Back
Home » ಇತ್ತೀಚಿನ
ಶಿಯೋಮಿ ರೆಡ್‌ಮಿ 8 ಮೊದಲ ಮಾರಾಟ ಇಂದಿನಿಂದ ಆರಂಭ!
Gizbot | 12th Oct, 2019 10:56 AM
  • ರೆಡ್ಮಿ 8

    ಕಳೆದ ವಾರವಷ್ಟೇ ಕೇವಲ ವದಂತಿಯಾಗಿದ್ದ ರೆಡ್ಮಿ 8 ಸ್ಮಾರ್ಟ್‌ಫೋನನ್ನು ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಾಮರ್ಥ್ಯಗಳೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ, ಫಿಂಗರ್ಪ್ರಿಂಟ್ ಸೆನ್ಸರ್, 5000 ಎಮ್ಎಹೆಚ್ ಬ್ಯಾಟರಿ ಮತ್ತು ಫೇಸ್ ಅನ್ಲಾಕ್ ಸಾಮರ್ಥ್ಯಗಳೊಂದಿಗೆ ಇಂದು ರೆಡ್ಮಿ 8 ಸ್ಮಾರ್ಟ್‌ಫೋನ್ ದೇಶಕ್ಕೆ ಕಾಲಿಟ್ಟಿದೆ. ಇಂದು ಆರಂಭವಾಗಿರುವ ಈ ಫೋನನ್ನು ಎರಡು ಮಾದರಿಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಬೇಸ್ ಮತ್ತು ಹೈ ಎಂಡ್ ಎರಡೂ ರೂಪಾಂತರಗಳನ್ನು ಒಂದೇ ಬೆಲೆಗೆ ಖರೀದಿಸಬಹುದಾಗಿದೆ.


  • 64 ಜಿಬಿ ಸ್ಟೋರೇಜ್

    3 ಜಿಬಿ RAM ಮತ್ತು 32 ಜಿಬಿ ಶೇಖರಣಾ ಮಾದರಿ ರೆಡ್ಮಿ 8 ಫೋನ್ ಬೆಲೆ ಬೆಲೆ ರೂ. 7,999 ರೂ.ಗಳಾಗಿದ್ದರೆ, 4 ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್ ಹೊಂದಿರುವ ರೂಪಾಂತರವು ರೂ. 8,999 ರೂ. ಗಳಿಗೆ ಲಭ್ಯವಿದೆ. ಇನ್ನು ಹಬ್ಬದ ಆಫರ್ ಆಗಿ ಮೊದಲ ಐದು ಮಿಲಿಯನ್ ರೆಡ್‌ಮಿ 8 ಯೂನಿಟ್‌ ಸ್ಮಾರ್ಟ್‌ಫೋನ್‌ಗಳನ್ನು (ಹೈ-ಎಂಡ್ ರೂಪಾಂತರಕ್ಕೆ) 1,000 ರೂ. ರಿಯಾಯಿತಿಯಲ್ಲಿ ನೀಡಲು ಕಂಪೆನಿ ಮುಂದಾಗಿದ್ದು, 4 ಜಿಬಿ RAN ಮತ್ತು 64 ಜಿಬಿ ಸ್ಟೋರೇಜ್ ಹೊಂದಿರುವ ರೆಡ್ಮಿ 8 ಫೋನ್ ಅನ್ನು ಸಹ 7,999 ರೂ.ಗಳಿಗೆ ಖರೀದಿಸಬಹುದಾಗಿದೆ.


  • ಗೊರಿಲ್ಲಾ ಗ್ಲಾಸ್ 5

    ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ ಬಂದಿರುವ ನೂತನ ರೆಡ್‌ಮಿ 8 ಫೋನ್ 6.22-ಇಂಚಿನ ಎಚ್‌ಡಿ + ಡಿಸ್ಪ್ಲೇ ಮತ್ತು ಸೆಲ್ಫಿ ಕ್ಯಾಮೆರಾಗೆ ವಾಟರ್ ಡ್ರಾಪ್ ದರ್ಜೆಯ ಶೈಲಿಯಲ್ಲಿದೆ. ಫಿಂಗರ್ಪ್ರಿಂಟ್ ಸೆನ್ಸರ್ ಹೊಂದಿರುವ ಈ ಸಾಧನವು ಇತರ ಕೆಲವು ಶಿಯೋಮಿ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಡುಬರುವ ಔರಾ ಮಿರರ್ ವಿನ್ಯಾಸವನ್ನು ಹೊಂದಿದೆ ಎಂದು ಹೇಳಬಹುದು. ಇನ್ನು ಸ್ನಾಪ್‌ಡ್ರಾಗನ್ 439 SoC ಪ್ರೊಸೆಸರ್ ಮತ್ತು 512GB ವರೆಗೆ ಶೇಖರಣಾ ಸ್ಥಳವನ್ನು ಹೆಚ್ಚಿಸಲು ಮೀಸಲಾದ ಮೈಕ್ರೊ SD ಕಾರ್ಡ್ ಸ್ಲಾಟ್‌ಗಳನ್ನು ಸ್ಮಾರ್ಟ್‌ಫೋನ್ ಒಳಗೊಂಡಿದೆ.


  • ಡ್ಯುಯಲ್ ಕ್ಯಾಮೆರಾ ಸೆಟಪ್

    ಕ್ಯಾಮೆರಾ ವಿಭಾಗದಲ್ಲಿ ರೆಡ್ಮಿ 8 ರ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 12 ಎಂಪಿ ಪ್ರೈಮರಿ ಸೋನಿ ಐಎಂಎಕ್ಸ್ 363 ಸೆನ್ಸಾರ್ ಎಫ್ / 1.8 ಅಪರ್ಚರ್ ಮತ್ತು ಪೋರ್ಟ್ರೇಟ್ ಶಾಟ್‌ಗಳಿಗಾಗಿ 2 ಎಂಪಿ ಸೆಕೆಂಡರಿ ಡೆಪ್ತ್ ಸೆನ್ಸಾರ್ ಇದೆ. ಗೂಗಲ್ ಲೆನ್ಸ್ ಬೆಂಬಲ ಮತ್ತು ಎಐ ದೃಶ್ಯ ಪತ್ತೆ ಮುಂತಾದ ವೈಶಿಷ್ಟ್ಯಗಳಿವೆ. ಹಾಗೆಯೇ ಈ ಸಾಧನವು 8 ಎಂಪಿ ಎಐ ಸೆಲ್ಫಿ ಕ್ಯಾಮೆರಾದೊಂದಿಗೆ ಬರುತ್ತದೆ. 18W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿ ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ.




ಭಾರತದ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟು ಬಹುನಿರೀಕ್ಷೆ ಮೂಡಿಸಿರುವ ಶಿಯೋಮಿ ರೆಡ್‌ಮಿ 8 ಸ್ಮಾರ್ಟ್‌ಫೋನಿನ ಮೊದಲ ಮಾರಾಟ ಇಂದಿನಿಂದ ಆರಂಭವಾಗುತ್ತಿದೆ.ಅಕ್ಟೋಬರ್ 12 ರಂದು, ಅಂದರೆ ಇಂದು ಮಧ್ಯಾಹ್ನ 12 ಗಂಟೆಗೆ ರೆಡ್‌ಮಿ 8 ಫೋನ್ ಮಾರಾಟಕ್ಕೆ ಬರುತ್ತಿದ್ದು, ಫ್ಲಿಪ್ಕಾರ್ಟ್ನಲ್ಲಿ ಮೊಟ್ಟ ಮೊದಲ ಫ್ಲಾಶ್‌ಸೇಲ್‌ನಲ್ಲಿ ಮಾರಾಟವಾಗಲಿದೆ. ಹಾಗೆಯೇ, ಶಿಯೋಮಿಯ ಅಫಿಷಿಯಲ್ ವೆಬ್‌ಸೈಟ್‌ಮಿ.ಕಾಮ್‌ನಲ್ಲಿ ಮಧ್ಯಾಹ್ನ 1 ಗಂಟೆಗೆ ಮತ್ತು ಅದೇ ಸಮಯದಲ್ಲಿ ಮಿ ಹೋಮ್‌ಗಳಲ್ಲಿಯೂ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಬಹುದಾಗಿದೆ.

   
 
ಹೆಲ್ತ್