Back
Home » ಇತ್ತೀಚಿನ
ಟಾಯ್ಲೆಟ್‌ ರೂಂನಲ್ಲಿ ಫೋನ್‌ ಬಳಸುತ್ತಿರಾ..? ಹಾಗಾದ್ರೆ ಎಚ್ಚರ..ಎಚ್ಚರ..!
Gizbot | 7th Oct, 2019 07:00 AM
  • ಹೆಚ್ಚು ಒತ್ತಡ ಸೃಷ್ಟಿ

    ಶೌಚಾಲಯದಲ್ಲಿ ಫೋನ್‌ನೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದ ಗುದದ್ವಾರದ ಲೋಳೆಪೊರೆಯಲ್ಲಿ ಹೆಚ್ಚು ಒತ್ತಡ ಸೃಷ್ಟಿಯಾಗುತ್ತದೆ. ಈ ಅಭ್ಯಾಸ ಮೂಲವ್ಯಾಧಿ ಅಥವಾ ರಾಶಿಗಳು ಮತ್ತು ಬಿರುಕುಗಳಂತಹ ಪೆರಿಯಾನಲ್ ಸಮಸ್ಯೆಗಳ ರಚನೆಗೆ ಕಾರಣವಾಗುತ್ತದೆ ಎಂದು ನೋಯ್ಡಾದ ಜೇಪೀ ಆಸ್ಪತ್ರೆಯ ಜಿಐ ಮತ್ತು ಎಚ್‌ಪಿಬಿ ಸರ್ಜರಿ ವಿಭಾಗದ ಕಾರ್ಯನಿರ್ವಾಹಕ ಸಲಹೆಗಾರ ದೀಪಂಕರ್ ಶಂಕರ್ ಮಿತ್ರ ತಿಳಿಸಿದ್ದಾರೆ.


  • ಫೋನ್‌ ಸಮಸ್ಯೆಯಲ್ಲ

    ಗುರುಗ್ರಾಮ್‌ನ ನಾರಾಯಣ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯ ಕನ್ಸಲ್ಟೆಂಟ್ ಗ್ಯಾಸ್ಟ್ರೋಎಂಟರಾಲಜಿ ನವೀನ್ ಕುಮಾರ್, ಸ್ಮಾರ್ಟ್‌ಫೋನ್‌ನಲ್ಲಿ ನೀವು ಹೆಚ್ಚಿನ ಸಮಯ ಕಳೆಯುವುದರಿಂದ ಮೂಲವ್ಯಾದಿ ಸಂಭವಿಸಬಹುದು ಎಂದಿದ್ದಾರೆ. ಆದರೆ, ಮೂಲವ್ಯಾದಿಗೂ ಸ್ಮಾರ್ಟ್‌ಫೋನ್‌ಗಳೂ ಸಂಬಂಧವಿಲ್ಲ. ಫೋನ್‌ ಬಳಸುತ್ತಾ ಶೌಚಾಲಯದ ಕಂಬೋಡ್‌ ಮೇಲೆ ಕುಳಿತುಕೊಳ್ಳುವುದು ದೀರ್ಘಕಾಲದ ರಕ್ತಸ್ರಾವದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಕುಮಾರ್ ಹೇಳುತ್ತಾರೆ.


  • ಶೇ.57ರಷ್ಟು ಬ್ರಿಟಿಷರಿಂದ ಟಾಯ್ಲೆಟ್‌ನಲ್ಲಿ ಫೋನ್‌ ಬಳಕೆ

    ಹೆಚ್ಚು ಹೊತ್ತು ಕುಳಿತುಕೊಳ್ಳುವುದು ಮತ್ತು ಹೆಚ್ಚು ಆಯಾಸಗೊಳ್ಳುವುದರಿಂದ ಮೂಲವ್ಯಾಧಿ ರಕ್ತದೊಂದಿಗೆ ತೊಡಗಿಸಿಕೊಳ್ಳಲು ಕಾರಣವಾಗಬಹುದಾಗಿದ್ದು, ನೋವು, ಊತ ಅಥವಾ ರಕ್ತಸ್ರಾವದಂತಹ ಲಕ್ಷಣಗಳು ಕಂಡುಬರುತ್ತವೆ. ಇತ್ತೀಚಿನ ಯೂಗೊವ್ ಸಮೀಕ್ಷೆಯ ಪ್ರಕಾರ, ಶೇ.57ರಷ್ಟು ಬ್ರಿಟಿಷ್ ಜನರು ತಮ್ಮ ಫೋನ್‌ನ್ನು ಶೌಚಾಲಯದಲ್ಲಿ ಬಳಸುವುದನ್ನು ಒಪ್ಪಿಕೊಂಡಿದ್ದು, ಶೇ.8ರಷ್ಟು ಜನ ಯಾವಾಗಲೂ ಬಳಸುತ್ತೇವೆ ಎಂದಿದ್ದಾರೆ.


  • ನಿರಂತರ ಒತ್ತಡ ಬೇಡ

    ಶೌಚಾಲಯದಲ್ಲಿ ಸ್ಮಾರ್ಟ್‌ಫೋನ್ ಬಳಸುವುರಿಂದ ಕಳೆದ ಸಮಯ ಗೊತ್ತಾಗುವುದಿಲ್ಲ. ಯಾರಾದರೂ ಶೌಚಾಲಯದಲ್ಲಿ ಹೆಚ್ಚು ಹೊತ್ತು ಕುಳಿತಿದ್ದರೆ, ಅವರು ಮಲವಿಸರ್ಜನೆ ಮಾಡಲು ಪ್ರಯಾಸ ಪಡುತ್ತಿದ್ದಾರೆ ಎಂದರ್ಥ. ನಿರಂತರ ಒತ್ತಡವು ಮೂಲವ್ಯಾದಿಗೆ ದಾರಿ ಮಾಡಿಕೊಡುತ್ತದೆ ಎಂದು ಗುರುಗ್ರಾಮ್‌ನ ಫೋರ್ಟಿಸ್ ಸ್ಮಾರಕ ಸಂಶೋಧನಾ ಸಂಸ್ಥೆಯ ಮಿನಿಮಲ್‌ ಅಕ್ಸೆಸ್‌, ಬ್ಯಾರಿಯಾಟ್ರಿಕ್ ಮತ್ತು ಜಿಐ ಸರ್ಜರಿಯ ಹಿರಿಯ ಸಲಹೆಗಾರ ಬಿಜೇಂದ್ರ ಕುಮಾರ್ ಸಿನ್ಹಾ ಹೇಳಿದ್ದಾರೆ.




ನೀವು ಶೌಚಾಲಯಕ್ಕೆ ಸ್ಮಾರ್ಟ್‌ಫೋನ್‌ನ್ನು ತೆಗೆದುಕೊಂಡು ಹೋಗುತ್ತಿರೆಂದರೆ ಎಚ್ಚರವಾಗಿರಿ. ಈ ಅಭ್ಯಾಸವೇ ನಿಮ್ಮನ್ನು ಮೂಲವ್ಯಾದಿ ರೋಗಕ್ಕೆ ತಳ್ಳುವ ಸಾಧ್ಯತೆಯೇ ಹೆಚ್ಚು. ಶೌಚಾಲಯದಲ್ಲಿ ಸ್ಮಾರ್ಟ್‌ಫೋನ್‌ ಬಳಸುತ್ತಾ ಹೆಚ್ಚು ಸಮಯ ಕಳೆಯುವುದರಿಂದ ಗುದದ್ವಾರದ ರಕ್ತನಾಳಗಳ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಅಧಿಕೃತ ಮೇಲ್‌ಗಳು ಅಥವಾ ಸಾಮಾಜಿಕ ಮಾಧ್ಯಮದ ಅಪ್‌ಡೇಟ್‌ಗಳನ್ನು ನೋಡುವ ಧಾವಂತದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಶೌಚಾಲಯಕ್ಕೆ ಕೊಂಡೊಯ್ಯುತ್ತಿದ್ದು, ಇಂತಹ ಅಭ್ಯಾಸದ ಅಪಾಯಕಾರಿ ಪರಿಣಾಮಗಳ ಬಗ್ಗೆ ಬಹಳಷ್ಟು ಜನರಿಗೆ ತಿಳಿದೇ ಇಲ್ಲ.

   
 
ಹೆಲ್ತ್