Back
Home » ಸಮ್ಮಿಲನ
ಜ್ಯೋತಿಶಾಸ್ತ್ರದ ಪ್ರಕಾರ ಅತೀ ಭ್ರಷ್ಟ ಗುಣಗಳನ್ನು ಹೊಂದಿರುವ ರಾಶಿಗಳು
Boldsky | 9th Oct, 2019 01:11 PM
 • ತುಲಾ ರಾಶಿ

  ಆಕರ್ಷಕ ಮತ್ತು ಅದ್ಭುತ ವ್ಯಕ್ತಿತ್ವ ಹೊಂದಿರುವ ತುಲಾ ರಾಶಿಯವರು ಸ್ವಯಂ ಸೇವಕರಂತೆ ಮೇಲ್ನೋಟಕ್ಕೆ ಕಾಣುತ್ತಾರೆ. ಅದರೆ ಇವರು ಕೆಲವು ಸಂದರ್ಭಗಳಲ್ಲಿ ಮಾಡುವ ಕೃತ್ಯಗಳು ಜನರ ಕಣ್ಣಿಗೆ ತಪ್ಪಾಗಿ, ಖಂಡನೀಯವಾಗಿ ಕಂಡರೂ ಅದಕ್ಕೆ ಮಣೆಹಾಕದೇ ತಮ್ಮದೇ ಮಾರ್ಗದಲ್ಲಿ ನಡೆಯುತ್ತಾರೆ. ಮತ್ತೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದುವುದು ತಪ್ಪಾದರೂ ಹಾಗೆಯೇ ಮುಂದುವರೆಯುತ್ತಾರೆ, ಉದ್ಧಾರದ ಗುಣಗಳಿಲ್ಲದ ಕೇವಲ ಮೇಲ್ನೋಟಕ್ಕೆ ಉತ್ತಮವಾಗಿ ಕಾಣುವ ವ್ಯಕ್ತಿಗಳೊಂದಿಗೆ ಇವರು ಸಂಪರ್ಕವನ್ನು ಹೊಂದುತ್ತಾರೆ. ಯಾವುದೇ ಲಾಭವಿಲ್ಲದಿದ್ದರೂ ಬಯಸಿದ್ದನ್ನು ಸುಳ್ಳು ಹೇಳಿಯಾದರೂ ಅಥವಾ ಮೋಸ ಮಾಡಿ ಬೇಕಾದರೂ ಪಡೆಯಲು ಇಷ್ಟಪಡುತ್ತಾರೆ, ಪಡೆದೇ ತೀರುತ್ತಾರೆ.


 • ಧನು ರಾಶಿ

  ಧನು ರಾಶಿಯವರು ಅಸಮಂಜಸ ಸ್ವಭಾವದವರು. ಸಮಯಕ್ಕೆ ತಕ್ಕಂತೆ ಅಗತ್ಯಗಳಿಗೆ ಅನುಸಾರವಾಗಿ ನೈತಿಕ ಸಂಹಿತೆಯನ್ನು ಬದಲಾಯಿಸಿಕೊಳ್ಳುತ್ತಾರೆ. ಕೆಲವು ಸಂದರ್ಭ ಅವರು ಸುಳ್ಳು ಹೇಳುವುದಿಲ್ಲ, ಆದರೆ ಮರುಕ್ಷಣವೇ ತಮ್ಮ ಕೆಲಸ ಆಗಲು ಗುಮಾಸ್ತರ ಬಳಿ ಉದ್ದದ ಕತೆ ಹೇಳಲು ಮುಂದಾಗುತ್ತಾರೆ. ಅವರಿಗೆ ಸರಿಹೊಂದುವ ಕ್ಷಣಕ್ಕೆ ಅನುಗುಣವಾಗಿ ಸತ್ಯ, ಸುಳ್ಳುಗಳನ್ನು ಅಥವಾ ನೇರನಡೆ ಮತ್ತು ಅಡ್ಡದಾರಿಗಳನ್ನು ಹಿಡಿಯಲು ಮುಂದಾಗುತ್ತಾರೆ. ಇವರು ಸಂಪೂರ್ಣವಾಗಿ ಭಿನ್ನವಾದ ನೈತಿಕತೆಯನ್ನೇ ಅನುಸರಿಸುತ್ತಾರೆ. ಅವರ ನೀತಿ ಸಂಹಿತೆಗಳು ಸಮಯಾನುಸಾರ ಕ್ಷಣಮಾತ್ರದಲ್ಲೇ ಬದಲಾಗುತ್ತಿರುತ್ತದೆ.


 • ಮಿಥುನ ರಾಶಿ

  ಜ್ಯೋತಿಶಾಸ್ತ್ರದ ಪ್ರಕಾರ ಮಿಥುನ ರಾಶಿಯವರಲ್ಲಿ ಸ್ಥಿರತೆ ಅಥವಾ ನಿಷ್ಠೆ ತೀರಾ ಕಡಿಮೆ ಎಂದೇ ಹೇಳಬಹುದು. ಈ ಕಾರಣದಿಂದಲೇ ಇವರು ಒಂದೇ ತೆರನಾದ ನಂಬಿಕೆಗಳಿಗೆ ಅಂಟಿಕೊಳ್ಳುವುದು ಬಹಳ ಕಷ್ಟ ಅಥವಾ ಸವಾಲಾಗಿರುತ್ತದೆ. ಇವರಿಗೆ ಬೇಸರ ಅಥವಾ ನೀರಸ ಎನಿಸಿದರೆ, ಇದು ತಮಗೆ ಸರಿಹೊಂದುವುದಿಲ್ಲವಾದರೆ ತಾವು ಇಷ್ಟು ದಿನ ಪಾಲಿಸುತ್ತಿದ್ದ ನೈತಿಕ ಸಂಹಿತೆಯನ್ನು ಸಂಪೂರ್ಣವಾಗಿ ಬದಲಿಸಿ, ವಿಭಿನ್ನವಾದ ಸಂಹಿತೆಯನ್ನೇ ಪಾಲಿಸಲು ಆರಂಭಿಸುತ್ತಾರೆ. ಇವರಿಗೆ ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸ ಚೆನ್ನಾಗಿಯೇ ತಿಳಿದಿದೆ, ಆದರೆ ಕೆಲವೊಮ್ಮೆ ತಪ್ಪುಗಳೇ ಹೆಚ್ಚು ಮಜ, ಸಂತೋಷವನ್ನು ಇವರಿಗೆ ನೀಡುತ್ತದೆ. ಎಲ್ಲಾ ಸಮಯದಲ್ಲೂ ಒಂದೇ ರೀತಿಯ ನಿಯಮಗಳಿಗೆ ಅಂಟಿಕೊಳ್ಳುವುದು ಮಿಥುನ ರಾಶಿಯ ಲಕ್ಷಣವಲ್ಲ, ಅವರು ಜೀವನ ನಡೆಸುತ್ತಾ ಅಗತ್ಯಕ್ಕೆ ತಕ್ಕಂತೆ ನಿಯಮಗಳನ್ನು ರೂಪಿಸಿಕೊಳ್ಳುತ್ತಾರೆ.


 • ಮೇಷ ರಾಶಿ

  ಮೇಷ ರಾಶಿಯವರು ಹಠಾತ್ ಪ್ರವೃತ್ತಿಯ ಮತ್ತು ಮೂರ್ಖತನದ ಗುಣ ಹೊಂದಿರುವುದರಿಂದ ಇವರು ಮಾಡುವ ಕಾರ್ಯಗಳ ಪರಿಣಾಮಗಳು ಇತರ ಜನರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಅವರು ಎಂದಿಗೂ ಪರಿಗಣಿಸುವುದಿಲ್ಲ. ಆದ್ದರಿಂದ ಮೇಷ ರಾಶಿಯವರು ಆತ್ಮಸಾಕ್ಷಿಯಿಲ್ಲವರು ಎಂದೂ ಹೇಳಲಾಗುತ್ತದೆ. ಇವರು ತಾವು ಪಾಲಿಸುವ ನಿಯಮಗಳೇ ಇವರಿಗೆ ಸಮಸ್ಯೆಯಾಗಿ ಪರಿಣಮಿಸಬಹುದು. ಸ್ವಯಂ-ಶಿಸ್ತನ್ನು ಸಹ ಉತ್ತಮವಾಗಿ ಪಾಲಿಸುವುದಿಲ್ಲ. ಇವರು ತಾವು ಬಯಸಿದ್ದನ್ನು ಮಾಡುತ್ತಾರೆ ಮತ್ತು ಅದು ಕೆಲವು ರೀತಿಯ ನೈತಿಕ ಸಂಹಿತೆ ಅಥವಾ ಬಾಧ್ಯತೆಗೆ ವಿರುದ್ಧವಾಗಿದ್ದರೂ ಅದರ ಬಗ್ಗೆ ಚಿಂತಿಸುವುದಿಲ್ಲ ಅಲ್ಲದೆ ಅದಕ್ಕೆ ತಾವು ಹೊಂದಿಕೊಳ್ಳುತ್ತಾರೆ.


 • ಕುಂಭ ರಾಶಿ

  ಕುಂಭ ರಾಶಿಯವರು ತಮ್ಮದೇ ಆದ ನಿಯಮಗಳನ್ನು ರೂಪಿಸಿಕೊಳ್ಳುವ ಹಾಗೂ ತಾವೇ ಸೃಷ್ಟಿಸಿದ ನೀತಿಸಂಹಿತೆಗಳ ಪ್ರಕಾರ ಬದುಕುತ್ತಾರೆ. ಇವರ ಸ್ವಯಂ ರೂಪಿತ ನೀತಿಸಂಹಿತೆಗಳು ಕೆಲವೊಮ್ಮೆ ನಮ್ಮ ಸಾಂಪ್ರದಾಯಿಕ ನಂಬಿಕೆಗಳು ಮತ್ತು ಮಾನದಂಡಗಳೊಂದಿಗೆ ಹೊಂದಿಕೊಳ್ಳುತ್ತದೆ ಮತ್ತೂ ಕೆಲವೊಮ್ಮೆ ಅದು ಹೊಂದಿಕೊಳ್ಳದೆಯೂ ಇರಬಹುದು.

  ಕುಂಭ ರಾಶಿಯವರು ಸಹ ಮೇಷ ರಾಶಿಯವರಂತೆ ಅತ್ಯಂತ ಸ್ವತಂತ್ರರು ಮತ್ತು ಇದನ್ನು ಮಾಡಬೇಡ ಅಥವಾ ಅದು ತಪ್ಪು ಎಂದು ಹೇಳುವುದನ್ನು ಇಷ್ಟಪಡುವುದಿಲ್ಲ. ಇಂತಹ ಬುದ್ದಿಮಾತುಗಳು ಇವರು ಮತ್ತಷ್ಟು ಅದನ್ನೇ ಮಾಡಲು ಪ್ರೇರೇಪಿಸುತ್ತದೆ ಎಂದು ಜ್ಯೋತಿಶಾಸ್ತ್ರ ಹೇಳುತ್ತದೆ.
ನೈತಿಕತೆ, ಸನ್ನಡತೆ, ಸದಾಚಾರ ಸಜ್ಜನ ವ್ಯಕ್ತಿಯ ಸುಬುದ್ದಿಗಳು. ಅನೈತಿಕವಾಗಿ ವರ್ತಿಸುವ, ಸನ್ನಡತೆ ಇಲ್ಲದ ದುರ್ಗುಣಗಳನ್ನು ಹೊಂದಿರುವ ವ್ಯಕ್ತಿಗಳು ಕೇವಲ ಸ್ವಾರ್ಥಪರವಾಗಿ ಚಿಂತಿಸುತ್ತಾರೆ ವಿನಃ ಪರೋಪಕಾರಿ ಗುಣಗಳನ್ನು ಇವರಲ್ಲಿ ಹುಡುಕುವುದು ತುಂಬಾನೇ ಕಡಿಮೆ. ಆದರೆ ಇಂತಹ ವ್ಯಕ್ತಿಗಳನ್ನು ಹೇಗೆ ಪತ್ತೆ ಮಾಡುವುದು, ಇವರೊಂದಿಗೆ ವ್ಯವಹಾರ ನಡೆಸುವುದು ಹೇಗೆ ಎಂಬುದು ನಿಮ್ಮ ಪ್ರಶ್ನೆಗಳಾಗಿರಬಹುದು.

ಕೆಲವು ಗುಣಗಳನ್ನು ಮುಖ ನೋಡಿ ಪತ್ತೆ ಮಾಡಬಹುದಾದರೂ, ಕೆಲವು ಆಂತರಿಕ ದುರ್ಗುಣಗಳನ್ನು ಪತ್ತೆ ಮಾಡುವುದು ಕಷ್ಟ. ಆದರೆ ಜ್ಯೋತಿಶಾಸ್ತ್ರ ಇಂತಹ ವ್ಯಕ್ತಿಗಳನ್ನು ಪತ್ತೆ ಮಾಡುವಲ್ಲಿ ನಿಮಗೆ ಸಹಾಯ ಮಾಡಬಹುದು. ಜ್ಯೋತಿಶಾಸ್ತ್ರದ ಪ್ರಕಾರ ಕೆಲವು ರಾಶಿಗಳು ತಮ್ಮದೇ ಆದ ನೈತಿಕತೆಗಳನ್ನು ಸೃಷ್ಟಿಸುತ್ತಾರೆ ಅಲ್ಲದೇ ಅದನ್ನೇ ಅನುಸರಿಸುತ್ತಾರೆ. ಇವರು ಸ್ವಾರ್ಥಿಗಳಾಗಿರುತ್ತಾರೆ ತನ್ನ ಸಹಚರರರಿಗೆ ಎಂದಿಗೂ ಇವರು ಒಳ್ಳೆಯದನ್ನು ಬಯಸುವುದಿಲ್ಲ. ಇವರ ತಪ್ಪನ್ನು ಸಮರ್ಥಿಸುವ ಸಾಮರ್ಥ್ಯವನ್ನು ಸಹ ಅದ್ಭುತವಾಗಿ ಹೊಂದಿರುತ್ತಾರೆ ಎಂದು ಜ್ಯೋತಿಶಾಸ್ತ್ರ ಹೇಳುತ್ತದೆ.

ಸಾಮಾಜಿಕವಾಗಿ ಯಾವುದು ತಪ್ಪು, ಯಾವುದು ಸರಿ ಎಂದು ಈ ರಾಶಿಯವರು ತಲೆಕೆಡಿಸಿಕೊಳ್ಳುವುದಿಲ್ಲ. ಆ ಕೆಲಸವನ್ನು ಮಾಡಲು ಅವರಿಗೆ ಸೂಕ್ತ ಕಾರಣ ಸಿಕ್ಕರೂ ಸಾಕು ಮುಂದುವರೆಯುತ್ತಾರೆ. ಹಾಗಿದ್ದರೆ ಯಾವುದು ಈ ರಾಶಿಗಳು ಎಂದು ತಿಳಿದುಕೊಳ್ಳುವ ಕುತೂಹಲವೇ, ಮುಂದೆ ಓದಿ.

   
 
ಹೆಲ್ತ್