Back
Home » ಸಮ್ಮಿಲನ
ಸೋಮವಾರದ ದಿನ ಭವಿಷ್ಯ (7-10-2019)
Boldsky | 7th Oct, 2019 04:01 AM
 • ಮೇಷ: 21 ಮಾರ್ಚ್ 19 ಏಪ್ರಿಲ್

  ಇಂದು ನೀವು ಸಾಮಾನ್ಯವಾಗಿಯೇ ಕಾರ್ಯ ನಿರತರಾಗಿರುತ್ತೀರಿ. ಹೆಚ್ಚಿನ ಬದ್ಧತೆಯನ್ನು ನಿಭಾಯಿಸಲು ಸಾಧ್ಯವಾಗುವುದು. ನಿಮ್ಮ ಹತ್ತಿರದವರು ಉದ್ದೇಶ ಪೂರ್ವಕವಾಗಿ ನಿಮಗೆ ನೋವುಂಟುಮಾಡಬಹುದು. ನಿಮ್ಮ ಆಂತರಿಕ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳದಿರಿ. ವಿಷಯಗಳು ಇನ್ನಷ್ಟು ಹದಗೆಡುತ್ತವೆ. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಆತುರದ ನಿರ್ಧಾರವನ್ನು ಕೈಗೊಳ್ಳದಿರಿ. ನಿಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸಲು ಸಿದ್ಧತೆ ಮಡಿಕೊಳ್ಳಿ. ನಿಮ್ಮ ಸಂಗಾತಿಯಿಂದ ಸಹಕಾರ ದೊರೆಯುವುದು. ಕುಟುಂಬದ ವಿಷಯದಲ್ಲಿ ಎಚ್ಚರದಿಂದ ಇರಬೇಕು. ನೀವು ಶಾಂತಿ ಹಾಗೂ ತಾಳ್ಮೆಯಿಂದ ವಿಷಯಗಳನ್ನು ಗಮನಿಸಬೇಕಿದೆ. ನಿಮ್ಮ ಕೆಲವು ಯೋಜನೆಗಳ ಮೇಲೆ ಹವಾಮಾನದ ವೈಪರೀತ್ಯ ಪ್ರಭಾವ ಬೀರುವುದು.
  ಅದೃಷ್ಟ ಬಣ್ಣ: ಕಂದು
  ಅದೃಷ್ಟ ಸಂಖ್ಯೆ: 45
  ಅದೃಷ್ಟ ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 4:20 ರವರೆಗೆ


 • ವೃಷಭ: 20 ಏಪ್ರಿಲ್-20 ಮೇ

  ಹಣಕಾಸಿನ ವಿಷಯದಲ್ಲಿ ಇಂದು ನಿಮಗೆ ಮಿಶ್ರ ಫಲವಾಗಿರುತ್ತದೆ. ಆದ್ದರಿಂದ ನೀವು ಎದುರಾಗುವ ಪರಿಸ್ಥಿತಿಗಳ ಏರಿಳಿತಕ್ಕೆ ಸಿದ್ಧರಾಗಿರಬೇಕು. ಷೇರು ಮಾರುಕಟ್ಟೆಯಲ್ಲಿ ಇರುವವರು ಲಾಭವನ್ನು ಗಳಿಸುವರು. ಕೆಲಸದ ವಿಷಯದಲ್ಲಿ ಸಕಾರಾತ್ಮಕ ಫಲವನ್ನು ಗಳಿಸುವಿರಿ. ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುವುದರ ಮೂಲಕ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಮಧ್ಯಾಹ್ನದ ಹೊತ್ತಿಗೆ ಶುಭ ಸುದ್ದಿಯನ್ನು ಕೇಳುವಿರಿ. ಅದು ನಿಮ್ಮ ಮಾನಸಿಕ ಸ್ಥಿತಿಯನ್ನು ಸುಧಾರಿಸುವುದು. ನಿಮ್ಮ ಕೆಲಸದ ಬದಲಾವಣೆಗೆ ಯೋಜಿಸುವಿರಿ. ಕಾನೂನು ವಿಷಯದಲ್ಲಿ ಕಾರ್ಯ ನಿರತರಾಗಿರುತ್ತೀರಿ. ಅದರ ಫಲಿತಾಂಶವು ನಿರೀಕ್ಷೆಯಂತೆ ಇರುವುದಿಲ್ಲ. ಅದು ಕಲಿಕೆಯ ವೇದಿಕೆಯಾಗಿರುತ್ತದೆ. ಕುಟುಂಬದವರೊಂದಿಗೆ ಅಮೂಲ್ಯವಾದ ಸಮಯವನ್ನು ಕಳೆಯಿರಿ. ನವ ವಿವಾಹಿತರಿಗೆ ಇದು ವಿಶೇಷ ದಿನ ವಾಗಿರುತ್ತದೆ. ದೀರ್ಘ ಸಮಯದ ನಂತರ ನಿಮ್ಮ ಪ್ರೇಮಿಯೊಂದಿಗೆ ಒಂದಿಷ್ಟು ಸಮಯವನ್ನು ಕಳೆಯುವಿರಿ.
  ಅದೃಷ್ಟ ಬಣ್ಣ: ನೀಲಿ
  ಅದೃಷ್ಟ ಸಂಖ್ಯೆ: 28
  ಅದೃಷ್ಟ ಸಮಯ: ಬೆಳಿಗ್ಗೆ 6:15 ರಿಂದ ಸಂಜೆ 4:00 ರವರೆಗೆ


 • ಮಿಥುನ: 21 ಮೇ-20 ಜೂನ್

  ಆರ್ಥಿಕ ವಿಷಯದಲ್ಲಿ ಇಂದು ಸಾಮಾನ್ಯವಾದ ದಿನ. ನೀವು ನಿಮ್ಮ ಆದಾಯಕ್ಕಿಂತ ಹೆಚ್ಚು ಖರ್ಚುಮಾಡುವ ಸಾಧ್ಯತೆಗಳಿವೆ. ವ್ಯವಹಾರದಲ್ಲಿ ನೀವು ಅಡೆತಡೆಗಳನ್ನು ಅನುಭವಿಸಬಹುದು. ನಿಮ್ಮ ಸಹೋದ್ಯೋಗಿಗಳು ನಿಮ್ಮೊಂದಿಗೆ ನಕಾರಾತ್ಮಕ ವರ್ತನೆಯನ್ನು ತೋರಬಹುದು. ಹಾಗಾಗಿ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ದಂಪತಿಗಳು ಪರಸ್ಪರ ಗುಣಮಟ್ಟದ ಸಮಯವನ್ನು ಕಳೆಯುವರು. ಗಂಭೀರವಾದ ವಿಷಯಗಳ ಚರ್ಚೆಯನ್ನು ನಡೆಸುವ ಸಾಧ್ಯತೆಗಳಿರುತ್ತವೆ. ನೀವು ಮಾತನಾಡುವ ಮುನ್ನ ಸಾಕಷ್ಟು ಚಿಂತನೆಯನ್ನು ನಡೆಸಿ. ಯಾವ ಸಂಗತಿಯ ಕುರಿತಾಗಿಯೂ ಹೆಚ್ಚಿನ ಕುತೂಹಲ ತೋರದಿರಿ. ಕುಟುಂಬದ ವಿಷಯದಲ್ಲಿ ಸಮನ್ವಯತೆಯ ಕೊರತೆಯನ್ನು ಹೊಂದಬಹುದು. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ.
  ಅದೃಷ್ಟ ಬಣ್ಣ: ಕಿತ್ತಳೆ
  ಅದೃಷ್ಟ ಸಂಖ್ಯೆ: 51
  ಅದೃಷ್ಟ ಸಮಯ: ಬೆಳಿಗ್ಗೆ 4:10 ರಿಂದ ಸಂಜೆ 5:05


 • ಕರ್ಕ: 21 ಜೂನ್ 22 ಜುಲೈ

  ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಸಣ್ಣ ಪ್ರವಾಸವನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ನವ ವಿವಾಹಿತರು ಹೆಚ್ಚಿನ ಆನಂದವನ್ನು ಅನುಭವಿಸುವರು. ಸಂಗಾತಿಯೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವಿರಿ. ಕೆಲಸದ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಸಾಮಾನ್ಯವಾದ ದಿನ. ಸಭೆ-ಸಮಾರಂಭಗಳಿಗೆ ಭೇಟಿನೀಡುವ ಸಾಧ್ಯತೆಗಳಿವೆ. ತೊಂದರೆಗಳಿಂದ ಪಾರಾಗಲು ಬಾಕಿ ಉಳಿದ ಕೆಲಸವನ್ನು ಪೂರ್ಣಗೊಳಿಸಿ. ಉದ್ಯಮಿಗಳು ಪ್ರಯಾಣದಲ್ಲಿಯೇ ನಿರತರಾಗಿರುತ್ತಾರೆ. ಒಡಹುಟ್ಟಿದವರ ಆರೋಗ್ಯದಲ್ಲಿ ಬದಲಾವಣೆ ಉಂಟಾಗಬಹುದು. ನಿಮ್ಮ ಕರ್ತವ್ಯವನ್ನು ಉತ್ಸಾಹ ಹಾಗೂ ಸಹಕಾರದಿಂದ ನಿರ್ವಹಿಸಬೇಕು. ಆರೋಗ್ಯಕ್ಕೆ ಸಂಬಂಧಿಸಿದಂತೆ ಕಾಮಲೆ ಮತ್ತು ಸೋಂಕನ್ನು ಅನುಭವಿಸುವ ಸಾಧ್ಯತೆಗಳಿವೆ.
  ಅದೃಷ್ಟ ಬಣ್ಣ: ಕೆಂಪು
  ಅದೃಷ್ಟ ಸಂಖ್ಯೆ: 34
  ಅದೃಷ್ಟ ಸಮಯ: ಬೆಳಿಗ್ಗೆ 6:15 ರಿಂದ ಸಂಜೆ 4:30 ರವರೆಗೆ


 • ಸಿಂಹ: 23 ಜುಲೈ-22 ಆಗಸ್ಟ್

  ಕುಟುಂಬದಲ್ಲಿ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡಿರುವುದರಿಂದ ನಿಮಗೆ ಬಿಡುವಿಲ್ಲದ ದಿನವಾಗಬಹುದು. ಮನೆಯ ವಾತಾವರಣವು ಮಕ್ಕಳಿಗೆ ರೋಮಾಂಚನವನ್ನು ಉಂಟುಮಾಡುತ್ತದೆ. ಕೆಲವು ಬದ್ಧತೆಗಳು ಕೊನೆಯ ಕ್ಷಣದಲ್ಲಿ ತಿರುವನ್ನು ಪಡೆದುಕೊಳ್ಳಬಹುದು. ಸಂಗಾತಿಯೊಂದಿಗೆ ಈ ಹಿಂದೆ ನಡೆದ ಸಂಘರ್ಷಗಳನ್ನು ಪರಿಹರಿಸಿಕೊಳ್ಳುತ್ತೀರಿ. ಅದು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ. ವ್ಯವಹಾರದ ಮುಂಭಾಗದಲ್ಲಿ ಸಕಾರಾತ್ಮಕ ಮತ್ತು ಲಾಭದಾಯಕ ದಿನವಾಗುವುದು. ಆಪ್ತ ಸ್ನೇಹಿತನ ಜೊತೆಗೆ ಇನ್ನೊಂದು ಉದ್ಯಮಕ್ಕೆ ಯೋಜನೆಯನ್ನು ಕೈಗೊಳ್ಳಬಹುದು. ಹಣಕಾಸಿನ ಸುಧಾರಣೆಯು ದೊಡ್ಡ ಪರಿಹಾರವನ್ನು ನೀಡುವುದು. ಮಕ್ಕಳು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ನೀಡುವರು. ಆರ್ಥಿಕ ವಿಷಯದಲ್ಲಿ ಪರಿಸ್ಥಿತಿಗಳು ಸುಧಾರಣೆ ಹೊಂದುತ್ತವೆ. ದಿನದ ಆರಂಭವನ್ನು ಯೋಗ ಮತ್ತು ಧ್ಯಾನದಿಂದ ಆರಂಭಿಸಿ.
  ಅದೃಷ್ಟ ಬಣ್ಣ: ಕ್ರೀಮ್
  ಅದೃಷ್ಟ ಸಂಖ್ಯೆ: 29
  ಅದೃಷ್ಟ ಸಮಯ: ಬೆಳಿಗ್ಗೆ 2: 40 ರಿಂದ 11:30 ರವರೆಗೆ


 • ಕನ್ಯಾ: 23 ಆಗಸ್ಟ್ -22 ಸಪ್ಟೆಂಬರ್

  ಹಣಕಾಸಿನ ವಿಷಯದಲ್ಲಿ ಇಂದು ನಿಮಗೆ ಕಠಿಣವಾದ ದಿನ. ಆಪ್ತ ಸ್ನೇಹಿತರೊಂದಿಗೆ ವಿಹಾರವನ್ನು ಯೋಜಿಸುವುದು ಅದ್ಭುತವಾದ ಉಪಾಯವಾಗುವುದು. ಜನರನ್ನು ನಂಬುವ ನೀವು ಉತ್ತಮ ಪಾಠ ಕಲಿಯುವಿರಿ. ಸಂದರ್ಭಗಳು ನಿಮ್ಮ ವಿರುದ್ಧವಾಗಿರುತ್ತವೆ. ಕೆಲಸದ ವಿಷಯದಲ್ಲಿ ಸಂಗತಿಗಳು ನಿಮಗೆ ಕಠಿಣವಾದ ಸ್ಥಿತಿಯನ್ನು ತಂದೊಡ್ಡುವುದು. ಸಂಗಾತಿಯ ಅಲ್ಪ ಬುದ್ಧಿಯ ಕಾರಣದಿಂದ ಕೆಲವು ತಪ್ಪುಗಳು ಸಂಭವಿಸಬಹುದು. ಅದು ಕುಟುಂಬದ ಮೇಲೆ ಪರಿಣಾಮ ಬೀರದಂತೆ ಉತ್ತಮವಾಗಿ ನಿಭಾಯಿಸುವಿರಿ. ಮಕ್ಕಳನ್ನು ನಿಭಾಯಿಸುವ ಹಾಗೂ ಅವರ ಬೇಡಿಕೆಗಳನ್ನು ಹೇಗೆ ನಿರ್ವಹಿಸಬೇಕು ಎನ್ನುವುದರ ಬಗ್ಗೆ ಕಲಿಯಬೇಕಿದೆ. ಪ್ರವಾಸ ಕೈಗೊಳ್ಳುವ ನಿಮ್ಮ ಬೇಡಿಕೆಯು ರದ್ದಾಗಬಹುದು. ಯಾವುದೇ ಸಂಗತಿಯ ಬಗ್ಗೆ ನಿರ್ಲಕ್ಷ್ಯ ಹಾಗೂ ಅಸಡ್ಡೆಯನ್ನು ತೋರದಿರಿ. ನಿಮ್ಮ ಸಂಕುಚಿತ ಮನೋಭಾವದಿಂದ ದೂರವಿರಿ.
  ಅದೃಷ್ಟ ಬಣ್ಣ: ನೇರಳೆ
  ಅದೃಷ್ಟ ಸಂಖ್ಯೆ: 8
  ಅದೃಷ್ಟ ಸಮಯ: ಬೆಳಿಗ್ಗೆ 6:15 ರಿಂದ ಸಂಜೆ 5:05


 • ತುಲಾ: 23 ಸಪ್ಟೆಂಬರ್-22 ಅಕ್ಟೋಬರ್

  ಕೆಲಸಕ್ಕೆ ಸಂಬಂಧಿಸಿದಂತೆ ಇಂದು ನಿಮಗೆ ಲಾಭದಾಯಕವಾದ ದಿನ. ಇಂದು ಬಹುತೇಕ ವಿಷಯಗಳಲ್ಲಿ ಶುಭ ಸಮಾಚಾರವನ್ನು ಕೇಳುವಿರಿ. ಹೊಸ ಯೋಜನೆಯನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಅದು ಸ್ವಲ್ಪ ಸಮಯದ ವರೆಗೆ ನಿಮ್ಮನ್ನು ಕಾರ್ಯನಿರತವಾಗಿರಿಸುತ್ತದೆ. ಉದ್ಯಮಿಗಳಿಗೆ ಇಂದು ಬಿಗಿಯಾದ ದಿನವಾಗುವುದು. ನೀವು ಕೆಲಸ ಕಾರ್ಯಗಳ ಬಗ್ಗೆ ಗೊಂದಲಕ್ಕೆ ಒಳಗಾಗುವ ಸಾಧ್ಯತೆಗಳಿವೆ. ನಿಮ್ಮ ಹೆತ್ತವರ ವಿಶೇಷತೆಗಳನ್ನು ನೀವು ಅನುಭವಿಸುವಿರಿ. ಸಂಗಾತಿಯನ್ನು ಬೆಂಬಲಿಸುವ ಹಿನ್ನೆಲೆಯಲ್ಲಿ ಕುಟುಂಬದ ಕೆಲವು ಕಾರ್ಯಕ್ರಮದಿಂದ ದೂರ ನಿಲ್ಲುವಿರಿ. ಭೂಮಿಗೆ ಸಂಬಂಧಿಸಿದ ವ್ಯವಹಾರದಲ್ಲಿ ತೊಡಗಿಕೊಂಡವರು ಹೆಚ್ಚು ಹಣ ಗಳಿಸುವರು. ಓದುವ ಹವ್ಯಾಸವನ್ನು ರೂಢಿಸಿಕೊಳ್ಳುವಿರಿ. ಅದು ನಿಮಗೆ ಆಸಕ್ತಿಯನ್ನು ಹೆಚ್ಚಿಸುವುದು. ಸಂಜೆಯ ವೇಳೆ ಈಜಲು ಹೋಗುವುದರಿಂದ ಉಲ್ಲಾಸಕರವಾದ ಅನುಭವವನ್ನು ಪಡೆದುಕೊಳ್ಳುವಿರಿ.
  ಅದೃಷ್ಟ ಬಣ್ಣ: ಪಚ್ಚೆ
  ಅದೃಷ್ಟ ಸಂಖ್ಯೆ: 35
  ಅದೃಷ್ಟ ಸಮಯ: ಬೆಳಿಗ್ಗೆ 8:30 ರಿಂದ ಸಂಜೆ 7:00 ರವರೆಗೆ


 • ವೃಶ್ಚಿಕ: 23 23 ಅಕ್ಟೋಬರ್-21 ನವೆಂಬರ್

  ಇಂದು ನಿಮಗೆ ಅಸ್ಥಿರವಾದ ದಿನವಾಗಿರುತ್ತದೆ. ನೀವು ಕೆಲವು ತೊಂದರೆಗೆ ಈಡಾಗಬಹುದು. ಆತ್ಮೀಯ ಸ್ನೇಹಿತರೊಂದಿಗೆ ಬಹುದಿನಗಳ ನಂತರ ಮಾತನಾಡುವುದರಿಂದ ಉಲ್ಲಾಸ ಉಂಟಾಗುವುದು. ನೀವು ನಿಮ್ಮ ಸಂಗಾತಿಯಿಂದ ಅತಿಯಾದ ನಿರೀಕ್ಷೆಯನ್ನು ಹೊಂದದಿರಿ. ಶೀಘ್ರದಲ್ಲಿಯೇ ನೀವು ಕಳೆದುಕೊಂಡದ್ದರ ಬಗ್ಗೆ ಅರಿವನ್ನು ಹೊಂದುವಿರಿ. ಕೆಲಸದ ವಿಷಯದಲ್ಲಿ ನಿಮಗೆ ಕಷ್ಟಕರವಾದ ದಿನವಾಗಿರುತ್ತದೆ. ನೀವು ಕಾರ್ಯದ ಕೊರತೆಯನ್ನು ಹೊಂದಿರುತ್ತೀರಿ. ಮೇಲಾಧಿಕಾರಿಗಳು ಕಿರಿಕಿರಿಗೆ ಒಳಗಾಗಬಹುದು. ವಿದ್ಯಾರ್ಥಿಗಳು ಶಾಲೆ ಮತ್ತು ತರಬೇತಿಯ ಬಗ್ಗೆ ತೀವ್ರವಾದ ವೇಳಾ ಪಟ್ಟಿಯನ್ನು ಹೊಂದಿರುತ್ತಾರೆ. ಒಟ್ಟಾರೆ ವಿಷಯಗಳು ಗೊಂದಲಕ್ಕೆ ಒಳಗಾಗುವರು. ಆಪ್ತ ಸ್ನೇಹಿತರಿಂದ ನೀವು ಆಶ್ಚರ್ಯವನ್ನು ಅನುಭವಿಸಬಹುದು. ನಕಾರಾತ್ಮಕ ಆಲೋಚನೆಯಿಂದ ಸುತ್ತುವರಿಯುವಿರಿ. ದಿನದ ಆರಂಭವನ್ನು ಧ್ಯಾನದಿಂದ ಆರಂಭಿಸಿ.
  ಅದೃಷ್ಟ ಬಣ್ಣ: ತಿಳಿ ನೀಲಿ
  ಅದೃಷ್ಟ ಸಂಖ್ಯೆ: 20
  ಅದೃಷ್ಟ ಸಮಯ: ಸಂಜೆ 5: 20 ರಿಂದ 11:00 ರವರೆಗೆ


 • ಧನು: 22 ನವೆಂಬರ್ -21 ಡಿಸೆಂಬರ್

  ಇತರರನ್ನು ನೋಡುವ ಬದಲು ನೀವು ನಿಮ್ಮ ಜೀವನದ ಬಗ್ಗೆ ಹೆಚ್ಚಿನ ಗಮನ ನೀಡಿ. ಕೆಲಸಕ್ಕೆ ಸಂಬಂಧಿಸಿದಂತೆ ವಿಷಯಗಳು ಅನುಕೂಲಕರವಾಗಿರುತ್ತದೆ. ನಿಮ್ಮ ಸನ್ನಡತೆಯು ಜನರನ್ನು ಆಕರ್ಷಿಸುತ್ತದೆ. ನೀವು ನಿರ್ಗತಿಕರಿಗೆ ಸಹಾಯ ಮಾಡುವಿರಿ. ನಿಕಟ ಸಂಬಂಧಿಗಳು ನಿಮ್ಮಿಂದ ಸಹಾಯ ಯಾಚಿಸಬಹುದು. ಉದ್ಯಮಿಗಳು ಜಾಗರೂಕರಾಗಿರಬೇಕು. ಆರ್ಥಿಕ ರಂಗದಲ್ಲಿ ಇಂದು ನಿಮಗೆ ಸಾಮಾನ್ಯ ದಿನವಾಗುತ್ತದೆ. ನಿಮ್ಮ ಸಂಗಾತಿಗೆ ಸುಂದರವಾದ ಅಥವಾ ದುಬಾರಿ ವಸ್ತುವಿನ ಉಡುಗೊರೆ ನೀಡಬಹುದು. ಅದು ಅವರಿಗೆ ವಿಶೇಷ ಭಾವನೆಯನ್ನು ಮೂಡಿಸುತ್ತದೆ. ವೈವಾಹಿಕ ಜೀವನದಲ್ಲಿ ಸ್ವಲ್ಪ ಏರಿಳಿತವನ್ನು ನಿರ್ಲಕ್ಷಿಸಬೇಕು. ಒಟ್ಟಾರೆಯಾಗಿ ಶಾಂತಿಯುತವಾದ ದಿನವಾಗಿರುತ್ತದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಹೆಚ್ಚಿನ ಕಾಳಜಿಯಿಂದ ಇರಬೇಕು. ನಿಮ್ಮ ವೈಫಲ್ಯಕ್ಕೆ ಕಾರಣವಾದ ಸಂಗತಿಯನ್ನು ಅಷ್ಟು ಸುಲಭವಾಗಿ ನಿರ್ಲಕ್ಷಿಸಬೇಡಿ.
  ಅದೃಷ್ಟ ಬಣ್ಣ: ತಿಳಿ ಗುಲಾಬಿ
  ಅದೃಷ್ಟ ಸಂಖ್ಯೆ: 31
  ಅದೃಷ್ಟ ಸಮಯ: ಬೆಳಿಗ್ಗೆ 6:30 ರಿಂದ 10:15 ರವರೆಗೆ


 • ಮಕರ: 22 ಡಿಸೆಂಬರ್ -19 ಜನವರಿ

  ಆರ್ಥಿಕವಾಗಿ ಮುಂಚೂಣಿಯಲ್ಲಿ ಇರುವಿರಿ. ಆರ್ಥಿಕ ಸುಧಾರಣೆಯು ನಿಮಗೆ ದೊಡ್ಡ ಪರಿಹಾರವನ್ನು ನೀಡುವುದು. ನೀವು ವಿಶೇಷ ಸಂಗತಿಗಳಿಗೆ ಕಾಯಲು ದೃಢಚಿತ್ತ ಹೊಂದಿರಬೇಕು. ಸಾಕಷ್ಟು ಕೆಲಸವನ್ನು ನಿರ್ವಹಿಸಲು ನಿಮಗೆ ತಾಳ್ಮೆಯ ಅಗತ್ಯವಿರುತ್ತದೆ. ನಿಮ್ಮ ಸಂಗಾತಿ ನಿಮ್ಮನ್ನು ಬಲಶಾಲಿ ಎಂದು ಪರಿಗಣಿಸಬಹುದು. ಒಟ್ಟಾರೆ ವಿಷಯಗಳು ಅನುಕೂಲಕರವಾಗಿರುತ್ತವೆ. ಜೀವನಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಪೋಷಕರ ಸಹಾಯ ಹಾಗೂ ಸಲಹೆಯನ್ನು ಕೇಳುವಿರಿ. ನಿಮ್ಮ ಮಕ್ಕಳು ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಸಾಧ್ಯತೆಗಳಿವೆ. ಕಾನೂನು ಕ್ಷೇತ್ರದಲ್ಲಿ ಇರುವವರಿಗೆ ಇಂದು ನಿರಾಸೆಯ ಸಂಜೆ ಎದುರಾಗುವುದು. ವೈದ್ಯರಿಗೆ ಅನುಕೂಲಕರವಾದ ದಿನ. ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಸಿದರೆ ವಾದ ಮಾಡುವುದನ್ನು ನಿಲ್ಲಿಸಿ. ಅವರಸರದಲ್ಲಿ ತಪ್ಪು ನಿರ್ಧಾರ ಕೈಗೊಳ್ಳದಿರಿ.
  ಅದೃಷ್ಟ ಬಣ್ಣ: ಹಳದಿ
  ಅದೃಷ್ಟ ಸಂಖ್ಯೆ: 10
  ಅದೃಷ್ಟ ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 4:20 ರವರೆಗೆ


 • ಕುಂಭ: 20 ಜನವರಿ -18 ಫೆಬ್ರವರಿ

  ಸಾರ್ವಜನಿಕರ ಸೇವೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಕಠಿಣವಾದ ದಿನವನ್ನು ಹೊಂದಿರುತ್ತಾರೆ. ಪ್ರೀತಿ ಪಾತ್ರರ ಜೊತೆಗೆ ಪ್ರವಾಸವನ್ನು ಯೋಜಿಸುವುದು ನಿಮಗೆ ಪುನರ್ಯೌವನ ತಂದುಕೊಡುವುದು. ಕೆಲಸವನ್ನು ಪರಿಪೂರ್ಣ ಗೊಳಿಸುವ ನಿಮ್ಮ ಕಲೆ ಹಾಗೂ ಪ್ರತಿಭೆಗೆ ಉತ್ತಮ ಫಲಿತಾಂಶ ದೊರೆಯುವುದು. ಆರ್ಥಿಕ ವಿಷಯದಲ್ಲಿ ನಿಮಗೆ ಸಾಮಾನ್ಯವಾದ ದಿನ. ನಿಮ್ಮ ಸಹಾಯಕ ಸ್ವಭಾವವು ಗೌರವವನ್ನು ತಂದುಕೊಡುವುದು. ಬಹುತೇಕ ವಿಷಯಗಳು ನಿಮಗೆ ಅನುಕೂಲಕರವಾಗಿರುತ್ತವೆ. ಆರೋಗ್ಯವೂ ಸಾಮಾನ್ಯವಾಗಿರುತ್ತದೆ. ಹೃದಯ ಸಂಬಂಧಿ ಆರೋಗ್ಯ ಸಮಸ್ಯೆ ಹೊಂದಿರುವವರು ದೂರದ ಪ್ರಯಾಣ ಕೈಗೊಳ್ಳುವಾಗ ಜಾಗ್ರತೆ ಹೊಂದಿರಬೇಕು.
  ಅದೃಷ್ಟ ಬಣ್ಣ: ಹಚ್ಚ ಹಸಿರು
  ಅದೃಷ್ಟ ಸಂಖ್ಯೆ: 2
  ಅದೃಷ್ಟ ಸಮಯ: ಬೆಳಿಗ್ಗೆ 1:30 ರಿಂದ 8:05 ರವರೆಗೆ


 • ಮೀನ: 19 ಫೆಬ್ರುವರಿ-20 ಮಾರ್ಚ್

  ಗ್ರಹಗತಿಗಳ ಪ್ರಭಾವದಿಂದ ನೀವು ಅತ್ಯುತ್ತಮ ಆರ್ಥಿಕ ಲಾಭವನ್ನು ಪಡೆದುಕೊಳ್ಳುವಿರಿ. ಗುರಿಯನ್ನು ಚೆನ್ನಾಗಿ ನಿರ್ವಹಿಸುವ ಕಲೆಯನ್ನು ಕರಗತಮಾಡಿಕೊಂಡಿದ್ದೀರಿ. ಹಣಕಾಸಿಗೆ ಸಂಬಂಧಿಸಿದಂತೆ ಅಗತ್ಯ ಇರುವವರಿಗೆ ಸಹಾಯ ಮಾಡುವ ಸಾಧ್ಯತೆಗಳಿವೆ. ಷೇರು ಮಾರುಕಟ್ಟೆಯು ನಿಮಗೆ ಅತ್ಯುತ್ತಮ ಲಾಭವನ್ನು ತಂದುಕೊಡುವುದು. ನಿಮ್ಮ ಮನೆಯ ನವೀಕರಣಕ್ಕೆ ಕೆಲವು ಯೋಜನೆಯನ್ನು ಕೈಗೊಳ್ಳಬಹುದು. ವೃತ್ತಿಗೆ ಸಂಬಂಧಿಸಿದಂತೆ ಯಶಸ್ವಿಯಾಗಲು ನೀವು ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತೀರಿ. ನೃತ್ಯ ಕಲೆಯಲ್ಲಿ ತೊಡಗಿಕೊಂಡವರು ಉತ್ತಮ ಪ್ರದರ್ಶನ ನೀಡುವರು. ಮಕ್ಕಳು ತಮ್ಮ ಶಿಕ್ಷಣದಲ್ಲಿ ತಲ್ಲೀನರಾಗಿರುತ್ತಾರೆ. ಮುಂಜಾನೆ ಉತ್ತಮವಾದ ಓಟ, ನಡಿಗೆ ಅಥವಾ ವ್ಯಾಯಾಮದಿಂದ ಆರಂಭಿಸಿ. ಅದು ದಿನವಿಡೀ ಉಲ್ಲಾಸದಿಂದ ಇರುವಂತೆ ಉತ್ತೇಜಿಸುತ್ತದೆ.
  ಅದೃಷ್ಟ ಬಣ್ಣ: ಕೆನ್ನೇರಳೆ ಬಣ್ಣ
  ಅದೃಷ್ಟ ಸಂಖ್ಯೆ: 40
  ಅದೃಷ್ಟ ಸಮಯ: ಬೆಳಿಗ್ಗೆ 4:10 ರಿಂದ ರಾತ್ರಿ 10:10
ಸೋಮವಾರದ ದಿನ ಶಿವನಿಗೆ ಲಯಕಾರಕ ಎಂದೂ ಸಹ ಕರೆಯುತ್ತಾರೆ. ಅಂದರೆ ಸೃಷ್ಟಿಮಾಡುವುದು ಬ್ರಹ್ಮನ ಕೆಲಸವಾದರೆ, ಆ ಸೃಷ್ಟಿಯಾದ ಆಕರಗಳಿಗೆ (ಜೀವಿಗಳಿಗೆ) ಸ್ಥಿತಿ ಕೊಡುವುದು ವಿಷ್ಣುವಿನ ಕೆಲಸ. ಈ ರೀತಿ ಸೃಷ್ಟಿ, ಸ್ಥಿತಿ ಪಡೆದ ಆಕರಗಳಿಗೆ ಲಯ (ಕೊನೆ) ಕಾಣಿಸುವವನು ಶಿವ. ಆದ್ದರಿಂದ ಶಿವನಿಗೆ ಲಯಕಾರ ಎಂದೂ ಸಹ ಕರೆಯುತ್ತಾರೆ.

ಸಂಹಾರಕ ಅಥವಾ ಲಯಕಾರಕ ದೇವತೆ: ಶಿವ ಅಥವಾ ರುದ್ರ. ಶಿವ, ಈಶ್ವರ, ಶಂಭು, ಶಂಕರ, ಪಶುಪತಿ, ಮುಕ್ಕಣ್ಣ, ಶಶಿಧರ, ಚಂದ್ರಶೇಖರ, ನೀಲಕಂಠ, ನಂಜುಂಡ, ಮಹದೇಶ್ವರ, ಮಹೇಶ್ವರ, ನಾಗರಾಜ, ನಾಗೇಶ, ಕೈಲಾಸ ಪತಿ ಎನ್ನುವ ವಿಶೇಷಣವನ್ನು ಬಳಸಲಾಗಿದೆ. ಅಲ್ಲದೆ ಇಂದು ಆಯುಧ ಪೂಜೆಯನ್ನು ಸಹ ಆಚರಿಸಲಾಗುತ್ತಿದೆ. ಈ ವಿಶೇಷ ದಿನ ನಿಮ್ಮ ದಿನ ಭವಿಷ್ಯ ಹೇಗಿದೆ ತಿಳಿಯೋಣ.

   
 
ಹೆಲ್ತ್