Back
Home » Car News
2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳಲಿವೆ ರೀ ಬ್ಯಾಡ್ಜ್ ಟೊಯೊಟಾ ಬ್ರೆಝಾ ಮತ್ತು ಸಿಯಾಜ್
DriveSpark | 9th Oct, 2019 05:13 PM
 • 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳಲಿವೆ ರೀ ಬ್ಯಾಡ್ಜ್ ಟೊಯೊಟಾ ಬ್ರೆಝಾ ಮತ್ತು ಸಿಯಾಜ್

  ಭಾರತೀಯ ಮಾರುಕಟ್ಟೆಯಲ್ಲಿ ಟೊಯೊಟಾ ಮತ್ತು ಮಾರುತಿ ಸುಜುಕಿ ಸಂಸ್ಥೆಗಳು ಸಹಭಾಗಿತ್ವದ ಆಧಾರದ ಮೇಲೆ ರೀಬ್ಯಾಡ್ಜ್ ಕಾರುಗಳನ್ನು ಪರಿಚಯಿಸುತ್ತಿದ್ದು, ಈಗಾಗಲೇ ಬಲೆನೊ ಕಾರು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ಹೀಗಾಗಿ ಶೀಘ್ರದಲ್ಲೇ ಮಾರುತಿ ಸುಜುಕಿ ಸಂಸ್ಥೆಯ ಮತ್ತೆರಡು ಜನಪ್ರಿಯ ಕಾರು ಮಾದರಿಗಳಾದ ವಿಟಾರಾ ಬ್ರೆಝಾ ಮತ್ತು ಸಿಯಾಜ್ ಸೆಡಾನ್ ಕಾರುಗಳನ್ನು ಸಹ ಟೊಯೊಟಾ ಹೆಸರಿನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

 • 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳಲಿವೆ ರೀ ಬ್ಯಾಡ್ಜ್ ಟೊಯೊಟಾ ಬ್ರೆಝಾ ಮತ್ತು ಸಿಯಾಜ್

  ಟೊಯೊಟಾ ಸಂಸ್ಥೆಯು ಮಾರುತಿ ಸುಜುಕಿ ಕಾರುಗಳನ್ನು ಮತ್ತು ಮಾರುತಿ ಸುಜುಕಿ ಸುಜುಕಿಯು ಟೊಯೊಟಾ ನಿರ್ಮಾಣದ ಕಾರುಗಳನ್ನು ರೀಬ್ಯಾಡ್ಜ್ ಅಡಿ ಮಾರಾಟ ಮಾಡುವ ಯೋಜನೆ ಇದಾಗಿದ್ದು, ಬಲೆನೊ ಕಾರು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವುದು ಹೊಸ ಯೋಜನೆಗೆ ಮತ್ತಷ್ಟು ಬಲಬಂದಿದೆ.

 • 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳಲಿವೆ ರೀ ಬ್ಯಾಡ್ಜ್ ಟೊಯೊಟಾ ಬ್ರೆಝಾ ಮತ್ತು ಸಿಯಾಜ್

  ಹೀಗಾಗಿ ಎರಡೇ ಹಂತದಲ್ಲಿ ವಿಟಾರಾ ಬ್ರೆಝಾ ಮತ್ತು ಸಿಯಾಜ್ ಕಾರುಗಳನ್ನು ರೀಬ್ಯಾಡ್ಜ್ ಮಾಡಲಿರುವ ಟೊಯೊಟಾ ಸಂಸ್ಥೆಯು 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದಹೆಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಿದ ನಂತರವಷ್ಟೇ ಬಿಡುಗಡೆ ಮಾಡುವ ಸುಳಿವು ನೀಡಿದೆ.

 • 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳಲಿವೆ ರೀ ಬ್ಯಾಡ್ಜ್ ಟೊಯೊಟಾ ಬ್ರೆಝಾ ಮತ್ತು ಸಿಯಾಜ್

  ರೀಬ್ಯಾಡ್ಜ್ ಅಡಿಯಲ್ಲಿ ಬಿಡುಗಡೆಯಾಗಲಿರುವ ಸಿಯಾಜ್ ಮತ್ತು ವಿಟಾರಾ ಬ್ರೆಝಾ ಕಾರುಗಳು ಬೇರೆ ಹೆಸರಿನೊಂದಿಗೆ ಟೊಯೊಟಾ ಲೋಗೋ ಮತ್ತು ಕೆಲವು ಪ್ರೀಮಿಯಂ ಫೀಚರ್ಸ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಎಂಜಿನ್ ಆಯ್ಕೆಯೇ ಹೊಸ ರೀಬ್ಯಾಡ್ಜ್ ಕಾರಿನಲ್ಲೂ ನೀಡಲಿದೆ. ಇದರ ಹೊರತಾಗಿ ಯಾವುದೇ ದೊಡ್ಡ ಬದಲಾವಣೆ ಪಡೆದಿಲ್ಲವಾದರೂ ಗ್ರಾಹಕರಿಗೆ ಹೊಸ ಕಾರುಗಳನ್ನು ನಿಗದಿತ ಅವಧಿಯಲ್ಲಿ ಖರೀದಿ ಮಾಡಲು ಸಾಧ್ಯವಾಗುವುದಲ್ಲದೆ ಕಾರು ಮಾರಾಟ ಪ್ರಮಾಣ ಹೆಚ್ಚಳಕ್ಕೂ ಸಹಕಾರಿಯಾಗಲಿದೆ.

 • 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳಲಿವೆ ರೀ ಬ್ಯಾಡ್ಜ್ ಟೊಯೊಟಾ ಬ್ರೆಝಾ ಮತ್ತು ಸಿಯಾಜ್

  ಇನ್ನು ಮಾರುತಿ ಸುಜುಕಿ ನಿರ್ಮಾಣದ ವಿಟಾರಾ ಬ್ರೆಝಾ ಮತ್ತು ಸಿಯಾಜ್ ಕಾರು ರೀಬ್ಯಾಡ್ಜ್ ಹೊಂದುವುದಕ್ಕೂ ಮುನ್ನ ಎಂಜಿನ್ ಆಯ್ಕೆಯಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿದ್ದು, 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ಉನ್ನತೀಕರಿಸಲಾದ ಎಂಜಿನ್ ಸೌಲಭ್ಯವನ್ನು ಪಡೆದುಕೊಳ್ಳಲಿವೆ.

 • 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳಲಿವೆ ರೀ ಬ್ಯಾಡ್ಜ್ ಟೊಯೊಟಾ ಬ್ರೆಝಾ ಮತ್ತು ಸಿಯಾಜ್

  ಮಾರುತಿ ಸುಜುಕಿ ಸಂಸ್ಥೆಯು ಈಗಾಗಲೇ ಪೆಟ್ರೋಲ್ ಕಾರುಗಳ ಬಿಎಸ್-4 ಎಂಜಿನ್ ಆಯ್ಕೆಯನ್ನು ಬಿಎಸ್-6 ನಿಯಮಕ್ಕೆ ಬದಲಾಯಿಸಿದ್ದು, ಮುಂಬರುವ ಜನವರಿ ಹೊತ್ತಿಗೆ ಡೀಸೆಲ್ ಎಂಜಿನ್ ಕಾರುಗಳ ಎಂಜಿನ್ ಅನ್ನು ಕೂಡಾ ಬದಲಾವಣೆ ಮಾಡಲಿದೆ.

 • 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳಲಿವೆ ರೀ ಬ್ಯಾಡ್ಜ್ ಟೊಯೊಟಾ ಬ್ರೆಝಾ ಮತ್ತು ಸಿಯಾಜ್

  ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ 1.3-ಲೀಟರ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಕಾರು ಮಾರಾಟವನ್ನು ಹೊಂದಿದ್ದು, 2020ಕ್ಕೆ ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ಸದ್ಯದ ಡೀಸೆಲ್ ಎಂಜಿನ್ ಅನ್ನು ಉನ್ನತೀಕರಣ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ.

 • 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳಲಿವೆ ರೀ ಬ್ಯಾಡ್ಜ್ ಟೊಯೊಟಾ ಬ್ರೆಝಾ ಮತ್ತು ಸಿಯಾಜ್

  ಹೀಗಾಗಿ 1.3-ಲೀಟರ್ ಮತ್ತು1.5-ಲೀಟರ್ ಡೀಸೆಲ್ ಎಂಜಿನ್ ಮಾರಾಟವನ್ನು ಕೈಬಿಡಲು ನಿರ್ಧರಿಸಿರುವ ಮಾರುತಿ ಸುಜುಕಿಯು ಸುಧಾರಿತ ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಳಿಸಲಾದ 1.6-ಲೀಟರ್ ಬಿಎಸ್-6 ಡೀಸೆಲ್ ಎಂಜಿನ್ ಹೊರತರಲು ಸಿದ್ದತೆ ನಡೆಸಿದೆ.

 • 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳಲಿವೆ ರೀ ಬ್ಯಾಡ್ಜ್ ಟೊಯೊಟಾ ಬ್ರೆಝಾ ಮತ್ತು ಸಿಯಾಜ್

  ಇದರಿಂದ 1.3-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರುವ ಬ್ರೆಝಾ ಕಾರಿನಲ್ಲಿ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಪರಿಚಯಿಸುವ ಸಾಧ್ಯತೆಗಳಿದ್ದು, 1.5-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಖರೀದಿಗೆ ಲಭ್ಯವಿರುವ ಸಿಯಾಜ್ ಕಾರು 1.6-ಲೀಟರ್ ಎಂಜಿನ್‌ಗೆ ಅಪ್‌ಗ್ರೆಡ್ ಹೊಂದಲಿದೆ.
ಕಾರು ಮಾರಾಟದಲ್ಲಿ ಹೊಸತನ ಪರಿಚಯಿಸಿರುವ ಜಪಾನ್ ಆಟೋ ದಿಗ್ಗಜ ಸಂಸ್ಥೆಗಳಾದ ಟೊಯೊಟಾ ಮತ್ತು ಸುಜುಕಿ ಸಂಸ್ಥೆಗಳು ಭಾರತದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಬಲೆನೊ ನಂತರ ಮತ್ತಷ್ಟು ಜನಪ್ರಿಯ ಕಾರುಗಳಲ್ಲಿ ರೀಬ್ಯಾಡ್ಜ್ ಫೀಚರ್ಸ್ ಅಳವಡಿಸಲಾಗುತ್ತಿದೆ.

ಹೆಲ್ತ್