Back
Home » ಗಾಸಿಪ್
ಪ್ರಚಾರಕ್ಕೆ ಬಾರದ ನಯನತಾರಾಗೆ 'ಸೈರಾ' ನಿರ್ಮಾಪಕರಿಂದ ಸಿಕ್ಕ ಸಂಭಾವನೆ ಎಷ್ಟು.?
Oneindia | 15th Oct, 2019 03:45 PM

ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಲೇಡಿ ಸೂಪರ್ ಸ್ಟಾರ್ ಅಂತಲೇ ಖ್ಯಾತಿ ಗಳಿಸಿರುವ ನಟಿ ನಯನತಾರಾ. ಬ್ಯಾಕ್ ಟು ಬ್ಯಾಕ್ ಹಿಟ್ ನೀಡುತ್ತಲೇ ಬರುತ್ತಿರುವ ನಯನತಾರಾ ಅಭಿನಯದ ಮಲ್ಟಿ ಸ್ಟಾರರ್ ಸಿನಿಮಾ 'ಸೈರಾ ನರಸಿಂಹ ರೆಡ್ಡಿ' ಇತ್ತೀಚೆಗಷ್ಟೇ ಬಿಡುಗಡೆಗೊಂಡಿತ್ತು.

'ಸೈರಾ ನರಸಿಂಹ ರೆಡ್ಡಿ' ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರಬಹುದು. ಆದ್ರೆ, ನಿರ್ಮಾಪಕ ರಾಮ್ ಚರಣ್ ತೇಜಾ ಜೇಬಿಗೆ ಮಾತ್ರ ಚಿತ್ರ ಮೋಸ ಮಾಡಿಲ್ಲ. ಸಿನಿಮಾದಲ್ಲಿ ಅಭಿನಯಿಸಿರುವ ಪ್ರತಿಯೊಬ್ಬರಿಗೂ ರಾಮ್ ಚರಣ್ ತೇಜಾ ಉತ್ತಮ ಸಂಭಾವನೆಯನ್ನೇ ನೀಡಿದ್ದಾರೆ.

ಅದರಲ್ಲೂ ನಟಿ ನಯನತಾರಾಗೆ ಬಂಪರ್ ಮೊತ್ತವನ್ನೇ ರಾಮ್ ಚರಣ್ ತೇಜಾ ನೀಡಿದ್ದಾರೆ. ಎಷ್ಟಪ್ಪಾ ಅಂದ್ರೆ, ಐದು ಕೋಟಿ ಎನ್ನುತ್ತವೆ ಮೂಲಗಳು. ಹೌದು, ನಯನತಾರಾ ವೃತ್ತಿ ಜೀವನದಲ್ಲೇ ಇದು ಅತಿ ಹೆಚ್ಚು ಸಂಭಾವನೆ.

ವಿಚಿತ್ರ ಏನಪ್ಪಾ ಅಂದ್ರೆ, ಇಷ್ಟೊಂದು ಸಂಭಾವನೆ ಪಡೆದಿದ್ದರೂ ನಟಿ ನಯನತಾರಾ ಮಾತ್ರ ಚಿತ್ರದ ಯಾವುದೇ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿಲ್ಲ. ಪ್ರೆಸ್ ಮೀಟ್ ಆಗಲಿ, ಸಕ್ಸಸ್ ಮೀಟ್ ಆಗಲಿ.. ಯಾವುದಕ್ಕೂ ನಯನತಾರಾ ಹಾಜರ್ ಆಗಿರಲಿಲ್ಲ. ಹೀಗಿದ್ದರೂ, ನಯನತಾರಾ ಜೇಬಿಗೆ ಮಾತ್ರ ರಾಮ್ ಚರಣ್ ತೇಜಾ ಕತ್ರಿ ಹಾಕಿಲ್ಲ.

ಅಂದ್ಹಾಗೆ, ಸ್ವಾತಂತ್ರ್ಯ ಹೋರಾಟಗಾರ ಉಯ್ಯಲವಾಡಾ ನರಸಿಂಹ ರೆಡ್ಡಿ ಜೀವನಚರಿತ್ರೆ ಆಧಾರಿತ ಚಿತ್ರ 'ಸೈ ರಾ ನರಸಿಂಹ ರೆಡ್ಡಿ'. ಸುರೇಂದರ್ ರೆಡ್ಡಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಚಿರಂಜೀವಿ, ನಯನತಾರಾ, ತಮನ್ನಾ, ಜಗಪತಿ ಬಾಬು, ಸುದೀಪ್, ವಿಜಯ್ ಸೇತುಪತಿ ಮುಂತಾದವರು ನಟಿಸಿದ್ದಾರೆ.

   
 
ಹೆಲ್ತ್