Back
Home » ಸುದ್ದಿ
ಹನಿ ಟ್ರ್ಯಾಪ್ ಹೆಸರಿನಲ್ಲಿ ಹಣ ವಸೂಲಿ ಮಾಡಿದ ಆರೋಪಿಗಳ ಬಂಧನ
Oneindia | 9th Oct, 2019 10:59 PM

ಹುಬ್ಬಳ್ಳಿ, ಅಕ್ಟೋಬರ್ 09: ಹುಬ್ಬಳ್ಳಿಯ ಐತಿಹಾಸಿಕ ಸಿದ್ಧಾರೂಢ ಮಠದ ಟ್ರಸ್ಟಿಗಳಿಗೆ ಹನಿಟ್ರ್ಯಾಪ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಹಳೇಹುಬ್ಬಳ್ಳಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ‌.

ಮಠದ ಇಬ್ಬರು ಟ್ರಸ್ಟಿಗಳು ಏಕಾಂತದಲ್ಲಿರುವ ದೃಶ್ಯ ಸೆರೆ ಹಿಡಿದು, ಬ್ಲ್ಯಾಕ್ ಮೇಲೆ ಮಾಡಿ ಹತ್ತು ಲಕ್ಷ ರೂಪಾಯಿ ವಸೂಲಿ ಮಾಡಿದ್ದಲ್ಲದೇ ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟ ಆರೋಪಗಳನ್ನು ಪೊಲೀಸರು ಕಂಬಿ ಹಿಂದೆ ಕಳುಹಿಸಿದ್ದಾರೆ.

ಡಾ. ಬಸನಗೌಡ ಸಂಕನಗೌಡರ್ ಹಾಗೂ ಅಮರಗೋಳದಲ್ಲಿರುವ ವಿಜಯಲಕ್ಷ್ಮಿ ಇಬ್ಬರು ಮನೆಯಲ್ಲಿದ್ದ ವೇಳೆ ಸೆರೆ ಹಿಡಿದಿದ್ದ ದೃಶ್ಯಗಳನ್ನು ತೋರಿಸಿ ಆರೋಪಿಗಳು ಬ್ಲ್ಯಾಕ್ ಮೇಲೆ ಮಾಡಿ ಹಣ ವಸೂಲಿ ಮಾಡಲು ಹೋಗಿ ಇದೀಗ ಜೈಲು ಪಾಲಾಗಿದ್ದಾರೆ.

ದೃಶ್ಯಗಳನ್ನು ಸೆರೆಹಿಡಿದಿದ್ದ ಸಂತೋಷ ಪೂಜಾರಿ, ಸಂಜು. ಗಣೇಶ ಬಂಧಿತ ಆರೋಪಿಗಳಾಗಿದ್ದಾರೆ‌. ಆರೋಪಿಗಳು ಹೆಚ್ಚಿನ ಹಣ ನೀಡದಿದ್ದರೆ ಮಾದ್ಯಮಗಳಿಗೆ ವಿಡಿಯೋ ಬಿಡುಗಡೆ ಮಾಡಿ ಮರ್ಯಾದೆ ತಗೆಯುವುದಾಗಿ ಬೆದರಿಸಿ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು. ಸಂತ್ರಸ್ತ ಟ್ರಸ್ಟಿಗಳು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ.

ಇತ್ತೀಚೆಗೆ ಹನಿ ಟ್ರ್ಯಾಪ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೆಲವು ದಿನಗಳ ಹಿಂದೆಯಷ್ಟೆ ಮಡಿಕೇರಿಯಲ್ಲಿ ಇಂತಹುದೇ ಪ್ರಕರಣವನ್ನು ಪೊಲೀಸರು ಭೇದಿಸಿದ್ದರು.

   
 
ಹೆಲ್ತ್