Back
Home » ಇತ್ತೀಚಿನ
ಮೊಟೊರೊಲಾ ಒನ್‌ ಮ್ಯಾಕ್ರೊ' ಲಾಂಚ್!.ಆರಂಭಿಕ ಬೆಲೆ 9,999ರೂ!
Gizbot | 9th Oct, 2019 04:16 PM
 • ಮೊಟೊರೊಲಾ ಒನ್‌ ಮ್ಯಾಕ್ರೊ

  ದೇಶಿಯ ಮಾರುಕಟ್ಟೆಗೆ ಬಿಡುಗಡೆ ಆಗಿರುವ 'ಮೊಟೊರೊಲಾ 'ಒನ್‌ ಮ್ಯಾಕ್ರೊ' ಸ್ಮಾರ್ಟ್‌ಫೋನ್ ಇದೇ ಅಕ್ಟೋಬರ್ 12ರ ಮಧ್ಯರಾತ್ರಿ 12ರಿಂದ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಸೇಲ್ ಆರಂಭಿಸಲಿದೆ. ಅಂದು ಫ್ಲಿಪ್‌ಕಾರ್ಟ್‌ನಲ್ಲಿ 'ಬಿಗ್ ದೀಪಾವಳಿ' ಸೇಲ್ ಸಹ ಶುರುವಾಗಲಿದೆ. ಈ ಸ್ಮಾರ್ಟ್‌ಫೋನ್ ಸ್ಪೇಸ್‌ ಬ್ಲೂ ಬಣ್ಣದ ಆಯ್ಕೆ ಮಾತ್ರ ಹೊಂದಿದ್ದು, 4GB RAM + 64GB ವೇರಿಯಂಟ್‌ನ ಬೆಲೆಯು 9,999ರೂ.ಗಳು ಆಗಿದೆ.


 • ವಾಟರ್‌ಡ್ರಾಪ್‌ ನಾಚ್ ಡಿಸ್‌ಪ್ಲೇ

  ಮೊಟೊರೊಲಾ 'ಒನ್‌ ಮ್ಯಾಕ್ರೊ' ಸ್ಮಾರ್ಟ್‌ಫೋನ್ ವಾಟರ್‌ಡ್ರಾಪ್‌ ನಾಚ್ ಡಿಸ್‌ಪ್ಲೇ, ಆಕ್ಟಾಕೋರ್ ಮೀಡಿಯಾ ಟೆಕ್‌ ಹಿಲಿಯೊ P70 ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಮೂರು ರಿಯರ್ ಕ್ಯಾಮೆರಾಗಳನ್ನು ಹೊಂದಿದ್ದು, ಬ್ಯಾಟರಿ ಬಲವು 4000mAh ಸಾಮರ್ಥ್ಯದಲ್ಲಿದೆ. ಹಾಗಾದರೇ ಮೊಟೊರೊಲಾ ಒನ್ ಮ್ಯಾಕ್ರೊ ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಮುಂದೆ ತಿಳಿಯೋಣ.


 • ಡಿಸ್‌ಪ್ಲೇ ರಚನೆ

  ಮೊಟೊರೊಲಾ 'ಒನ್‌ ಮ್ಯಾಕ್ರೊ' ಸ್ಮಾರ್ಟ್‌ಫೋನ್ 720 x 1520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.2 ಇಂಚಿನ ಹೆಚ್‌ಡಿ ಪ್ಲಸ್‌ ಮ್ಯಾಕ್ಸ್‌ ವಿಶನ್ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ವಾಟರ್‌ಡ್ರಾಪ್ ನಾಚ್ ಸಹ ನೀಡಲಾಗಿದೆ. ಇನ್ನು ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯ ಪ್ರಮಾಣ 270ppi ಆಗಿದ್ದು, ಡಿಸ್‌ಪ್ಲೇಯ ಅನುಪಾತವು 19:9ರಷ್ಟಾಗಿದೆ. ಹೆಚ್ಚು ಪ್ರಖರತೆಯನ್ನು ಒಳಗೊಂಡಿದೆ.


 • ಪ್ರೊಸೆಸರ್‌ ಯಾವುದು

  ಮೊಟೊರೊಲಾ 'ಒನ್‌ ಮ್ಯಾಕ್ರೊ' ಸ್ಮಾರ್ಟ್‌ಫೋನ್ ಆಕ್ಟಾಕೋರ್ ಮೀಡಿಯಾ ಟೆಕ್ ಹಿಲಿಯೊ P70 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು, ಇದರೊಂದಿಗೆ ಆಂಡ್ರಾಯ್ಡ್‌ 9 ಪೈ ಓಎಸ್ ಬೆಂಬಲವನ್ನು ಪಡೆದುಕೊಂಡಿದೆ. 4GB RAM ಮತ್ತು 6GB RAM ಸಾಮರ್ಥ್ಯದ ಒಂದೇ ವೇರಿಯಂಟ್‌ ಆಯ್ಕೆಗಳಲ್ಲಿ ಬಿಡುಗಡೆ ಆಗಿದ್ದು, ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶವನ್ನು ಒಳಗೊಂಡಿದೆ.


 • ಮೂರು ಕ್ಯಾಮೆರಾ ವಿಶೇಷ

  ಮೊಟೊರೊಲಾ 'ಒನ್‌ ಮ್ಯಾಕ್ರೊ' ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾವು f/2.0 ಅಪರ್ಚರ್ ಮತ್ತು 1.12 ಮೈಕ್ರಾನ್‌ ಪಿಕ್ಸಲ್‌ನೊಂದಿಗೆ 13ಎಂಪಿ ಸೆನ್ಸಾರ್‌ನಲ್ಲಿರಲಿದೆ. ಸೆಕೆಂಡರಿ ಕ್ಯಾಮೆರಾವು f/2.2 ಅಪರ್ಚರ್ನೊಂದಿಗೆ 2ಎಂಪಿ ಸೆನ್ಸಾರ್‌ ಹಾಗೂ ತೃತೀಯ ಕ್ಯಾಮೆರಾವು ಸಹ f/2.2 ಅಪರ್ಚರ್ನೊಂದಿಗೆ 2ಎಂಪಿ ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿವೆ. ಸೆಲ್ಫಿ ಕ್ಯಾಮೆರಾವು ಸಹ f/2.2 ಅಪರ್ಚರ್ನೊಂದಿಗೆ 8ಎಂಪಿ ಸೆನ್ಸಾರ್ ಹೊಂದಿದೆ.


 • ಕ್ಯಾಮೆರಾ ಫೀಚರ್ಸ್

  ಮೊಟೊರೊಲಾ 'ಒನ್‌ ಮ್ಯಾಕ್ರೊ' ಸ್ಮಾರ್ಟ್‌ಫೋನಿನ ರಿಯರ್ ಕ್ಯಾಮೆರಾವು 8X ಜೂಮ್ ಆಯ್ಕೆಯನ್ನು ಹೊಂದಿದ್ದು, ಲೈವ್ ಫಿಲ್ಟರ್, ಶೂಟ್ ಆಪ್ಟಿಮೇಜೇಶನ್, ಆಟೋ ಸ್ಮೈಲ್‌ ಕ್ಯಾಪ್ಚರ್, ಸ್ಮಾರ್ಟ್‌ ಕಾಂಪೋಸೆಶನ್, ಸೌಲಭ್ಯಗಳನ್ನು ಪಡೆದಿದೆ. ಹಾಗೆಯೇ ಗ್ರೂಪ್ ಸೆಲ್ಫಿ, ಹೆಚ್‌ಆರ್‌ಡಿ ಮೋಡ್, ಟೈಮರ್ ಆಯ್ಕೆಗಳು ಲಭ್ಯವಿದ್ದು, ಜೊತೆಗೆ 120fps ಸಾಮರ್ಥ್ಯದಲ್ಲಿ ವಿಡಿಯೊ ರೆಕಾರ್ಡಿಂಗ್ ಮಾಡಬಹುದಾಗಿದ್ದು, ವಿಡಿಯೊಗಳು 1080p ಪಿಕ್ಸಲ್‌ ರೆಸಲ್ಯೂಶನ್‌ನಲ್ಲಿ ಇರಲಿವೆ.


 • ಬ್ಯಾಟರಿ ಪವರ್

  ಮೊಟೊರೊಲಾ 'ಒನ್‌ ಮ್ಯಾಕ್ರೊ' ಸ್ಮಾರ್ಟ್‌ಫೋನ್ 4,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದು, ಇದರೊಂದಿಗೆ 10W ಸಾಮರ್ಥ್ಯ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಹಾಗೆಯೇ ಯುಎಸ್‌ಬಿ ಸಿ-ಫೋರ್ಟ್‌, 3.5ಎಂಎಂ ಆಡಿಯೊ ಜಾಕ್, ರಿಯರ್ ಮೌಂಟೆಡ್‌ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಸೌಲಭ್ಯಗಳಿದ್ದು, ಜೊತೆಗೆ ವೈಫೈ, ಬ್ಲೂಟೂತ್, ಜಿಪಿಎಸ್‌, ಸೌಲಭ್ಯಗಳನ್ನು ಹೊಂದಿದೆ.


 • ಬೆಲೆ ಮತ್ತು ಲಭ್ಯತೆ

  ಇಂದು (ಅ.9) ಭಾರತದಲ್ಲಿ ಬಿಡುಗಡೆಯಾಗಿರುವ 'ಮೊಟೊರೊಲಾ 'ಒನ್‌ ಮ್ಯಾಕ್ರೊ' ಸ್ಮಾರ್ಟ್‌ಫೋನ್ 4GB RAM + 64GB ವೇರಿಯಂಟ್‌ ಮಾತ್ರ ಹೊಂದಿದ್ದು, ಇದರ ಬೆಲೆಯು 9,999ರೂ ಆಗಿದೆ. ಇದೇ ಅಕ್ಟೋಬರ್ ಫ್ಲಿಪ್‌ಕಾರ್ಟ್ನಲ್ಲಿ ಶುರುವಾಗುವ ಬಿಗ್ ದೀಪಾವಳಿ ಸೇಲ್‌ ಮೇಳದಲ್ಲಿ ಈ ಸ್ಮಾರ್ಟ್‌ಫೋನ್ ಗ್ರಾಹಕರ ಖರೀದಿಗೆ ಲಭ್ಯವಾಗಲಿದೆ. ಸ್ಪೇಸ್‌ ಬ್ಲೂ ಬಣ್ಣದ ಆಯ್ಕೆ ಹೊಂದಿದೆ.
ಮೊಟೊರೊಲಾ ಸಂಸ್ಥೆಯು ನೂತನವಾಗಿ 'ಮೊಟೊರೊಲಾ ಒನ್‌ ಮ್ಯಾಕ್ರೊ' ಸ್ಮಾರ್ಟ್‌ಫೋನ್‌ ಅನ್ನು ಇಂದು (ಅಕ್ಟೋಬರ್ 9ರಂದು) ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಮ್ಯಾಕ್ರೊ ಫೋಟೊಗ್ರಾಫಿಗೆ ಅತ್ಯುತ್ತಮ ಎನಿಸುವ ಮ್ಯಾಕ್ರೊ ಸೆನ್ಸಾರ್‌ ಹೊಂದಿದ್ದು, ಕ್ಲೋಸ್‌ಅಪ್ ಫೋಟೊ ಸೆರೆಹಿಡಯಲು ಸಹ ಅತ್ಯುತ್ತಮ ಎನಿಸಲಿದೆ. ಬಜೆಟ್‌ ಬೆಲೆಯ ಪ್ರೈಸ್‌ಟ್ಯಾಗ್‌ ಹೊಂದಿರುವದು ಈ ಫೋನಿನ ಇನ್ನೊಂದು ವಿಶೇ‍ಷ ಆಗಿದೆ.

   
 
ಹೆಲ್ತ್