Back
Home » ಇತ್ತೀಚಿನ
ಅಮೆಜಾನ್ ಫೆಸ್ಟಿವಲ್ ಸೇಲ್ 2019: ಫಿಟ್‌ನೆಸ್ ಬ್ಯಾಂಡ್ ಖರೀದಿಗೆ ಬೆಸ್ಟ್ ಟೈಮ್!
Gizbot | 15th Oct, 2019 09:10 AM
 • 10% ತ್ವರಿತ ರಿಯಾಯಿತಿ

  ಅಮೆಜಾನ್‌ನ ಕೊಡುಗೆಗಳಲ್ಲಿ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ / ಡೆಬಿಟ್ ಕಾರ್ಡ್‌ಗಳ ಮೇಲೆ ಬೋನಸ್ ಕೊಡುಗೆಯೊಂದಿಗೆ 10% ತ್ವರಿತ ರಿಯಾಯಿತಿ, ಇಎಂಐ ವಹಿವಾಟುಗಳು, ವಿನಿಮಯ ಮತ್ತು ಕ್ಯಾಶ್‌ಬ್ಯಾಕ್ ಕೊಡುಗೆಗಳು, ಡಬಲ್ ಡೇಟಾ ಕೊಡುಗೆಗಳು ಮತ್ತು ಯಾವುದೇ ವೆಚ್ಚವಿಲ್ಲದ ಇಎಂಐ ಆಯ್ಕೆಗಳು ಸೇರಿದೆ. ಇಷ್ಟು ಮಾತ್ರವಲ್ಲದೇ, ಕೆಲವು ಡೆಬಿಟ್ ಕಾರ್ಡ್‌ಗಳ ಮೇಲೆ 1 ಲಕ್ಷ ರೂ.ಗಳ ವರೆಗೆ ಸಾಲವನ್ನು ನೀಡಲಾಗುತ್ತಿದೆ. ಇನ್ನುಳಿದಂತೆ ಬಜಾಜ್ ಫಿನ್‌ಸರ್ವ್ ಕಾರ್ಡ್ ಬಳಸುವಾಗ 100 ಆಫರ್ ಮತ್ತು ವಿಮಾನ ಕಾಯ್ದಿರಿಸುವಾಗ 250 ಕ್ಯಾಶ್‌ಬ್ಯಾಕ್ ಸಿಗಲಿದೆ.


 • ಫಿಟ್ನೆಸ್ ಕ್ರೇಜ್

  ಇಷ್ಟು ಅಮೆಜಾನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ವಿಷಯವಾದರೆ, ನೀವು ಫಿಟ್ನೆಸ್ ಕ್ರೇಜ್ ಮತ್ತು ಸ್ಮಾರ್ಟ್ ಬ್ಯಾಂಡ್, ವಾಚ್ ಕುರಿತು ಆಸಕ್ತಿ ಹೊಂದಿದ್ದಲ್ಲಿ ಇಂದಿನ ಲೇಖನ ನಿಮಗೆ ಸಹಾಯವಾಗಲಿದೆ. ಏಕೆಂದರೆ, ದೀಪಾವಳಿ ವಿಶೇಷ ಮಾರಾಟದಲ್ಲಿ ಅಮೆಜಾನ್ ಭರ್ಜರಿ ಡಿಸ್ಕೌಂಟ್ ನೀಡುತ್ತಿದ್ದು, ಗ್ಯಾಜೆಟ್ ಪ್ರಿಯರಿಗಾಗಿ ಸ್ಮಾರ್ಟ್‌ವಾಚ್ ಮತ್ತು ಫಿಟ್ನೆಸ್ ಬ್ಯಾಂಡ್ ಮೇಲೂ ಭರ್ಜರಿ ಡಿಸ್ಕೌಂಟ್ ಲಭ್ಯವಿದೆ. ನೀವು ಫಿಟ್ನೆಸ್ ಕ್ರೇಜ್ ಮತ್ತು ಸ್ಮಾರ್ಟ್ ಬ್ಯಾಂಡ್, ವಾಚ್ ಕುರಿತುಹೆಚ್ಚು ಆಸಕ್ತಿ ತೋರಿಸುತ್ತಿದ್ದರೆ, ಅವುಗಳ ಬಗ್ಗೆ ನಾವಿಲ್ಲಿ ಪಟ್ಟಿ ಮಾಡಿ ನೀಡಿದ್ದೇವೆ.


 • ಎಂಐ ಬ್ಯಾಂಡ್ 3

  ಈ ಸೇಲ್‌ನಲ್ಲಿ ಶಿವೋಮಿ ಹೊರತಂದಿರುವ ಎಂಐ ಬ್ಯಾಂಡ್ 3 ಮಾದರಿ 2,199 ರೂ. ಎಂಆರ್‌ಪಿ ದರ ಹೊಂದಿದ್ದು, 1,599 ರೂ.ಗೆ ಆಫರ್‌ ಸೇಲ್‌ನಲ್ಲಿ ಲಭ್ಯವಿದೆ. ಹಾಗೆಯೇ, ಅಮೆಜ್ ಫಿಟ್ ಸ್ಮಾರ್ಟ್‌ ವಾಚ್ 5,499 ರೂ. ಎಂಆರ್‌ಪಿ ದರವಿದ್ದು, ಹಬ್ಬದ ಕೊಡುಗೆಯಾಗಿ 2,999 ರೂ.ಗೆ, ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ 42 mm ಸ್ಮಾರ್ಟ್‌ವಾಚ್ ಆಫರ್ ದರದಲ್ಲಿ 18,990 ರೂ.ಗೆ, ಫಿಟ್‌ಬಿಟ್ ವರ್ಸಾ ಹೆಲ್ತ್ ಆಂಡ್ ಫಿಟ್ನೆಸ್ ಸ್ಮಾರ್ಟ್‌ವಾಚ್ 14,428 ರೂ.ಗೆ ದೊರೆಯುತ್ತಿದೆ. ಜನಪ್ರಿಯ ನಾಯ್ಸ್ ಕಲರ್‌ಫಿಟ್ 2 ಸ್ಮಾರ್ಟ್‌ ಫಿಟ್ನೆಸ್ ಬ್ಯಾಂಡ್ ಕೇವಲ 1,499 ರೂ.ಗೆ ಲಭ್ಯವಿದೆ.


 • ಆಫರ್ ದರದಲ್ಲಿ

  ಇವಗಳ ಜೊತೆಗೆ ಅಮೆಜಾನಿನಲ್ಲಿ ಹೆಚ್ಚು ಸೇಲ್ ಆಗುತ್ತಿರುವ ಮತ್ತೊಂದು ಫಿಟ್ನೆಸ್ ಬ್ಯಾಂಡ್ ಕ್ರಾಫ್ಟೆಡ್ ಫಾರ್ ಅಮೆಜಾನ್ ಆಫರ್ ದರದಲ್ಲಿ 1,399 ರೂ.ಗೆ ದೊರೆಯುತ್ತದೆ. ಟಿಕ್ ವಾಚ್ E2 ಈಗ 16,999 ರೂ. ಎಂಆರ್‌ಪಿ ಇದ್ದು, 11,999 ರೂ.ಗೆ ಲಭ್ಯವಿದೆ. ಹಾನರ್ ಬ್ರ್ಯಾಂಡ್ ಪ್ರಿಯರಿಗೆ ಹಾನರ್ ಬ್ಯಾಂಡ್ 5 ಇದೀಗ ಕೇವಲ 2,399 ರೂ.ಗೆ ಆಫರ್‌ನಲ್ಲಿ ಲಭ್ಯವಿದೆ. ಹಾಗಾದರೆ, ಇನ್ನೇಕೆ ತಡ. ನೀವು ಕೂಡ ಫಿಟ್ನೆಸ್ ಕ್ರೇಜ್ ಮತ್ತು ಸ್ಮಾರ್ಟ್ ಬ್ಯಾಂಡ್, ವಾಚ್ ಕುರಿತುಹೆಚ್ಚು ಆಸಕ್ತಿ ತೋರಿಸುತ್ತಿದ್ದರೆ, ಈ ಹಬ್ಬದ ಸೇಲ್‌ನಲ್ಲಿ ಉತ್ತಮ ಡಿವೈಸ್ ಅನ್ನು ನಿಮ್ಮದಾಗಿಸಿಕೊಳ್ಳಿ.
ಅಮೆಜಾನ್ ಕಳೆದ ವಾರವಷ್ಟೇ ಆಯೋಜಿಸಿದ್ದ "ಗ್ರೇಟ್ ಇಂಡಿಯನ್ ಫೆಸ್ಟಿವಲ್" ಮಾರಾಟದ ಸಮಯವನ್ನು ಮತ್ತಷ್ಟು ವಿಸ್ತರಿಸಿದೆ. ಹೊಸ ವೇಳಾಪಟ್ಟಿಯ ಪ್ರಕಾರ, ಅಕ್ಟೋಬರ್ 13 ರಿಂದ ಅಕ್ಟೋಬರ್ 17 ರವರೆಗೆ ಅಮೆಜಾನಿನ ಮತ್ತೊಂದು ಗ್ರೇಟ್ ಇಂಡಿಯನ್ ಫೆಸ್ಟಿವಲ್ ತೆರೆದುಕೊಳ್ಳುತ್ತಿದ್ದು, ಈ ಸೇಲ್ ಅಕ್ಟೋಬರ್ 12 ರಿಂದ ಮಧ್ಯರಾತ್ರಿ ಪ್ರೈಮ್ ಸದಸ್ಯರಿಗೆ ಮೊದಲು ಖರೀದಿಸಲು ಅವಕಾಶವನ್ನು ಕಲ್ಪಿಸಿದೆ. ಇನ್ನು ಬಾರಿ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ / ಡೆಬಿಟ್ ಕಾರ್ಡ್‌ ಬಳಕೆದಾರರಿಗೆ 10% ತ್ವರಿತ ರಿಯಾಯಿತಿಯನ್ನು ಅಮೆಜಾನ್ ಒದಗಿಸುತ್ತಿದೆ.

   
 
ಹೆಲ್ತ್