Back
Home » ಇತ್ತೀಚಿನ
ದೃಷ್ಟಿ ಚೇತನರಿಗೆ ಗೂಗಲ್‌ನಿಂದ ಹೊಸ ಫೀಚರ್‌..! ಮ್ಯಾಪ್ಸ್‌ನಲ್ಲಿ ನವ ಸೇವೆ..!
Gizbot | 14th Oct, 2019 06:25 PM
 • ವಿವರಣಾತ್ಮಕ ಧ್ವನಿ ಮಾರ್ಗದರ್ಶನ

  ವಿಶ್ವ ದೃಷ್ಟಿ ದಿನದ ಪ್ರಯುಕ್ತ ಗೂಗಲ್‌ ಮ್ಯಾಪ್ಸ್‌ ಹೊಸ ಸೇವೆಯೊಂದನ್ನು ಘೋಷಣೆ ಮಾಡಿದ್ದು, ದೃಷ್ಟಿ ಚೇತನರಿಗೆ ಅನುಕೂಲವಾಗಲೆಂದು ವಿವರಣಾತ್ಮಕವಾದ ಧ್ವನಿ ಮಾರ್ಗದರ್ಶನದ ಫೀಚರ್‌ನ್ನು ಗೂಗಲ್‌ ಮ್ಯಾಪ್ಸ್‌ನಲ್ಲಿ ಪರಿಚಯಿಸಲಾಗಿದೆ. ಗೂಗಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಟೋಕಿಯೋ ಮೂಲದ ಬ್ಯುಸಿನೆಸ್‌ ಅನಾಲಿಸ್ಟ್‌ ವಕಾನಾ ಸುಗಿಯಾಮಾ ಈ ಯೋಜನೆಯ ಮುಂದಾಳತ್ವ ವಹಿಸಿದ್ದಾರೆ. ವಕಾನಾ ಕೂಡ ದೃಷ್ಟಿ ದೋಷ ಹೊಂದಿದ್ದು, ಹೊಸ ಸೇವೆಯ ಪ್ರಾರಂಭಕ್ಕೆ ನಾಂದಿಯಾಡಿದ್ದಾರೆ.


 • 36 ಮಿಲಿಯನ್‌ ದೃಷ್ಟಿ ಚೇತನರು

  ವಿಶ್ವದಾದ್ಯಂತ ಸದ್ಯ 36 ಮಿಲಿಯನ್‌ಗೂ ಹೆಚ್ಚು ದೃಷ್ಟಿ ಚೇತನರಿದ್ದಾರೆ. ಇನ್ನು, 253 ಮಿಲಿಯನ್‌ ಜನ ಗ್ಲಾಕೋಮಾ, ರೇಟಿನಾ ದೋಷ, ಡಯಾಬಿಟಿಕ್‌ ರೆಟಿನೋಪತಿಯಿಂದ ಭಾಗಶಃ ದೃಷ್ಟಿ ಚೇತನರಾಗಿದ್ದಾರೆ. ಇವರೆಲ್ಲರಿಗೂ ಸಂಚಾರ ಮತ್ತಷ್ಟು ಸರಳವಾಗಲಿ ಎಂದು ಗೂಗಲ್‌ ತನ್ನ ಗೂಗಲ್‌ ಮ್ಯಾಪ್ಸ್‌ ಸೇವೆಯಲ್ಲಿ ಹೊಸ ಫೀಚರ್‌ನ್ನು ಪರಿಚಯಿಸಿದೆ.


 • ಜಪಾನ್‌, ಅಮೆರಿಕಾದಲ್ಲಿ ಪ್ರಾರಂಭ

  ಸದ್ಯ ಗೂಗಲ್‌ ಮ್ಯಾಪ್ಸ್‌ನ ಹೊಸ ಫೀಚರ್‌ನ್ನು ಆರಂಭಿಕ ಹಂತವಾಗಿ ಜಪಾನ್‌ ಮತ್ತು ಅಮೆರಿಕಾದಲ್ಲಿ ಪ್ರಾರಂಭಿಸಲಾಗಿದ್ದು, ಆಂಡ್ರಾಯ್ಡ್ ಮತ್ತು ಐಒಎಸ್‌ ಬಳಕೆದಾರರಿಗೆ ಫೀಚರ್‌ ಲಭ್ಯವಿದೆ. ಮುಂದಿನ ದಿನಗಳಲ್ಲಿ ವಾಕಿಂಗ್‌ ಟ್ರಿಪ್‌ ಬಗ್ಗೆ ಹೆಚ್ಚಿನ ಅಪ್‌ಡೇಟ್‌ಗಳನ್ನು ಪಡೆಯಲಿದ್ದು, ಕಾಲಕ್ಕೆ ತಕ್ಕಂತೆ ಘೋಷಣೆಗಳು, ಅಲರ್ಟ್‌ಗಳು, ಎಚ್ಚರಿಕೆಗಳು ಹಾಗೂ ದಿಕ್ಸೂಚಿಯನ್ನು ಗೂಗಲ್‌ ಮ್ಯಾಪ್ಸ್‌ ನೀಡಲಿದೆ.


 • ಹೇಗೆ ಬಳಕೆ..?

  ಹೊಸ ಫೀಚರ್‌ ಬಳಸಲು ಗೂಗಲ್‌ ಮ್ಯಾಪ್ಸ್‌ನಲ್ಲಿ ಸೆಟ್ಟಿಂಗ್ಸ್‌ಗೆ ಹೋಗಿ ನ್ಯಾವಿಗೇಶನ್‌ ಆಯ್ಕೆಯನ್ನು ಟ್ಯಾಪ್‌ ಮಾಡಿ, ಅದರಲ್ಲಿ ಕೆಳಗಡೆಯಿರುವ 'ಡಿಟೇಲ್ಡ್‌ ವಾಯ್ಸ್ ಗೈಡೆನ್ಸ್‌' ಎಂಬ ಆಯ್ಕೆಯನ್ನು ಆಯ್ದುಕೊಳ್ಳಿ, ಅದರಲ್ಲಿ 'ವಾಕಿಂಗ್‌ ಆಪ್ಶನ್ಷ್‌'ನ್ನು ಟ್ಯಾಪ್‌ ಮಾಡಿ. ಆಪಲ್‌ ಕೂಡ ಈ ಕುರಿತು ಕಾರ್ಯನಿರ್ವಹಿಸುತ್ತಿದ್ದು, 'ಟಚ್‌ ಬೇಸಡ್‌ ಎಕ್ಸ್‌ಪ್ಲೋರೆಷನ್‌ ಆಫ್‌ ಮ್ಯಾಪ್ಸ್‌ ಫಾರ್‌ ಸ್ಕ್ರೀನ್‌ ರೀಡರ್‌ ಯುಸರ್ಸ್‌' ಸಂಶೋಧನೆ ಮೇಲೆ ಪೇಟೆಂಟ್‌ ಪಡೆಯಲು ಅರ್ಜಿ ಹಾಕಿದ್ದು, ಸಂಶೋಧನೆ ನಡೆಸುತ್ತಿದೆ.


 • ಯಾರಾದರೂ ಬಳಸಬಹುದು

  ಹೊಸ ಫೀಚರ್‌ ಕೇವಲ ದೃಷಷ್ಟಿ ಚೇತನರಿಗೆ ಮಾತ್ರ ಸೀಮಿತವಲ್ಲ ಯಾರಾದರೂ ಬಳಸಬಹುದಾಗಿದ್ದು, ಸ್ಕ್ರಿನ್‌ ಫ್ರೀ ಅನುಭವವನ್ನು ಯಾರು ಬಯಸುತ್ತಾರೋ ಅವರಿಗೆ ಈ ಫೀಚರ್‌ ಸೂಕ್ತವಾಗಲಿದೆ. ಫೋನ್‌ನ್ನು ಜೇಬಿನಲ್ಲಿ ಹಾಕಿಕೊಂಡು ಇಯರ್‌ಫೋನ್‌ ಮೂಲಕ ವಿವರಣಾತ್ಮಕವಾದ ಮಾರ್ಗದರ್ಶನ ಪಡೆಯುತ್ತಾ ದಾರಿಯನ್ನು ಕ್ರಮಿಸಬಹುದಾಗಿದೆ.
ಮಾನವನ ದೈನಂದಿನ ಜೀವನದಲ್ಲಿ ತಂತ್ರಜ್ಞಾನ ಬಹುಮುಖ್ಯವಾದ ಪಾತ್ರವಹಿಸುತ್ತಿದೆ. ಡಿಲ್ಲಿಯಿಂದ ಹಳ್ಳಿಯವರೆಗೆ ಎಲ್ಲಿಗೆ ಹೋಗಬೇಕೆಂದರೂ, ಯಾವುದೇ ಉತ್ಪನ್ನಗಳನ್ನು ಖರೀದಿಸಬೇಕೆಂದರೂ ತಂತ್ರಜ್ಞಾನದ ಅವಶ್ಯಕತೆಯಿದೆ. ನ್ಯಾವಿಗೇಶನ್‌ನಿಂದ ಸಂಚಾರ ಬಹಳಷ್ಟು ಸುಲಭವಾಗಿದ್ದು, ಸಾಮಾನ್ಯ ಜನರಿಗೆ ಸ್ಮಾರ್ಟ್‌ಮ್ಯಾಪ್ಸ್‌ ಸರಳವಾಗಿದೆ. ಆದರೆ, ದೃಷ್ಟಿ ದೋ‍ಷ ಹೊಂದಿದವರು ಹೇಗೆ ಮ್ಯಾಪನ್ನು ಅನುಸರಿಸಲು ಸಾಧ್ಯ. ಅದಕ್ಕಾಗಿಯೇ ಗೂಗಲ್‌ ತನ್ನ ಗೂಗಲ್‌ ಮ್ಯಾಪ್ಸ್‌ನಲ್ಲಿ ಹೊಸ ಸೇವೆಯೊಂದನ್ನು ಪರಿಚಯಿಸಿದ್ದು, ದೃಷ್ಟಿ ದೋಷವುಳ್ಳವರು ಸರಳವಾಗಿ ಗೂಗಲ್‌ ಮ್ಯಾಪ್ಸ್‌ನ್ನು ಅನುಸರಿಸಬಹುದಾಗಿದೆ.

   
 
ಹೆಲ್ತ್