Back
Home » ಸುದ್ದಿ
ಪಶ್ಚಿಮ ಬಂಗಾಳದಲ್ಲಿ RSS ಕಾರ್ಯಕರ್ತ, ಗರ್ಭಿಣಿ ಪತ್ನಿ, ಮಗುವಿನ ಬರ್ಬರ ಹತ್ಯೆ
Oneindia | 10th Oct, 2019 09:24 AM

ಕೊಲ್ಕತ್ತಾ, ಅಕ್ಟೋಬರ್ 10: ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ಮತ್ತು ಆತನ ಗರ್ಭಿಣಿ ಪತ್ನಿ ಮತ್ತು ಮಗುವನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಬುಧವಾರ ನಡೆದಿದೆ.

ಮೃತರನ್ನು ಬೊಂಧು ಪ್ರಕಾಶ್ ಪಾಲ್ ಎಂದು ಗುರುತಿಸಲಾಗಿದ್ದು, ಇವರು ಶಾಲೆಯೊಂದರಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ಬ್ಯೂಟಿ ಪಾಲ್ ಮತ್ತು ಅವರ ಪುತ್ರ ಆನಂದ್ ಎಂಬುವವರನ್ನು ಕೊಲ್ಲಲಾಗಿದ್ದು, ಪತ್ಬಿ ಬ್ಯೂಟಿ ಪಾಲ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದರು ಎನ್ನಲಾಗಿದೆ.

ಹೃದಯಾಘಾತ ಸರಣಿ ಸಾವು, ಕೇರಳದ ನಿಗೂಢ ಹತ್ಯೆ ರಹಸ್ಯ ಬಯಲು

ಮುರ್ಶಿದಾಬಾದ್ ನ ಜಿಯಾಗಂಜ್ ಎಂಬಲ್ಲಿ ಈ ಕುಟುಂಬ ವಾಸವಿತ್ತು. ಕೆಲವು ದುಷ್ಕರ್ಮಿಗಳು ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಕೊಲೆ ಮಾಡಲು ಬಳಸಿದ ಆಯುಧವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಇಸ್ರೋ ವಿಜ್ಞಾನಿಯನ್ನು ಕೊಂದಿದ್ದೇಕೆ? ಸತ್ಯ ಬಾಯ್ಬಿಟ್ಟ ಸಲಿಂಗಕಾಮಿ

ಘಟನೆಗೆ ಸಂಬಮಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಕೊಲೆ ನಡೆದಿದ್ದು ಯಾಕೆ ಮತ್ತು ಯಾರಿಂದ ಎಂಬ ಕುರಿತು ಯಾವುದೇ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ.

   
 
ಹೆಲ್ತ್