Back
Home » ಇತ್ತೀಚಿನ
ಫೋನಿನಲ್ಲಿ ಫೋಟೊ ಎಡಿಟ್‌ ಮಾಡಲು ಇಲ್ಲಿವೆ ನೋಡಿ ಬೆಸ್ಟ್‌ ಆಪ್ಸ್‌!
Gizbot | 9th Oct, 2019 02:18 PM
 • ಫೋಟೊ ಎಡಿಟಿಂಗ್

  ಹೌದು, ಸ್ಮಾರ್ಟ್‌ಫೋನ್‌ಗಳಲ್ಲಿ ಸೆರೆಹಿಡಿದ ಫೋಟೊಗಳನ್ನು ಬಹುತೇಕ ಬಳಕೆದಾರರು ಫೋಟೊ ಎಡಿಟಿಂಗ್ ಆಪ್ಸ್‌ಗಳಲ್ಲಿ ಎಡಿಟ್‌ ಮಾಡುತ್ತಾರೆ. ಫೋಟೊ ಎಡಿಟ್‌ ಆಪ್‌ಗಳಲ್ಲಿ ಮುಖ್ಯವಾಗಿ ಬ್ರೈಟ್ನೆಸ್‌, ಕಾಂಟ್ರಾಸ್ಟ್‌, ಕಲರ್ ಅಡ್ಜಸ್ಟ್‍ಮೆಂಟ್, ಕ್ರಾಪ್, ಫಿಲ್ಟರ್ ಆಯ್ಕೆ ಸೇರಿದಂತೆ ಸ್ಟಿಕರ್ ಆಯ್ಕೆಗಳನ್ನು ಬಳಸುತ್ತಾರೆ. ಹೀಗಾಗಿ ಫೋಟೊ ಎಡಿಟ್‌ ಆಪ್ಸ್‌ಗಳು ಬಳಕೆದಾರರಿಗೆ ಅಗತ್ಯ ಎನಿಸಿವೆ. ಹಾಗಾದರೇ ಆಂಡ್ರಾಯ್ಡ್ ಫೋನ್‌ಗಳಲ್ಲಿ ಫೋಟೊ ಎಡಿಟಿಂಗ್‌ಗೆ ಬೆಸ್ಟ್‌ ಆಪ್ಸ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ.


 • ಫೋಟೊ ಡೈರೆಕ್ಟರ್

  ಫೋಟೊ ಡೈರೆಕ್ಟರ್ ಬಹುಉಪಯೋಗಿ ಫೋಟೊ ಎಡಿಟಿಂಗ್ ಆಪ್‌ ಆಗಿದ್ದು, ಇದು ಬಳಕೆದಾರರ ಸ್ನೇಹಿ ಆಪ್ ಆಗಿದೆ. ಕ್ವಿಕ್ ಎಡಿಟಿಂಗ್ ಆಯ್ಕೆಗಳನ್ನು ಹೊಂದಿದ್ದು, ಇದರೊಂದಿಗೆ ನೇರವಾಗಿ ಫೋಟೊ ತೆಗೆಯುವಾಗಲೇ ಫೋಟೊ ಎಫೆಕ್ಟ್‌ಗಳನ್ನು ಬಳಸಬಹುದಾಗಿದೆ. ಎಡಿಟ್‌ ಮಾಡಿರೊ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ನೇರವಾಗಿ ಶೇರ್ ಮಾಡುವ ಆಯ್ಕೆಯನ್ನು ನೀಡಲಾಗಿದೆ. ಆರ್ಟಿಸ್ಟಿಕ್ ಎಫೆಕ್ಟ್, ಎಚ್‌ಡಿಆರ್‌ ಆಯ್ಕೆ, ಫಾಗ್‌ನಂತಹ ಆಯ್ಕೆಗಳು ಇವೆ.


 • ಸ್ನಾಪ್‌ಸೀಡ್‌

  ಸ್ನಾಪ್‌ಸೀಡ್‌ ಫೋಟೊ ಎಡಿಟ್‌ ಆಪ್‌ ಅನ್ನು ಆಂಡ್ರಾಯ್ಡ್‌ ಓಎಸ್‌ ಡಿವೈಸ್‌ಗಳಿಗೆಂದೆ ಗೂಗಲ್ ಅಭಿವೃದ್ಧಿ ಪಡೆಸಿದ್ದು, ಈ ಆಪ್ ಸುಮಾರು 29 ವಿವಿಧ ಎಡಿಟಿಂಗ್ ಟೂಲ್‌ ಆಯ್ಕೆಗಳನ್ನು ಹೊಂದಿದೆ. ಡ್ರಾಗ್‌ ಆಯ್ಕೆ, ಫಿಲ್ಟರ್‌ ಎಫೆಕ್ಟ್‌ಗಳ ಆಯ್ಕೆ, ರೋಟೇಟ್, ಎಚ್‌ಆರ್‌ಡಿ, ಬ್ರಶ್, ಗ್ಲಾಮರ್‌ ಗ್ಲೋ ಸೇರಿದಂತೆ ಹಲವು ಭಿನ್ನ ಆಯ್ಕೆಗಳು ಫೋಟೊಗಳಿಗೆ ರಂಗು ನೀಡಲಿವೆ. ಎಡಿಟ್‌ ಮಾಡಿರೊ ಫೋಟೊವನ್ನು ಸೇವ್ ಮಾಡಬಹುದು ಮತ್ತು ಶೇರ್ ಮಾಡಬಹುದಾದ ಆಯ್ಕೆ ಇದೆ.


 • ಯ್ಯೂಕ್ಯಾಮ್‌ ಪರ್ಫೆಕ್ಟ್‌

  ಯ್ಯೂಕ್ಯಾಮ್ ಪರ್ಫೆಕ್ಟ್‌ ಆಪ್‌ನಲ್ಲಿ ಪೋರ್ಟರೆಟ್‌ ಫೋಟೊವನ್ನು ಕ್ವಿಕ್ ಆಗಿ ಎಡಿಟ್ ಮಾಡಬಹುದಾಗಿದ್ದು, ಒನ್‌ ಟಚ್‌ ಫಿಲ್ಟರ್, ಕ್ರಾಪ್, ರೋಟೇಟ್‌ ಆಯ್ಕೆಗಳನ್ನು ನೀಡಲಾಗಿದೆ. ಇದಲ್ಲದೇ ಬ್ಯಾಕ್‌ಗ್ರೌಂಡ್‌ ಬ್ಲರ್, ಹೆಚ್‌ಆರ್‌ಡಿ, ಐ ಬ್ಯಾಗ್ ರಿಮೋವರ್, ಬಾಡಿ ಸ್ಲಿಮ್ಮರ್, ಥಿನ್ನರ್ ಆಯ್ಕೆಗಳು ಸಹ ಕಾಣಬಹುದಾಗಿದೆ. ಫೋಟೊವನ್ನು ಸೇವ್ ಮಾಡುವ ಆಯ್ಕೆ ಮತ್ತು ಸಾಮಾಜಿಕ್ ತಾಣಗಳಲ್ಲಿ ಶೇರ್ ಮಾಡುವ ಆಯ್ಕೆ ಸಹ ನೀಡಲಾಗಿದೆ.


 • ಪಿಕ್ಸಲರ್

  ಪಿಕ್ಸಲರ್ ಫೋಟೊ ಎಡಿಟಿಂಗ್ ಆಪ್‌ ಸಹ ಹಲವು ಅತ್ಯುತ್ತಮ ಎಡಿಟಿಂಗ್ ಫೀಚರ್ಸ್‌ಗಳನ್ನು ಹೊಂದಿದ್ದು, ಡ್ಯೂಡೆಲ್, ಪೆನ್ಸಿಲ್ ಡ್ರಾಯಿಂಗ್, ಇಂಕ್ ಸ್ಕೆಚ್‌ ಆಯ್ಕೆಗಳಿಂದ ಫೋಟೊವನ್ನು ಸ್ಟೈಲಿಶ್ ಲುಕ್‌ಗೆ ಬದಲಿಸಬಹುದು. ಇದರೊಂದಿಗೆ ಫೋಟೊ ಕೊಲಾಜ್, ಬ್ಯಾಕ್‌ಗ್ರೌಂಡ್‌ ಬ್ಲರ್ ಹಾಗೂ ಚೇಂಜ್, ಲೇಔಟ್‌, ಸ್ಪೇಸಿಂಗ್ ಆಯ್ಕೆಗಳನ್ನು ನೀಡಲಾಗಿದೆ. ಆಟೋ ಬ್ಯಾಲೆನ್ಸಿಂಗ್ ಆಯ್ಕೆ ಇದ್ದು, 25 ಫೋಟೊಗಳ ಕೊಲಾಜ್ ಮಾಡಬಹುದಾಗಿದೆ.


 • ಫೋಟೊಶಾಪ್ ಎಕ್ಸ್‌ಪ್ರೆಸ್

  ಅಡೊಬ್ ಫೋಟೊಶಾಪ್‌ ಎಕ್ಸ್‌ಪ್ರೆಸ್‌ ಫೋಟೊ ಎಡಿಟಿಂಗ್ ಆಪ್‌ ಪವರ್‌ಫುಲ್‌ ಎಡಿಟಿಂಗ್ ಆಯ್ಕೆಗಳನ್ನು ಹೊಂದಿದೆ. ಈ ಆಪ್‌ ಕ್ವಿಕ್‌ ಎಡಿಟ್‌ಗೆ ಅಗತ್ಯ ಫೀಚರ್‌ಗಳಾದ ಕ್ರಾಪ್‌, ರೋಟೇಟ್‌, ಫ್ಲಿಪ್‌ ಆಯ್ಕೆಗಳ ಜೊತೆಗೆ ಹಲವು ಎಫೆಕ್ಟ್‌, ಕಲರ್‌ ಆಯ್ಕೆ, ಆಟೋ ಫಿಕ್ಸ್‌, ಫ್ರೇಮ್‌, ಲಾರ್ಜ್‌ ಫೈಲ್‌ ಫೋಟೊಗಳ ಗಾತ್ರ ರೀಸೈಜ್‌ ಮಾಡುವ ಆಯ್ಕೆ ಸಹ ಇದೆ. ಇದರೊಂದಿಗೆ ಸಾಮಾಜಿಕ ತಾಣಗಳಿಗೆ ಶೇರ್‌ ಮಾಡುವ ಆಯ್ಕೆಗಳು ಇವೆ.
ಇತ್ತೀಚಿನ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ಯಾಮೆರಾ ಫೀಚರ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಅಧಿಕ ರೆಸಲ್ಯೂಶನ್ ಸಾಮರ್ಥ್ಯದ ಸೆನ್ಸಾರ್‌ಗಳನ್ನು ಅಳವಡಿಸುತ್ತಿದ್ದಾರೆ. ಫೋಟೊಗಳು ಉತ್ತಮವಾಗಿ ಮೂಡಿಬರಲು ಕೆಲವು ಅಗತ್ಯ ಆಯ್ಕೆಗಳನ್ನು ಕ್ಯಾಮೆರಾದಲ್ಲಿ ನೀಡಿದ್ದಾರೆ. ಆದರೆ ಬಳಕೆದಾರರು ಸ್ಮಾರ್ಟ್‌ಫೋನ್‌ಗಳಲ್ಲಿ ಉತ್ತಮ ಕ್ಯಾಮೆರಾ ನೀಡಿದ್ದರು ಸಹ ಪ್ರತ್ಯೇಕ ಫೋಟೊ ಎಡಿಟ್‌ ಆಪ್‌ನಲ್ಲಿ ಫೋಟೊದ ಅಂದವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಾರೆ.

   
 
ಹೆಲ್ತ್