Back
Home » ಗಾಸಿಪ್
ರಜನಿಕಾಂತ್ ಮುಂದಿನ ಚಿತ್ರಕ್ಕೆ ಇಬ್ಬರು ನಾಯಕಿಯರು!
Oneindia | 17th Oct, 2019 06:12 PM

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸುತ್ತಿರುವ 'ದರ್ಬಾರ್' ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದ್ದು, ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬರಲು ಸಜ್ಜಾಗುತ್ತಿದೆ. ಎಆರ್ ಮುರುಗದಾಸ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ಸುಮಾರು ವರ್ಷದ ನಂತರ ತಲೈವಾ ಪೊಲೀಸ್ ಆಫೀಸರ್ ಆಗಿ ಅಬ್ಬರಿಸಿದ್ದಾರೆ.

ಇದೀಗ, ರಜನಿಯ ಮುಂದಿನ ಸಿನಿಮಾ ಯಾವುದು ಎಂಬ ಚರ್ಚೆ ಆರಂಭವಾಗಿದೆ. ತಲೈವಾ ಅವರ ಆಪ್ತರ ಪ್ರಕಾರ, ರಜನಿ ಮುಂದಿನ ಚಿತ್ರಕ್ಕೆ ಶಿವ ನಿರ್ದೇಶನ ಮಾಡಲಿದ್ದಾರೆ.

'ದರ್ಬಾರ್' ನಂತರ ರಜನಿ ಮುಂದಿನ ಚಿತ್ರಕ್ಕೆ ಡೈರೆಕ್ಟರ್ ಫಿಕ್ಸ್

ವೀರಂ, ವೇದಾಲಂ, ವಿವೇಗಂ, ವಿಶ್ವಾಸಂ ಅಂತಹ ಬ್ಲಾಕ್ ಬಸ್ಟರ್ ಚಿತ್ರಗಳನ್ನ ನಿರ್ದೇಶನ ಮಾಡಿರುವ ಶಿವ, ಸೂಪರ್ ಸ್ಟಾರ್ ಗೆ ಆಕ್ಷನ್ ಕಟ್ ಹೇಳಲು ಸಿದ್ಧವಾಗಿದ್ದಾರಂತೆ.

ಈಗಾಗಲೇ ಕಥೆ ಪಕ್ಕಾ ಮಾಡಿರುವ ರಜನಿ ಕಾಲ್ ಶೀಟ್ ಕೂಡ ಕೊಟ್ಟಿದ್ದಾರಂತೆ, ರಜನಿಯ 168ನೇ ಚಿತ್ರಕ್ಕೆ ನಾಯಕಿ ಯಾರಾಗಬಹುದು ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಈ ಸಿನಿಮಾದಲ್ಲಿ ರಜನಿಗೆ ಇಬ್ಬರು ನಾಯಕಿಯರು ಎಂದು ಹೇಳಲಾಗುತ್ತಿದೆ.

ಹೀರೋ ಮಾಡಿದ ನಿರ್ಮಾಪಕರಿಗೆ ಭರ್ಜರಿ ಗಿಫ್ಟ್ ಕೊಟ್ಟ ಸೂಪರ್ ಸ್ಟಾರ್

ಎರಡು ಕಾಲಾವಧಿಯಲ್ಲಿ ಈ ಕಥೆ ನಡೆಯಲಿದ್ದು, ಹಿರಿಯ ನಟಿ ಜ್ಯೋತಿಕಾ ಮತ್ತು ಕೀರ್ತಿ ಸುರೇಶ್ ಹೆಸರು ಸದ್ದು ಮಾಡ್ತಿದೆ. ಒಂದು ಕಥೆಯಲ್ಲಿ ಜ್ಯೋತಿಕಾ ಮತ್ತು ಇನ್ನೊಂದು ಕಥೆಯಲ್ಲಿ ಕೀರ್ತಿ ಸುರೇಶ್ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. 'ಚಂದ್ರಮುಖಿ' ಚಿತ್ರದಲ್ಲಿ ಜ್ಯೋತಿಕಾ ಅವರು ರಜನಿ ಜೊತೆ ನಟಿಸಿದ್ದಾರೆ. ಕೀರ್ತಿ ಸುರೇಶ್ ಪಕ್ಕಾ ಆದರೆ ತಲೈವಾ ಜೊತೆ ನಟಿಸುವ ಅದೃಷ್ಟ ಪಡೆಯಲಿದ್ದಾರೆ.

ಸದ್ಯ ರಜನಿಕಾಂತ್ ಅವರು ಹಿಮಾಲಯಕ್ಕೆ ಹೋಗಿದ್ದಾರೆ. ಹಿಮಾಲಯದಿಂದ ವಾಪಸ್ ಬಂದ್ಮೇಲೆ ಈ ಸಿನಿಮಾಗೆ ಸಂಬಂಧಿಸಿದಂತೆ ಅಪ್ಡೇಟ್ ಹೊರಬೀಳಲಿದೆ.

   
 
ಹೆಲ್ತ್