Back
Home » ಇತ್ತೀಚಿನ
ಶಿಯೋಮಿ ರೆಡ್‌ಮಿ 8 ಮೊದಲ ಮಾರಾಟದ ದಿನಾಂಕ ಪ್ರಕಟ!
Gizbot | 10th Oct, 2019 10:59 AM

ಭಾರತದ ಮೊಬೈಲ್ ಮಾರುಕಟ್ಟೆಗೆ ನೆನ್ನೆಯಷ್ಟೇ ಕಾಲಿಟ್ಟಿರುವ ಶಿಯೋಮಿ ರೆಡ್‌ಮಿ 8 ಸ್ಮಾರ್ಟ್‌ಫೋನಿನ ಮಾರಾಟದ ದಿನಾಂಕ ಪ್ರಕಟವಾಗಿದೆ. ರೆಡ್ಮಿ 8 ಭಾರತದಲ್ಲಿ ಮೊದಲ ಬಾರಿಗೆ ಅಕ್ಟೋಬರ್ 12 ರಂದು ಮಧ್ಯಾಹ್ನ 12 ಗಂಟೆಗೆ ಮಾರಾಟಕ್ಕೆ ಬರಲಿದ್ದು, ಫ್ಲಿಪ್ಕಾರ್ಟ್ನಲ್ಲಿ ಮೊಟ್ಟ ಮೊದಲ ಫ್ಲಾಶ್‌ಸೇಲ್‌ನಲ್ಲಿ ಮಾರಾಟವಾಗಲಿದೆ. ಹಾಗೆಯೇ, ಶಿಯೋಮಿಯ ಅಫಿಷಿಯಲ್ ವೆಬ್‌ಸೈಟ್‌ ಆದ ಮಿ.ಕಾಮ್‌ನಲ್ಲಿ ಮಧ್ಯಾಹ್ನ 1 ಗಂಟೆಗೆ ಮಾರಾಟಕ್ಕೆ ಬರಲಿದೆ. ಇನ್ನು ಅದೇ ಸಮಯದಲ್ಲಿ ಮಿ ಹೋಮ್‌ಗಳಲ್ಲಿಯೂ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಬಹುದಾಗಿದೆ.

ಕಳೆದ ವಾರವಷ್ಟೇ ಕೇವಲ ವದಂತಿಯಾಗಿದ್ದ ರೆಡ್ಮಿ 8 ಸ್ಮಾರ್ಟ್‌ಫೋನನ್ನು ನೆನ್ನೆ ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಾಮರ್ಥ್ಯಗಳೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ, ಫಿಂಗರ್ಪ್ರಿಂಟ್ ಸೆನ್ಸರ್, 5000 ಎಮ್ಎಹೆಚ್ ಬ್ಯಾಟರಿ ಮತ್ತು ಫೇಸ್ ಅನ್ಲಾಕ್ ಸಾಮರ್ಥ್ಯಗಳೊಂದಿಗೆ ಇಂದು ರೆಡ್ಮಿ 8 ಸ್ಮಾರ್ಟ್‌ಫೋನ್ ದೇಶಕ್ಕೆ ಕಾಲಿಟ್ಟಿದೆ. ಇಂದು ಆರಂಭವಾಗಿರುವ ಈ ಫೋನನ್ನು ಎರಡು ಮಾದರಿಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಬೇಸ್ ಮತ್ತು ಹೈ ಎಂಡ್ ಎರಡೂ ರೂಪಾಂತರಗಳನ್ನು ಒಂದೇ ಬೆಲೆಗೆ ಖರೀದಿಸಬಹುದಾಗಿದೆ.

3 ಜಿಬಿ RAM ಮತ್ತು 32 ಜಿಬಿ ಶೇಖರಣಾ ಮಾದರಿ ರೆಡ್ಮಿ 8 ಫೋನ್ ಬೆಲೆ ಬೆಲೆ ರೂ. 7,999 ರೂ.ಗಳಾಗಿದ್ದರೆ, 4 ಜಿಬಿ RAN ಮತ್ತು 64 ಜಿಬಿ ಸ್ಟೋರೇಜ್ ಹೊಂದಿರುವ ರೂಪಾಂತರವು ರೂ. 8,999 ರೂ. ಗಳಿಗೆ ಲಭ್ಯವಿದೆ. ಇನ್ನು ಹಬ್ಬದ ಆಫರ್ ಆಗಿ ಮೊದಲ ಐದು ಮಿಲಿಯನ್ ರೆಡ್‌ಮಿ 8 ಯೂನಿಟ್‌ ಸ್ಮಾರ್ಟ್‌ಫೋನ್‌ಗಳನ್ನು (ಹೈ-ಎಂಡ್ ರೂಪಾಂತರಕ್ಕೆ) 1,000 ರೂ. ರಿಯಾಯಿತಿಯಲ್ಲಿ ನೀಡಲು ಕಂಪೆನಿ ಮುಂದಾಗಿದ್ದು, 4 ಜಿಬಿ RAN ಮತ್ತು 64 ಜಿಬಿ ಸ್ಟೋರೇಜ್ ಹೊಂದಿರುವ ರೆಡ್ಮಿ 8 ಫೋನ್ ಅನ್ನು ಸಹ 7,999 ರೂ.ಗಳಿಗೆ ಖರೀದಿಸಬಹುದಾಗಿದೆ.

'ಕೇಬಲ್ ಟಿವಿ' ಶವಪೆಟ್ಟಿಗೆಗೆ ಟ್ರಾಯ್‌ನ ಕೊನೆ ಮೊಳೆ!

ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ ಬಂದಿರುವ ನೂತನ ರೆಡ್‌ಮಿ 8 ಫೋನ್ 6.22-ಇಂಚಿನ ಎಚ್‌ಡಿ + ಡಿಸ್ಪ್ಲೇ ಮತ್ತು ಸೆಲ್ಫಿ ಕ್ಯಾಮೆರಾಗೆ ವಾಟರ್ ಡ್ರಾಪ್ ದರ್ಜೆಯ ಶೈಲಿಯಲ್ಲಿದೆ. ಫಿಂಗರ್ಪ್ರಿಂಟ್ ಸೆನ್ಸರ್ ಹೊಂದಿರುವ ಈ ಸಾಧನವು ಇತರ ಕೆಲವು ಶಿಯೋಮಿ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಡುಬರುವ ಔರಾ ಮಿರರ್ ವಿನ್ಯಾಸವನ್ನು ಹೊಂದಿದೆ ಎಂದು ಹೇಳಬಹುದು. ಇನ್ನು ಸ್ನಾಪ್‌ಡ್ರಾಗನ್ 439 SoC ಪ್ರೊಸೆಸರ್ ಮತ್ತು 512GB ವರೆಗೆ ಶೇಖರಣಾ ಸ್ಥಳವನ್ನು ಹೆಚ್ಚಿಸಲು ಮೀಸಲಾದ ಮೈಕ್ರೊ SD ಕಾರ್ಡ್ ಸ್ಲಾಟ್‌ಗಳನ್ನು ಸ್ಮಾರ್ಟ್‌ಫೋನ್ ಒಳಗೊಂಡಿದೆ.

ಕ್ಯಾಮೆರಾ ವಿಭಾಗದಲ್ಲಿ ರೆಡ್ಮಿ 8 ರ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 12 ಎಂಪಿ ಪ್ರೈಮರಿ ಸೋನಿ ಐಎಂಎಕ್ಸ್ 363 ಸೆನ್ಸಾರ್ ಎಫ್ / 1.8 ಅಪರ್ಚರ್ ಮತ್ತು ಪೋರ್ಟ್ರೇಟ್ ಶಾಟ್‌ಗಳಿಗಾಗಿ 2 ಎಂಪಿ ಸೆಕೆಂಡರಿ ಡೆಪ್ತ್ ಸೆನ್ಸಾರ್ ಇದೆ. ಗೂಗಲ್ ಲೆನ್ಸ್ ಬೆಂಬಲ ಮತ್ತು ಎಐ ದೃಶ್ಯ ಪತ್ತೆ ಮುಂತಾದ ವೈಶಿಷ್ಟ್ಯಗಳಿವೆ. ಹಾಗೆಯೇ ಈ ಸಾಧನವು 8 ಎಂಪಿ ಎಐ ಸೆಲ್ಫಿ ಕ್ಯಾಮೆರಾದೊಂದಿಗೆ ಬರುತ್ತದೆ. 18W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿ ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

   
 
ಹೆಲ್ತ್