Back
Home » ಇತ್ತೀಚಿನ
ಒನ್‌ಪ್ಲಸ್‌ 7T ವಿಮರ್ಶೆ : ಬೆಸ್ಟ್‌ ಫ್ಲ್ಯಾಗ್‌ಶಿಫ್ ಸ್ಮಾರ್ಟ್‌ಫೋನ್!
Gizbot | 7th Oct, 2019 09:10 AM
 • ಒನ್‌ಪ್ಲಸ್‌ 7T

  ಹೌದು, 'ಒನ್‌ಪ್ಲಸ್‌ 7T' ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಪ್ರಮುಖ ಕ್ಯಾಮೆರಾವು 48ಎಂಪಿ ಆಗಿದೆ. ಹಾಗೆಯೇ 8GB RAM ಮತ್ತು 256GB ಸ್ಟೋರೇಜ್ ಪಡೆದುಕೊಂಡಿದ್ದು, ಈ ಫೋನಿನ ಆರಂಭಿಕ ಬೆಲೆಯು 37,999ರೂ.ಗಳಾಗಿದೆ. ಹಾಗಾದರೇ ಒನ್‌ಪ್ಲಸ್‌ 7T ಸ್ಮಾರ್ಟ್‌ಫೋನ್ ಇನ್ನಿತರೆ ಫೀಚರ್ಸ್‌ಗಳನ್ನು ಯಾವುವು ಮತ್ತು ಅವುಗಳ ಕಾರ್ಯವೈಖರಿ ಹೇಗಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.


 • ಉತ್ತಮ ಡಿಸ್‌ಪ್ಲೇ ರಚನೆ

  ಒನ್‌ಪ್ಲಸ್‌ 7T' ಸ್ಮಾರ್ಟ್‌ಫೋನ್ 2,400 x 1,080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.55 ಇಂಚಿನ ಫ್ಲ್ಯೂಡ್‌ AMOLED ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಪ್ರಖರತೆ ಉತ್ತಮವಾಗಿದೆ. ಹಾಗೆಯೇ ಡಿಸ್‌ಪ್ಲೇಯ ಅನುಪಾತವು 20:9 ಆಗಿದ್ದು, ಇದರೊಂದಿಗೆ ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 402 PPI ಆಗಿದೆ. ಡಿಸ್‌ಪ್ಲೇಯ ರಿಫ್ರೇಶ್‌ ರೇಟ್ 90Hz ಜೊತೆಗೆ 3D ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ ಅನ್ನು ಪಡೆದಿದೆ. ಫ್ಯಾಗ್‌ಶಿಫ್ ಮಾದರಿಯಲ್ಲಿ ಅಗತ್ಯ ಡಿಸ್‌ಪ್ಲೇ ಇದಾಗಿದೆ ಎನ್ನಬಹುದು.


 • ಬಲವಾದ ಪ್ರೊಸೆಸರ್

  ಒನ್‌ಪ್ಲಸ್‌ 7T' ಸ್ಮಾರ್ಟ್‌ಫೋನ್ ಆಕ್ಟಾಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, ಆಂಡ್ರಾಯ್ಡ್‌ 10 ಆಧಾರಿತ ಆಕ್ಸಿಜನ್ ಓಎಸ್‌ 10 ಬೆಂಬಲವನ್ನು ಒಳಗೊಂಡಿದೆ. ಅತ್ಯುತ್ತಮ ವೇಗದ ಕಾರ್ಯವೈಖರಿ ಇದ್ದು, ಗೇಮ್ಸ್‌ಗೂ ಬೆಸ್ಟ್‌ ಎನಿಸಲಿದೆ. ಎರಡು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದ್ದು, ಅವುಗಳು 8GB RAM ಮತ್ತು 128GB ಆಂತರಿಕ ಸ್ಟೋರೇಜ್ ಹಾಗೂ 8GB RAM ಮತ್ತು 256GB ಆಂತರಿಕ ಸ್ಟೋರೇಜ್ ಆಗಿದೆ.


 • 48ಮೆಗಾಪಿಕ್ಸಲ್ ಕ್ಯಾಮೆರಾ

  ಇತ್ತೀಚಿನ ಸ್ಮಾರ್ಟ್ಫೋನ್‌ಗಳಲ್ಲಿ ಸಾಮಾನ್ಯ ಎನಸಿರುವ 48ಎಂಪಿ ಕ್ಯಾಮೆರಾವು 'ಒನ್‌ಪ್ಲಸ್‌ 7T' ಸ್ಮಾರ್ಟ್‌ಫೋನಿನಲ್ಲಿಯೂ ನೀಡಲಾಗಿದ್ದು, ಅದು ಸೋನಿಯ IMX586 ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 12ಎಂಪಿ ಸೆನ್ಸಾರ್‌ ಟೆಲಿಪೋಟೋ ಲೆನ್ಸ್‌ ಪಡೆದಿದ್ದು, ತೃತೀಯ ಕ್ಯಾಮೆರಾವು 16ಎಂಪಿಯ ಅಲ್ಟ್ರಾ ವೈಲ್ಡ್‌ ಆಂಗಲ್ ಲೆನ್ಸ್ ಸಾಮರ್ಥ್ಯದಲ್ಲಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 16ಎಂಪಿ ಸಾಮರ್ಥ್ಯದಲ್ಲಿದ್ದು, ಸೋನಿಯ IMX471 ಸೆನ್ಸಾರ್ ಪಡೆದಿದೆ. 4K ವಿಡಿಯೊಗಳನ್ನು ಸಹ ಬೆಂಬಲಿಸುತ್ತದೆ.


 • ಬ್ಯಾಟರಿ ಪವರ್

  'ಒನ್‌ಪ್ಲಸ್‌ 7T' ಸ್ಮಾರ್ಟ್‌ಫೋನ್ 3,800mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆ ಹೊಂದಿದ್ದು, ಇದರೊಂದಿಗೆ ವ್ರಾಪ್‌ ಚಾರ್ಜ್‌ 30T ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನದ ಸೌಲಭ್ಯವನ್ನು ಒಳಗೊಂಡಿದೆ. ಈ ಚಾರ್ಜರ್ ನೆರವಿನಿಂದ ಕೇವಲ 30 ನಿಮಿಷದಲ್ಲಿ ಸ್ಮಾರ್ಟ್‌ಫೋನ್ 0 ಯಿಂದ 70 ಪರ್ಸೆಂಟ್ ವರೆಗೂ ಚಾರ್ಜ್ ಪಡೆದುಕೊಳ್ಳುತ್ತದೆ. 'ಒನ್‌ಪ್ಲಸ್‌ 7T' ಇನ್ನಷ್ಟು ಬ್ಯಾಟರಿ ಲೈಫ್‌ ಪಡೆದುಕೊಂಡಿರಬೇಕಿತ್ತು ಎಂದೆನಿಸುತ್ತದೆ.


 • ಬೆಲೆ ಎಷ್ಟು

  'ಒನ್‌ಪ್ಲಸ್‌ 7T' ಸ್ಮಾರ್ಟ್‌ಫೋನ್ 8GB RAM ಮತ್ತು 128GB ವೇರಿಯಂಟ್ ಬೆಲೆಯು 37,999ರೂ.ಗಳಾಗಿದ್ದು, ಹಾಗೆಯೇ 8GB RAM ಮತ್ತು 256GB ವೇರಿಯಂಟ್ ಬೆಲೆಯು 39,999ರೂ.ಗಳಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಸಿಲ್ವರ್ ಮತ್ತು ಬ್ಲೂ ಬಣ್ಣಗಳ ಆಯ್ಕೆ ಹೊಂದಿದೆ.


 • ಕೊನೆಯ ಮಾತು

  'ಒನ್‌ಪ್ಲಸ್‌ 7T' ಫ್ಯಾಗ್‌ಶಿಫ್ ಮಾದರಿಯಲ್ಲಿ ಅತ್ಯುತ್ತಮ ಸ್ಮಾರ್ಟ್ಫೋನ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಕ್ಯಾಮೆರಾ, ಪ್ರೊಸೆಸರ್‌, ಡಿಸ್‌ಪ್ಲೇ, ಸೆಲ್ಫಿ ಕ್ಯಾಮೆರಾ, 8GB RAM ಫೀಚರ್ಸ್‌ಗಳ ಕಾರ್ಯವೈಖರಿ ಉತ್ತಮ ಅನಿಸುತ್ತದೆ ಮತ್ತು ಸ್ಮಾರ್ಟ್ಫೋನ್ ಇಷ್ಟ ಸಹ ಆಗುತ್ತದೆ. ಆದರೆ ಬ್ಯಾಟರಿ ಸಾಮರ್ಥ್ಯವು ಇನ್ನಷ್ಟು ವೃದ್ಧಿಸಬೇಕಿತ್ತು ಎನ್ನುವುದೊಂದು ಹೊರತು ಪಡೆಸಿದರೇ, ಈ ಸ್ಮಾರ್ಟ್‌ಫೋನ್ ಬೆಸ್ಟ್‌.
ಜನಪ್ರಿಯವಾಗಿರುವ 'ಒನ್‌ಪ್ಲಸ್‌' ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ 'ಒನ್‌ಪ್ಲಸ್‌ 7' ಫೋನ್‌ ಫ್ಲ್ಯಾಗ್‌ಶಿಪ್ ಮಾದರಿಯಲ್ಲಿ ಗುರುತಿಸಿಕೊಂಡಿದ್ದು, ಹೈ ಎಂಡ್‌ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದೆ. ಈ ಸ್ಮಾರ್ಟ್‌ಫೋನಿನ 48ಎಂಪಿ ಕ್ಯಾಮೆರಾ ಸೆನ್ಸಾರ್ ಜೊತೆಗೆ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಮತ್ತು 8GB RAM ಸಾಮರ್ಥ್ಯವನ್ನು ಪಡೆದಿದ್ದು, ಮಾರುಕಟ್ಟೆಯಲ್ಲಿ ಸೌಂಡ್‌ ಮಾಡುತ್ತಿದೆ.

   
 
ಹೆಲ್ತ್