Back
Home » ಸಮ್ಮಿಲನ
ಗುರುವಾರದ ದಿನ ಭವಿಷ್ಯ (10-10-2019)
Boldsky | 10th Oct, 2019 04:00 AM
 • ಮೇಷ: 21 ಮಾರ್ಚ್ 19 ಏಪ್ರಿಲ್

  ನಿಮಗೆ ಹತ್ತಿರದವರು ಇಂದು ನೀವು ನಿಧಾನವಾಗಿರುವಿರೆಂದು ಹೇಳುವರು. ಅವರ ಮಾತನ್ನು ಕೇಳಿದ ನೀವು ಕಾರ್ಯವನ್ನು ಹೆಚ್ಚು ಚಟುವಟಿಕಾಶೀಲರಂತೆ ನಿರ್ವಹಿಸುವಿರಿ. ಇದರಿಂದ ನೀವು ಶಕ್ತಿಯನ್ನು ಪಡೆದುಕೊಂಡವರಂತೆ ಕಂಡು ಬಂದರೂ ಇತರರನ್ನು ನಿರ್ಲಕ್ಷಿಸುವಿರಿ. ನಿಮ್ಮ ಕಾಳಜಿ ವಹಿಸುವವರಿಗಾಗಿ ನೀವು ಹೆಚ್ಚಿನ ಸಮಯವನ್ನು ನೀಡಿ. ಕೆಲವು ಸಂದರ್ಭದಲ್ಲಿ ನೀವು ನಿಮ್ಮ ಅಗತ್ಯತೆಯನ್ನು ಬದಿಗಿಟ್ಟು ನಿಮ್ಮವರಿಗಾಗಿ ಒಂದಿಷ್ಟು ಸಮಯವನ್ನು ಮೀಸಲಿಡುವುದು ಅತ್ಯಮೂಲ್ಯ. ಅದರಿಂದಾಗಿ ನೀವು ಅವರಿಗೆ ಪ್ರಾಮುಖ್ಯತೆ ನೀಡುತ್ತಿದ್ದೀರಿ ಎನ್ನುವುದು ತಿಳಿಯುವುದು.


 • ವೃಷಭ: 20 ಏಪ್ರಿಲ್-20 ಮೇ

  ಇಂದು ನೀವು ನಿಮ್ಮ ಅಂತರಾಳದ ಭಾವನೆಯನ್ನು ಅರಿತುಕೊಳ್ಳಲು ಸಹಾಯವಾಗುವುದು. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ನೀವು ಏನನ್ನು ತಿಳಿದುಕೊಳ್ಳಬೇಕು ಎಂದು ಬಯಸುತ್ತೀರೋ ಅದನ್ನು ಮೊದಲು ಅರ್ಥೈಸಿಕೊಳ್ಳಿ. ಇಲ್ಲವಾದರೆ ನಿಮಗೆ ಗೊಂದಲ ಮೂಡಬಹುದು. ನಿಮ್ಮ ಸಾಂಸ್ಥಿಕ ಕೌಶಲ್ಯಗಳು ಎಂದಿಗಿಂತಲೂ ಉತ್ತಮವಾಗಿರುತ್ತವೆ. ನಿಮ್ಮ ತಾಳ್ಮೆಯನ್ನು ಇತರರು ಪರೀಕ್ಷಿಸಬಹುದು. ನಿಮ್ಮ ನಿರೂಪಣ ಸಾಮರ್ಥ್ಯ ಕೆಲಸ ಕಾರ್ಯವನ್ನು ಸುಗಮವಾಗಿ ನಿರ್ವಹಿಸಲು ಸಹಾಯ ಮಾಡುವುದು.


 • ಮಿಥುನ: 21 ಮೇ-20 ಜೂನ್

  ನಿಮ್ಮಿಂದ ಏನನ್ನಾದರೂ ಇತರರು ಬಯಸುತ್ತಿದ್ದರೆ ಅದರ ಬಗ್ಗೆ ಹೆಚ್ಚಿನ ಗಮನ ನೀಡಿ. ಅವರನ್ನು ನೇರವಾಗಿ ಕೇಳಿ ತಿಳಿದುಕೊಳ್ಳಿ. ಇಲ್ಲವಾದರೆ ಗೊಂದಲಗಳು ನಿಮಗೆ ಮಾನಸಿಕ ಒತ್ತಡವನ್ನು ಸೃಷ್ಟಿಸಬಹುದು. ಪ್ರಶ್ನೆ ಕೇಳಲು ನೀವು ಮುಜುಗರಕ್ಕೆ ಒಳಗಾಗುವ ಅಗತ್ಯ ಇರುವುದಿಲ್ಲ. ತಪ್ಪು ಕಲ್ಪನೆಯಿಂದ ನಿರ್ಧಾರವನ್ನು ಕೈಗೊಳ್ಳದಿರಿ. ಪ್ರತಿಯೊಂದು ವಿಷಯಕ್ಕೂ ಕಾಲ್ಪನಿಕ ಚಿಂತನೆ ಮಾಡುವುದನ್ನು ನಿಲ್ಲಿಸಿ. ನೇರವಾದ ಪ್ರವೃತ್ತಿಯನ್ನು ಬೆಳೆಸಿಕೊಳ್ಳಿ. ನಿಮ್ಮವರಿಗೆ ಏನು ಬೇಕು ಎನ್ನುವುದನ್ನು ಅರಿಯಿರಿ.


 • ಕರ್ಕ: 21 ಜೂನ್ 22 ಜುಲೈ

  ಏನು ಎಂದು ಕೇಳಲಿ ಎಂದು ಬಯಸುವ ಬದಲು ನೀವೇ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ. ಅಗತ್ಯವಾದುದನ್ನು ಸುಲಭವಾಗಿ ಪಡೆದುಕೊಳ್ಳಿ. ನಿಮ್ಮೊಂದಿಗೆ ಎಲ್ಲವೂ ಅತಿಯಾದ ವೇಗದಲ್ಲಿ ಚಲಿಸುತ್ತಿದೆ ಎಂದು ಭಾವಿಸುವಿರಿ. ಇತರರು ನಿಮ್ಮನ್ನು ತಪ್ಪಾಗಿ ಪರಿಗಣಿಸಬಹುದು. ನೀವು ಆಕ್ರಮಣ ಶೀಲ ಪ್ರವೃತ್ತಿಯವರಲ್ಲ ಎನ್ನುವುದನ್ನು ಪದೇ ಪದೇ ನೆನಪಿಸಿಕೊಳ್ಳಿ. ಅನುಚಿತ ವ್ಯಕ್ತಿಗಳೊಂದಿಗೆ ತಾಳ್ಮೆಯಿಂದ ವರ್ತಿಸಿ. ಕೆಲವರು ನಿಮ್ಮ ಬಗ್ಗೆ ಗಮನ ನೀಡದೆ ಇರಬಹುದು. ಅದಕ್ಕೆ ಚಿಂತಿಸುವ ಅಗತ್ಯವಿಲ್ಲ. ಉತ್ತಮ ಪ್ರಗತಿಯನ್ನು ಸಾಧಿಸುವಿರಿ.


 • ಸಿಂಹ: 23 ಜುಲೈ-22 ಆಗಸ್ಟ್

  ನಿಮ್ಮ ಕೆಲಸ ಕಾರ್ಯಗಳು ಇತರರ ಮೇಲೆ ಪ್ರಭಾವ ಬೀರುವುದು. ಆದ್ದರಿಂದ ನೀವು ಸೂಕ್ತ ರೀತಿಯಲ್ಲಿ ಪರಿಗಣಿಸಲು ಪ್ರಯತ್ನಿಸಿ. ನಿಮಗೆ ಬೇಕಾದ್ದನ್ನು ಪಡೆಯಲು ಸಾಧ್ಯವಿಲ್ಲ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಿಮ್ಮ ವಿಶಿಷ್ಟವಾದ ಪ್ರಜ್ಞೆ ಮತ್ತು ಪ್ರಾಯೋಗಿಕತೆಯ ವಿಷಯಗಳನ್ನು ಇತರರು ಬಳಸಿಕೊಳ್ಳಬಹುದು. ಹಾಗಾಗಿ ನೀವು ಹೆಚ್ಚು ಕಾಳಜಿಯಿಂದ ಇರುವುದು ಸೂಕ್ತ. ಅಸಡ್ಡೆ ವರ್ತನೆ ತೋರಿಸಿದರೆ ಕಷ್ಟದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ. ಯಾವುದೇ ಕೆಲಸ ನಿರ್ವಹಿಸುವ ಮೊದಲು ಸುತ್ತಲಿನ ಜನರ ಅಭಿಪ್ರಾಯವನ್ನು ಆಲಿಸಿ. ಅವರು ಹೇಳಿದ್ದನ್ನು ಪಾಲಿಸಬೇಕೆಂದಲ್ಲ. ನಿಮಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಸಹಾಯವಾಗುವುದು.


 • ಕನ್ಯಾ: 23 ಆಗಸ್ಟ್ -22 ಸಪ್ಟೆಂಬರ್

  ಒಂಟಿತನವು ಇಂದು ನಿಮಗೆ ಬೇಸರವನ್ನು ತರಬಹುದು. ಹಾಗಾಗಿ ನೀವು ಸಿಗುವ ಸಂದರ್ಭವನ್ನು ಮುಕ್ತವಾಗಿ ಬಳಸಿಕೊಳ್ಳಿ. ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ಹೇಳಿ. ದೀರ್ಘ ಸಮಯದ ಹಿಂದಿನಿಂದ ನೀವು ಅಂದುಕೊಂಡ ಕೆಲಸಕಾರ್ಯಗಳನ್ನು ಪೂರ್ಣಗೊಳಿಸಬಹುದು. ಮೊದ ಮೊದಲು ಸ್ವಲ್ಪ ಕಿರಿಕಿರಿ ಉಂಟಾಗಬಹುದು. ನಿಧಾನವಾಗಿ ಎಲ್ಲವೂ ಸರಿ ಹೋಗುತ್ತವೆ. ಇತರರ ಬಗ್ಗೆ ನಿಮ್ಮ ದೃಷ್ಟಿಕೋನವು ಸಕಾರಾತ್ಮಕವಾಗಿರಲಿ. ಕೆಲವು ವಿಷಯಗಳು ಇದ್ದಕ್ಕಿದ್ದಂತೆ ನಿಮಗೆ ಸುಲಭ ಎನಿಸಬಹುದು.


 • ತುಲಾ: 23 ಸಪ್ಟೆಂಬರ್-22 ಅಕ್ಟೋಬರ್

  ಕೆಲವು ಮಿತಿಯ ಒತ್ತಡವನ್ನು ಹೊರಬಹುದು. ಆದರೆ ನಿರಾಸೆ ಆಗುವ ಅಗತ್ಯವಿಲ್ಲ. ಬೇಸರದ ಭಾವನೆಯನ್ನು ಬಿಟ್ಟು ಅಧಿಕಾರವನ್ನು ಅನುಭವಿಸಲು ಪ್ರಯತ್ನಿಸಿ. ನಿರ್ಬಂಧಗಳಿಂದ ಹೊರಬಂದು ನೀವು ಏನು ಮಾಡಲು ಬಯಸುತ್ತೀರೋ ಅದರ ಬಗ್ಗೆ ಗಮನವನ್ನು ಕೇಂದ್ರೀಕರಿಸಿ. ನಿಮಗೆ ಕೆಲವರು ಅವಸರವನ್ನು ಮಾಡಬಹುದು. ಇಂದು ನೀವು ಏನಾಗಲು ಬಯಸುತ್ತೀರೋ ಅದನ್ನು ಸುಲಭವಾಗಿ ಸಾಧಿಸಬಹುದು.


 • ವೃಶ್ಚಿಕ: 23 23 ಅಕ್ಟೋಬರ್-21 ನವೆಂಬರ್

  ಉತ್ತಮವಾಗಿರುವುದು ಎಂದಿಗೂ ಅನುಕೂಲಕರವಾದುದ್ದಲ್ಲ. ಅದನ್ನು ಯಾವಾಗಲೂ ಪ್ರಶಂಸಿಸಲಾಗುತ್ತದೆ. ಹಾಗಾಗಿ ಕಷ್ಟದ ಸಂಗತಿಯನ್ನು ಸಾಧಿಸಲು ಮುಂದಾಗಿ. ಬೇಸರದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಹಾಗೂ ಸಾಂತ್ವನವನ್ನು ನೀಡಿ. ಅವರ ಬಗ್ಗೆ ದಯೆ ತೋರಿ. ನಿಮ್ಮ ಪ್ರಚೋದನಾ ವರ್ತನೆಯನ್ನು ತೋರದಿರಿ. ನೀವು ಯೋಚಿಸಿರುವುದಕ್ಕಿಂತ ಹೆಚ್ಚಿನದನ್ನು ಪಡೆಯಬಹುದು. ಉತ್ತಮ ಜನರೊಂದಿಗೆ ಬೆರೆಯಿರಿ. ಸಾಧನೆ ಮಾಡಿದವರಿಗೆ ಅಭಿನಂದನೆ ಹೇಳಿ. ಅವರು ಸಹ ನಿಮಗೆ ವಂದಿಸುವರು.


 • ಧನು: 22 ನವೆಂಬರ್ -21 ಡಿಸೆಂಬರ್

  ಬೇರೊಬ್ಬರು ಮಾಡಿದ ತಪ್ಪು ನಿಮಗೆ ಎಚ್ಚರಿಕೆಯ ಕಥೆಯಾಗಬೇಕು. ಅದು ನಿಮ್ಮ ಜೀವನದ ವಿಧಾನವನ್ನು ಮರು ವ್ಯಾಖ್ಯಾನಿಸಲು ಸಹಾಯ ಮಾಡುವುದು. ಇತರರನ್ನು ನೀವು ನಿರ್ಣಯಿಸದಿರಿ. ಒಂಟಿತನ ಕೆಲವೊಮ್ಮೆ ಕಾಡಬಹುದು. ಯಾರೂ ಪರಿಪೂರ್ಣರಲ್ಲ ಎನ್ನುವುದನ್ನು ನೀವು ಮರೆಯಬಾರದು. ಬೇರೊಬ್ಬರ ತಪ್ಪಿನ ಬಗ್ಗೆ ಹೆಚ್ಚು ಚಿಂತಿಸುವ ಬದಲು ನಿಮ್ಮ ಶಕ್ತಿ ಹಾಗೂ ಕೆಲಸದ ಕಡೆಗೆ ಹೆಚ್ಚು ಗಮನ ನೀಡಿ.


 • ಮಕರ: 22 ಡಿಸೆಂಬರ್ -19 ಜನವರಿ

  ಇಂದು ಜನರು ನಿಮ್ಮ ಉತ್ತಮ ಫಲಿತಾಂಶವನ್ನು ನಿರೀಕ್ಷಿಸುವರು. ಅವರು ತಮ್ಮ ಕೆಲಸದಲ್ಲಿಯೇ ಹೆಚ್ಚು ತಲ್ಲೀನತೆ ಹೊಂದಿರುತ್ತಾರೆ. ಹಾಗಾಗಿ ನೀವು ನಿಮ್ಮ ಕೆಲಸ ಹಾಗೂ ನಿಮ್ಮ ಶಕ್ತಿಯ ಕಡೆಗೆ ಹೆಚ್ಚಿನ ಆದ್ಯತೆ ನೀಡಿ. ನೀವು ಏನು ಮಾಡಬೇಕು ಎನ್ನುವುದರ ಕಡೆಗೆ ಜಾಗರೂಕರಾಗಿರಿ. ಯಾರ ಬಗ್ಗೆಯೂ ಅನುಮಾನವನ್ನು ವ್ಯಕ್ತಪಡಿಸುವ ಅಗತ್ಯವಿಲ್ಲ. ಇತರ ಇನರನ್ನು ನೀವು ಆಕರ್ಷಿಸುವುದು ಮುಖ್ಯವಲ್ಲ ಎನ್ನುವುದನ್ನು ಅರ್ಥೈಸಿಕೊಂಡು, ಮುಂದಿನ ಗುರಿಯೆಡೆಗೆ ಸಾಗಿ.


 • ಕುಂಭ: 20 ಜನವರಿ -18 ಫೆಬ್ರವರಿ

  ಕೆಲವು ಸಂದರ್ಭಗಳು ಅಥವಾ ಪರಿಸ್ಥಿತಿಯಿಂದಾಗಿ ನೀವು ಸೂಕ್ತ ರೀತಿಯಲ್ಲಿ ಕೆಲಸ ನಿರ್ವಹಿಸಲು ಕಷ್ಟವಾಗುವುದು. ನಿರ್ಬಂಧನೆ ಎನ್ನುವುದು ನಿಮ್ಮ ಮೇಲೆ ಎಂದಿಗೂ ಒಳ್ಳೆಯ ಸಂಗತಿಯಲ್ಲ. ನಿಮಗೆ ಇಷ್ಟವಾಗದ ಸಂಗತಿಗಳಿಂದ ಹೊರ ಬರುವುದು ಉತ್ತಮ. ಅತಿಯಾದ ಚಿಂತನೆಯ ಅಗತ್ಯವಿಲ್ಲ. ಕೆಲವರು ನಿಮಗೆ ಹೆಚ್ಚಿನ ಒತ್ತಾಯ ಮಾಡುವುದರ ಮೂಲಕ ಮುಂಗೋಪವನ್ನುಂಟು ಮಾಡಬಹುದು. ಅನಪೇಕ್ಷಿತ ಬಯಕೆಗಳಿಂದ ಈ ದಿನ ಕೂಡಿರುತ್ತದೆ.


 • ಮೀನ: 19 ಫೆಬ್ರುವರಿ-20 ಮಾರ್ಚ್

  ನಿಮ್ಮ ಉದಾರತೆಯ ಮನೋಭಾವವು ಪೂರ್ಣ ಪ್ರಮಾಣದಿಂದ ಹೊರಬರುವುದು. ಪ್ರತಿಯೊಬ್ಬರ ಕೋರಿಕೆಗೂ ಸಮಯ ಇದೆ ಎನ್ನುವುದು ನಿಮಗೆ ಅರಿವಾಗುತ್ತದೆ. ವಾಸ್ತವವಾಗಿ ನೀವು ವಿರಾಮಕ್ಕೆ ಹೋಗುವ ಮೊದಲು ಎಲ್ಲರಿಗೂ ಸಹಾಯ ಮಾಡಲು ಬಯಸುವಿರಿ. ನೀವು ನಿಮ್ಮ ಬುದ್ಧಿಯನ್ನು ಹೇಗೆ ಬಳಸಿಕೊಳ್ಳುವಿರಿ ಎನ್ನುವುದರ ಬಗ್ಗೆ ಜಾಗರೂಕತೆಯಿಂದ ಇರಿ. ನೀವು ನೀಡುವ ಪ್ರಾಮಾಣಿಕ ಪ್ರತಿಕ್ರಿಯೆ ಮತ್ತು ಸಲಹೆಯನ್ನು ಎಲ್ಲರೂ ಕೇಳಲು ಬಯಸುವುದಿಲ್ಲ. ಇಂದು ನೀವು ಬಹುತೇಕ ವಿಷಯದಲ್ಲಿ ಸಕಾರಾತ್ಮಕ ರೀತಿಯ ಚಿಂತನೆ ನಡೆಸುವಿರಿ.
ಗುರುವಾರದ ದಿನ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಇವರು ಬ್ರಾಹ್ಮಣ ಮಾಧ್ವಸಂನ್ಯಾಸಿಗಳಲ್ಲಿ ಪ್ರಮುಖರು. ಇವರು ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಶ್ರೀ ಪ್ರಹ್ಲಾದ ರಾಯರ ಮೂರನೇ ಅವತಾರವೇ ಶ್ರೀ ರಾಘವೇಂದ್ರರು. ಎರಡನೆಯ ಅವತಾರವು ಶ್ರೀ ವ್ಯಾಸರಾಯರು.

ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ಭಕ್ತರು ರಾಯರು, ಗುರುರಾಯರು, ಗುರುರಾಜರು ಎಂದು ಭಕ್ತಿಯಿಂದ ಕರೆಯುತ್ತಾರೆ. ಇವರ ಮೂಲ ಬೃಂದಾವನವು (ಸಶರೀರ) ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿದೆ. ಇಲ್ಲಿಗೆ ನಿತ್ಯವು ಸಾವಿರಾರು ಭಕ್ತರು ಭೇಟಿ ಕೊಡುತ್ತಾರೆ. ಪ್ರತಿ ವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಕೃಷ್ಣ ಪಕ್ಷ ತದಗಿವರೆಗೂ ಭವ್ಯ ಆರಾಧನೆ ನಡೆಯುತ್ತದೆ. ಗುರು ರಾಘವೇಂದ್ರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.

   
 
ಹೆಲ್ತ್