Back
Home » ಬಾಲಿವುಡ್
ಬದಲಾದ ಸೈನಾ ನೆಹ್ವಾಲ್ ಪಾತ್ರಧಾರಿ: ಶುಭಕೋರಿದ ಚಾಂಪಿಯನ್
Oneindia | 9th Oct, 2019 05:45 PM

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರ ಜೀವನ ಈಗ ಬಾಲಿವುಡ್ ತೆರೆಮೇಲೆ ಬರ್ತಿದೆ. ನಟಿ ಪರಿಣಿತಿ ಚೋಪ್ರಾ ಸೈನಾ ನೆಹ್ವಾಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೈನಾ ಪಾತ್ರಕ್ಕಾಗಿ ಪರಿಣಿತಿ ಪೂರ್ವ ತಯಾರಿ ಆರಂಭಿಸಿದ್ದು, ಮೇಕಿಂಗ್ ಚಿತ್ರಗಳು ಗಮನ ಸೆಳೆಯುತ್ತಿದೆ.

ಪರಿಣಿತಿ ಅವರಿಗೆ ಚಾಂಪಿಯನ್ ಸೈನಾ ನೆಹ್ವಾಲ್ ಅವರು ಇನ್ಸ್ಟಾಗ್ರಾಂ ಮೂಲಕ ಶುಭಕೋರಿದ್ದು, ''ಈ ಚಿತ್ರಕ್ಕೆ ಒಳ್ಳೆಯದಾಗಲಿ, ನಾನು ಕಾಯುತ್ತಿದ್ದೇನೆ'' ಎಂದಿದ್ದಾರೆ.

'ಸೈನಾ' ಬಯೋಪಿಕ್ ನಿಂದ ಶ್ರದ್ದಾ ಹೊರಕ್ಕೆ: ಶ್ರದ್ಧಾ ಜಾಗಕ್ಕೆ ಬಂದ ನಟಿ ಯಾರು?

ಚಾಂಪಿಯನ್ ಸೈನಾ ಅವರ ಶುಭಾಶಯಕ್ಕೆ ಪ್ರತಿಕ್ರಿಯಿಸಿರುವ ಪರಿಣಿತಿ ಚೋಪ್ರಾ ''ಥ್ಯಾಂಕ್ ಯೂ ಸೋ ಮಚ್, ಸ್ವಲ್ಪ ನರ್ವಸ್ ಆಗಿದ್ದೀನಿ'' ಎಂದಿದ್ದಾರೆ. ಸದ್ಯ ಬ್ಯಾಡ್ಮಿಂಟನ್ ತರಬೇತಿ ಪಡೆದುಕೊಳ್ಳುತ್ತಿರುವ ಪರಿಣಿತಿ, ಅಕ್ಟೋಬರ್ 11 ರಿಂದ ಚಿತ್ರೀಕರಣ ಆರಂಭಿಸಲಿದ್ದಾರಂತೆ.

ಸೌತ್ ಗೆ ಬಂದ ಪರಿಣಿತಿ ಚೋಪ್ರಾಗೆ ರಾಜಮೌಳಿ ಬಿಗ್ ಆಫರ್

ಪರಿಣಿತಿ ಚೋಪ್ರಾಗೂ ಮುಂಚೆ ಸೈನಾ ನೆಹ್ವಾಲ್ ಪಾತ್ರದಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಟಿಸಬೇಕಿತ್ತು. ಸೈನಾ ಪಾತ್ರಕ್ಕಾಗಿ ಶ್ರದ್ಧಾ ಎಲ್ಲ ರೀತಿಯ ತಯಾರಿ ನಡೆಸಿದ್ದರು. ಮೇಕಿಂಗ್ ಚಿತ್ರಗಳು ಕೂಡ ವೈರಲ್ ಆಗಿತ್ತು.

ಆದರೆ, ಕಾರಣಾಂತರಗಳಿಂದ ಸೈನಾ ಬಯೋಪಿಕ್ ನಿಂದ ಶ್ರದ್ಧಾ ಹಿಂದೆ ಸರಿದರು. ಆ ಬಳಿಕ ಆ ಜಾಗಕ್ಕೆ ಪರಿಣಿತಿ ಎಂಟ್ರಿಯಾಗಿದ್ದಾರೆ. ಈ ಚಿತ್ರವನ್ನು ಅಮೋಲ್ ಗುಪ್ತ್ ನಿರ್ದೇಶನ ಮಾಡುತ್ತಿದ್ದಾರೆ.

   
 
ಹೆಲ್ತ್