Back
Home » ಸಮ್ಮಿಲನ
ಅಧ್ಯಯನದ ಪ್ರಕಾರ ಈ ಚೀನೀ ಆಟವನ್ನು ಆಡುವುದರಿಂದ ಮಾನಸಿಕ ಆರೋಗ್ಯ ಉತ್ತಮವಾಗುತ್ತದೆ
Boldsky | 9th Oct, 2019 11:15 AM

ಅತಿ ಜನಸಂಖ್ಯೆಯ ಪ್ರಮಾಣದಿಂದ ತತ್ತರಿಸುತ್ತಿರುವ ಚೀನಾದೇಶದ ಜನತೆಗೆ ಸ್ವಾಭಾವಿಕವಾಗಿಯೇ ಹಲವಾರು ತೊಂದರೆಗಳು ಹಾಗೂ ಒತ್ತಡಗಳು ಇರುತ್ತವೆ. ತನ್ಮೂಲಕ ಅಲ್ಲಿನ ನಡುವಯಸ್ಸು ದಾಟಿದವರಲ್ಲಿ ಹಾಗೂ ವೃದ್ದರಲ್ಲಿ ಸಾಮಾನ್ಯವಾಗಿ ಮಾನಸಿಕ ಖಿನ್ನತೆಯ ತೊಂದರೆಯೂ ಕಾಡುತ್ತದೆ. ಆದರೆ ಖಿನ್ನತೆ ಎದುರಾದಾಗ ಅವರು ಸುಮ್ಮನೇ ಅನುಭವಿಸುತ್ತಾ ಇನ್ನಷ್ಟು ಕೊರಗುವುದಿಲ್ಲ, ಬದಲಿಗೆ ಮಾಹ್ಜೋಂಗ್ ಎಂಬ ಆಟವನ್ನು ಆಡಿ ಈ ಖಿನ್ನತೆಯಿಂದ ಪಾರಾಗುತ್ತಾರೆ ಎಂದು ಒಂದು ಸಂಶೋಧನೆ ತಿಳಿಸಿದೆ.

Social Science & Medicine ಎಂಬ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ನಿಯಮಿತವಾಗಿ ಮಾಹ್ಜೋಂಗ್ ಆಟವನ್ನು ಆಡುತ್ತಾ ತಮ್ಮ ಮನಃಸ್ಥಿತಿಯನ್ನು ಕಾಯ್ದುಕೊಂಡವರು ಖಿನ್ನತೆಗೆ ಒಳಗಾಗುವ ಹಾಗೂ ಇತರ ಮಾನಸಿಕ ಒತ್ತಡಗಳಿಗೆ ಗುರಿಯಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಇದೊಂದು ಒಳಾಂಗಣ ಆಟವಾಗಿದ್ದು ಮೇಜಿನ ಮೇಲೆ ಇರಿಸಿದ ಚಿಕ್ಕ ಚಿಕ್ಕ ಮರದ ತುಂಡುಗಳಿದ್ದು ಪಿರಮಿಡ್ ಆಕೃತಿಯಲ್ಲಿ ಪೇರಿಸಿದ್ದು ಜೊತೆಜೊತೆಯಾಗಿರುವ ಎರಡನ್ನು ನಿವಾರಿಸುತ್ತಾ, ಕೆಳವಿನವುಗಳನ್ನು ಬೀಳಿಸದೇ ಇಡಿಯ ಪಿರಮಿಡ್ಡನ್ನು ಖಾಲಿ ಮಾಡುವುದು ಈ ಆಟದ ಗುರಿ. ಇದನ್ನು ಒಂಟಿಯಾಗಿಯೂ, ಜೊತೆಯಾಗಿಯೂ ಆಡಬಹುದು.

ಚೀನಾದಲ್ಲಿ ಮಾನಸಿಕ ತೊಂದರೆ ಹೆಚ್ಚು

ಜಾರ್ಜಿಯಾದ ಸಹ ಪ್ರೊಫೆಸರ್ ಆಗಿರುವ ಆಡಂ ಚೇನ್ ಈ ಅಧ್ಯಯನದಲ್ಲಿ ಸಹಾಕಾರ ಒದಗಿಸಿದ್ದು ತಮ್ಮ ಅನಿಸಿಕೆಗಳನ್ನು ಹೀಗೆ ವಿವರಿಸುತ್ತಾರೆ: "ಜಾಗತಿಕ ಆರ್ಥಿಕ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರೀಯ ಪ್ರವೃತ್ತಿಗಳು ವಯಸ್ಸಾದ ವಯಸ್ಕರಲ್ಲಿ, ವಿಶೇಷವಾಗಿ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಮಾನಸಿಕ ಆರೋಗ್ಯದ ಹೊರೆಯಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗಿವೆ" ಚೀನಾದಲ್ಲಿ ಮಾನಸಿಕ ತೊಂದರೆಗಳ ಪ್ರಕರಣಗಳು ಹೆಚ್ಚುತ್ತಿದ್ದು ವಿಶ್ವದ ಒಟ್ಟು ಪ್ರಕರಣಗಳಲ್ಲಿ ಶೇಕಡಾ 17 ರಷ್ಟಿದೆ ಎನ್ನಲಾಾಗಿದೆ.

ಈ ಅಧ್ಯಯನಕ್ಕಾಗಿ China Health and Retirement Longitudinal Study ಎಂಬ ಸಂಸ್ಥೆ ಚೀನಾದ ಹಲವೆಡೆಗಳಿಂದ ನಲವತ್ತೈದು ವರ್ಷ ಮೀರಿದ ಸುಮಾರು ಹನ್ನೊಂದು ಸಾವಿರ ಜನರ ಆರೋಗ್ಯದ ಅಂಕಿ ಅಂಶಗಳನ್ನು ಸಂಗ್ರಹಿಸಿ ವಿಶ್ಲೇಷಿಸಿತ್ತು.

ಈ ಅಧ್ಯಯನದಲ್ಲಿ ಖಿನ್ನತೆ ಪ್ರಕಟಿಸುವ ಸೂಚನೆಗಳನ್ನು ಹಾಗೂ ಆರೋಗ್ಯ ಸಂಬಂಧಿ ಇತರ ಅಂಕಿ ಅಂಶಗಳನ್ನು ಹಾಗೂ ಎಷ್ಟು ಸಮಯದ ನಂತರ ಪುನರಾವರ್ತಿಸುತ್ತದೆ, ಎಷ್ಟು ಬಾರಿ ಎದುರಾಗಿದೆ, ಸಮಾಜದಲ್ಲಿ ಈ ವ್ಯಕ್ತಿಗಳೆಷ್ಟು ಭಾಗಿಯಾಗುತ್ತಾರೆ, ಎಷ್ಟು ಜನರನ್ನು ಭೇಟಿಯಾಗುತ್ತಾರೆ, ಎಷ್ಟು ಕಾಲ ಮಾಹ್ಜೋಂಗ್ ಆಡುತ್ತಾರೆ ಹಾಗೂ ಸಮಾಜದ ಕಾರ್ಯದಲ್ಲಿ ಸ್ವಯಂಸೇವೆ ಸಲ್ಲಿಸುತ್ತಾರೆ, ಮೊದಲಾದ ಅಂಶಗಳನ್ನು ಪರಿಗಣಿಸಲಾಗಿತ್ತು.

ಮಾಹ್ಜೋಂಗ್ ಆಟಗಾರರು ಹೆಚ್ಚು ಜನರೊಂದಿಗೆ ಬರೆಯುತ್ತಾರೆ

ಅಚ್ಚರಿ ಎಂದರೆ, ಉತ್ತಮ ಮಾನಸಿಕ ಆರೋಗ್ಯ ಹೊಂದಿರುವವರಲ್ಲಿ ಹೆಚ್ಚಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವವರು ಮತ್ತು ಹೆಚ್ಚು ಸತತವಾಗಿ ಇತರರೊಂದಿಗೆ ಬೆರೆತಿರುವವರೇ ಆಗಿದ್ದರು. ವಿಶೇಷವಾಗಿ, ನಗರ ಪ್ರದೇಶಗಳಲ್ಲಿ, ಜನಪ್ರಿಯ ಮಾಹ್ಜೋಂಗ್ ಆಟವನ್ನು ಇಬ್ಬರು ಅಥವಾ ಇನ್ನೂ ಹೆಚ್ಚು ಜನರೊಂದಿಗೆ ಆಡುವವರು ಕಡಿಮೆ ಖಿನ್ನತೆಗೆ ಒಳಗಾಗಿರುವುದು ಕಂಡುಬಂದಿದೆ.

ಸ್ಪರ್ಧಾತ್ಮಕ ಆಟ

"ಹೆಚ್ಚು ಆಶ್ಚರ್ಯಕರ ಸಂಗತಿಯೆಂದರೆ, ಗ್ರಾಮೀಣ ಹಿರಿಯ ಪ್ರತಿಕ್ರಿಯಿಸುವವರಲ್ಲಿ ಮಾಹ್ಜೋಂಗ್ ಆಟವು ಉತ್ತಮ ಮಾನಸಿಕ ಆರೋಗ್ಯದೊಂದಿಗೆ ಸಂಬಂಧ ಹೊಂದಿಲ್ಲ. ಒಂದು ನಂಬಿಕೆ ಪ್ರಕಾರ ಮಹ್ಜಾಂಗ್ ಆಟವು ಹೆಚ್ಚು ಸ್ಪರ್ಧಾತ್ಮಕವಾಗಿರುತ್ತದೆ ಮತ್ತು ಕೆಲವೊಮ್ಮೆ ಗ್ರಾಮೀಣ ಚೀನಾದಲ್ಲಿ ಜೂಜಾಟದ ಸಾಧನವಾಗಿ ಪರಿಣಮಿಸುತ್ತದೆ ಎನ್ನಲಾಗಿದೆ.

   
 
ಹೆಲ್ತ್