Back
Home » ಇತ್ತೀಚಿನ
ನಿಮ್ಮ ಕಲ್ಪನೆಗೂ ಸಿಗದ ಈ ಅಚ್ಚರಿಯ ಸ್ಮಾರ್ಟ್‌ ಡಿವೈಸ್‌ಗಳು ಬರುವ ಕಾಲ ದೂರವಿಲ್ಲ!
Gizbot | 14th Oct, 2019 05:52 PM
 • ಊಹೆಗೂ ಮೀರಿದ ಡಿವೈಸ್‌

  ಹೌದು, ಈಗಾಗಲೇ ತಂತ್ರಜ್ಞಾನ ಸಾಕಷ್ಟು ಊಹೆಗೂ ಮೀರಿದ ಡಿವೈಸ್‌ಗಳನ್ನು ಪರಿಚಯಿಸಿವೆ. ಆದ್ರೆ ಮುಂದಿನ ದಿನಗಳಲ್ಲಿ ಬರಲಿರುವ ಸ್ಮಾರ್ಟ್‌ ಡಿವೈಸ್‌ಗಳ ಬಗ್ಗೆ ನೀವು ಯೋಚಿಸಿದ್ದಿರಾ?..ಮನುಷ್ಯರ ಅತೀ ಅಗತ್ಯ ಕೆಲಸಗಳನ್ನು ನಿರ್ವಹಿಸಲು ಸಹ ಸ್ಮಾರ್ಟ್‌ ಡಿವೈಸ್‌ಗಳು ಎಂಟ್ರಿ ಕೊಡುವ ಕಾಲ ದೂರವಿಲ್ಲ. ಅಂಥಹ ಕೆಲವು ಶಾಕಿಂಗ್ ಡಿವೈಸ್‌ಗಳ ಕುರಿತು ಇಂದಿನ ಲೇಖನದಲ್ಲಿ ತಿಳಿಸಲಾಗಿದೆ. ಆ ಡಿವೈಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.


 • ಸ್ಮಾರ್ಟ್ 3D ಪೆನ್‌

  ಸದ್ಯ ನಾವು ಬಳಸುವ ಪೆನ್‌ಗಳಿಗಿಂತ ಸಂಪೂರ್ಣ ಮುಂದುವರಿದ 'ಸ್ಮಾರ್ಟ್ 3D ಪೆನ್‌'ಗಳು ಬರಲಿವೆ. ಮುಂದಿನ ಪೀಳಿಗೆಯ ಮಕ್ಕಳ ಕೈಯಲ್ಲಿ ಈ ಪೆನ್‌ಗಳ ಬಳಕೆ ಆಗುವ ಕಾಲವೆನು ದೂರವಿಲ್ಲ. ಆದ್ರೆ, ಪೆನ್‌ಗಳು ಹೇಗೆ ಕೆಲಸ ಮಾಡುತ್ತವೆಯೋ ಎಂಬುದನ್ನು ನೀವೆ ಊಹಿಸಿಕೊಳ್ಳಿ.


 • ಮ್ಯೂಸಿಕ್ ಟಚ್ ಮಾಡ್ಬಹುದಂತೆ

  ಅರೇರೇ ಇದೇನು ಅಂತೀರಾ!..ಪ್ರಸ್ತುತ ಬ್ಲೂಟೂತ್, ವಾಯರ್‌ಲೆಸ್ ಸ್ಪೀಕರ್ಸ್‌ಗಳೆಲ್ಲಿ, ಮುಂಬರುವ ಮ್ಯೂಸಿಕ್ ಟಚ್ ಸೌಲಭ್ಯದ ಸ್ಪೀಕರ್ಸ್‌ಗಳೆಲ್ಲಿ. ಸಾಕಷ್ಟು ಅಂತರವಿದೆ. ಮುಂದಿನ ದಿನಗಳಲ್ಲಿ ಮ್ಯೂಸಿಕ್ ಟಚ್ ಮಾಡುವ ಸ್ಪೀಕರ್ಸ್‌ಗಳು ಬರಲಿವೆ ಎಂದರೇ ನೀವು ನಂಬಲೇಬೇಕು.


 • ಪೆನ್ನೇ ತೀರ್ಪುಗಾರ

  ಈ ಚಿತ್ರದಲ್ಲಿ ಕಾಣುವ ಡಿವೈಸ್‌ ಸಾಮಾನ್ಯ ಮ್ಯೂಸಿಕ್ ಹಾಳೆ ತರಹ ಕಂಡರು ಅದು ತೀರ್ಪುಗಾರನ ಕೆಲಸ ಮಾಡಲಿದೆ ಎಂದರೇ ನೀವು ನಂಬಲೇಬೇಕು. ಈ ಸ್ಮಾರ್ಟ್‌ ಪೆನ್‌ ಡಿವೈಸ್‌ ಹಾಡುಗಾರಿಕೆಗೆ ಮಾರ್ಕ್‌ ನೀಡುತ್ತದೆ.


 • ಇನ್‌ಸ್ಟಾಗ್ರಾಂ ಕ್ಯಾಮೆರಾ

  ಈಗಾಗಲೇ ಹಲವು ವಿಶೇಷ ಕ್ಯಾಮೆರಾಗಳು ಮಾರುಕಟ್ಟೆಗೆ ಬಂದಿವೆ..ಆದ್ರೆ ಮುಂಬರುವ ಕ್ಯಾಮೆರಾಗಳು ತುಂಬಾ ಸ್ಮಾರ್ಟ್‌ ಆಗಿರಲಿವೆ ಎನ್ನುವ ಕುರುಹನ್ನು ಈ ಇನ್‌ಸ್ಟಾಗ್ರಾಂ ಫೋಕಸ್ಡ್‌ ಕ್ಯಾಮೆರಾ ತಿಳಿಸುತ್ತದೆ.


 • ಬಟ್ಟೆ ಮಡಚಲೂ ಮಶಿನ್

  ಸದ್ಯ ನೀವು ಬಟ್ಟೆ ವಾಶ್‌ ಮಾಡಲು ವಾಷಿಂಗ್ ಮಶಿನ್ ನೋಡಿದಿರಾ ಸರಿ. ಆದ್ರೆ ನೀವು ಬಟ್ಟೆಗಳನ್ನು ಮಡಚಲು ಸಹ ಮಶಿನ್ ನೋಡುವ ಕಾಲವು ಸನಿಹದಲ್ಲಿಯೇ ಇದೆ. ಬಹುಶಃ ಮುಂದೊಂದು ದಿನ ಬಟ್ಟೆ ತೊಡೆಸುವ ಮಶಿನ್ ಬಂದರೂ ಅಚ್ಚರಿ ಪಡಬೇಕಿಲ್ಲ ಅಲ್ಲವೇ.?


 • ರೋಬೋಟ್ ಸೂಟ್‌ಕೇಸ್

  ಪ್ರವಾಸ ಮಾಡುವಾಗ ಬ್ಯಾಗ್‌ಗಳು ಬಾರವಾಗದಿರಲಿ ಎಂದು ಲೈಟ್‌ವೇಟ್‌ ಇರುವ ಟ್ರಾಲಿ ಬ್ಯಾಗ್‌ಗಳು ಮಾರುಕಟ್ಟೆಗೆ ಪರಿಚಿತವಾದವು. ಆದ್ರೆ ಇನ್ನೇನು ಪ್ರಯಾಣಿಕರ ಜೊತೆಗೆ ತಾವಾಗಿಯೇ ಹೋಗುವ ರೋಬೋಟ್‌ ಸೂಟ್‌ಕೇಸ್‌ಗಳು ಬರುವ ಕಾಲವು ಹತ್ತಿರಲ್ಲಿದೆ.


 • ಪೆನ್‌ ಪ್ರಿಂಟರ್

  ಝೆರಾಕ್ಸ್‌ ಮಿಶನ್ ಈಗ ತುಂಬಾ ಹಳೆಯದೆನಿಸಿದ್ದು, ಸದ್ಯ ಅತ್ಯುತ್ತಮ ಪ್ರಿಂಟರ್‌ಗಳು ಮಾರುಕಟ್ಟೆಗೆ ಬಂದಿವೆ. ಆದ್ರೆ ಇನ್ನುಂದೆ ಬರಲಿರುವ ಪೆನ್‌ ಪ್ರಿಂಟರ್ ಖಂಡಿತಾ ದೊಡ್ಡ ಅಚ್ಚರಿಯ ಸ್ಮಾರ್ಟ್ ಡಿವೈಸ್‌ ಎನಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.


 • ಸ್ಮಾರ್ಟ್‌ ತೂಕ

  ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ಬಗೆಯ ಅಳತೆ ಮಾಪನ ಉತ್ಪನ್ನಗಳಿವೆ. ಮುಂದಿನ ದಿನಮಾನಗಳಲ್ಲಿ ಸ್ಮಾರ್ಟ್‌ ತೂಕದ ಯಂತ್ರಗಳು ಸಹ ಬರುವುದು ಕನ್‌ಫರ್ಮ್‌ ಎನ್ನುವುದನ್ನು ಈ ತೂಕದ ಯಂತ್ರ ಸಾರಿ ಹೇಳುವಂತಿದೆ.


 • ಇದು ಹ್ಯಾಂಗರಾ?

  ನೋಡಲು ಹ್ಯಾಂಗರ್ ತರಹ ಕಾಣಿಸುವ ಇದು ಬರೀ ಹ್ಯಾಂಗರ್ ಅಷ್ಟೇ ಅಲ್ಲ. ಬದಲಿಗೆ ಹ್ಯಾಂಗರ್ ಕಮ್ ಡ್ರೈಯರ್ ಡಿವೈಸ್‌ ಆಗಿದೆ. ಟವಲ್‌ಗಳನ್ನು ಬಣಗಿಸುವ ಸೌಲಭ್ಯವನ್ನು ಈ ಡಿವೈಸ್‌ ಪಡೆದಿದೆ. ಅಗತ್ಯಕ್ಕೆ ಅನುಗುಣವಾಗಿ ಸೆಟ್‌ ಮಾಡಲು, ಸೆಟ್ಟಿಂಗ್ ಆಯ್ಕೆಗಳನ್ನು ನೀಡಲಾಗಿದೆ.


 • ಇದು ಗ್ಲಾಸ್‌ ಅಲ್ಲ!

  ಈ ಚಿತ್ರದಲ್ಲಿರುವುದು ಗ್ಲಾಸ್‌ ಅಂತಾ ನೀವು ಅಂದುಕೊಂಡರೇ ನಿಮ್ಮ ಊಹೆ ಖಂಡಿತಾ ತಪ್ಪು. ಏಕೆಂದರೇ ಇದು ಟ್ರಾನ್ಫ್ಸ್‌ರೆಂಟ್‌ ಸ್ಮಾರ್ಟ್‌ ಟಿವಿ ಸ್ಕ್ರೀನ್ ಆಗಿದೆ. ಇದರ ನಂತರ ಇನ್ನೆಂಥ ಟಿವಿಗಳು ಬರಬಹುದು ಎಂದು ಊಹಿಸುವದು ಕಷ್ಟ.


 • ಉಗುರೇ ವಾಚ್

  ಒಂದು ಕಾಲದಲ್ಲಿ ಎಚ್‌ಎಮ್‌ಟಿ ವಾಚ್‌ ಅಂದ್ರೆ ಹವಾ ಇತ್ತು. ಇವಾಗಂತೂ ಸ್ಮಾರ್ಟ್‌ ವಾಚ್‌ಗಳ ಟ್ರೆಂಡ್‌ ಶುರುವಾಗಿದೆ. ಆದ್ರೆ ಮುಂಬರುವ ನೇಲ್‌ ಸ್ಮಾರ್ಟ್‌ ವಾಚ್‌ ಅದ್ಭುತ ಆವಿಸ್ಕಾರ ಎನ್ನಬಹುದು. ಉಗುರಿಗೆ ಧರಿಸಬಹುದಾದ ಈ ಡಿವೈಸ್‌ ಸಖತ್ ಸ್ಮಾರ್ಟ್‌.


 • ನಾಯಿಸ್‌ಲೆಸ್‌ ಮೈಕ್‌

  ಮುಂದಿನ ದಿನಗಳಲ್ಲಿನ ಹಲವು ಅಚ್ಚರಿಯ ಡಿವೈಸ್‌ಗಳಲ್ಲಿ ಈ ನಾಯಿಸ್‌ಲೆಸ್‌ ಕರೋಕೆ ಮೈಕ್ರೊಫೋನ್ ಸಹ ಒಂದು. ಈ ಕಿಟ್‌ ಹಾಡುಗಾರರಿಗೆ ಮೈಕ್ ಮೈಕ್ ಸಹ ಶಬ್ದ ರಹಿತವಾದ ವ್ಯವಸ್ಥೆ ನೀಡಲಿದೆ. ಮುಂದೇ ಇನ್ನೆಂಥ ಮೈಕ್‌ಗಳು ಬರಬಹುದು ಅಂತಾ ನೀವೆ ಯೋಚಿಸಿ.


 • ಜೆಲ್‌ ಫ್ರಿಡ್ಜ್‌

  ಸ್ಮಾರ್ಟ್‌ ಫ್ರಿಡ್ಜ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಅಬ್ಬರಿಸುತ್ತಿವೆ. ಆದ್ರೆ ಮುಂಬರಲಿರುವ ಬೈಯೊಪಾಲಿಮರ್‌ ಜೆಲ್‌ ಫ್ರಿಡ್ಜ್‌ಗಳು ಎಲ್ಲರು ಹುಬ್ಬೆರಿಸುವಂತಿವೆ. ಆಹಾರ ಪದಾರ್ಥಗಳನ್ನು ಜೆಲ್‌ ಕೂಲ್ ಆಗಿಸುತ್ತದೆ. ಜೆಲ್‌ನಲ್ಲಿಯೇ ಆಹಾರ ಪದಾರ್ಥಗಳನ್ನು ಇಡಬೇಕಿರುತ್ತದೆ.


 • ಸೆಲ್ಫಿ ಶೂ

  ಸೆಲ್ಫಿ ಕ್ರೇಜ್‌ ಹೆಚ್ಚಾಗಿರುವುದರಿಂದಲೇ ಕೆಲವು ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ವಿಶೇಷ ಸೆಲ್ಫಿ ಕ್ಯಾಮೆರಾ ಪರಿಚಯಿಸುವುದನ್ನು ನೋಡಿದ್ದೆವೆ. ಈ ಕ್ರೇಜ್ ಹೆಚ್ಚಾಗುತ್ತಿರುವ ಪರಿಣಾಮ ಮುಂದಿನ ದಿನಗಳಲ್ಲಿ 'ಸೆಲ್ಫಿ ಶೂ' ಡಿವೈಸ್‌ಗಳು ಮಾರುಕಟ್ಟೆಗೆ ಬರುವುದರಲ್ಲಿ ಅನುಮಾನವೇ ಇಲ್ಲ.


 • ಬೆರಳೆ ಅಳತೆ ಮಾಪನ

  ಮುಂದಿನ ದಿನಗಳಲ್ಲಿ ಚಿಕ್ಕ ಪುಟ್ಟ ವಸ್ತುಗಳ ಅಳತೆ ಮಾಡಲು ಅಳತೆ ಟೇಪ್‌ನ ಅಗತ್ಯ ಇರುವುದಿಲ್ಲ ಎನ್ನುವ ಅಂಶಗಳನ್ನು ಈ ಸ್ಮಾರ್ಟ್‌ ಫಿಂಗರ್ ಅಳತೆ ಮಾಪನ ತಿಳಿಸುತ್ತದೆ. ಈ ಡಿವೈಸ್‌ಗಳನ್ನು ಬೆರಳಿಗೆ ಧರಿಸಿ ಗಾತ್ರದ ಅಳತೆ ಮಾಡಬಹುದಾಗಿದೆ.


 • ಆನ್‌ಲೈನ್ ಸ್ಟ್ಯಾಂಡ್‌

  ಸಾಮಾಜಿಕ ತಾಣಗಳು ಸದ್ಯ ಅತ್ಯುತ್ತಮ ಮನರಂಜನೆಯ ತಾಣಗಳಾಗಿವೆ. ಇನ್ನು ಮುಂದಿನ ದಿನಗಳಲ್ಲಿ ಇಂಟರ್ನೆಟ್‌ ಇನ್ನೆಷ್ಟು ಅದ್ಭುತ ಸೇವೆಗಳನ್ನು ನೀಡಬಹುದು ಎಂಬುದನ್ನು ನೀವೆ ಊಹಿಸಿ. ಹೀಗೆ ಸದಾ ಆನ್‌ಲೈನ್‌ನಲ್ಲಯೇ ಹ್ಯಾಂಗೋವರ್‌ ಆಗಿರುವವರಿಗೆ ಈ ಆನ್‌ಲೈನ್‌ ಸ್ಟ್ಯಾಂಡ್‌ ಅಗತ್ಯ ಎನಿಸುತ್ತದೆ.


 • ಲೈಟರ್ ವಾಚ್

  ಮುಂದಿನ ದಿನಗಳಲ್ಲಿ ಸಿಗರೇಟ್ ಹಚ್ಚಲು ಬೆಂಕಿ ಪೊಟ್ಟಣ ಅಥವಾ ಲೈಟರ್ ಅಗತ್ಯ ಖಂಡಿತಾ ಇರುವುದಿಲ್ಲ ಎನ್ನುವ ಸಂಗತಿಯನ್ನು ಈ ಸ್ಮಾರ್ಟ್ ಲೈಟರ್ ವಾಚ್ ಡಿವೈಸ್‌ ತೋರಿಸುತ್ತದೆ. ಏಕೆಂದರೇ ಈ ಸ್ಮಾರ್ಟ್‌ ವಾಚ್‌ನಲ್ಲಿಯೇ ಲೈಟರ್‌ ನೀಡಲಾಗಿದೆ.


 • ಮೈ ಕೈ ನೋವು ಮಾಯ

  ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಮೈ ಕೈ ನೋವುಗಳಿಗೆ ಕ್ರಿಮ್‌ ಹಚ್ಚಲಾಗುತ್ತದೆ ಇಲ್ಲವೇ ಮಾತ್ರೆ ನುಂಗಲಾಗುತ್ತದೆ. ಆದ್ರೆ ನೋವು ನಿವಾರಕ ಸ್ಮಾರ್ಟ್ ಡಿವೈಸ್‌ಗಳು ಬರುವ ಕಾಲ ಸನಿಹವಾಗಿದೆ. ಅದಕ್ಕೆ ಈ ಚಿತ್ರದಲ್ಲಿನ ಸ್ಮಾರ್ಟ್‌ ಡಿವೈಸ್‌ ಮುನ್ಸೂಚನೆ ನೀಡಿದೆ.


 • ಪ್ರಾಣಿಗಳ ಭಾಷೆ ಬಲ್ಲಿರಾ

  ಸಾಕು ಪ್ರಾಣಿಗಳ ವಿಚಾರಗಳನ್ನು ಮನುಷ್ಯರಿಗೆ ತಿಳಿಸಲು ಸ್ಮಾರ್ಟ್‌ ಡಿವೈಸ್‌ಗಳು ಬರಲಿವೆ. ಈ ಕುರಿತು ಈ ಚಿತ್ರದಲ್ಲಿನ ಡಿವೈಸ್‌ ಸ್ಪಷ್ಟ ಚಿತ್ರಣ ಹೊರಹಾಕುವಂತಿದೆ. ಮುಂದಿನ ದಿನಗಳಲ್ಲಿ ಮನುಷ್ಯ ತನ್ನ ಸಾಕು ನಾಯಿಯ ಆಲೋಚನೆ ಅರ್ಥೈಸಿಕೊಳ್ಳುವುದರಲ್ಲಿ ಸಂದೇಹ ಇಲ್ಲ.


 • ಹಾಟ್‌ ಸಾಕ್ಸ್‌

  ಚಳಿಗಾಲದಲ್ಲಿ ಕಿವಿಗಳಿಗೆ ಊಲನ ಕ್ಯಾಪ್ ಧರಿಸುವಂತೆ ಕಾಲುಗಳನ್ನು ಬೆಚ್ಚಗಿಡಲು ಹಾಟ್‌ ಸಾಕ್ಸ್‌ ಡಿವೈಸ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುವುದ ಕಾಲ ದೂರವಿಲ್ಲ. ಈ ಧರಿಸುವ ಸಾಕ್ಸ್‌ ಡಿವೈಸ್‌ಗಳ ಪಾದಗಳಿಗೆ ಬಿಸಿಯ ಅನುಭವ ನೀಡಲಿವೆ.
ಪ್ರಸ್ತುತ ತಂತ್ರಜ್ಞಾನವು ಶರವೇಗದಲ್ಲಿ ಮುನ್ನುಗ್ಗುತ್ತಿದ್ದು, ಹಲವು ಅಚ್ಚರಿಯ ಸ್ಮಾರ್ಟ್‌ ಡಿವೈಸ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇಂದಿನ ಪ್ರತಿಯೊಂದು ಕೆಲಸಕ್ಕೂ ತಂತ್ರಜ್ಞಾನ ಸ್ಪರ್ಶ ನೀಡಲಾಗುತ್ತಿದ್ದು, ಇತ್ತೀಚಿಗೆ AI ಆಧಾರಿತ ತಂತ್ರಜ್ಞಾನವು ಸ್ಮಾರ್ಟ್‌ ಡಿವೈಸ್‌ಗಳಿಗೆ ಮತ್ತಷ್ಟು ಸ್ಮಾರ್ಟ್‌ ರೂಪ್‌ ನೀಡುತ್ತಿದೆ. ತಂತ್ರಜ್ಞಾನದ ಬೆಳೆವಣಿಗೆಯ ಕೆಲವು ಅದ್ಭುತ ಡಿವೈಸ್‌ಗಳ ಬಗ್ಗೆ ನೀವು ನೋಡಿದರೇ ಖಂಡಿತಾ ಇಂಥಾ ಡಿವೈಸ್‌ಗಳಿವೆಯಾ ಎಂದು ಪ್ರಶ್ನೆ ಮಾಡಿಕೊಳ್ಳುತ್ತಿರಿ.

   
 
ಹೆಲ್ತ್