರಿಗೆ ಯಶಸ್ಸು ದೊರೆಯುವುದು. ವಿದ್ಯಾರ್ಥಿಗಳು ಸ್ನೇಹಿತರೊಂದಿಗೆ ಸಣ್ಣ ಪ್ರಯಾಣವನ್ನು ಕೈಗೊಳ್ಳಬಹುದು. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಪ್ರಾಮಾಣಿಕತೆಯ ಬಗ್ಗೆ ಪ್ರಶಂಸೆ ನೀಡಲಾಗುತ್ತದೆ. ಅದು ನಿಮ್ಮ ಅಧಿಕಾರಿಗಳಿಗೆ ಹೆಮ್ಮೆ ಭಾವನೆಯನ್ನು ಮೂಡಿಸುವುದು. ಸಣ್ಣ ಪ್ರವಾಸಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ಕುಟುಂಬದ ದೃಷ್ಟಿಯಿಂದ ಇಂದು ವಿಶೇಷವಾದ ದಿನ. ಸಂಗಾತಿಯೊಂದಿಗೆ ನಿಮ್ಮ ತಿಳುವಳಿಕೆಯು ಉತ್ತಮವಾಗಿರುತ್ತದೆ. ನವ ವಿವಾಹಿತರು ಪ್ರೀತಿಯ ಗಾಳಿಯಲ್ಲಿ ತೇಲುವರು. ಕುಟುಂಬ ಮತ್ತು ಮಕ್ಕಳ ಕಡೆಗೆ ಹೆಚ್ಚಿನ ಸಮಯವನ್ನು ವಿನಿಯೋಗಿಸಬೇಕು. ಹಣಕಾಸಿಗೆ ಸಂಬಂಧಿಸಿದಂತೆ ಉತ್ತಮ ಸುದ್ದಿಯನ್ನು ಪಡೆದುಕೊಳ್ಳುವಿರಿ. ಸಂಗಾತಿಗೆ ಇಷ್ಟವಾಗುವ ತಿಂಡಿಗಳನ್ನು ನೀಡುವುದರ ಮೂಲಕ ಆಶ್ಚರ್ಯವನ್ನು ಮೂಡಿಸುವಿರಿ.
    ಅದೃಷ್ಟ ಬಣ್ಣ: ಸಾಸಿವೆ
    ಅದೃಷ್ಟ ಸಂಖ್ಯೆ: 11
    ಅದೃಷ್ಟ ಸಮಯ: ಮಧ್ಯಾಹ್ನ 3:30 ರಿಂದ 8:50 ರವರೆಗೆ


  • ವೃಶ್ಚಿಕ: 23 23 ಅಕ್ಟೋಬರ್-21 ನವೆಂಬರ್

    ಇಂದು ನಿಮಗೆ ಒಟ್ಟಾರೆಯಾಗಿ ಕಾರ್ಯನಿರತವಾದ ದಿನವಾಗುವುದು. ಕಾರ್ಪೋರೇಟ್ ಮತ್ತು ಸಾರ್ವಜನಿಕ ವಲಯದಲ್ಲಿ ಇರುವವರಿಗೆ ಇಂದು ಪ್ರಯೋಜನಕಾರಿಯಾಗಿರುತ್ತದೆ. ಒಡಹುಟ್ಟಿದವರ ನಡುವೆ ಭಿನ್ನಾಭಿಪ್ರಾಯ ಮೂಡುವುದು. ಅದು ಪೋಷಕರಿಗೆ ಬೇಸರವನ್ನು ಮೂಡಿಸುವುದು. ನೀವು ಸಂಬಂಧಗಳ ಬಗ್ಗೆ ಹೆಚ್ಚಿನ ಎಚ್ಚರಿಕೆಯನ್ನು ತೋರಬೇಕು. ಉಳಿತಾಯಗಳನ್ನು ಮೀರಿ ಖರ್ಚುಮಾಡುವ ಸಾಧ್ಯತೆಗಳಿವೆ. ನಿಮ್ಮ ಬಜೆಟ್ ಏರಿಳಿತಕ್ಕೆ ಒಳಗಾಗಬಹುದು. ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವ ನಿಮ್ಮ ಪ್ರವೃತ್ತಿಯಿಂದ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗುವುದು. ನಿಮ್ಮ ಪ್ರಯತ್ನವನ್ನು ವ್ಯರ್ಥಮಾಡದಿರಿ. ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
    ಅದೃಷ್ಟ ಬಣ್ಣ: ಹಳದಿ
    ಅದೃಷ್ಟ ಸಂಖ್ಯೆ: 24
    ಅದೃಷ್ಟ ಸಮಯ: ಬೆಳಿಗ್ಗೆ 9:55 ರಿಂದ ಸಂಜೆ 7: 30 ರವರೆಗೆ


  • ಧನು: 22 ನವೆಂಬರ್ -21 ಡಿಸೆಂಬರ್

    ಇಂದಿನ ಆರಂಭವು ನಿಮಗೆ ಆಹ್ಲಾದಕರವಾದ ಅನುಭವವನ್ನು ನೀಡುತ್ತದೆ. ಇಂದಿನ ದಿನ ಒಳ್ಳೆಯ ಅನುಭವ ನೀಡುವುದು. ಒಂದೆಡೆ ಸ್ಥಿರತೆಯನ್ನು ಸ್ಥಾಪಿಸಿಕೊಳ್ಳಲು ಉತ್ತಮವಾದ ದಿನ. ಕೆಲಸದಲ್ಲಿ ನೀವು ತೋರುವ ಶ್ರಮ ಹಾಗೂ ಪ್ರಯತ್ನವು ಮೆಚ್ಚುಗೆಯನ್ನು ಪಡೆದುಕೊಳ್ಳುವುದು. ಕಾರ್ಪೋರೇಟ್ ಕ್ಷೇತ್ರದಲ್ಲಿ ಇರುವವರು ಉದ್ಯೋಗ ಬದಲಾವಣೆಗೆ ಯೋಜನೆಯನ್ನು ಕೈಗೊಳ್ಳಬಹುದು. ಉದ್ಯಮಿಗಳಿಗೆ ಇಂದು ಅತ್ಯುತ್ತಮವಾದ ದಿನವಾಗುವುದು. ಆರ್ಥಿಕವಾಗಿ ಲಾಭದಾಯಕವಾದ ದಿನ ಎಂದು ಹೇಳಬಹುದು. ಉದ್ಯಮಿಗಳಿಗೆ ಅತ್ಯುತ್ತಮ ದಿನವಾಗುವುದು. ಕಲೆ ಮತ್ತು ಕ್ರೀಡೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಇರುವವರು ಅತ್ಯುತ್ತಮ ಪ್ರದರ್ಶನವನ್ನು ನೀಡುವರು. ಉದ್ಯೋಗ ನಿಮಿತ್ತ ಸ್ಪರ್ಧಾತ್ಮಕ ಪರೀಕ್ಷೆಯನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ಪೋಷಕರ ಸಹಾಯದಿಂದ ಕುಟುಂಬದ ನಿರ್ವಹಣೆಯನ್ನು ಸಮರ್ಥವಾಗಿ ಕೈಗೊಳ್ಳುವರು. ಮುಂಜಾನೆಯ ಉತ್ತಮ ನಡಿಗೆಯ ಮೂಲಕ ದಿನವನ್ನು ಪ್ರಾರಂಭಿಸಿ.
    ಅದೃಷ್ಟ ಬಣ್ಣ: ನೇರಳೆ
    ಅದೃಷ್ಟ ಸಂಖ್ಯೆ: 25
    ಅದೃಷ್ಟ ಸಮಯ: ಮಧ್ಯಾಹ್ನ 12:45 ರಿಂದ 6:05 ರವರೆಗೆ


  • ಮಕರ: 22 ಡಿಸೆಂಬರ್ -19 ಜನವರಿ

    ಬಹುತೇಕ ವಿಷಯಗಳಿಗೆ ಸಂಬಂಧಿಸಿದಂತೆ ಇಂದು ನಿಮಗೆ ಉತ್ತಮ ದಿನವಾಗುವುದು. ವಿವಾಹಿತರಿಗೆ ಯಶಸ್ವಿ ದಿನವಾಗುವುದು. ನಿಮ್ಮ ಕೆಲಸದಲ್ಲಿ ಹೊಂದಿರುವ ಗುರಿಯನ್ನು ಸಾಧಿಸಲು ನಿಮಗೆ ಅನುಕೂಲವಾಗುವುದು. ಪ್ರೀತಿ ಪಾತ್ರರಿಗೆ ಆರಾಮದಾಯಕ ಪರಿಸ್ಥಿತಿಯನ್ನು ಕಲ್ಪಿಸಿಕೊಡುವುದರ ಮೂಲಕ ಕುಟುಂಬವನ್ನು ಉತ್ತಮ ಸ್ಥಿತಿಯಲ್ಲಿ ಇರಿಸುವಿರಿ. ಕಿಬ್ಬೊಟ್ಟೆಯ ಸಮಸ್ಯೆ ಅನುಭವಿಸುತ್ತಿರುವವರಿಗೆ ಕೊಂಚ ಸುಧಾರಣೆಯನ್ನು ಅನುಭವಿಸುವರು. ಪೋಷಕರು ತಮ್ಮ ಮಕ್ಕಳಿಗೆ ವಿಶೇಷವಾದ ಭಾವನೆಯನ್ನು ಕಲ್ಪಿಸಿಕೊಡುತ್ತಾರೆ. ತಾಳ್ಮೆಯ ಪ್ರವೃತ್ತಿಯು ನಿಮಗೆ ಉತ್ತಮ ಪ್ರವೃತ್ತಿಯನ್ನು ನೀಡುತ್ತದೆ. ಹೊಸ ವಾಹನ ಖರೀದಿಯ ಬಗ್ಗೆ ಚಿಂತನೆಯನ್ನು ನಡೆಸುವ ಸಾಧ್ಯತೆಗಳಿವೆ. ಉತ್ತಮ ದಿನಚರಿಯನ್ನು ಅನುಸರಿಸುವುದರ ಮೂಲಕ ಫಿಟ್ ಆಗಿರಲು ಪ್ರಯತ್ನಿಸಿ. ಅಧಿಕ ರಕ್ತದೊತ್ತಡ ಇರುವ ವ್ಯಕ್ತಿಗಳು ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಬೇಕು.
    ಅದೃಷ್ಟ ಬಣ್ಣ: ಕೆಂಪು
    ಅದೃಷ್ಟ ಸಂಖ್ಯೆ: 8
    ಅದೃಷ್ಟ ಸಮಯ: ಮಧ್ಯಾಹ್ನ 2:15 ರಿಂದ 7:20 ರವರೆಗೆ


  • ಕುಂಭ: 20 ಜನವರಿ -18 ಫೆಬ್ರವರಿ

    ಇಂದು ನಿಮಗೆ ಮಿಶ್ರ ಫಲವನ್ನು ನೀಡುವ ದಿನವಾಗುವುದು. ಪ್ರತಿಯೊಂದು ಸಂಗತಿಗೂ ವಾದ ಮಾಡುವುದನ್ನು ನಿಲ್ಲಿಸಿ. ಆರೋಗ್ಯವನ್ನು ಹದಗೆಡಿಸುವಷ್ಟು ಕೆಲಸವನ್ನು ಮಾಡದಿರಿ. ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರು ಬಹಳ ಸಮಯದ ನಂತರ ನಿರಾಳತೆಯನ್ನು ಪಡೆದುಕೊಳ್ಳುವರು. ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಸಾಧ್ಯತೆಗಳಿವೆ. ಸ್ನೇಹಿತರು ಆಯೋಜಿಸುವ ಪಾರ್ಟಿಗೆ ಹೋಗುವ ಸಾಧ್ಯತೆಗಳಿವೆ. ಹೊಸದಾಗಿ ಉದ್ಯೋಗ ಪ್ರಾರಂಭಿಸಿದವರು ತಮ್ಮ ಕೆಲಸವನ್ನು ಆನಂದಿಸುತ್ತಾರೆ. ವೈಯಕ್ತಿಕವಾಗಿ ಇಂದು ಬಿಡುವಿಲ್ಲದ ದಿನವಾಗುವುದು. ಇಂದು ಆಸ್ತಿ ಹಾಗೂ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಅದ್ಭುತ ಲಾಭವನ್ನು ಪಡೆದುಕೊಳ್ಳುವಿರಿ.
    ಅದೃಷ್ಟ ಬಣ್ಣ: ನೇರಳೆ
    ಅದೃಷ್ಟ ಸಂಖ್ಯೆ: 42
    ಅದೃಷ್ಟ ಸಮಯ: ಬೆಳಿಗ್ಗೆ 6.30 ರಿಂದ ಸಂಜೆ 4:20 ರವರೆಗೆ


  • ಮೀನ: 19 ಫೆಬ್ರುವರಿ-20 ಮಾರ್ಚ್

    ಪ್ರಮುಖವಾದದ್ದನ್ನು ನಿರ್ಧರಿಸಲು ಇಂದು ಉತ್ತಮವಾದ ದಿನವಲ್ಲ. ಕೆಲಸದ ವಿಷಯದಲ್ಲಿ ಇಂದು ಕಠಿಣವಾದ ಸಮಯವನ್ನು ಅನುಭವಿಸಬೇಕಾಗುವುದು. ಸಹೋದ್ಯೋಗಿಗಳಿಂದ ಹೊಸ ಸಂಗತಿಯನ್ನು ಕಲಿತುಕೊಳ್ಳುವಿರಿ. ಅದು ನಿಮ್ಮ ಭವಿಷ್ಯದಲ್ಲಿ ಉತ್ತಮ ಪ್ರಯೋಜನವನ್ನು ನೀಡುವುದು. ಆಪ್ತರಿಂದ ಹಣವನ್ನು ಎರವಲು ಪಡೆಯದಿರಿ. ಮಕ್ಕಳು ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ನಿಮ್ಮ ಅಭಿಪ್ರಾಯವನ್ನು ಯಾಚಿಸಬಹುದು. ಕುಟುಂಬದವರೊಂದಿಗೆ ಸಣ್ಣ ಪ್ರವಾಸವನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಉಂಟಾಗುವುದು. ಅದು ಎಲ್ಲರನ್ನು ಸಂತೋಷದಲ್ಲಿರುವಂತೆ ಮಾಡುವುದು. ನೆಮ್ಮದಿಯ ದಿನಕ್ಕಾಗಿ ನೀವು ಧ್ಯಾನ ಮಾಡುವುದರ ಮೂಲಕ ದಿನವನ್ನು ಆರಂಭಿಸಿ.
    ಅದೃಷ್ಟ ಬಣ್ಣ: ಬಿಳಿ
    ಅದೃಷ್ಟ ಸಂಖ್ಯೆ: 27
    ಅದೃಷ್ಟ ಸಮಯ: ಮಧ್ಯಾಹ್ನ 12:50 ರಿಂದ 3:45




ಭಾನುವಾರ ಎಂದರೆ ಸಾಮಾನ್ಯವಾಗಿ ಎಲ್ಲರೂ ಆನಂದದಿಂದ ಇರಲು ಇಷ್ಟ ಪಡುತ್ತಾರೆ. ಎಲ್ಲಾ ಒತ್ತಡಗಳನ್ನು ಬದಿಗಿಟ್ಟು ದಿನವಿಡೀ ವಿಶ್ರಾಂತಿಗೆ ಒಳಗಾಗಲು ಬಯಸುತ್ತಾರೆ. ಇನ್ನೂ ಕೆಲವರು ಶಾಪಿಂಗ್ ಮಾಡುವುದು ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದರ ಮೂಲಕ ಖುಷಿಪಡುತ್ತಾರೆ.

ಒಟ್ಟಿನಲ್ಲಿ ಎಲ್ಲಾ ಕಾರ್ಯದ ಉದ್ದೇಶವು ಖುಷಿಯಾಗಿ ಇರಬೇಕೆನ್ನುವುದೇ ಆಗಿರುತ್ತದೆ. ವಿಶ್ರಾಂತಿಗೆ ಮೀಸಲಾದ ಈ ಭಾನುವಾರ ನಿಮ್ಮ ಭವಿಷ್ಯಕ್ಕೆ ಯಾವೆಲ್ಲಾ ಬದಲಾವಣೆಯನ್ನುಂಟುಮಾಡುತ್ತದೆ? ವಿಶ್ರಾಂತಿಯ ಜೊತೆಗೆ ಒಂದಿಷ್ಟು ಖುಷಿಯನ್ನು ನೀಡುವುದೇ ಎಂದು ತಿಳಿದುಕೊಳ್ಳಲು ಈ ಮುಂದೆ ವಿವರಿಸಲಾದ ರಾಶಿ ಭವಿಷ್ಯವನ್ನು ಅರಿಯಿರಿ...

   
 
ಹೆಲ್ತ್