Back
Home » Car News
ಚೀನಾಕ್ಕೆ ಕಾಲಿಟ್ಟ 2020ರ ಕ್ರೆಟಾ, ಭಾರತದಲ್ಲಿ ಬಿಡುಗಡೆ ಯಾವಾಗ ?
DriveSpark | 9th Oct, 2019 01:08 PM
 • ಚೀನಾಕ್ಕೆ ಕಾಲಿಟ್ಟ 2020ರ ಕ್ರೆಟಾ, ಭಾರತದಲ್ಲಿ ಬಿಡುಗಡೆ ಯಾವಾಗ ?

  ಮಾರುಕಟ್ಟೆಯಲ್ಲಿರುವ ಕ್ರೆಟಾ ಕಾರಿಗೆ ಹೋಲಿಸಿದರೆ, ಹೊಸ ತಲೆಮಾರಿನ ಕ್ರೆಟಾ ಸಂಪೂರ್ಣವಾಗಿ ಭಿನ್ನವಾಗಿದೆ. ಹೊರಭಾಗದಲ್ಲಿ ಹಾಗೂ ಒಳಭಾಗದಲ್ಲಿ ವಿಭಿನ್ನತೆಯನ್ನು ಹೊಂದಿದೆ. ಹೊಸ ಕ್ರೆಟಾ ಕಾರಿನ ಹೊರಭಾಗದ ವಿನ್ಯಾಸವನ್ನು ಹ್ಯುಂಡೈನ ಪ್ಯಾಲಿಸೆಡ್ ಎಸ್‍‍ಯುವಿಯಿಂದ ಪಡೆಯಲಾಗಿದೆ.


 • ಚೀನಾಕ್ಕೆ ಕಾಲಿಟ್ಟ 2020ರ ಕ್ರೆಟಾ, ಭಾರತದಲ್ಲಿ ಬಿಡುಗಡೆ ಯಾವಾಗ ?

  ಪ್ಯಾಲಿಸೆಡ್ ಸದ್ಯಕ್ಕೆ ಮಾರಾಟವಾಗುತ್ತಿರುವ ಹ್ಯುಂಡೈ ಕಂಪನಿಯ ದೊಡ್ಡ ಗಾತ್ರದ ಎಸ್‍‍ಯುವಿಯಾಗಿದೆ. ಹೊಸ ಕ್ರೆಟಾ ಕಾರಿನ ಮುಂಭಾಗದಲ್ಲಿ ದೊಡ್ಡ ಗ್ರಿಲ್, ಬಾನೆಟ್ ಕೆಳಗೆ ಹೆಡ್‍‍ಲ್ಯಾಂಪ್ ಸೆಟ್‍ಅಪ್, ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍‍‍ನ ಮೇಲೆ ಎಲ್‍ಇ‍‍ಡಿ ಡಿ‍ಆರ್‍ಎಲ್, ಎಲ್‍ಇ‍‍ಡಿ ಟೇಲ್ ಲ್ಯಾಂಪ್, ಶಾರ್ಕ್ ಫಿನ್ ಆಂಟೆನಾ ಮುಂತಾದ ಫೀಚರ್‍‍ಗಳಿವೆ.


 • ಚೀನಾಕ್ಕೆ ಕಾಲಿಟ್ಟ 2020ರ ಕ್ರೆಟಾ, ಭಾರತದಲ್ಲಿ ಬಿಡುಗಡೆ ಯಾವಾಗ ?

  ಹೊಸ ಕ್ರೆಟಾ ಕಾರು 17 ಇಂಚಿನ ಅಲಾಯ್ ವ್ಹೀಲ್ ಹೊಂದಿರಲಿದೆ. ಇಂಟಿರಿಯರ್‍‍ನಲ್ಲಿ ಹೊಸ ವಿನ್ಯಾಸದ ಸ್ಟೀಯರಿಂಗ್ ವ್ಹೀಲ್, ಸೆಂಟ್ರಲ್ ಏರ್ ವೆಂಟ್, ಸೆಂಟ್ರಲ್ ಡಿಸ್‍‍ಪ್ಲೇ ಹಾಗೂ ಟ್ವಿನ್ ಸೆಗ್‍‍ಮೆಂಟ್ ಸ್ಕ್ರೀನ್ ಹೊಂದಿರುವ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸೇರಿದಂತೆ ಹಲವಾರು ಫೀಚರ್‍‍ಗಳಿವೆ.


 • ಚೀನಾಕ್ಕೆ ಕಾಲಿಟ್ಟ 2020ರ ಕ್ರೆಟಾ, ಭಾರತದಲ್ಲಿ ಬಿಡುಗಡೆ ಯಾವಾಗ ?

  ಎಡಭಾಗದಲ್ಲಿರುವ ಸ್ಕ್ರೀನ್ ಸ್ಪೀಡೋಮೀಟರ್ ಹಾಗೂ ಫ್ಯೂಯಲ್ ಲೆವೆಲ್ ಅನ್ನು ತೋರಿಸುತ್ತದೆ. ಬಲಗಡೆಯಿರುವ ಸ್ಕ್ರೀನ್ ಟ್ಯಾಕೋಮೀಟರ್ ಹಾಗೂ ಎಂಜಿನ್ ಟೆಂಪರೆಚರ್ ಬಾರ್‍‍ಗಳನ್ನು ಹೊಂದಿದೆ. ಸುರಕ್ಷತಾ ಫೀಚರ್‍‍ಗಳಿಗಾಗಿ ಆಟೋ ಹೋಲ್ಡ್ ಫಂಕ್ಷನ್‍‍ನೊಂದಿಗೆ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, 360 ಡಿಗ್ರಿ ಕ್ಯಾಮೆರಾ, ಕ್ರೂಸ್ ಕಂಟ್ರೋಲ್‍‍ಗಳಿವೆ.


 • ಚೀನಾಕ್ಕೆ ಕಾಲಿಟ್ಟ 2020ರ ಕ್ರೆಟಾ, ಭಾರತದಲ್ಲಿ ಬಿಡುಗಡೆ ಯಾವಾಗ ?

  ಈ ಕಾರಿನ ಮುಂಭಾಗದಲ್ಲಿ ಮ್ಯಾನುವಲ್ ಹೈಟ್ ಅಡ್ಜಸ್ಟಬಲ್ ಸೀಟುಗಳಿವೆ. ಇದರ ಜೊತೆಗೆ ಕಿಯಾ ಸೆಲ್ಟೋಸ್‍‍ನಲ್ಲಿರುವಂತೆ ಕ್ಯಾಮೆರಾದೊಂದಿಗೆ ಒಆರ್‌ವಿಎಂ - ಇಂಡಿಕೇಟರ್ ಅನ್ನು ಆನ್ ಮಾಡಿದಾಗ ಚಾಲಕನಿಗೆ ಸೈಡ್ ವೀವ್ ಡಿಸ್‍‍ಪ್ಲೇ ನೀಡುವಂತಹ ಫೀಚರ್ ಅಳವಡಿಸಲಾಗಿದೆ.


 • ಚೀನಾಕ್ಕೆ ಕಾಲಿಟ್ಟ 2020ರ ಕ್ರೆಟಾ, ಭಾರತದಲ್ಲಿ ಬಿಡುಗಡೆ ಯಾವಾಗ ?

  ಮಾರುಕಟ್ಟೆಯಲ್ಲಿರುವ ಕ್ರೆಟಾ ಕಾರಿಗೆ ಹೋಲಿಸಿದರೆ 2020ರ ಹೊಸ ಕ್ರೆಟಾ ಕಾರಿನ ಗುಣಮಟ್ಟ, ಫಿಟ್ ಮತ್ತು ಫಿನಿಶ್‍‍ನಲ್ಲಿ ಭಾರೀ ಪ್ರಮಾಣದ ಬದಲಾವಣೆಗಳನ್ನು ಮಾಡಲಾಗಿದೆ. ಮಾರುಕಟ್ಟೆಯಲ್ಲಿರುವ ಕ್ರೆಟಾ ಕಾರಿಗೆ ಹೋಲಿಸಿದರೆ, ಹೊಸ ತಲೆಮಾರಿನ ಕಾರು ಹೆಚ್ಚು ಉದ್ದ ಹಾಗೂ ಅಗಲವಾಗಿರಲಿದೆ.

  MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!


 • ಚೀನಾಕ್ಕೆ ಕಾಲಿಟ್ಟ 2020ರ ಕ್ರೆಟಾ, ಭಾರತದಲ್ಲಿ ಬಿಡುಗಡೆ ಯಾವಾಗ ?

  ಹೊಸ ಕಾರು 4,300 ಎಂಎಂ ಉದ್ದ, 1,790 ಎಂಎಂ ಅಗಲ ಹಾಗೂ 1,620 ಎಂಎಂ ಎತ್ತರವನ್ನು ಹೊಂದಿದೆ. ವ್ಹೀಲ್‌ಬೇಸ್ 2,610 ಎಂಎಂ ಇದ್ದು, ಮಾರುಕಟ್ಟೆಯಲ್ಲಿರುವ ಕಾರಿಗಿಂತ ಸುಮಾರು 20 ಎಂಎಂ ಹೆಚ್ಚು ಉದ್ದವಿದೆ. ಇದರಿಂದಾಗಿ ಈ ಕಾರಿನಲ್ಲಿ ಪ್ರಯಾಣಿಸುವವರಿಗೆ ಹೆಚ್ಚಿನ ಸ್ಪೇಸ್ ಹಾಗೂ ಆರಾಮದಾಯಕ ಅನುಭವ ಸಿಗಲಿದೆ.

  MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ


 • ಚೀನಾಕ್ಕೆ ಕಾಲಿಟ್ಟ 2020ರ ಕ್ರೆಟಾ, ಭಾರತದಲ್ಲಿ ಬಿಡುಗಡೆ ಯಾವಾಗ ?

  ಕಿಯಾ ಸೆಲ್ಟೋಸ್‌ನಲ್ಲಿರುವಂತಹ ಎಂಜಿನ್ ಅನ್ನು 2020ರ ಹೊಸ ಹ್ಯುಂಡೈ ಕ್ರೆಟಾ ಕಾರಿನಲ್ಲೂ ಅಳವಡಿಸಲಾಗಿದೆ. ಈ ಎಂಜಿನ್ 2 ಪೆಟ್ರೋಲ್ ಹಾಗೂ 1 ಡೀಸೆಲ್ ಎಂಜಿನ್‍ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಈ ಎಂಜಿನ್ ಬಿಎಸ್ 6 ಮಾಲಿನ್ಯ ನಿಯಮಗಳಿಗೆ ತಕ್ಕಂತೆ ಇರಲಿದೆ.

  MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್


 • ಚೀನಾಕ್ಕೆ ಕಾಲಿಟ್ಟ 2020ರ ಕ್ರೆಟಾ, ಭಾರತದಲ್ಲಿ ಬಿಡುಗಡೆ ಯಾವಾಗ ?

  1.5 ಲೀಟರಿನ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 113 ಬಿ‍‍ಹೆಚ್‍‍ಪಿ ಪವರ್ ಹಾಗೂ 144 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ ಸಿವಿಟಿ ಅಥವಾ ಎಂ‍ಟಿ ಅಳವಡಿಸಲಾಗುವುದು. 1.5 ಲೀಟರಿನ ಟರ್ಬೊ ಡೀಸೆಲ್ ಎಂಜಿನ್ 113 ಬಿ‍‍ಹೆಚ್‍‍ಪಿ ಪವರ್ ಹಾಗೂ 250 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.


 • ಚೀನಾಕ್ಕೆ ಕಾಲಿಟ್ಟ 2020ರ ಕ್ರೆಟಾ, ಭಾರತದಲ್ಲಿ ಬಿಡುಗಡೆ ಯಾವಾಗ ?

  ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಥವಾ 6 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗುವುದು. 5 ಸೀಟುಗಳನ್ನು ಹೊಂದಿರುವ 2020ರ ಹೊಸ ಕ್ರೆಟಾ ಕಾರಿನ ಬೆಲೆ ರೂ.10ಲಕ್ಷಗಳಿಂದ ರೂ.15 ಲಕ್ಷಗಳಾಗುವ ಸಾಧ್ಯತೆಗಳಿವೆ. ಮಹೀಂದ್ರಾ ಎಕ್ಸ್‌ಯುವಿ 500ನಂತಹ ಕಾರುಗಳಿಗೆ ಪೈಪೋಟಿ ನೀಡಲು ಮುಂಬರುವ ದಿನಗಳಲ್ಲಿ 7 ಸೀಟುಗಳನ್ನು ಹೊಂದಿರುವ ಕ್ರೆಟಾ ಕಾರ್ ಅನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

  Source: Rushlane
ಹೊಸತಲೆಮಾರಿನ ಹ್ಯುಂಡೈ ಕ್ರೆಟಾ ಕಾರ್ ಅನ್ನು ಸದ್ಯಕ್ಕೆ ಚೀನಾದಲ್ಲಿ ಮಾರಾಟ ಮಾಡಲಾಗುತ್ತಿದೆ. ಚೀನಾದಲ್ಲಿ ಈ ಕಾರಿನ ಬೆಲೆಯು ಸುಮಾರು ರೂ.13 ಲಕ್ಷಗಳಾಗಿದೆ. ಭಾರತದಲ್ಲಿ ಹೊಸ 2020 ಹ್ಯುಂಡೈ ಕ್ರೆಟಾ ಕಾರ್ ಅನ್ನು ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸಲಾಗುವುದು.

   
 
ಹೆಲ್ತ್