Back
Home » ಸುದ್ದಿ
ರೈತರು ಹಾಗೂ ಜೆಡಿಎಸ್ ಪ್ರತಿಭಟನೆ: ಎಲ್ಲೆಲ್ಲಿ ಟ್ರಾಫಿಕ್ ಜಾಮ್ ಸಾಧ್ಯತೆ?
Oneindia | 10th Oct, 2019 08:51 AM
 • ದೇವೇಗೌಡರ ನೇತೃತ್ವದಲ್ಲಿ ಪ್ರತಿಭಟನೆ

  ಜೆಡಿಎಸ್ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಹನ್ನೊಂದು ಗಂಟೆಗೆ ಜೆಪಿ ಭವನದಿಂದ ಫ್ರೀಡಂಪಾರ್ಕ್ ವರೆಗೆ ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿಭಟನೆ ಎಫೆಕ್ಟ್ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಲಿದೆ. ಅಧಿವೇಶನ ಹಿನ್ನೆಲೆ ವಿಧಾನಸೌಧ ಸುತ್ತಮುತ್ತ 2 ಕಿ.ಮೀ. ನಿಷೇದಾಜ್ಞೆಯೂ ಜಾರಿಯಾಗಲಿದೆ. ಅಧಿವೇಶನ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ.


 • ಎಲ್ಲೆಲ್ಲಿ ಟ್ರಾಫಿಕ್ ಜಾಮ್ ಸಾಧ್ಯತೆ

  1. ಮಂತ್ರಿಮಾಲ್ ರಸ್ತೆ,
  2. ಶೇಷಾದ್ರಿಪುರಂ ರೋಡ್
  3. ಮಜೆಸ್ಟಿಕ್ ಸುತ್ತಾಮುತ್ತ ರಸ್ತೆ
  4. ಕಾರ್ಪೋರೇಷನ್ ಸರ್ಕಲ್
  5. ವಿಧಾನಸೌಧ ಸುತ್ತಾಮುತ್ತ ರಸ್ತೆ
  6. ಆನಂದ್ ರಾವ್ ಸರ್ಕಲ್ ಬಳಿ ಟ್ರಾಫಿಕ್ ಬಿಸಿ ಇರಲಿದೆ.

  ಕರ್ನಾಟಕ ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರದಿಂದ 1200 ಕೋಟಿ ಮಂಜೂರು


 • ಮಾರ್ಗ ಬದಲಾವಣೆ

  -ಆನಂದ ರಾವ್ ಫ್ಲೈಓವರ್ ಬಳಿ ಎಡ ತಿರುವು ಪಡೆದು ರೇಸ್ ಕೋರ್ಸ್ ರಸ್ತೆ ಕಡೆ ಸಂಚಾರಿಸಲು ಮಾರ್ಗ ಬದಲು
  - ಶೇಷಾದ್ರಿ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ
  - ಸಿಐಡಿ ಜಂಕ್ಷನ್, ಪ್ಯಾಲೇಸ್ ರಸ್ತೆ ಮೂಲಕ ಕೆ ಆರ್ ಸರ್ಕಲ್ ಪ್ರವೇಶಿಸಲು ಸೂಚನೆ


 • ರೈತರ ಬೇಡಿಕೆಗಳೇನೇನು?

  -ಬ್ಯಾಂಕ್ ಗಳು ಪ್ರವಾಹದಿಂದ ತೊಂದರೆಗೆ ಒಳಗಾದ ರೈತರಿಗೆ ಸಾಲದ ನೋಟಿಸ್ ನೀಡೋದನ್ನು ನಿಲ್ಲಿಸಬೇಕು.
  - ಉತ್ತರ ಕರ್ನಾಟಕದ ಪ್ರವಾಹ ದಲ್ಲಿ ಮನೆ ಕಳಕೊಂಡವರಿಗೆ ಹತ್ತು ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಬೇಕು.
  -ನಷ್ಟವಾದ ಕೃಷಿ ಭೂಮಿಗೆ ಪರಿಹಾರ ಕೊಡಬೇಕು, ಪರ್ಯಾಯ ಭೂಮಿ ಕೊಡಬೇಕು
  - ಪ್ರವಾಹದಲ್ಲಿ ಪ್ರಾಣ ಕಳಕೊಂಡವರಿಗೆ 25 ಲಕ್ಷ ಪರಿಹಾರ ಕೊಡಬೇಕು.
  -ಎಕರೆಗೆ ಇಪ್ಪತ್ತೈದು ಸಾವಿರದಂತೆ ಪರಿಹಾರ ಕೊಡಬೇಕು
  -ಪದೇ ಪದೇ ಪ್ರವಾಹಕ್ಕೆ ತುತ್ತಾಗುವ ಗ್ರಾಮವನ್ನು ಸಂಪೂರ್ಣ ಸ್ಥಳಾಂತರ ಮಾಡಬೇಕು.
ಬೆಂಗಳೂರು, ಅಕ್ಟೋಬರ್ 10: ಉತ್ತರ ಕರ್ನಾಟಕ ಪ್ರವಾಹ ಪರಿಹಾರಕ್ಕೆ ಆಗ್ರಹಿಸಿ ರೈತರು ಪ್ರತಿಭಟನೆ ಕೈಗೊಳ್ಳಲಿದ್ದು, ಟ್ರಾಫಿಕ್ ಜಾಮ್ ಬಿಸಿ ಬೆಂಗಳೂರಿಗರಿಗೆ ತಟ್ಟಲಿದೆ. ಒಂದೆಡೆ ಅಧಿವೇಶನ ಆರಂಭವಾಗಲಿದ್ದು, ವಿಧಾನಸೌಧದ ಬಳಿ ಜೆಡಿಎಸ್ ಕೂಡ ಪ್ರತಿಭಟನೆ ನಡೆಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕೇಂದ್ರದಿಂದ ಬಂದ ಬರ ಪರಿಹಾರ: ಅನುಮಾನಕ್ಕೆ ಎಡೆಯಾದ ದೇವೇಗೌಡ್ರ ಹೇಳಿಕೆ

ಸುಮಾರು ಐದು ಸಾವಿರಕ್ಕೂ ಹೆಚ್ಚು ರೈತರು ಇಂದು ಹನ್ನೊಂದು ಗಂಟೆಗೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ವಿಧಾನಸೌಧ ಮುತ್ತಿಗೆ ಹಾಕಲಿದ್ದಾರೆ.

   
 
ಹೆಲ್ತ್