Back
Home » Car News
ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‍‍ಬ್ಯಾಕ್ ಕಾರುಗಳಿವು
DriveSpark | 9th Oct, 2019 03:36 PM
 • ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‍‍ಬ್ಯಾಕ್ ಕಾರುಗಳಿವು

  ಮಾರುತಿ ಸುಜುಕಿ ಕಂಪನಿಯ ಎಂಟ್ರಿ ಲೆವೆಲ್ ಕಾರ್ ಆದ ಆಲ್ಟೋ ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾಗುವ ಹ್ಯಾಚ್‍‍ಬ್ಯಾಕ್ ಕಾರ್ ಆಗಿ ಹೊರಹೊಮ್ಮಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಆಲ್ಟೋ ಕಾರಿನ 15,079 ಯುನಿಟ್‍‍ಗಳನ್ನು ಮಾರಾಟ ಮಾಡಲಾಗಿದೆ.

 • ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‍‍ಬ್ಯಾಕ್ ಕಾರುಗಳಿವು

  ಆಲ್ಟೋ ಕಾರ್ ಅನ್ನು 800ಸಿಸಿ ಹಾಗೂ 1.0 ಲೀಟರಿನ ಕೆ10 ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಮಾರುತಿ ಸುಜುಕಿ ಕಂಪನಿಯು ಆಲ್ಟೊ 800 ಕಾರಿನಲ್ಲಿ ಬಿ‍ಎಸ್ 6 ಎಂಜಿನ್ ಅನ್ನು ಅಳವಡಿಸಿದೆ. ಆದರೆ ಆಲ್ಟೋ ಕೆ10 ಕಾರಿನಲ್ಲಿ ಇನ್ನೂ ಬಿ‍ಎಸ್ 6 ಎಂಜಿನ್ ಅನ್ನು ಅಪ್‍‍ಡೇಟ್ ಮಾಡಲಾಗಿಲ್ಲ.

 • ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‍‍ಬ್ಯಾಕ್ ಕಾರುಗಳಿವು

  ಮಾರುತಿ ಸುಜುಕಿ ಕಂಪನಿಯ ಸ್ವಿಫ್ಟ್ ಕಾರು 12,934 ಯುನಿಟ್‍‍ಗಳ ಮಾರಾಟದೊಂದಿಗೆ ಎರಡನೇ ಸ್ಥಾನದಲ್ಲಿದೆ. ಸ್ವಿಫ್ಟ್ ಕಾರು ಮಾರುತಿ ಸುಜುಕಿ ಕಂಪನಿಯ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಈಗ ಮಾರುಕಟ್ಟೆಯಲ್ಲಿರುವ ಮೂರನೇ ತಲೆಮಾರಿನ ಸ್ವಿಫ್ಟ್ ಕಾರ್ ಅನ್ನು 2018ರ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸಲಾಗಿತ್ತು.

 • ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‍‍ಬ್ಯಾಕ್ ಕಾರುಗಳಿವು

  ವ್ಯಾಗನ್‍ಆರ್ ಕಾರು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮೊದಲ ಬಾರಿಗೆ ಬಿಡುಗಡೆಯಾದಾಗಿನಿಂದ ವ್ಯಾಗನ್‍ಆರ್ ಕಾರ್ ಅನ್ನು ಹಲವಾರು ಬಾರಿ ಅಪ್‍‍ಡೇಟ್ ಮಾಡಲಾಗಿದೆ. 2018ರಲ್ಲಿ ಕೊನೆಯದಾಗಿ ಈ ಕಾರ್ ಅನ್ನು ಅಪ್‍‍ಡೇಟ್ ಮಾಡಲಾಗಿತ್ತು.

 • ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‍‍ಬ್ಯಾಕ್ ಕಾರುಗಳಿವು

  ಈ ಕಾರು ಟಾಲ್ ಬಾಯ್ ವಿನ್ಯಾಸವನ್ನು ಹೊಂದಿರುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ವ್ಯಾಗನ್‍ಆರ್ ಕಾರಿನ 11,757 ಯುನಿಟ್‍‍ಗಳು ಮಾರಾಟವಾಗಿವೆ. ಇದರಿಂದಾಗಿ ಈ ಕಾರು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

 • ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‍‍ಬ್ಯಾಕ್ ಕಾರುಗಳಿವು

  11,420 ಯುನಿಟ್‍‍ಗಳ ಮಾರಾಟದೊಂದಿಗೆ ಮಾರುತಿ ಸುಜುಕಿ ಕಂಪನಿಯ ಮತ್ತೊಂದು ಕಾರ್ ಆದ ಬಲೆನೊ ನಾಲ್ಕನೇ ಸ್ಥಾನದಲ್ಲಿದೆ. ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಕಾರ್ ಆದ ಬಲೆನೊ ಕಾರ್ ಅನ್ನು ಮಾರುತಿ ಸುಜುಕಿ ಕಂಪನಿಯ ನೆಕ್ಸಾ ಡೀಲರ್‍‍ಗಳ ಮೂಲಕ ಮಾರಾಟ ಮಾಡಲಾಗುತ್ತದೆ.

  MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

 • ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‍‍ಬ್ಯಾಕ್ ಕಾರುಗಳಿವು

  ಹುಂಡೈ ಎಲೈಟ್ ಐ 20 ಕಾರು ಮಾರುತಿ ಸುಜುಕಿ ಕಂಪನಿಯ ಪ್ರಾಬಲ್ಯವನ್ನು ಮುರಿದು ಈ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆದಿದೆ. ಕೊರಿಯಾ ಮೂಲದ ಹ್ಯುಂಡೈ ಕಂಪನಿಯ ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಭಾರತದಲ್ಲಿ ಹೆಚ್ಚು ಮಾರಾಟವಾದ ಹ್ಯುಂಡೈ ಕಂಪನಿಯ ಕಾರ್ ಆಗಿದೆ.

  MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

 • ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‍‍ಬ್ಯಾಕ್ ಕಾರುಗಳಿವು

  ಸೆಪ್ಟೆಂಬರ್‌ನಲ್ಲಿ ಎಲೈಟ್ ಐ 20 ಕಾರಿನ 10,141 ಯುನಿಟ್‍‍ಗಳು ಮಾರಾಟವಾಗಿ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಹ್ಯುಂಡೈ ಕಂಪನಿಯು ಕೆಲವು ದಿನಗಳ ಹಿಂದಷ್ಟೇ ಗ್ರಾಂಡ್ ಐ10 ನಿಯೊಸ್ ಕಾರ್ ಅನ್ನು ಬಿಡುಗಡೆಗೊಳಿಸಿತ್ತು. ಸೆಪ್ಟೆಂಬರ್ ತಿಂಗಳಿನಲ್ಲಿ ನಿಯೊಸ್ ಕಾರಿನ 9,358 ಯುನಿಟ್‍‍ಗಳು ಮಾರಾಟವಾಗಿವೆ.

  MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

 • ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‍‍ಬ್ಯಾಕ್ ಕಾರುಗಳಿವು

  ಹ್ಯುಂಡೈ ಕಂಪನಿಯು ಸ್ಟಾಂಡರ್ಡ್ ಗ್ರಾಂಡ್ ಐ10 ಮಾದರಿಯ ಜೊತೆಗೆ ನಿಯೊಸ್ ಕಾರ್ ಅನ್ನು ಸಹ ಮಾರಾಟ ಮಾಡುತ್ತಿದೆ. ಹೊಸ ಗ್ರಾಂಡ್ ಐ10 ನಿಯೊಸ್ ಕಾರಿನಲ್ಲಿ ಹಲವಾರು ಅಪ್‍‍ಡೇಟ್‍‍ಗಳ ಜೊತೆಗೆ ಹೆಚ್ಚುವರಿ ಫೀಚರ್ ಹಾಗೂ ಬಿ‍ಎಸ್ 6 ಎಂಜಿನ್ ಅನ್ನು ಅಳವಡಿಸಲಾಗಿದೆ.

  ಸ್ಥಾನ ಕಾರು ಮಾದರಿಗಳು ಮಾರಾಟ ಪ್ರಮಾಣ 1 ಮಾರುತಿ ಸುಜುಕಿ ಆಲ್ಟೊ 15079 2 ಮಾರುತಿ ಸುಜುಕಿ ಸ್ವಿಫ್ಟ್ 12934 3 ಮಾರುತಿ ಸುಜುಕಿ ವ್ಯಾಗನ್ ಆರ್ 11757 4 ಮಾರುತಿ ಸುಜುಕಿ ಬಲೆನೊ 11420 5 ಹ್ಯುಂಡೈ ಎಲೈಟ್ ಐ20 10141 6 ಹ್ಯುಂಡೈ ಗ್ರಾಂಡ್ ಐ10 9358 7 ಮಾರುತಿ ಸುಜುಕಿ ಎಸ್ ಪ್ರೆಸ್ಸೊ 5006 8 ಮಾರುತಿ ಸುಜುಕಿ ಸೆಲೆರಿಯೊ 4140 9 ಹ್ಯುಂಡೈ ಸ್ಯಾಂಟ್ರೊ 3502 10 ಟಾಟಾ ಟಿಯಾಗೊ 3068

 • ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‍‍ಬ್ಯಾಕ್ ಕಾರುಗಳಿವು

  ಇತ್ತೀಚಿಗಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮಾರುತಿ ಸುಜುಕಿ ಕಂಪನಿಯ ಎಸ್ ಪ್ರೆಸ್ಸೊ ಕಾರು 5,006 ಯುನಿಟ್‍‍ಗಳ ಮಾರಾಟದೊಂದಿಗೆ ಈ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಈ ಪಟ್ಟಿಯ ಕೊನೆಯ ಮೂರು ಸ್ಥಾನಗಳಲ್ಲಿ ಕ್ರಮವಾಗಿ ಮಾರುತಿ ಸೆಲೆರಿಯೊ, ಹ್ಯುಂಡೈ ಸ್ಯಾಂಟ್ರೊ ಹಾಗೂ ಟಾಟಾ ಟಿಯಾಗೊ ಕಾರುಗಳಿವೆ.

 • ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‍‍ಬ್ಯಾಕ್ ಕಾರುಗಳಿವು

  ಕಳೆದ ತಿಂಗಳಿನಲ್ಲಿ ಸೆಲೆರಿಯೊ ಕಾರಿನ 4,140 ಯುನಿ‍ಟ್‍ಗಳು ಮಾರಾಟವಾಗಿವೆ. ಸ್ಯಾಂಟ್ರೊ ಕಾರಿನ 3,502 ಯುನಿಟ್ ಹಾಗೂ ಟಾಟಾ ಟಿಯಾಗೊದ 3,068 ಯುನಿಟ್‍‍ಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಮಾರಾಟವಾಗಿವೆ.

 • ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‍‍ಬ್ಯಾಕ್ ಕಾರುಗಳಿವು

  ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ
  ಆಲ್ಟೊ, ಸ್ವಿಫ್ಟ್ ಹಾಗೂ ವ್ಯಾಗನ್‍ಆರ್ ಕಾರುಗಳ ಮಾರಾಟದೊಂದಿಗೆ ಮಾರುತಿ ಸುಜುಕಿ ಕಂಪನಿಯು ಹ್ಯಾಚ್‍‍ಬ್ಯಾಕ್ ಸೆಗ್‍‍ಮೆಂಟಿನಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಪ್ರತಿ ತಿಂಗಳು ಈ ಮೂರು ಮಾದರಿಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ.

 • ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‍‍ಬ್ಯಾಕ್ ಕಾರುಗಳಿವು

  ಇತ್ತೀಚಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಕಂಪನಿಯ ಎಸ್ ಪ್ರೆಸ್ಸೊ ಕಾರು ಸಹ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಮುಂಬರುವ ದಿನಗಳಲ್ಲಿ ಈ ಕಾರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ.
ಸೆಪ್ಟೆಂಬರ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಹ್ಯಾಚ್‍‍ಬ್ಯಾಕ್ ಕಾರುಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಈ ಪಟ್ಟಿಯಲ್ಲಿ ಮಾರುತಿ ಸುಜುಕಿ ಕಂಪನಿಯ ಆಲ್ಟೋ ಕಾರು ನಂ 1 ಸ್ಥಾನದಲ್ಲಿದೆ.

ಹೆಲ್ತ್