Back
Home » ಇತ್ತೀಚಿನ
ಬಿಎಸ್​ಎನ್​ಎಲ್ ಮುಚ್ಚಲು ಶಿಫಾರಸು!..ಸರ್ಕಾರಿ ಟೆಲಿಕಾಂಗೆ ಶೀಘ್ರವೇ ಬೀಗ?
Gizbot | 10th Oct, 2019 09:02 AM
  • ನಿಗಮ್ ಲಿಮಿಟೆಡ್

    ಹೌದು, ಎರಡು ದಶಕಗಳಿಂದ ಭಾರತದಲ್ಲಿ ದೂರಸಂಪರ್ಕದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್​ಎನ್​ಎಲ್)​ ಮತ್ತು ಮಹಾನಗರ್ ಟೆಲಿಫೋನ್ ನಿಗಮ್ ಲಿಮಿಟೆಡ್ (ಎಂಟಿಎನ್​ಎಲ್) ಸಂಸ್ಥೆಗಳು ಕಳೆದ ಕೆಲ ವರ್ಷಗಳಿಂದ ನಷ್ಟದಲ್ಲೇ ದೂಡುತ್ತಿವೆ. ಬಿಎಸ್​ಎನ್​ಎಲ್​ ಮತ್ತು ಎಂಟಿಎನ್​ಎಲ್ ಎರೂ ಸಂಸ್ಥೆಗಳು ನಿರ್ವಹಿಸಲು ಸಮರ್ಥನೀಯವಲ್ಲದ ಮಟ್ಟಿಗೆ ಹಣದ ಅಭಾವ ಎದುರಿಸುತ್ತಿವೆ. ಹಾಗಾಗಿ, ಈ ಎರಡೂ ಸರ್ಕಾರಿ ಕಂಪನಿಗಳನ್ನು ಮುಚ್ಚಬೇಕು ಎಂದು ಹಣಕಾಸು ಸಚಿವಾಲಯ ಸೂಚಿಸಿದೆ.


  • ಸರ್ಕಾರಿ ಕಂಪನಿ

    ದಿ ಫೈನಾನ್ಶಿಯಲ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಎರಡು ಕಂಪೆನಿಗಳನ್ನು ಪುನರುಜ್ಜೀವನಗೊಳಿಸಲು 74,000 ಕೋಟಿ ರೂ.ಗಳ ಬೃಹತ್ ಮೊತ್ತವನ್ನು ಒದಗಿಸುವ ದೂರಸಂಪರ್ಕ ಇಲಾಖೆಯ (ಡಿಒಟಿ) ಪ್ರಸ್ತಾವನೆಯನ್ನು ಸಚಿವಾಲಯ ತಿರಸ್ಕರಿಸಿದೆ. ಇದರ ಜೊತೆಗೆ ಈ ಎರಡು ಸರ್ಕಾರಿ ಕಂಪನಿಗಳನ್ನು ಮುಚ್ಚುವ ವೆಚ್ಚವು 95,000 ಕೋಟಿ ರೂಪಾಯಿಗಿಂತ ಹೆಚ್ಚು ತಗಲುವುದಿಲ್ಲ ಎಂದು ದೂರಸಂಪರ್ಕ ಇಲಾಖೆ (ಡಿಒಟಿ)ಯ ವರದಿ ಹೇಳುತ್ತಿದೆ. ಹಾಗಾಗಿ, ಎರಡೂ ಕಂಪನಿಗಳನ್ನು ಮುಚ್ಚಲು ಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ.


  • 95,000 ಕೋಟಿ

    ದೂರಸಂಪರ್ಕ ಇಲಾಖೆ (ಡಿಒಟಿ)ಯ ವರದಿಯೊಂದರ ಪ್ರಕಾರ, ಬಿಎಸ್​ಎನ್​ಎಲ್​ ಮತ್ತು ಎಂಟಿಎನ್​ಎಲ್ ಎರಡು ಸರ್ಕಾರಿ ಕಂಪನಿಗಳನ್ನು ಮುಚ್ಚುವ ವೆಚ್ಚವು 95,000 ಕೋಟಿ ರೂಪಾಯಿಗಿಂತ ಹೆಚ್ಚು ತಗಲುವುದಿಲ್ಲ. ಹಾಗಯೇ, ಸ್ವಯಂ ನಿವೃತ್ತಿ ಯೋಜನೆ(ವಿಆರ್​​ಎಸ್​)ಯಡಿಯಲ್ಲಿ ಬಿಎಸ್​ಎನ್​ಎಲ್​ನ 1.65 ಲಕ್ಷ ಉದ್ಯೋಗಿಗಳು ಹಾಗೂ ಕಂಪನಿಯ ಸಾಲ ಮರುಪಾವತಿಗೆ 95,000 ಕೋಟಿ ರೂ. ತಗಲುತ್ತದೆ ಎಂದು ವರದಿಯಲ್ಲಿ ತಿಳಿಸಿದೆ. ಇದರಿಂದಲೂ ಸರ್ಕಾರಿ ಟೆಲಿಕಾಂ ಸಂಸ್ಥೆಗಳ ಭವಿಷ್ಯದ ಮೇಲೆ ಕರಿನೆರಳು ಆವರಿಸಿದೆ.


  • ಸಿಬ್ಬಂದಿ ವರ್ಗ

    ಈ ಎರಡು ಸರ್ಕಾರಿ ಕಂಪನಿಯಲ್ಲಿ ನೇರವಾಗಿ ನೇಮಕವಾದವರು, ಇತರೆ ಸರ್ಕಾರಿ ಇಲಾಖೆಗಳಿಂದ ವರ್ಗಾವಣೆ ಆದವರು ಹಾಗೂ ಭಾರತೀಯ ಟೆಲಿಕಮ್ಯೂನಿಕೇಷನ್ಸ್​ ಸರ್ವೀಸ್​ ಅಧಿಕಾರಿಗಳು ಎಂಬ ಮೂರು ಸಿಬ್ಬಂದಿ ವರ್ಗಗಳಿವೆ. ಇದೇ ಸಾಲಿನಲ್ಲಿ ವಿಂಗಡನೆ ಮಾಡಿದರೆ, ಕಂಪನಿಯ ವೆಚ್ಚ 95,000 ಕೋಟಿ ರೂಪಾಯಿಗಿಂತ ಕಡಿಮೆ ಆಗಲಿದೆ ಎಂದು ವರದಿಯಲ್ಲಿದೆ. ಟೆಲಿಕಮ್ಯೂನಿಕೇಷನ್ಸ್​ ಸರ್ವೀಸ್​ ಅಧಿಕಾರಿಗಳನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಲು ಸಾಧ್ಯವಿದೆ. ಇದರೊಂದಿಗೆ ನೇರವಾಗಿ ನೇಮಕಗೊಂಡವರ ಸಂಬಳ ಹೆಚ್ಚು ಇರುವುದಿಲ್ಲ. ಹೀಗಾಗಿ ಹೆಚ್ಚು ವೆಚ್ಚವಾಗುವುದಿಲ್ಲ ಎಂದು ವರದಿ ತಿಳಿಸಿದೆ.




ಭಾರತದ ಟೆಲಿಕಾಂನಲ್ಲಿ ನಡೆಯುತ್ತಿರುವ ಭಾರೀ ದರಸಮರದಿಂದಾಗಿ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಗಳಾದ ಬಿಎಸ್​ಎನ್​ಎಲ್​ ಮತ್ತು ಎಂಟಿಎನ್​ಎಲ್ ಮುಚ್ಚುವ ಭೀತಿ ಎದುರಿಸುತ್ತಿವೆ. ಟೆಲಿಕಾಂ ಉದ್ಯಮದ ಪೈಪೋಟಿಯಲ್ಲಿ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಬಿಎಸ್​ಎನ್​ಎಲ್​ ಮತ್ತು ಎಂಟಿಎನ್​ಎಲ್​ ಟೆಲಿಕಾಂ ಕಂಪನಿಗಳನ್ನು ಸ್ಥಗಿತಗೊಳಿಸಲು ಕೇಂದ್ರ ಹಣಕಾಸು ಸಚಿವಾಲಯವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದಾಗಿ ಇದೇ ಬುಧವಾರ ವರದಿಯಾಗಿದ್ದು, ದೇಶದ ಟೆಲಿಕಾಂನಲ್ಲಿ ಭಾರೀ ಸಂಚಲನ ಮೂಡಿಸಿದೆ.

   
 
ಹೆಲ್ತ್