Back
Home » ಇತ್ತೀಚಿನ
ಗ್ರಾಹಕರಿಗೆ ಗುಡ್‌ನ್ಯೂಸ್‌ : ವೊಡಾಫೋನಿನ ಈ ಪ್ಲ್ಯಾನಗಳಿಗೆ ಉಚಿತ ಡಬಲ್‌ ಡೇಟಾ!
Gizbot | 16th Oct, 2019 01:00 PM
 • ವೊಡಾಫೋನ್ ಟೆಲಿಕಾಂ

  ಹೌದು, ವೊಡಾಫೋನ್ ಟೆಲಿಕಾಂ ಸಂಸ್ಥೆಯು ತನ್ನ ಜನಪ್ರಿಯ ಆರಂಭಿಕ ಪ್ರೀಪೇಡ್‌ ಪ್ಲ್ಯಾನ್‌ಗಳಿಗೆ ಡಬಲ್ ಡೇಟಾ ನೀಡುವುದಾಗಿ ತಿಳಿಸಿದ್ದು, ವೊಡಾಫೋನಿನ 199ರೂ. ಮತ್ತು 399ರೂ.ಗಳ ಪ್ಲ್ಯಾನ್‌ಗಳಿಗೆ ಮಾತ್ರ ಈ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಈ ಪ್ಲ್ಯಾನ್‌ಗಳ ವ್ಯಾಲಿಡಿಟಿ ಅವಧಿಯಲ್ಲಿ ಗ್ರಾಹಕರಿಗೆ ಉಚಿತ ಅನಿಯಮಿತ ಕರೆಗಳು ಮತ್ತು ಎಸ್‌ಎಮ್‌ಎಸ್‌ ಸೌಲಭ್ಯಗಳು ಸಹ ದೊರೆಯಲಿವೆ. ಹಾಗಾದರೇ ವೊಡಾಫೋನ್‌ ಡಬಲ್ ಡೇಟಾ ಕೊಡುಗೆಯ ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.


 • 199ರೂ. ಪ್ರೀಪೇಡ್‌ ಪ್ಲ್ಯಾನ್

  199ರೂ. ಪ್ರೀಪೇಡ್‌ ಪ್ಲ್ಯಾನ್ ವೊಡಾಫೋನ ಆರಂಭಿಕ ಪ್ಲ್ಯಾನ್‌ ಆಗಿದ್ದು, ಈ ಪ್ಲ್ಯಾನ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಇದರೊಂದಿಗೆ ಅನಿಯಮಿತ ಉಚಿತ ಕರೆ, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಹಾಗೂ ಪ್ರತಿದಿನ 1.5GB ಡೇಟಾ ಸೌಲಭ್ಯ ಒಳಗೊಂಡಿದೆ. ಆದರೆ ಇದೀಗ ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 1.5GB ಡೇಟಾ ಬದಲಿಗೆ 3GB ಡೇಟಾ ಸಿಗಲಿದ್ದು, ಉಳಿದಂತೆ 28 ದಿನಗಳ ಅವಧಿಗೆ ಅನಿಯಮಿತ ಉಚಿತ ಕರೆ, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಇರಲಿವೆ.


 • 399ರೂ. ಪ್ರೀಪೇಡ್‌ ಪ್ಲ್ಯಾನ್

  ವೊಡಾಫೋನ ಇನ್ನೊಂದು ಜನಪ್ರಿಯ ಪ್ಲ್ಯಾನ್‌ ಅಂದರೇ ಅದು 399ರೂ. ಪ್ರೀಪೇಡ್‌ ಪ್ಲ್ಯಾನ್ ಆಗಿದ್ದು, ಈ ಪ್ಲ್ಯಾನ 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಅನಿಯಮಿತ ಉಚಿತ ವಾಯಿಸ್‌ ಕರೆ, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಜೊತೆಗೆ ಪ್ರತಿದಿನ 1GB ಡೇಟಾ ಸೌಲಭ್ಯ ಲಭ್ಯವಿರುತ್ತದೆ. ಆದರೆ ಇದೀಗ ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಲಭ್ಯವಾಗಲಿದ್ದು, 84 ದಿನಗಳ ವ್ಯಾಲಿಡಿಟಿ ಅವಧಿಯವರೆಗೂ ಮುಂದುವರೆಯಲಿದೆ. ಉಳಿದಂತೆ ಅನಿಯಮಿತ ಉಚಿತ ಕರೆ, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಇರಲಿವೆ.


 • ಯಾವ ಟೆಲಿಕಾಂ ವ್ಯಾಪ್ತಿಯಲ್ಲಿ ಲಭ್ಯ

  ವೊಡಾಫೋನ್ ಇದೀಗ ಪರಿಚಯಿಸಿರುವ ಡಬಲ್‌ ಡೇಟಾ ಕೊಡುಗೆಯು ಸೀಮಿತ ಅವಧಿಯ ಆಫರ್‌ ಆಗಿದ್ದು, ಕೆಲವು ಆಯ್ದ ಟೆಲಿಕಾಂ ವ್ಯಾಪ್ತಿಯಲ್ಲಿ 199ರೂ. ಮತ್ತು 399ರೂ. ಪ್ಲ್ಯಾನಿಗಳಿಗೆ ಮಾತ್ರ ಲಭ್ಯವಾಗಲಿದೆ. ಆಂಧ್ರಪ್ರದೇಶ, ತೆಲಂಗಾಣ, ಚೆನ್ನೈ, ಕರ್ನಾಟಕ, ಕೇರಳಾ ಮತ್ತು ಮುಂಬೈ ಟೆಲಿಕಾಂ ಸರ್ಕಲ್ ವ್ಯಾಪ್ತಿಯಲ್ಲಿ ವೊಡಾಫೋನಿನ ಈ ಕೊಡುಗೆಯು ಲಭ್ಯವಾಗಲಿದೆ. ಗ್ರಾಹಕರು ಹೆಚ್ಚುವರಿ ಡೇಟಾ ಸೌಲಭ್ಯ ಪಡೆಯಲು ವೊಡಾಫೋನ್ ವೆಬ್‌ತಾಣ ಅಥವಾ ವೊಡಾಫೋನ್ ಆಪ್‌ನಲ್ಲಿ ರೆಕಮೆಂಡೆಡ್‌(Recommended) ಪ್ಲ್ಯಾನ್‌ ಸೆಕ್ಷನ್‌ನಲ್ಲಿ ಲಭ್ಯತೆ ಮತ್ತು ಚಾಲ್ತಿಮಾಡುವ ಕುರಿತು ಚೆಕ್‌ ಮಾಡಬಹುದಾಗಿದೆ.


 • ಜಿಯೋಗೆ ಭಾರೀ ಪೆಟ್ಟು

  ಇತ್ತೀಚಿಗೆ ಜಿಯೋ ಸಂಸ್ಥೆಯು ಇತರೆ ಟೆಲಿಕಾಂ ಸಂಸ್ಥೆಗಳಿಗೆ (IUC) ಹೊರ ಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 6ಪೈಸೆ ಶುಲ್ಕ ನಿಗದಿ ಮಾಡಿದ್ದು, ಗ್ರಾಹಕರಿಗೆ ಶಾಕ್ ಅನಿಸಿದೆ. ಇದೇ ವೇಳೆಗೆ ವೊಡಾಫೋನ್‌ ಕಂಪನಿಯು ಆರಂಭಿಕ ಪ್ಲ್ಯಾನಿಗಳಿಗೆ ಈಗ ಡಬಲ್ ಡೇಟಾ ಪ್ರಯೋಜನ ಘೋಷಿಸಿರುವುದು ಹೆಚ್ಚು ಗ್ರಾಹಕರನ್ನು ಆಕರ್ಷಿಸಲಿದೆ ಎನ್ನಲಾಗಿದೆ. 28 ದಿನಗಳ 199ರೂ. ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಒಟ್ಟು 84GB ಡೇಟಾ ಸಿಗಲಿದೆ.
ಭಾರತೀಯ ಟೆಲಿಕಾಂ ವಲಯದಲ್ಲಿ ಈಗಾಗಲೇ ಸಾಕಷ್ಟು ಮಹತ್ತರ ಬದಲಾವಣೆಗಳು ನಡೆಯುತ್ತಲಿದ್ದು, ಪ್ರಮುಖ ಟೆಲಿಕಾಂ ಸಂಸ್ಥೆಗಳ ನಡುವೆ ದರ ಸಮರ ಏರ್ಪಟ್ಟಿದೆ. ಈ ನಡುವೆ ಇತ್ತೀಚಿಗೆ ಜಿಯೋ ಸಂಸ್ಥೆಯು ಪ್ರತಿ ನಿಮಿಷಕ್ಕೆ 6ಪೈಸೆ ದರ ನಿಗದಿ ಮಾಡಿದ್ದು, ವೊಡಾಫೋನ್ ಮತ್ತು ಏರ್‌ಟೆಲ್ ಕಂಪನಿಗಳಿಗೆ ವರದಾನವಾದಂತಾಗಿದೆ. ಇದರ ಬೆನ್ನಲ್ಲೇ ವೊಡಾಫೋನ್ ಇದೀಗ ತನ್ನ ಗ್ರಾಹಕರಿಗೆ ಡಬಲ್ ಧಮಾಕಾ ಕೊಡುಗೆ ಘೋಷಿಸಿದೆ.

   
 
ಹೆಲ್ತ್