Back
Home » ಇತ್ತೀಚಿನ
'ಕೇಬಲ್ ಟಿವಿ' ಶವಪೆಟ್ಟಿಗೆಗೆ ಟ್ರಾಯ್‌ನ ಕೊನೆ ಮೊಳೆ!
Gizbot | 9th Oct, 2019 05:46 PM
 • ಚಂದಾದಾರಿಕೆಯನ್ನು ತ್ಯಜಿಸಿದ್ದಾರೆ.

  ಹೌದು ವರದಿಯ ಪ್ರಕಾರ, 25% ರಷ್ಟು ಕೇಬಲ್ ಟಿವಿ ಚಂದಾದಾರರು ಟ್ರಾಯ್‌ನ ಹೊಸ ನಿಯಮಗಳ ನಂತರ ತಮ್ಮ ಚಂದಾದಾರಿಕೆಯನ್ನು ತ್ಯಜಿಸಿದ್ದಾರೆ. ಹೆಚ್ಚಿನವರು ಕೇಬಲ್ ಟಿವಿಯನ್ನು ಸಂಪರ್ಕ ಕಡಿತಗೊಳಿಸಿದ್ದಾರೆ ಮತ್ತು ಡಿಟಿಎಚ್ ಆಯ್ಕೆ ಮಾಡಿಕೊಂಡಿದ್ದಾರೆ ಅಥವಾ ಸ್ಟ್ರೀಮಿಂಗ್ ಸೇವೆಗಳ ಪರವಾಗಿ ಹೋಗಿದ್ದಾರೆ. ಮಾಸಿಕ ಬಿಲ್ ಹೆಚ್ಚಳವು ಕೇಬಲ್ ಟಿವಿ ಸಂಪರ್ಕವನ್ನು ಕಡಿತಗೊಳಿಸಲು ಏಕೈಕ ಕಾರಣವಾಗಿ ಕಾಣುತ್ತಿದೆ. ಜನರನ್ನು ಹಿಂಡಿ ಹಿಪ್ಪೆಯಾಗಿಸುವ ಸರ್ಕಾರದ ನಿಯಮಗಳಲ್ಲಿ 'ಕೇಬಲ್ ಟಿವಿ' ನಿಯಮವು ಸಹ ಒಂದೆನಿಸುವಷ್ಟು ಈಗ ಕಷ್ಟ ತಂದೊಡ್ಡಿದೆ.


 • ಸಾರ್ವತ್ರಿಕವಾಗಿರದ ಸಮಯದಲ್ಲಿ

  ಯಾವುದೇ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಅಥವಾ ಕಂಪ್ಯೂಟರ್‌ಗಳು ಜನಪ್ರಿಯವಾಗದ ಹಾಗೂ ಸಾರ್ವತ್ರಿಕವಾಗಿರದ ಸಮಯದಲ್ಲಿ ಕೇಬಲ್ ಟಿವಿಯ ಮನರಂಜನೆಯ ಏಕೈಕ ಮೂಲವಾಗಿತ್ತು. ಇಂತಹ ಕೇಬಲ್ ಟಿವಿ ಸೇವೆ ಇದೀಗ ಜನರಿಂದ ದೂರವಾಗುತ್ತಿದೆ. ಪ್ರತಿ ಚಾನೆಲ್‌ಗೆ ಹಣ ಪಾವತಿಸುವ ಯೋಜನೆಯನ್ನು ಪರಿಚಯಿಸುವ ಮೂಲಕ ಟ್ರಾಯ್ ಅಕ್ಷರಶಃ ಕೇಬಲ್ ಟಿವಿಯನ್ನು ಕೊಂದಿದೆಯೇ ಎಂಬ ಅನುಮಾನ ಮೂಡುತ್ತಿದೆ. ಹೊಸ ನಿಯಮದಿಂದ ಸರ್ಕಾರಕ್ಕೇ ಆಗಲಿ ಅಥವಾ ಸಾರ್ವಜನಿಕರಿಗೆ ಆಗಲಿ ಆಗುತ್ತಿರುವ ಲಾಭ ಏನು ಎಂದು ಪ್ರಶ್ನೆ ಕಾಡುತ್ತಿದೆ.


 • ಕೇಬಲ್ ಟಿವಿ

  2000ನೇ ವರ್ಷವು ಬಹುಶಃ ಭಾರತೀಯ ಕೇಬಲ್ ಟಿವಿ ಮಾರುಕಟ್ಟೆಯಲ್ಲಿ ಪ್ರಮುಖ ಸಮಯವಾಗಿತ್ತು. ಮೊದಲ ಬಾರಿಗೆ ಬಳಕೆದಾರರು ಹೆಚ್ಚು ಹೂಡಿಕೆ ಮಾಡದೆ ಬಣ್ಣದ ಟಿವಿಗಲ್ಲಿ ಅನೇಕ ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳನ್ನು ವೀಕ್ಷಿಸಲು ಸಾಧ್ಯವಾಯಿತು. ಕ್ರಿಕೆಟ್‌ನಿಂದ ಕಾರ್ಟೂನ್‌ಗಳವರೆಗೆ ಸುದ್ದಿಗಳವರೆಗೆ ಕೇಬಲ್ ಟಿವಿಯಲ್ಲಿ ಎಲ್ಲವೂ ಇತ್ತು. ಹಾಗೆಂದೂ ಈಗ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರ ಸ್ಪಷ್ಟ. ಈಗಲೂ ಕೇಬಲ್ ಟಿವಿ ಜನಪ್ರಿಯವಾಗಿದೆ. ಆದರೆ, ಇದನ್ನು ಅರಿಯದ ಟ್ರಾಯ್ ನ್ಯಾಯಸಮ್ಮತ ಎಂದು ತಿಳಿದು ಚಂದಾರರರಿಗೆ ಸಂಕಷ್ಟ ತಂದೊಡ್ಡಿದೆ.


 • ಹೊಸ ನಿಯಮ

  ವಾಸ್ತವವಾಗಿ ಕೇಬಲ್ ಟಿವಿ ಬಳಕೆದಾರರಿಗಾಗಿ ಹೊಸ ನಿಯಮಗಳನ್ನು ಘೋಷಿಸಿದ್ದು, ಕೇಬಲ್ ಟಿವಿ ಸೇವಾ ಪೂರೈಕೆದಾರರು ತಯಾರಿಸಿದ ಪ್ಯಾಕೇಜ್‌ಗಳಲ್ಲಿ ನಿಜವಾಗಿ ಅಗತ್ಯವಿರುವ ಚಾನಲ್‌ಗಳಿಗೆ ಚಂದಾದಾರರಾಗಬಹುದು ಎಂದು. ಸಿದ್ಧಾಂತದಲ್ಲಿ, ಹೊಸ ನಿಯಮಗಳು ಗ್ರಾಹಕರಿಗೆ ತಮ್ಮ ಕೇಬಲ್ ಟಿವಿ ಬಿಲ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದಾಗಿತ್ತು. ಆದರೆ, ಇದು ವಾಸ್ತವವಲ್ಲ. ಇಲ್ಲಿ ಸರ್ಕಾರಕ್ಕೆ ಮತ್ತು ಸೇವಾ ಪೂರೈಕೆದಾರರಿಗಷ್ಟೇ ಸಹಾಯವಾಗುತ್ತಿದೆ. ಇದರಿಂದ ಸೊರಗಿರುವವರು ಕೇಬಲ್ ಟಿವಿ ಚಂದಾದಾರರು ಮಾತ್ರ.


 • 250 ರೂ. ಪಾವತಿಸಿ

  ನಾನು ಈ ಮೊದಲು ತಿಂಗಳಿಗೆ ಕೇವಲ 250 ರೂ. ಪಾವತಿಸಿ ಕೇಬಲ್ ಸೇವೆ ಪಡೆಯುತ್ತುದೆ. ಆದರೆ, ಟ್ರಾಯ್ ಹೊಸ ನಿಯಮಗಳನ್ನು ಪ್ರಾರಂಭಿಸಿದ ತಕ್ಷಣದಿಂದ ಕೇಬಲ್ ಟಿವಿ ನೋಡಲು ಸಾಧ್ಯವಾಗದಂತಾಗಿದೆ. ನನ್ನ ಆಯ್ಕೆಯ ಟಿವಿ ಚಾನಲ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ನಾನೀಗ 500 ರೂ.ಗಿಂತಲೂ ಹೆಚ್ಚು ಖರ್ಚು ಮಾಡಬೇಕಾಗುತ್ತಿದೆ. ಇದರಿಂದ ನಾವು ಅಂತಿಮವಾಗಿ ಕೇಬಲ್ ಟಿವಿ ನೋಡುವುದನ್ನೇ ಬಿಟ್ಟುಬಿಟ್ಟೆ. ಇದೇ ರೀತಿ ಹಲವರಿಗೆ ಅನುಭವವಾಗಿದೆ ಎಂದು ಕೇಬಲ್ ಟಿವಿ ಸೇವೆಯಿಂದ ಕಡಿತಗೊಂದಿರುವ ಚಂದಾದಾರರೋರ್ವರು ನಮಗೆ ಹೇಳಿದ್ದಾರೆ.


 • ಕೇಬಲ್ ಟಿವಿಗೆ

  ಹಾಗೆಂದು,ಕೇಬಲ್ ಟಿವಿ ಸೇವೆಯಿಂದ ವಂಚಿತರಾಗಿ ಜನರು ಮನರಂಜನೆಯಿಂದ ಮುಕ್ತಿಯನ್ನು ಹೊಂದಿಲ್ಲ. ಬದಲಾಗಿ ಮೊಬೈಲ್ ಸ್ಟ್ರೀಮಿಂಗ್ ಸೇವೆಗಳತ್ತ ಮುಖ ಮಾಡಿದ್ದಾರೆ. ಆದರೆ, ಮನೆಯ ಎಲ್ಲರಿಗೂ ಇದು ಅನ್ವಯವಾಗುವುದಿಲ್ಲವಾದುದರಿಂದ ಸ್ವಲ್ಪ ಜನ ಇಷ್ಟವಿಲ್ಲದಿದ್ದರೂ ಕೇಬಲ್ ಟಿವಿಗೆ ಚಂದಾದಾರರಾಗಿದ್ದಾರೆ. ಒಟ್ಟಿನಲ್ಲಿ ಟ್ರಾಯ್ ತಂದ ಕೇಬಲ್ ಟಿವಿ ನಿಯಮಗಳು ಗ್ರಾಹಕರನ್ನು ಮತ್ತೊಂದೆಡೆಗೆ ಸೆಳೆಯಲು ಪ್ರೋತ್ಸಾಹಿಸಿದಂತಾಗಿದೆ. ಇದರಿಂದ ಯಾರಿಗೆ ಲಾಭ ಎಂದು ಹೇಳಲು ಸಾಧ್ಯವಿಲ್ಲ, ಆದರೆ, ಖಂಡಿತವಾಗಿ ಕೆಲವರಿಗೆ ನೇರವಾಗಿ ಲಾಭವಾಗುತ್ತಿದೆ.


 • ಅಂತರ್ಜಾಲ ದರಗಳು

  ಜಿಯೋ, ಏರ್‌ಟೆಲ್, ನೆಟ್‌ಫ್ಲಿಕ್ಸ್ ಮತ್ತು ಹಾಟ್‌ಸ್ಟಾರ್ ಸೇರಿದಂತೆ ಹಲವು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಕೇಬಲ್ ಟಿವಿ ಗ್ರಾಹಕರನ್ನು ತಮ್ಮತ್ತ ಸೆಳೆಯುತ್ತವೆ. ಕೈಗೆಟುಕುವ ಅಂತರ್ಜಾಲ ದರಗಳು ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳ ಜನಪ್ರಿಯತೆಯ ಹೆಚ್ಚಳ ಮತ್ತು ಟ್ರಾಯ್‌ನ ನಿಯಮಗಳು ಕೇಬಲ್ ಟಿಯಿಂದ ಜನರನ್ನು ದೂರಕ್ಕೆ ತಳ್ಳುತ್ತಿವೆ. ಇದು ಭವಿಷ್ಯದಲ್ಲಿ ಲಾಭವೋ ನಷ್ಟವೋ ತಿಳಿಯಲು ಸಾಧ್ಯವಿಲ್ಲ. ಆದರೆ, ಟ್ರಾಯ್‌ನ ಹೊಸ ನಿಮಯದಿಂದಾಗಿ ಕೇಬಲ್ ಟಿವಿಗಾಗಿ ಶವಪೆಟ್ಟಿಗೆ ತಯಾರಾಗಿದೆ. ಜನರು ಬೆಂಕಿಯಿಂದ ಬಾಣೆಲೆಗೆ ಬಿದ್ದು ಪರದಾಡುವಂತಾಗಿದೆ.
ಯಾವುದೇ ಸರ್ಕಾರ ನೀತಿ ನಿಯಮಗಳನ್ನು ರೂಪಿಸುವುದು ಆ ವ್ಯವಸ್ಥೆಗೆ ಮತ್ತು ಸಾರ್ವಜನಿಕರಿಗೆ ಸಹಾಯವಾಗುವಂತಿರಬೇಕು. ಆದರೆ, ಆ ನಿಯಮಗಳು ಸಾರ್ವಜನಿಕರಿಗೆ ಕಷ್ಟವನ್ನು ತಂದೊಡ್ಡಿದರೆ ಹೇಗಾಗಬಹುದು ಎಂಬುದಕ್ಕೆ ಹೊಸ ಕೇಬಲ್ ಮತ್ತು ಡಿಟಿಎಚ್ ನಿಯಮಗಳೇ ಸಾಕ್ಷಿ. ಏಕೆಂದರೆ, ಇದೀಗ ಕೇಬಲ್ ಟಿವಿ ಎಂಬ ಪದವು ಅನೇಕರಿಗೆ ಭಯ ಮೂಡುವಂತೆ ಮಾಡುತ್ತಿದೆ. ಹೊಸ ಕೇಬಲ್ ನಿಯಮವು ಜಾರಿಯಾದ ನಂತರ ಪ್ರತಿ ನಾಲ್ವರು ಕೇಬಲ್ ಬಳಕೆದಾರರಲ್ಲಿ ಓರ್ವರು ಕೇಬಲ್ ಸೇವೆಯಿಂದ ಹೊರನಡೆದಿದ್ದಾರೆ ಎಂದು ಹೇಳಲಾಗಿದೆ.

   
 
ಹೆಲ್ತ್