Back
Home » ಇತ್ತೀಚಿನ
ಗ್ರಾಹಕರಿಗೆ ಬಿಗ್ ಶಾಕ್ ನೀಡಿದ ಬಿಎಸ್‌ಎನ್‌ಎಲ್‌!
Gizbot | 16th Oct, 2019 08:01 AM
 • ಇಂಟರ್ನ್ಯಾಷನಲ್ ವೈ-ಪೈ

  ಹೌದು, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಟೆಲಿಕಾಂ ಸಂಸ್ಥೆಯು ಪರಿಚಯಿಸಿದ್ದ 501ರೂ. ಪ್ಯಾಕ್‌ನ ಇಂಟರ್ನ್ಯಾಷನಲ್ ವೈ-ಪೈ ರೋಮಿಂಗ್‌ ಸೇವೆಯನ್ನು ಇದೀಗ ಸ್ಥಗಿತಗೊಳಿಸಿದೆ. ಅಂತರಾಷ್ಟ್ರೀಯ ವೈ-ಫೈ ರೋಮಿಂಗ್ ಸೇವೆಯನ್ನು ಹಠಾತ್ತಾಗಿ ನಿಲ್ಲಿಸಲು ಕಾರಣಗಳೆನು ಎಂಬುದನ್ನು ಸಂಸ್ಥೆಯು ಹೊರಹಾಕಿಲ್ಲ. ಆದರೆ ತಾತ್ಕಾಲಿಕ ಅವಧಿಗೆ ಮಾತ್ರ ಈ ಸೇವೆ ಚಾಲ್ತಿ ಇರುವುದಿಲ್ಲ ಎಂದು ಟೆಲಿಕಾಂ ಟಾಕ್ ವರದಿ ಮಾಡಿದೆ.


 • ತಮಿಳನಾಡು ಮತ್ತು ಚನ್ನೈ

  ಬಿಎಸ್‌ಎನ್‌ಎಲ್‌ ತಮಿಳನಾಡು ಮತ್ತು ಚನ್ನೈ ನಗರಗಳ ಟೆಲಿಕಾಂ ಸರ್ಕಲ್ ವ್ಯಾಪ್ತಿಯಲ್ಲಿ ಮಾತ್ರ ಬಿಎಸ್‌ಎನ್‌ಎಲ್ 501ರೂ. ಪ್ಯಾಕ್‌ನ ಇಂಟರ್ನ್ಯಾಷನಲ್ ವೈ-ಪೈ ರೋಮಿಂಗ್‌ ಸೇವೆ ಸ್ಥಗಿತ ಜಾರಿಯಾಗಿದೆ. ಈ ಎರಡು ಪ್ರದೇಶಗಳ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದ ಟೆಲಿಕಾಂ ವ್ಯಾಪ್ತಿಯಲ್ಲಿ ಸೇವೆಯು ಲಭ್ಯ ಇವೆ. ಬಿಎಸ್‌ಎನ್‌ಎಲ್‌ನ ಈ 501ರೂ. ಪ್ಯಾಕ್‌ನಲ್ಲಿ ಪ್ರೀಪೇಡ್‌ ಗ್ರಾಹಕರಿಗೆ 30 ದಿನಗಳ ಅವಧಿಗೆ ವೈಫೈ ಮೂಲಕ ಅನಿಯಮಿತ ಡೇಟಾ ಪ್ರಯೋಜನ ಹೊಂದಿದೆ.


 • ಆಂಡ್ರಾಯ್ಡ್ ಮತ್ತು ಐಓಎಸ್‌

  ಆಂಡ್ರಾಯ್ಡ್ ಮತ್ತು ಐಓಎಸ್‌ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಗ್ರಾಹಕರಿಬ್ಬರಿಗೂ ಬಿಎಸ್‌ಎನ್‌ಎಲ್‌ ಈ ಸೇವೆ ಲಭ್ಯವಿದ್ದು, ಬಳಕೆದಾರರು 'ಮೈ ಬಿಎಸ್‌ಎನ್‌ಎಲ್‌ ಆಪ್' ಮೂಲಕ ಸೇವೆಯನ್ನು ಪಡೆಯಬಹುದಾಗಿದೆ. ಆದರೆ ಸದ್ಯ ಚನ್ನೈ ಮತ್ತು ತಮಿಳನಾಡಿನ ವ್ಯಾಪ್ತಿಯ ಈ ಸೇವೆ ಸ್ಥಗಿತ ಮಾಡಿರುವುದರಿಂದ ಆಂಡ್ರಾಯ್ಡ್‌ ಓಎಸ್‌ ಬಳಕೆದಾರರಿಗೆ ಈ ಸೇವೆ ಅಲಭ್ಯವಾಗಿರಲಿದೆ. ಆದರೆ ಐಓಎಸ್‌ ಬಳಕೆದಾರರಿಗೆ ಸೇವೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎನ್ನಲಾಗಿದೆ.


 • ಮೈ ಬಿಎಸ್‌ಎನ್‌ಎಲ್‌ ಆಪ್‌

  ಬಿಎಸ್‌ಎನ್‌ಎಲ್‌ನ ಇಂಟರ್ನ್ಯಾಷನಲ್ ವೈ-ಪೈ ರೋಮಿಂಗ್‌ ಪ್ಯಾಕ್ 'ಮೈ ಬಿಎಸ್‌ಎನ್‌ಎಲ್‌ ಆಪ್‌'ನಲ್ಲಿ ಲಭ್ಯವಿದ್ದು, ಚನ್ನೈ ಮತ್ತು ತಮಿಳುನಾಡು ವ್ಯಾಪ್ತಿಯನ್ನು ಹೊರತುಪಡಿಸಿ ಇತರೆ ಪ್ರದೇಶದ ಪ್ರೀಪೇಡ್‌ ಗ್ರಾಹಕರು ರೀಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ. ಸುಮಾರು 75ಫೂಟ್‌ನಿಂದ 100ಫೂಟ್‌ ಅಂತರದವರೆಗಿನ ವೈ-ಫೈ ಆಕ್ಸಸ್‌ ಮಾಡುವ ಸೌಲಭ್ಯ ನೀಡಲಿದೆ. ಅಂತರಾಷ್ಟ್ರೀಯ ಪ್ರವಾಸಗಳನ್ನು ಹೆಚ್ಚಾಗಿ ಮಾಡುವ ಗ್ರಾಹಕರಿಗೆ ಈ ಪ್ಯಾಕ್ ಹೆಚ್ಚು ಸೂಕ್ತ ಎನ್ನಬಹುದಾಗಿದೆ.
ದೇಶದ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ನೇರ ಪೈಪೋಟಿ ನೀಡುತ್ತಾ ಮುನ್ನುಗ್ಗುತ್ತಿರುವ ಬಿಎಸ್‌ಎನ್‌ಎಲ್‌ ಸಂಸ್ಥೆಯು ಈಗಾಗಲೇ ಹಲವು ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ವಾತಾವರಣವಿದ್ದರೂ ತನ್ನದೇ ಸ್ಥಿರ ಅಸ್ತಿತ್ವವನ್ನು ಉಳಿಸಿಕೊಂಡಿರುವ ಬಿಎಸ್‌ಎನ್‌ಎಲ್‌ ತನ್ನದೇ ಗ್ರಾಹಕ ವರ್ಗವನ್ನು ಹೊಂದಿದೆ. ಆದ್ರೆ, ಇದೀಗ ತನ್ನ ಗ್ರಾಹಕರಿಗೆ ಬಿಗ್ ಶಾಕಿಂಗ್ ನ್ಯೂಸ್ ನೀಡಿದೆ.

   
 
ಹೆಲ್ತ್