Back
Home » ಸುದ್ದಿ
Karnataka Assembly Session Day 1 Live Updates: ಅಧಿವೇಶನ ಆರಂಭ, ಸರ್ಕಾರಕ್ಕೆ ಆತಂಕ, ವಿಪಕ್ಷಕ್ಕೆ ಆಕ್ರೋಶ
Oneindia | 10th Oct, 2019 09:44 AM

ಬೆಂಗಳೂರು, ಅಕ್ಟೋಬರ್ 10: ಚಳಿಗಾಲದ ಅಧಿವೇಶನ ಇಂದಿನಿಂದ ವಿಧಾನಸೌಧದಲ್ಲಿ ಆರಂಭವಾಗಿದೆ. ಅಧಿವೇಶನದ ಅವಧಿ ಮೊಟಕು ಮಾಡಿರುವ ಸರ್ಕಾರ ಮೂರೇ ದಿನಕ್ಕೆ ಅಧಿವೇಶನವನ್ನು ಮುಗಿಸುವ ಆತುರ ತೋರಿದೆ.

ಬೆಳಗಾವಿಯಲ್ಲಿ ನಡೆಯಬೇಕಿದ್ದ ಅಧಿವೇಶನವನ್ನು ಸರ್ಕಾರವು ವಿಧಾನಸೌಧಕ್ಕೆ ಸ್ಥಳಾಂತರಿಸಿದೆ. ನೆರೆ ಸಂತ್ರಸ್ತರ ಪರವಾಗಿ ಪ್ರತಿಭಟನೆಗಳು ನಡೆಯುವ ಭೀತಿಯಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ವಿಧಾನಸಭೆ ಅಧಿವೇಶನ; ಸರ್ಕಾರಕ್ಕೆ ಸಂಕಷ್ಟ ತರುವ ವಿಷಯಗಳು

ಅಧಿವೇಶನದ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಕಲಾಪವನ್ನು ಮುಂದೂಡುವ ಸಂಪ್ರದಾಯ ಇದೆ ಆದರೆ ಕಡಿಮೆ ಅವಧಿಯ ಅಧಿವೇಶನ ಆದ್ದರಿಂದ ಸಂತಾಪ ಸೂಚನೆ ಬಳಿಕ ಕಲಾಪ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಕಲಾಪ ಮುಂದೂಡಲು ವಿಪಕ್ಷಗಳು ಅವಕಾಶವನ್ನು ನೀಡುವ ಸಾಧ್ಯತೆಯೂ ಕಡಿಮೆ.

ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ತಯಾರಾಗಿವೆ. ವಿರೋಧ ಪಕ್ಷ ನಾಯಕರಾಗಿ ಸಿದ್ದರಾಮಯ್ಯ ಆಯ್ಕೆ ಆಗಿದ್ದಾರೆ. ಇದು ಸರ್ಕಾರಕ್ಕೆ ಭಯ ಹುಟ್ಟಿಸಿದೆ. ಜೆಡಿಎಸ್‌ ಸಹ ಈ ಸದನದಲ್ಲಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳುವ ಲಕ್ಷಣವನ್ನು ಮೊದಲ ದಿನವೇ ತೋರಿದೆ. ದೇವೇಗೌಡ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಮೊದಲ ದಿನವೇ ಹಮ್ಮಿಕೊಳ್ಳಲಾಗಿದೆ.

ಅಧಿವೇಶನಕ್ಕೆ ಒಂದೇ ದಿನ ಬಾಕಿ! ಸವಾಲು ಎದುರಿಸಲು ಕಾಗೇರಿ ಸಮರ್ಥರೇ?

ನೆರೆ ಪರಿಹಾರ ವಿಳಂಬ, ಕಳೆದ ಅವಧಿಯಲ್ಲಿ ಘೋಷಿಸಿದ್ದ ಕಾಮಗಾರಿ ಅನುದಾನಗಳ ಕಡಿತ, ಕೆಎಸ್‌ಆರ್‌ಟಿಸಿ ನೌಕರರಿಗೆ ಸಂಬಳ ವಿಳಂಬ, ಅತೃಪ್ತರಿಗೆ ಆಶ್ರಯ, ಆಪರೇಷನ್ ಕಮಲ , ಮಾಧ್ಯಮಗಳಿಗೆ ನಿಷೇಧ ಇನ್ನೂ ಹಲವು ವಿಷಯಗಳು ಚರ್ಚೆಗೆ ಬರಲಿದ್ದು, ಸರ್ಕಾರದ ಕತ್ತು ಪಟ್ಟಿ ಹಿಡಿಯಲು ವಿಪಕ್ಷಗಳು ಸಜ್ಜಾಗಿವೆ.

ಅಧಿವೇಶನಕ್ಕೆ ಮಾಧ್ಯಮ ನಿಷೇಧ; ಆದೇಶದಲ್ಲಿ ಏನಿದೆ?

ಕಲಾಪದ ನೇರ ಪ್ರಸಾರ ಯಾವುದೇ ಖಾಸಗಿ ಚಾನೆಲ್‌ಗಳಲ್ಲಿ ಪ್ರಸಾರವಾಗುವುದನ್ನು ನಿಷೇಧಿಸಿಲಾಗಿದ್ದು, ಚಂದನ ವಾಹಿನಿಯಲ್ಲಿ ಮಾತ್ರವೇ ಕಲಾಪದ ನೇರ ಪ್ರಸಾರ ವೀಕ್ಷಿಸಬಹುದಾಗಿದೆ. ಕಲಾಪದ ಕ್ಷಣ-ಕ್ಷಣ ಮಾಹಿತಿ ಇಲ್ಲಿ ದೊರೆಯಲಿದೆ.

   
 
ಹೆಲ್ತ್