Back
Home » ಸಮ್ಮಿಲನ
ಮಂಗಳವಾರದ ದಿನ ಭವಿಷ್ಯ (8-10-2019)
Boldsky | 8th Oct, 2019 07:48 AM
 • ಮೇಷ: 21 ಮಾರ್ಚ್ 19 ಏಪ್ರಿಲ್

  ಹಣಕಾಸಿನ ವಿಷಯದಲ್ಲಿ ಇಂದು ನಿಮಗೆ ಅನುಕೂಲಕರವಾದ ದಿನ. ಪಾಲುದಾರರಿಂದಲೂ ಸೂಕ್ತ ಬೆಂಬಲ ದೊರೆಯುವುದು. ಅವರ ಸಹಾಯದಿಂದಲೇ ಹೊಸ ಹೂಡಿಕೆಗೆ ನೀವು ಮುಂದಾಗುವಿರಿ. ನಿಮ್ಮ ಜ್ಞಾನವು ಕೆಲಸದ ಮುಂಭಾಗದಲ್ಲಿ ಸಹಾಯ ಮಾಡುವುದು. ನಿಮ್ಮ ಜ್ಞಾನದಿಂದಲೇ ನೀವು ಜನಪ್ರಿಯಗೊಳ್ಳುವಿರಿ. ಅತಿಯಾದ ಆತ್ಮವಿಶ್ವಾಸವು ಕೆಲವು ಸಂಗತಿಗಳನ್ನು ಹಾಳುಮಾಡುತ್ತದೆ. ವ್ಯವಹಾರದಲ್ಲಿ ನಿಮ್ಮ ಪಾಲುದಾರರ ಸಲಹೆಯನ್ನು ಪಡೆದರೆ ನಿಮಗೆ ಅದೃಷ್ಟ ದೊರೆಯುವುದು. ವೈಯಕ್ತಿಕ ವಿಷಯದಲ್ಲಿ ಕೆಲವು ಅಡೆತಡೆಗಳುನ್ನು ಎದುರಿಸಬಹುದು. ಹಿರಿಯರಿಂದಲೂ ನಿಮ್ಮ ಸಂಬಂಧಗಳಿಗೆ ಒಪ್ಪುಗೆ ದೊರೆಯುವುದು. ದೂರದ ಪ್ರಯಾಣ ಹಾಗೂ ವಾಹನ ಚಲಾಯಿಸುವುದನ್ನು ತಪ್ಪಿಸಿ.
  ಅದೃಷ್ಟ ಬಣ್ಣ: ಹಸಿರು
  ಅದೃಷ್ಟ ಸಂಖ್ಯೆ: 21
  ಅದೃಷ್ಟ ಸಮಯ: ಬೆಳಿಗ್ಗೆ 4:05 ರಿಂದ ರಾತ್ರಿ 9 ರವರೆಗೆ


 • ವೃಷಭ: 20 ಏಪ್ರಿಲ್-20 ಮೇ

  ಕೆಲಸದ ವಿಚಾರದಲ್ಲಿ ಇಂದು ನಿಮಗೆ ಉತ್ತಮವಾದ ದಿನ. ನಿಮ್ಮ ಶ್ರಮದಾಯಕ ಕೆಲಸಗಳನ್ನು ಮೇಲಾಧಿಕಾರಿಗಳು ಗಮನಿಸುವರು. ಜೊತೆಗೆ ಪ್ರಶಂಸಿಸುವರು. ನಿರುದ್ಯೋಗಿಗಳು ಅಧಿಕ ಕೆಲಸದ ಹುಡುಕಾಟವನ್ನು ಆರಂಭಿಸುವರು. ನಂತರ ಅವರ ಆಯ್ಕೆಯಂತೆ ಕೆಲಸ ದೊರೆಯುವುದು. ಹಣಕಾಸಿನ ವಿಷಯದಲ್ಲೂ ಸುಧಾರಣೆ ಉಂಟಾಗುವುದು. ಕುಟುಂಬದವರ ಜೊತೆಗೆ ಸಾಕಷ್ಟು ಸಮಯವನ್ನು ಕಳೆಯುವುದರಿಂದ ನಿಮಗೆ ರೋಮಾಂಚನಕಾರಿ ಅನುಭವ ದೊರೆಯುವುದು. ಮಕ್ಕಳು ಸಹ ನಿಮ್ಮೊಂದಿಗೆ ಸಮಯವನ್ನು ಕಳೆಯಲು ಬಯಸುವರು. ನೀವು ನಿಮ್ಮ ಸಂಗಾತಿಯೊಂದಿಗೆ ಆತ್ಮೀಯ ಗೆಳೆಯರಂತೆ ಇದ್ದು, ಬಾಕಿ ಉಳಿದ ಕೆಲಸವನ್ನು ಮುಗಿಸಿ. ನಿಮ್ಮ ಪ್ರೇಮಿಯೊಂದಿಗೆ ಸಮಯಕಳೆಯಲು ಕೊಂಚ ತೊಡಕಾಗಬಹುದು. ಯಾವುದರ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಳ್ಳದೆ ಹೋಗುವುದರಿಂದ ನಿಮಗೆ ಒತ್ತಡ ರಹಿತವಾದ ದಿನವಾಗುವುದು. ಆಪ್ತರೊಂದಿಗೆ ಊಟವನ್ನು ಮಾಡುವಿರಿ. ಹವಾಮಾನದ ವೈಪರೀತ್ಯದಿಂದ ನೀವು ಸೋಂಕಿಗೆ ಒಳಗಾಗಬಹುದು.
  ಅದೃಷ್ಟ ಬಣ್ಣ: ಕ್ರೀಮ್
  ಅದೃಷ್ಟ ಸಂಖ್ಯೆ: 12
  ಅದೃಷ್ಟ ಸಮಯ: ಬೆಳಿಗ್ಗೆ 8:20 ರಿಂದ ರಾತ್ರಿ 8:40


 • ಮಿಥುನ: 21 ಮೇ-20 ಜೂನ್

  ದೊಡ್ಡ -ದೊಡ್ಡ ಸಮಸ್ಯೆಗಳು ಇಂದು ಪರಿಹಾರ ಕಾಣುತ್ತವೆ. ಒಟ್ಟಾರೆಯಾಗಿ ಇಂದು ನಿಮಗೆ ಅನುಕೂಲಕರವಾದ ದಿನ ಎಂದು ಪರಿಗಣಿಸಲಾಗುವುದು. ದಂಪತಿಗಳು ಪ್ರಣಯ ಪೂರ್ಣ ಸಮಯವನ್ನು ಅನುಭವಿಸುವರು. ನವ ವಿವಾಹಿತರು ತಮ್ಮ ಜೀವನದ ಸುಂದರ ಹಂತವನ್ನು ಅನುಭವಿಸುವರು. ಇತರ ದೋಷ ಹುಡುಕುವುದನ್ನು ನೀವು ನಿಲ್ಲಿಸಬೇಕು. ಇಲ್ಲವಾದರೆ ಜನರು ನಿಮ್ಮನ್ನು ಟೀಕಿಸುವರು. ಜೀವನದಲ್ಲಿ ನೀವು ಸಾಕಷ್ಟು ಪ್ರಯತ್ನ ಮಾಡುವುದರ ಮೂಲಕ ಸಾಧನೆ ಮಾಡಬೇಕು. ಇತರರ ಕ್ಷೇತ್ರದಲ್ಲಿ ಅಥವಾ ಅಧೀನದಲ್ಲಿ ಇರುವುದನ್ನು ತಪ್ಪಿಸಿ. ಹೊಸ ಆಲೋಚನೆಗಳನ್ನು ಪಡೆದುಕೊಳ್ಳುವುದರಿಂದ ಇದು ವ್ಯವಹಾರಕ್ಕೆ ಉತ್ತಮವಾದ ದಿನವಾಗುವುದು. ಹಣಕಸಿನ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಸಾಮಾನ್ಯವಾದ ದಿನವಾಗುವುದು. ಒಡ ಹುಟ್ಟಿದವರೊಂದಿಗೆ ಉತ್ತಮ ಬಾಂಧವ್ಯ ಬೆಳೆಯುವುದು. ಆರೋಗ್ಯವೂ ಇಂದು ಸಾಮಾನ್ಯವಾಗಿರುತ್ತದೆ.
  ಅದೃಷ್ಟ ಬಣ್ಣ: ಆಕಾಶ ನೀಲಿ
  ಅದೃಷ್ಟ ಸಂಖ್ಯೆ: 10
  ಅದೃಷ್ಟ ಸಮಯ: ಸಂಜೆ 6:00 ರಿಂದ 9:30 ರವರೆಗೆ


 • ಕರ್ಕ: 21 ಜೂನ್ 22 ಜುಲೈ

  ಕುಟುಂಬಕ್ಕೆ ಸಂಬಂಧಿಸಿದಂತೆ ಯಾವುದೇ ಯೋಜನೆಯನ್ನು ಕೈಗೊಳ್ಳಲು ಇಂದು ಸಂತೋಷಕರವಾದ ದಿನವಾಗಿರುತ್ತದೆ. ಕುಟುಂಬದವರೊಂದಿಗೆ ಸಣ್ಣ ಪ್ರವಾಸವನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ಪೋಷಕರು ಸಹ ತಮ್ಮ ರಜಾ ದಿನವನ್ನು ನಿಮ್ಮೊಂದಿಗೆ ಆನಂದಿಸುತ್ತಾರೆ. ನವ ವಿವಾಹಿತರಿಗೆ ಇಂದು ಅತ್ಯಂತ ಸಂತೋಷದ ದಿನವಾಗುವುದು. ಆರೋಗ್ಯದಲ್ಲಿನ ಸುಧಾರಣೆಯು ನಿಮಗೆ ಸಂತೋಷ ಶಕ್ತಿ ಹಾಗೂ ಸಕಾರಾತ್ಮಕ ಭಾವನೆಯನ್ನು ನೀಡುತ್ತದೆ. ನಿಮ್ಮ ಕೆಲಸದಲ್ಲಿ ಗುರಿ ತಲುಪಲು ಸಾಧ್ಯವಾಗದೆ ಹೋಗುವುದರಿಂದ ಸ್ವಲ್ಪ ನಿರಸ ಭಾವನೆ ಉಂಟಾಗಬಹುದು. ಚಾಲನೆ ಮಾಡುವುದನ್ನು ತಪ್ಪಿಸಿ. ಕಾನೂನು ಆರೋಪಗಳನ್ನು ಎದುರಿಸುತ್ತಿರುವವರಿಗೆ ಕಠಿಣವಾದ ಸಮಯ ಎನ್ನಲಾಗುವುದು. ಆರ್ಥಿಕ ವಿಷಯದಲ್ಲೂ ಇಂದು ಸಾಮಾನ್ಯವಾದ ದಿನ.
  ಅದೃಷ್ಟ ಬಣ್ಣ: ಕೆಂಪು
  ಅದೃಷ್ಟ ಸಂಖ್ಯೆ: 44
  ಅದೃಷ್ಟ ಸಮಯ: ಮಧ್ಯಾಹ್ನ 1:30 ರಿಂದ 10:00 ರವರೆಗೆ


 • ಸಿಂಹ: 23 ಜುಲೈ-22 ಆಗಸ್ಟ್

  ಗ್ರಹಗತಿಗಳು ಹಾಗೂ ನಕ್ಷತ್ರಗಳು ಅನುಕೂಲಕರವಾಗಿರುವುದರಿಂದ ನಿಮ್ಮ ಆಸೆಗಳು ಪೂರೈಸುತ್ತವೆ. ಇದು ಕೆಲಸದ ವಿಷಯದಲ್ಲಿ ಅತ್ಯುತ್ತಮವಾದ ದಿನವಾಗುತ್ತದೆ. ಕೆಲಸದ ವಿಷಯದಲ್ಲೂ ಇಂದು ನಿಮಗೆ ಸುಗಮವಾದ ದಿನ. ನಿಮ್ಮ ಮೇಲಾಧಿಕಾರಿಯೂ ಸಹ ಉತ್ತಮ ಬೆಂಬಲ ನೀಡುವುದರಿಂದ ಕಚೇರಿಯಲ್ಲಿ ಕಾರ್ಯನಿರತವಾಗಿ ಕೆಲಸ ನಿರ್ವಹಿಸುವಿರಿ. ವಿವಾಹದ ಚಿಂತನೆಯನ್ನು ಕೈಗೊಳ್ಳಲು ಅಥವಾ ಮದುವೆಯ ಯೋಜನೆ ಕೈಗೊಳ್ಳಲು ಅತ್ಯುತ್ತಮವಾದ ದಿನವಾಗುವುದು. ಸಂಗಾತಿಯು ನಿಮ್ಮ ಸಂದೇಹಾತ್ಮಕ ವರ್ತನೆಯನ್ನು ಕಂಡಿಸುವರು. ನಿಮ್ಮ ಸಂದೇಹ ಸ್ವಭಾವವನ್ನು ಸುತ್ತಮುತ್ತಲಿನವರು ಸಹ ಇಷ್ಟಪಡುವುದಿಲ್ಲ. ಹಣಕಾಸಿಗೆ ಸಂಬಂಧಿಸಿದಂತೆ ನಿಧಾನವಾದ ದಿನ. ನಿಮಗಾಗಿ ಸಮಯವನ್ನು ಆಯೋಜಿಸಿಕೊಳ್ಳಲು ಆದ್ಯತೆ ನೀಡಿ. ದಿನದ ಆರಂಭವನ್ನು ವ್ಯಾಯಾಮ ಹಾಗೂ ನಡಿಗೆಯಿಂದ ಪ್ರಾರಂಭಿಸಿ.
  ಅದೃಷ್ಟ ಬಣ್ಣ: ಸ್ಕಾರ್ಲೆಟ್
  ಅದೃಷ್ಟ ಸಂಖ್ಯೆ: 4
  ಅದೃಷ್ಟ ಸಮಯ: ಬೆಳಿಗ್ಗೆ 4:00 ರಿಂದ 11:10 ರವರೆಗೆ


 • ಕನ್ಯಾ: 23 ಆಗಸ್ಟ್ -22 ಸಪ್ಟೆಂಬರ್

  ಆರೋಗ್ಯ ಸಮಸ್ಯೆಯಿಂದ ಒಂದಿಷ್ಟು ಕಠಿಣದ ಸಮಯವನ್ನು ಹೊಂದಬೇಕಾಗುವುದು. ಹೊಟ್ಟೆ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲ ಬೇಕಾಗುವುದು. ಆದಷ್ಟು ಜಾಗರೂಕರಾಗಿರಿ. ಜಂಕ್ ಫುಡ್ ಸೇವನೆಯನ್ನು ತಪ್ಪಿಸಿ. ಹಣಕಾಸಿನ ವಿಷಯದಲ್ಲಿ ಇದು ಸಾಮಾನ್ಯವಾದ ದಿನ. ಸಂಜೆಯ ವೇಳೆಗೆ ಒಂದಿಷ್ಟು ಉತ್ತಮ ಸುದ್ದಿಯನ್ನು ಕೇಳುವ ಸಾಧ್ಯತೆಗಳಿವೆ. ಹೂಡಿಕೆಗೆ ಇಂದು ಉತ್ತಮವಾದ ದಿನ. ಸಂಗಾತಿಯಿಂದ ವಿಷಯವನ್ನು ರಹಸ್ಯವಾಗಿ ಇಡುವುದನ್ನು ತಪ್ಪಿಸಿ. ನಿಮ್ಮ ಕಾರ್ಯಕ್ಷಮತೆಯು ಮೆಚ್ಚುಗೆಯನ್ನು ಪಡೆಯುತ್ತದೆ. ನಿಮ್ಮ ಆತ್ಮೀಯ ಸ್ನೇಹಿತರು ಕೆಲವು ವಿಷಯಗಳ ಬಗ್ಗೆ ತಪ್ಪಾಗಿ ಗ್ರಹಿಸಬಹುದು. ಒಡಹುಟ್ಟಿದವರಿಂದ ಕುಟುಂಬದಲ್ಲಿ ಗೊಂದಲ ಹಾಗೂ ತೊಂದರೆಯು ಉಂಟಾಗಬಹುದು. ಪುಸ್ತಕ ಓದುವುದರಿಂದ ನಿಮ್ಮ ಒತ್ತಡವು ನಿವಾರಣೆಯಾಗುತ್ತದೆ.
  ಅದೃಷ್ಟ ಬಣ್ಣ: ನೇರಳೆ
  ಅದೃಷ್ಟ ಸಂಖ್ಯೆ: 5
  ಅದೃಷ್ಟ ಸಮಯ: ಬೆಳಿಗ್ಗೆ 5:15 ರಿಂದ ಮಧ್ಯಾಹ್ನ 3:50


 • ತುಲಾ: 23 ಸಪ್ಟೆಂಬರ್-22 ಅಕ್ಟೋಬರ್

  ಹಣಕಾಸಿನ ತೊಂದರೆಗಳನ್ನು ನಿಯಂತ್ರಿಸಲು ಸಾಕಷ್ಟು ಪ್ರಯತ್ನ ಹಾಗೂ ಜಾಗರೂಕತೆಯನ್ನು ಕೈಗೊಳ್ಳಬೇಕು. ನಂತರ ಆರ್ಥಿಕ ಸ್ಥಿತಿಯು ಕ್ರಮೇಣ ಸುಧಾರಣೆಯನ್ನು ಕಂಡುಕೊಳ್ಳುವುದು. ನಿಮ್ಮ ಮಕ್ಕಳ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿ. ಎಲ್ಲಾ ವಿಷಯಗಳಿಗೂ ತರ್ಕಮಾಡುವ ಪ್ರವೃತ್ತಿಯನ್ನು ನಿಯಂತ್ರಿಸಿಕೊಳ್ಳಿ. ಸಿಗುವ ಪ್ರತಿಯೊಂದು ಕ್ಷಣವನ್ನು ಸ್ವೀಕರಿಸುವುದು ಹಾಗೂ ಆನಂದಿಸುವುದನ್ನು ಕಲಿಯಬೇಕು. ಆಕ್ರಮಣಕಾರಿ ಸ್ವಭಾವವನ್ನು ಹತೋಟಿಯಲ್ಲಿ ಇಡಬೇಕು. ಜೊತೆಗೆ ಸಾರ್ವಜನಿಕರ ಮುಂದೆ ನಿಮ್ಮ ಕೋಪವನ್ನು ತೋರಿಸದಿರಿ. ಸರ್ಕಾರಿ ಕೆಲಸದಲ್ಲಿ ಇರುವವರು ವರ್ಗಾವಣೆ ಹೊಂದಬಹುದು. ಕೆಲಸಕ್ಕೆ ಸಂಬಂಧಿಸಿದ ಪ್ರವಾಸವು ನಿಮ್ಮನ್ನು ಕಾರ್ಯನಿರತವಾಗಿಸುತ್ತದೆ.
  ಅದೃಷ್ಟ ಬಣ್ಣ: ತಿಳಿ ಗುಲಾಬಿ
  ಅದೃಷ್ಟ ಸಂಖ್ಯೆ: 31
  ಅದೃಷ್ಟ ಸಮಯ: ಬೆಳಿಗ್ಗೆ 9:45 ರಿಂದ 10:20 ರವರೆಗೆ


 • ವೃಶ್ಚಿಕ: 23 23 ಅಕ್ಟೋಬರ್-21 ನವೆಂಬರ್

  ಕೆಲವು ವಿಷಯಗಳಿಂದ ನೀವು ತಿರುವು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಇತರರೊಂದಿಗೆ ವಿಷಯವನ್ನು ಚರ್ಚಿಸುವಾಗ ಆದಷ್ಟು ಎಚ್ಚರಿಕೆಯನ್ನು ವಹಿಸಿ. ಹೆಚ್ಚಿನ ತೊಂದರೆಯಿಂದ ಪಾರಾಗಲು ನೀವು ಸಂಗಾತಿಯೊಂದಿಗೆ ಪಾರದರ್ಶಕ ವರ್ತನೆಯನ್ನು ತೋರಬೇಕು. ನೀವು ಆದಷ್ಟು ತಾಳ್ಮೆ ಹಾಗೂ ಶಾಂತ ಸ್ವಭಾವವನ್ನು ಹೊಂದಬೇಕು. ಮಕ್ಕಳು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವರು. ಸಾಕಷ್ಟು ನಷ್ಟವನ್ನು ಅನುಭವಿಸುವುದರಿಂದ ವ್ಯವಹಾರ ಹಾಗೂ ಉದ್ಯೋಗಗಳನ್ನು ಬದಲಿಸುವ ಯೋಜನೆಯನ್ನು ಕೈಗೊಳ್ಳಬಹುದು. ನೀವು ಸಣ್ಣಪುಟ್ಟ ವಿಷಯಗಳಿಗೂ ಕಿರಿಕಿರಿಯನ್ನು ಅನುಭವಿಸಬಹುದು. ಆದರೆ ಅದರಿಂದ ನೀವು ಹೊರ ಬರುವ ಪ್ರಯತ್ನ ಮಾಡಬೇಕು. ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ. ಹಣಕಾಸಿನ ವಿಷಯದಲ್ಲಿ ಇಂದು ಸಾಮಾನ್ಯವಾದ ದಿನ. ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಯೋಗ ಮತ್ತು ಧ್ಯಾನದೊಂದಿಗೆ ದಿನದ ಆರಂಭ ಮಾಡಿ.
  ಅದೃಷ್ಟ ಬಣ್ಣ: ಕಂದು
  ಅದೃಷ್ಟ ಸಂಖ್ಯೆ: 11
  ಅದೃಷ್ಟ ಸಮಯ: ಬೆಳಿಗ್ಗೆ 7:35 ರಿಂದ ಸಂಜೆ 6:10 ರವರೆ


 • ಧನು: 22 ನವೆಂಬರ್ -21 ಡಿಸೆಂಬರ್

  ಕೆಲಸಕ್ಕೆ ಸಂಬಂಧಿಸಿದಂತೆ ಇಂದು ಅನುಕೂಲಕರವಾದ ದಿನ. ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ಸಾರ್ವಜನಿಕ ವಲಯದಲ್ಲಿ ಇರುವವರು ಗುರಿ ಸಾಧಿಸಲು ಹೆಚ್ಚು ಶ್ರಮವಹಿಸುತ್ತಾರೆ. ಸಣ್ಣ ಪ್ರವಾಸದ ಯೋಜನೆಯು ದೀರ್ಘ ಕಾಲದ ಸಮಯವನ್ನು ತೆಗೆದುಕೊಳ್ಳುವುದು. ಕೆಲಸದ ಕ್ಷೇತ್ರದಲ್ಲಿ ಹೊಸ ಸ್ನೇಹಿತರನ್ನು ಪಡೆದುಕೊಳ್ಳಬಹುದು. ನವ ವಿವಾಹಿತರಿಗೆ ಉತ್ತಮವಾದ ದಿನ. ಇವರು ಪೋಷಕರಿಂದ ದುಬಾರಿ ಬೆಲೆಯ ಉಡುಗೊರೆಯನ್ನು ಸಹ ಪಡೆದುಕೊಳ್ಳುವರು. ಪ್ರಿಯಕರರೊಂದಿಗೆ ಪರಿಸ್ಥಿತಿಯನ್ನು ನಿಭಾಯಿಸಬೇಕು. ಕುಟುಂಬದಲ್ಲಿ ಶಾಂತಿ ಹಾಗೂ ಸೌಹಾರ್ದ ನೆಲೆಸುವುದು. ಕಾನೂನು ಶುಲ್ಕವನ್ನು ಎದುರಿಸುತ್ತಿರುವವರಿಗೆ ಪರಿಹಾರ ದೊರೆಯುವುದು. ಉದ್ಯಮಿಗಳು ಭಾರಿ ಲಾಭ ಗಳಿಸುವರು. ದೀರ್ಘ ಸಮಯದ ನಂತರ ಆರೋಗ್ಯವು ಸ್ಥಿರವಾಗಿರುತ್ತದೆ. ಪ್ರೀತಿ ಪಾತ್ರೊಂದಿಗೆ ಸಂಜೆಯ ಸಮಯವನ್ನು ಆನಂದಿಸುವಿರಿ.
  ಅದೃಷ್ಟ ಬಣ್ಣ: ಬಿಳಿ
  ಅದೃಷ್ಟ ಸಂಖ್ಯೆ: 20
  ಅದೃಷ್ಟ ಸಮಯ: ಸಂಜೆ 5:30 ರಿಂದ 9:40 ರವರೆಗೆ


 • ಮಕರ: 22 ಡಿಸೆಂಬರ್ -19 ಜನವರಿ

  ಕೆಲಸದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ದೀರ್ಘ ವಿರಾಮದ ನಂತರ ಸಂತೋಷದಿಂದ ಎಲ್ಲರೊಂದಿಗೂ ಬೆರೆಯುವಿರಿ. ಸಂಗಾತಿಯೊಂದಿಗೆ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸುವಿರಿ. ಮಕ್ಕಳು ದುಬಾರಿ ವಸ್ತುವಿನ ಬೇಡಿಕೆ ಇಡುವರು. ಉದ್ಯಮಿಗಳು ತಮ್ಮ ನಿರೀಕ್ಷೆಯನ್ನು ತಲುಪಲು ಪ್ರಮುಖ ಒಪ್ಪಂದವನ್ನು ಭೇದಿಸುವರು. ಹಣಕಾಸಿನ ಬಿಕ್ಕಟ್ಟನ್ನು ಎದುರಿಸುವುದರಿಂದ ಒತ್ತಡದ ದಿನ ಎನ್ನಬಹುದು. ಸಂಗೀತ ತಜ್ಞರು ಉತ್ತಮ ಪ್ರದರ್ಶನವನ್ನು ನೀಡುವರು. ಸಮಸ್ಯೆಗಳಿಂದ ದೂರ ಸರಿಯಲು ವಿಶ್ರಾಂತಿ ಹಾಗೂ ಸೂಕ್ತ ಸಮಯಗಳ ಕಾಲ ನಿದ್ರೆ ಮಾಡಿ. ಹಣಕಾಸಿನ ಬಗ್ಗೆ ಸೂಕ್ತ ಲೆಕ್ಕಾಚಾರ ಹೊಂದುವುದು ಉತ್ತಮ.
  ಅದೃಷ್ಟ ಬಣ್ಣ: ನೇರಳೆ
  ಅದೃಷ್ಟ ಸಂಖ್ಯೆ: 37
  ಅದೃಷ್ಟ ಸಮಯ: ಮಧ್ಯಾಹ್ನ 12:30 ರಿಂದ 7:30 ರವರೆಗೆ


 • ಕುಂಭ: 20 ಜನವರಿ -18 ಫೆಬ್ರವರಿ

  ನಿಮ್ಮ ಗುರಿಯನ್ನು ನೀವು ಸಾಧಿಸುವುದರಿಂದ ಇದು ಒಟ್ಟಾರೆಯಾಗಿ ತೃಪ್ತಿದಾಯಕವಾದ ದಿನ. ಸಹೋದ್ಯೋಗಿಗಳು ಕೆಲಸದ ಮುಂಭಾಗದಲ್ಲಿ ಬೆಂಬಲ ನೀಡುವರು. ನೀವು ಇತರ ವಿಷಯಗಳಿಗೆ ಯೋಜನೆಯನ್ನು ಕೈಗೊಳ್ಳಬಹುದು. ದೀರ್ಘ ಸಮಯದ ನಂತರ ಹಣಕಾಸಿನ ಸಮಸ್ಯೆಯಿಂದ ಮುಕ್ತರಾಗುವಿರಿ. ಅದು ನಿಮಗೆ ಒಂದಿಷ್ಟು ತೃಪ್ತಿಯನ್ನು ನೀಡುವುದು. ತಾಯಿಯ ಆರೋಗ್ಯದಲ್ಲಿ ಸುಧಾರಣೆಯು ದೊಡ್ಡ ಪರಿಹಾರವನ್ನು ನೀಡುತ್ತದೆ. ಅದ್ಭುತ ವ್ಯವಹಾರವನ್ನು ನಡೆಸುವುದರಿಂದ ಉತ್ತಮ ಲಾಭವನ್ನು ಪಡೆದುಕೊಳ್ಳುವಿರಿ. ಕುಟುಂಬಕ್ಕೆ ಸಂಬಂಧಿಸಿದಂತೆ ಹೊಂದಿದ್ದ ತಪ್ಪು ಕಲ್ಪನೆಗಳು ನಿಮ್ಮಿಂದ ದೂರವಾಗುತ್ತವೆ. ಕೆಲವರು ನಿದ್ರಾಹೀನತೆಯಿಂದ ಬಳಲಬಹುದು. ಇಂದಿನ ಆರಂಭವನ್ನು ವ್ಯಾಯಾಮದಿಂದ ಆರಂಭಿಸಿ. ಪ್ರೀತಿ ಪಾತ್ರರಿಂದ ಸಿಗುವ ಆಶ್ಚರ್ಯಕರ ಸಂಗತಿಯು ನಿಮಗೆ ವಿಶೇಷ ಅನುಭವವನ್ನು ನೀಡುತ್ತದೆ. ಹವಾಮಾನದ ಪ್ರಭಾವದಿಂದ ನೀವು ಆಲಸ್ಯವನ್ನು ಹೊಂದುವ ಸಾಧ್ಯತೆಗಳಿವೆ.
  ಅದೃಷ್ಟ ಬಣ್ಣ: ಸಾಸಿವೆ
  ಅದೃಷ್ಟ ಸಂಖ್ಯೆ: 8
  ಅದೃಷ್ಟ ಸಮಯ: ಬೆಳಿಗ್ಗೆ 6:45 ರಿಂದ ಮಧ್ಯಾಹ್ನ 3:15 ರವರೆಗೆ


 • ಮೀನ: 19 ಫೆಬ್ರುವರಿ-20 ಮಾರ್ಚ್

  ನಿಮ್ಮ ಪೋಷಕರು ಪೂರ್ವಜರ ಆಸ್ತಿಯನ್ನು ನಿಮಗೆ ವರ್ಗಾಯಿಸುವರು. ಅದು ನಿಮಗೆ ಆರ್ಥಿಕವಾಗಿ ಉತ್ತಮವಾದ ಸ್ಥಾನವನ್ನು ತಂದುಕೊಡುವುದು. ನಿಮಗೆ ಈ ದಿನ ಶುಭ ದಿನವಾಗಿ ಉಳಿಯುವುದು. ನೀವು ವ್ಯವಹಾರದಲ್ಲಿ ಹೆಚ್ಚಿನ ಹೂಡಿಕೆಯನ್ನು ಮಾಡಬಹುದು. ಪರಿಸ್ಥಿತಿಗಳು ಹಾಗೂ ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತವೆ. ಕೆಲವರು ಕೆಲಸದ ನಿಮಿತ್ತ ಪ್ರಯಾಣವನ್ನು ಕೈಗೊಳ್ಳಬಹುದು. ಅದು ನಿಮಗೆ ಒಂದಿಷ್ಟು ಸಂತೋಷವನ್ನು ನೀಡುವುದು. ಕೆಲವು ಬದ್ಧತೆಗಳು ನಿಮಗೆ ಕಾರ್ಯನಿರತವಾಗಿರುವಂತೆ ಮಾಡಿಸುತ್ತದೆ. ನೀವು ಆದಷ್ಟು ತಾಳ್ಮೆಯಿಂದ ಇರೇಕು. ಒಡಹುಟ್ಟಿದವರು ಸ್ವಾರ್ಥ ಬುದ್ಧಿಯ ವರ್ತನೆ ತೋರಬಹುದು. ಮಕ್ಕಳನ್ನು ನಿಯಂತ್ರಿಸಲು ಸಾಕಷ್ಟು ಕಷ್ಟವನ್ನು ಪಡುವಿರಿ. ಅದು ನಿಮಗೆ ಅದೃಷ್ಟವನ್ನು ತಂದುಕೊಡುತ್ತದೆ. ಬಾಕಿ ಉಳಿದ ಕೆಲಸವನ್ನು ಪೂರ್ಣಗೊಳಿಸಿ. ಸಂಧಿವಾತ ಮತ್ತು ಹೃದಯ ಸಮಸ್ಯೆ ಇರುವವರು ಜಾಗರೂಕರಾಗಿರಬೇಕು.
  ಅದೃಷ್ಟ ಬಣ್ಣ: ಕಿತ್ತಳೆ
  ಅದೃಷ್ಟ ಸಂಖ್ಯೆ: 14
  ಅದೃಷ್ಟ ಸಮಯ: ಬೆಳಿಗ್ಗೆ 8:30 ರಿಂದ ಸಂಜೆ 6:00 ರವರೆಗೆ
ಮಂಗಳವಾರದ ದಿನ ಅಂದರೆ ನವಗ್ರಹಗಳಲ್ಲಿ ಒಬ್ಬರಾದ ಮಂಗಳನ ದಿನ. ಈತನನ್ನೇ ಕುಜ ಎಂದು ಕರೆಯಲಾಗುತ್ತದೆ. ಅಂಗಾರಕನೆಂದು ಈತನನ್ನೇ ಕರೆಯಲಾಗುವುದು.ಪುರಾಣಗಳ ಪ್ರಕಾರ ಕುಜ ಎಂದರೆ ವಿಪತ್ತುಗಳನ್ನು ಉಂಟು ಮಾಡುವನು. ಪುರಾಣಗಳಲ್ಲಿ ವಿಶೇಷವಾದ ಧಾರ್ಮಿಕವಾದ ಪ್ರಾಮುಖ್ಯತೆಯಿದೆ.

ಮಂಗಳವಾರ ಸಾಮಾನ್ಯವಾಗಿ ಕಾಳಿ, ಗಣಪತಿ,ಆದಿಶಕ್ತಿಯನ್ಶು ಆರಾಧನೆಯನ್ನು ಮಾಡುತ್ತಾರೆ.ಮಂಗಳವಾರದ ದಿನವು ದೈವವನ್ನು ಆರಾಧಿಸುತ್ತಾ ಈ ದಿನದ ಭವಿಷ್ಯವನ್ನು ತಿಳಿಯೋಣ.

   
 
ಹೆಲ್ತ್