ಸೂರ್ಯನ ಬಿಸಿಲಿನಿಂದ ತಪ್ಪಿಸಿಕೊಂಡು ನೆರಳು ಯಾವಾಗ ಸಿಗುತ್ತದೆ ಎಂದು ಕಾಯುತ್ತಲಿದ್ದರೆ ಆಗ ಅದನ್ನು ಅತಿಯಾದ ಉಷ್ಣತೆ ಎಂದು ಹೇಳುವರು. ದೇಹದ ಉಷ್ಣತೆಯು ಹೆಚ್ಚಾದರೆ ಆಗ ನಿರ್ಜಲೀಕರಣದ ಸಮಸ್ಯೆಯು ಬರುವುದು. ಅತಿಯಾದ ಉಷ್ಣತೆ ಎಂದರೆ ದೇಹವು ಅದಾಗಿಯೇ ತಂಪಾಗುತ್ತಿಲ್ಲ ಮತ್ತು ತನ್ನ ಸಾಮಾನ್ಯ ತಾಪಮಾನಕ್ಕೆ ಬರಲು ಸಾಧ್ಯವಾಗುತ್ತಿಲ್ಲವೆಂದು ಹೇಳಬಹುದು. ದೇಹದ ಸಾಮಾನ್ಯ ತಾಪಮಾನವು 98.6 ಡಿಗ್ರಿ ಫ್ಯಾರನ್ಹೀಟ್ ಇರುವುದು. ಅತಿಯಾದ ಬಿಸಿಗೆ ಮೈಯೊಡ್ಡುವ ಪರಿಣಾಮವಾಗಿ ದೇಹದಲ್ಲಿ ಅಧಿಕ ಉಷ್ಣತೆ ಉಂಟಾಗುವುದು. ದೇಹದ ತಾಪಮಾನವು ಹೆಚ್ಚಾದ ವೇಳೆ ರಕ್ತದ ಹರಿವು ಹೆಚ್ಚುವುದು, ಬೆವರು ಬರುವುದು ಮತ್ತು ಉಸಿರಿನ ವೇಗವು ಹೆಚ್ಚಾಗಿ ದೇಹದ ತಾಪಮಾನವನ್ನು ಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನಿಸುವುದು. ಈ ಎಲ್ಲದರ ಪರಿಣಾಮವಾಗಿ ಹೃದಯಕ್ಕೆ ಹೆಚ್ಚುವರಿ ಒತ್ತಡ ಬೀಳುವುದು. ಹೃದಯ ಬಡಿತವು ಇದರಿಂದಾಗಿಯೇ ಹೆಚ್ಚುವುದು.
ದೇಹದ ತಾಪಮಾನವು ಹೆಚ್ಚಾದ ವೇಳೆ ಹಲವಾರು ಸಮಸ್ಯೆಗಳು ಕಾಡುವುದು. ಉಷ್ಣತೆ ಹೆಚ್ಚಿದ ಕೂಡಲೇ ಬೆವರು ತೀವ್ರವಾಗಿ ಸುರಿಯುವುದು, ಇದರಿಂದ ದೇಹವು ಬೇಗನೆ ನಿರ್ಜಲೀಕರಣಕ್ಕೆ ಒಳಗಾಗುವುದು. ಯಾಕೆಂದರೆ ದೇಹದ ತಾಪಮಾನ ಕಾಪಾಡುವ ವೇಳೆ ಹೆಚ್ಚಿನ ನೀರಿನಾಂಶವು ನಾಶವಾಗಿರುವುದು. ನಿರ್ಜಲೀಕರಣದಿಂದಾಗಿ ಹೃದಯದ ಮೇಲೆ ಮತ್ತಷ್ಟು ಒತ್ತಡ ಬೀಳುವುದು. ಹೃದಯವು ಕಠಿಣವಾಗಿ ಕೆಲಸ ಮಾಡಿ ರಕ್ತವನ್ನು ಚರ್ಮದತ್ತ ಸಾಗಿಸುವುದು. ಅತಿಯಾದ ಒತ್ತಡದಿಂದಾಗಿ ಹೃದಯದ ಪರಿಸ್ಥಿತಿಯು ಅಪಾಯಕಾರಿ ಆಗಬಹುದು. ದೇಹದ ತಾಪಮಾನವು ಹೆಚ್ಚಾದ ವೇಳೆ ತುಂಬಾ ಸೂಕ್ಷ್ಮ ಹಾಗೂ ದುರ್ಬಲ ಅಂಗಾಂಶಗಳು ಅಪಾಯಕ್ಕೆ ಸಿಲುಕುವುದು. ಮೆದುಳು ಮತ್ತು ದೇಹವಿಡಿ ಇರುವ ನರಗಳ ಮೇಲೆ ಇದರ ಪರಿಣಾಮವಾಗುವುದು. ಇದರಿಂದಾಗಿ ಗೊಂದಲ, ನೆನಪಿನ ಸಮಸ್ಯೆ ಮತ್ತು ಪ್ರಜ್ಞೆ ಕಳೆದುಕೊಳ್ಳುವಂತೆ ಆಗಬಹುದು. ಬೇರೆ ಆರು ವೈದ್ಯಕೀಯ ಕಾರಣಗಳಿಂದಲೂ ಬೆವರು ಅತಿಯಾಗಿ ಸುರಿಯಬಹುದು.
1. ಅತಿಯಾಗಿ ಬೆವರುವಿಕೆ
ಪ್ರತಿಯೊಬ್ಬರ ಬೆವರುವಿಕೆಯು ತುಂಬಾ ಭಿನ್ನವಾಗಿ ಇರುವುದು, ಆದರೆ ನಿಮ್ಮ ಬೆವರುವಿಕೆ ಬಗ್ಗೆ ಗಮನ ನೀಡಿ. ನೀವು ಬೆವರುವ ರೀತಿಯು ಆರೋಗ್ಯದ ಬಗ್ಗೆ ಬಹಳಷ್ಟು ಹೇಳುತ್ತದೆ. ಬೆವರುವಿಕೆ ಅತಿಯಾಗುತ್ತಿದೆಯಾ ಎನ್ನುವ ಬಗ್ಗೆ ನೀವು ಗಮನಹರಿಸುವುದು ಅತೀ ಅಗತ್ಯವಾಗಿರುವುದು. ದೇಹವು ಹೆಚ್ಚಿನ ಬೆವರು ಸುರಿಸುವ ಮೂಲಕ ತಂಪಾಗಲು ಪ್ರಯತ್ನಿಸುವುದು. ಆದರೆ ಅತೀ ಹೆಚ್ಚು ನಿರ್ಜಲೀಕರಣ ಉಂಟಾದರೆ ಆಗ ಬೆವರುವಿಕೆ ನಿಲ್ಲುವುದು ಮತ್ತು ಇದು ತುಂಬಾ ಅಪಾಯಕಾರಿ. ಬೆವರು ಇಲ್ಲದೆ ದೇಹವು ತಂಪಾಗುವುದಿಲ್ಲ ಮತ್ತು ಆಂತರಿಕ ತಾಪಮಾನವು ಹೆಚ್ಚಾಗಿ ತಾಪಾಘಾತ ಉಂಟಾಗಬಹುದು. ನಿಮಗೆ ಬೆವರು ಬರದೆ ಇದ್ದರೆ ಆಗ ನೀವು ಬಿಸಿಯಿಂದ ದೂರ ಹೋಗಿ ದೇಹವನ್ನು ತಂಪಾಗಿಸಿಕೊಳ್ಳಿ. ಬಟ್ಟೆ ತೆಗೆಯಿರಿ, ನೀರು ಕುಡಿಯಿರಿ ಅಥವಾ ತಣ್ಣೀರಿನ ಸ್ನಾನ ಮಾಡಿ.
ದೇಹವು ಅತಿಯಾದ ತಾಪಮಾನಕ್ಕೆ ಒಳಗಾಗುತ್ತಿದೆ ಎನ್ನುವುದಕ್ಕೆ ಮತ್ತೊಂದು ಸೂಚನೆ ತಲೆ ತಿರುಗುವಿಕೆ. ಮೆದುಳಿನಲ್ಲಿರುವಂತಹ ಸೂಕ್ಷ್ಮ ನರಗಳು ಉಷ್ಣತೆಗೆ ಒಳಗಾದ ವೇಳೆ ತಲೆನೋವು, ಗೊಂದಲ, ಮಾನಸಿಕ ಜಡತ್ವ ಮತ್ತು ತಲೆ ತಿರುಗುವಿಕೆ ಕಾಣಿಸುವುದು. ಇದರಿಂದಾಗಿ ನರಗಳು ಸರಿಯಾಗಿ ಕಾರ್ಯನಿರ್ವಹಿಸದೆ ಇರಬಹುದು ಮತ್ತು ಇದರಿಂದ ಚಲನೆ ಮೇಲೆ ಸಮಸ್ಯೆ ಉಂಟಾಗಬಹುದು ಅಥವಾ ನಡೆದಾಡಲು ಕಷ್ಟವಾಗಬಹುದು. ನಿಮಗೆ ವಾಕರಿಕೆ ಬಂದಂತೆ ಆಗಬಹುದು. ದೇಹದ ಉಷ್ಣತೆಯು ಹೆಚ್ಚಾದ ವೇಳೆ ಇಂತಹ ಸೂಚನೆಯು ಕಂಡುಬಂದರೆ ಆಗ ನೀವು ನೀರು ಹೆಚ್ಚು ಕುಡಿಯಿರಿ, ನೆರಳು ಅಥವಾ ಮನೆ ಒಳಗೆ ಹೋಗಿ. ಮನುಷ್ಯರು ಮಾತ್ರವಲ್ಲದೆ, ಪ್ರಾಣಿಗಳು ಕೂಡ ಅಧಿಕ ಉಷ್ಣತೆ ಸಮಸ್ಯೆಗೆ ಒಳಗಾಗುವುದು.
ದೇಹದ ಯಾವುದೇ ಭಾಗವು ಉಷ್ಣತೆಯಿಂದಾಗಿ ಕೆಂಪಾಗುತ್ತಲಿದ್ದರೆ ಆಗ ನೀವು ಅಲ್ಲಿಂದ ಸ್ವಲ್ಪ ದೂರ ಹೋಗಿ ವಿಶ್ರಾಂತಿ ಪಡೆಯಿರಿ. ಬೆವರಿನ ಕಣಗಳು ತಡೆಯಲ್ಪಟ್ಟ ವೇಳೆ ಉಷ್ಣ ದದ್ದುಗಳು ಕಾಣಿಸಿಕೊಳ್ಳುವುದು. ದಪ್ಪಗಿನ ಬಟ್ಟೆಗಳನ್ನು ಧರಿಸಿದ ವೇಳೆ ಹೆಚ್ಚಾಗಿ ಬೆವರು ಒಳಗೆ ನಿಲ್ಲುವುದು. ಇದರಿಂದ ಚರ್ಮವು ಉರಿಯೂತಕ್ಕೆ ಒಳಗಾಗುವುದು ಮತ್ತು ಕೆಂಪು ಬಣ್ಣದ ದದ್ದುಗಳು ಮೂಡುವುದು. ಇದರಿಂದ ಬಿಸಿ ವಾತಾವರಣದಲ್ಲಿ ಯಾವಾಗಲೂ ತುಂಬಾ ಸಡಿಲ, ತಂಪನ್ನು ನೀಡುವಂತಹ ಬಟ್ಟೆ ಧರಿಸಿ.
ಮೈದಾನದಲ್ಲಿ ಆಟವಾಡುತ್ತಿರುವ ವೇಳೆ ಅಥವಾ ಹಾಗೆ ನಡೆಯುತ್ತಿರುವ ವೇಳೆ ನಿಮ್ಮ ಕಾಲುಗಳಲ್ಲಿ ಸೆಳೆತ ಕಾಣಿಸಿಕೊಂಡರೆ, ಆಗ ಇದು ದೇಹವು ಅತಿಯಾದ ಉಷ್ಣತೆಗೆ ಒಳಗಾಗಿದೆ ಎಂದು ಹೇಳಬಹುದು. ಅತಿಯಾದ ಉಷ್ಣತೆಯು ಹೆಚ್ಚಾಗಿ ದೊಡ್ಡ ಸ್ನಾಯುಗಳಲ್ಲಿ ಪರಿಣಾಮ ಬೀರುವುದು. ಇದರಿಂದ ಸೆಳೆತ ಮತ್ತು ನೋವು ಉಂಟಾಗುವುದು. ತುಂಬಾ ಬಿಸಿಲಿರುವ ವೇಳೆ ಹೊರಗಡೆ ಸುತ್ತಾಡುವುದು ಅಥವಾ ಆಡುವಂತಹವರಲ್ಲಿ ಹೀಗೆ ಆಗುವುದು. ನಿರ್ಜಲೀಕರಣ ಮತ್ತು ವಿದ್ಯುದ್ವಿಚ್ಛೇದಗಳ ಕೊರತೆ ಇರುವಂತಹವರಲ್ಲಿ ಹೀಗೆ ಆಗುವುದು. ಇದಕ್ಕಾಗಿ ನೀವು ದೇಹವನ್ನು ತಂಪಾಗಿಸಬೇಕು ಮತ್ತು ನೋವು ನಿವಾರಣೆ ಆಗುವ ತನಕ ನೀವು ಹಾಗೆ ಕುಳಿತಿರಿ.
ದೇಹದ ತಾಪಮಾನವು ಹೆಚ್ಚಾದ ವೇಳೆ ಎರಡು ವಿಧದಿಂದ ಸಮಸ್ಯೆಯಾಗಬಹುದು. ಹೃದಯದ ಬಡಿತವು ತಗ್ಗಬಹುದು ಮತ್ತು ದುರ್ಬಲವಾಗಬಹುದು ಅಥವಾ ಇದು ಹೆಚ್ಚಾಗಬಹುದು, ಹೃದಯ ಬಡಿತವು ತೀವ್ರವಾಗಬಹುದು. ಮೊದಲನೇಯದು ದೇಹದ ಅಧಿಕ ತಾಪಮಾನದಿಂದ ಆಗಿರಬಹುದು ಮತ್ತು ಎರಡನೇಯದು ತಾಪಘಾತದ ಪರಿಣಾಮ. ಹೃದಯ ಬಡಿತವು ಹೆಚ್ಚು ಅಥವಾ ಕಡಿಮೆ ಆಗುತ್ತಿರುವುದು ದೇಹವು ಅತಿಯಾಗಿ ಬಿಸಿಯಾಗುತ್ತಿದೆ ಎನ್ನುವುದರ ಲಕ್ಷಣ.
1. ನೀವು ಸಾಮಾನ್ಯಕ್ಕಿಂತಲೂ ಹೆಚ್ಚು ಹೊರಗಡೆ ಇರುತ್ತೀರಿ
ವಾರಾಂತ್ಯದಲ್ಲಿ ಹೆಚ್ಚಾಗಿ ಕೆಲವರು ಸುತ್ತಾಡಲು ಹೊರಗಡೆ ಹೋಗುವರು. ಆಗ ಹೆಚ್ಚು ಓಡುವುದು, ದೀರ್ಘಕಾಲ ಆಡುವುದು, ಗಂಟೆಗಳ ಕಾಲ ಮೈದಾನದಲ್ಲೇ ಇರುವುದರಿಂದಾಗಿ ದೇಹದ ತಾಪಮಾನವು ಹೆಚ್ಚಾಗುವುದು. ವ್ಯಾಯಾಮ ಅಥವಾ ಯಾವುದೇ ರೀತಿಯ ದೈಹಿಕ ಕಾರ್ಯಗಳಿಂದಾಗಿ ದೇಹದ ತಾಪಮಾನದಲ್ಲಿ ಏರುಪೇರಾಗುವುದು. ಬೇಸಗೆಯಲ್ಲಿ ತರಬೇತಿ ಪಡೆಯುವ ಮತ್ತು ಆಡುವಂತಹ ಕ್ರೀಡಾಳುಗಳು ಅಭ್ಯಾಸ ಅಥವಾ ಆಟಕ್ಕೆ ಮೊದಲು ತೂಕ ಮಾಡುವರು ಮತ್ತು ಅಭ್ಯಾಸ ಕೊನೆಗೊಂಡ ಬಳಿಕ ಮತ್ತೊಮ್ಮೆ ತೂಕ ಮಾಡುವುದು. ಅವರು ಕಳೆದುಕೊಳ್ಳುವ ತೂಕಕ್ಕೆ ಅನುಗುಣವಾಗಿ ಅವರು ನೀರನ್ನು ಕುಡಿಯಬೇಕು.
ಆಲ್ಕೋಹಾಲ್ ಸೇವನೆಯು ದೇಹವನ್ನು ನಿರ್ಜಲೀಕರಣಕ್ಕೀಡು ಮಾಡುವುದು. ಇದರಿಂದಾಗಿ ದೇಹದ ತಾಪಮಾನವು ಹೆಚ್ಚುವುದು. ಅದರಲ್ಲೂ ಬೇಸಗೆಯಲ್ಲಿ ಅತಿಯಾಗಿ ಕುಡಿದರೆ ಅದರಿಂದ ಸಮಸ್ಯೆಗಳು ಹೆಚ್ಚು ಮತ್ತು ತಾಪಮಾನ ಏರುವುದು. ಹೆಚ್ಚಿನವರು ಹೊರಗಡೆ ಬಿಸಿಲಿಗೆ ಹೋದಾಗ ಅಥವಾ ಆಲ್ಕೋಹಾಲ್ ಸೇವಿಸಿದ ವೇಳೆ ನೀರು ತುಂಬಾ ಕಡಿಮೆ ಕುಡಿಯುವರು. ಇದರಿಂದಾಗಿ ಅವರ ದೇಹದಲ್ಲಿ ನಿರ್ಜಲೀಕರಣ ಉಂಟಾಗುವುದು. ಒಂದು ಲೋಟ ಬಿಯರ್ ನೊಂದಿಗೆ ಒಂದು ಲೋಟ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಹೆಚ್ಚಿನ ಆದಾಯ, ಸ್ವಾತಂತ್ರ್ಯ ಮತ್ತು ತೃಪ್ತಿಯು ನಿಮ್ಮ ದೇಹಕ್ಕೆ ಬೇಗನೆ ವಯಸ್ಸಾಗುವಂತೆ ಮಾಡುವುದು. ಆದರೆ ನಿಮಗೆ ವಯಸ್ಸಾಗುತ್ತಾ ಹೋದಂತೆ ಆರೋಗ್ಯ ಮತ್ತು ಅಭ್ಯಾಸಗಳು ಹೆಚ್ಚು ಕ್ಲಿಷ್ಟಕರವಾಗುತ್ತಾ ಹೋಗುವುದು. ವಯಸ್ಸಾದವರಲ್ಲಿ ದೇಹದ ಉಷ್ಣತೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿರುವುದು. ಯಾಕೆಂದರೆ ವಯಸ್ಸಾದ ದೇಹಕ್ಕೆ ತಾಪಮಾನ ಸಮತೋಲನದಲ್ಲಿ ಇಡಲು ತುಂಬಾ ಕಷ್ಟವಾಗುವುದು. ದೇಹದ ಉಷ್ಣತೆ ಹೆಚ್ಚಾಗುವುದನ್ನು ತಪ್ಪಿಸಿಕೊಳ್ಳಲು 55 ದಾಟಿದವರು ಹೆಚ್ಚು ದ್ರವಾಹಾರ ಸೇವನೆ ಮಾಡಬೇಕು.
ನೀವು ಸೇವಿಸುತ್ತಿರುವ ಔಷಧಿ ಮತ್ತು ನೀವು ಹೊರಗಡೆ ಕಳೆಯುತ್ತಿರುವ ಸಮಯವು ದೇಹದ ಉಷ್ಣತೆ ಮೇಲೆ ಪರಿಣಾಮ ಬೀರುವುದು. ಮೂತ್ರವರ್ಧಕದಂತಹ ಕೆಲವೊಂದು ಔಷಧಿಗಳು ನಿರ್ಜಲೀಕರಣ ಉಂಟು ಮಾಡುವುದು ಮತ್ತು ಇದರಿಂದ ದೇಹದಲ್ಲಿ ಉಷ್ಣತೆ ಸಮಸ್ಯೆ ಬರುವುದು. ಕೆಲವೊಂದು ಆಂಟಿಬಯೋಟಿಕ್ ಕೂಡ ತಾಪಾಘಾತಕ್ಕೆ ಕಾರಣವಾಗಬಹುದು. ನೀವು ಔಷಧಿ ತೆಗೆದುಕೊಂಡ ಬಳಿಕ ದೇಹದ ತಾಪಮಾನವು ಹಿಂದಿಗಿಂತಲೂ ಹೆಚ್ಚಾಗುತ್ತಲಿದ್ದರೆ ಆಗ ನೀವು ವೈದ್ಯರ ಸಲಹೆ ಪಡೆಯಿರಿ. ವೈದ್ಯರು ನಿಮಗೆ ಬೇಸಗೆ ಸಮಯದಲ್ಲಿ ಬೇರೆ ಔಷಧಿ ಸೂಚಿಸಬಹುದು.
ಮನುಷ್ಯನ ದೇಹವು ಕೂಡ ಉಷ್ಣಾಂಶವನ್ನು ಹೊಂದಿರುತ್ತದೆ. ಇದು ಸಮತೋಲನದಲ್ಲಿ ಇದ್ದರೆ ಆಗ ಎಲ್ಲವೂ ಸರಿಯಾಗಿದೆ ಎಂದು ಹೇಳಬಹುದು. ಇದು ಅತಿಯಾಗಿದ್ದರೆ ಅಥವಾ ಕಡಿಮೆ ಇದ್ದರೆ ಏನೋ ಸಮಸ್ಯೆಯಾಗಿದೆ ಎಂದು ವೈದ್ಯರು ಸೂಚಿಸುವರು. ಹೀಗಾಗಿ ದೇಹದ ಉಷ್ಣಾಂಶವನ್ನು ಕಾಪಾಡಿಕೊಳ್ಳುವುದು ಕೂಡ ಅತೀ ಅಗತ್ಯವಾಗಿರುವುದು. ದೇಹದ ಉಷ್ಣಾಂಶವು ಹೆಚ್ಚಾದರೆ ಆಗ ಹಲವಾರು ಸಮಸ್ಯೆಗಳು ಕಾಡುವುದು.
ಮುಖ್ಯವಾಗಿ ದೇಹವು ಸಾಮಾನ್ಯಕ್ಕಿಂತಲೂ ಹೆಚ್ಚು ಉಷ್ಣತೆಯಲ್ಲಿದ್ದರೆ ಆಗ ಬೇರೆ ಅಂಗಗಳ ಮೇಲೆ ಕೂಡ ಇದು ಪರಿಣಾಮ ಬೀರುವುದು. ಅಂತಹ ಸಮಸ್ಯೆಗಳು ಯಾವುದು? ಹಾಗಾದರೆ ದೇಹದ ಉಷ್ಣತೆ ಎಷ್ಟರಮಟ್ಟಿಗೆ ಇರಬೇಕು ಎಂದು ನಿಮ್ಮ ಪ್ರಶ್ನೆಯಾಗಿರಬಹುದು. ಇದೆಲ್ಲವನ್ನೂ ನೀವು ಈ ಲೇಖನದಲ್ಲಿ ತಿಳಿದುಕೊಳ್ಳಿ.