Back
Home » ಇತ್ತೀಚಿನ
ಮತ್ತೆ 'ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್' ಶುರು!.ಫೋನ್‌ ಖರೀದಿಗೆ ಬೆಸ್ಟ್‌ ಟೈಮ್!
Gizbot | 19th Oct, 2019 10:24 AM
 • ಬಿಗ್ ದೀಪಾವಳಿ ಸೇಲ್

  ಹೌದು, ಜನಪ್ರಿಯ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಇದೇ ಅಕ್ಟೋಬರ್‌ 21ರಿಂದ 'ಬಿಗ್ ದೀಪಾವಳಿ ಸೇಲ್' ಮೇಳವನ್ನು ಮತ್ತೆ ಆರಂಭಿಸಲಿದ್ದು, ಐದು ದಿನಗಳ ಕಾಲ ನಡೆಯುವ ಈ ಮೇಳವು ಇದೇ ಅಕ್ಟೋಬರ್ 25ರ ವರೆಗೂ ಇರಲಿದೆ. ಈ ಅವಧಿಯಲ್ಲಿ ಇತ್ತೀಚಿನ ಹೊಸ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ ಲಭ್ಯವಾಗಲಿದ್ದು, ಇದರೊಂದಿಗೆ ನೋ ಕಾಸ್ಟ್‌ ಇಎಮ್‌ಐ, ಎಕ್ಸ್‌ಚೇಂಜ್ ಆಫರ್‌ ಸಹ ಇರಲಿವೆ. ಹಾಗಾದರೇ ಫ್ಲಿಪ್‌ಕಾರ್ಟ್‌ ಆಯೋಜಿಸಿರುವ 'ಬಿಗ್ ದೀಪಾವಳಿ ಸೇಲ್' ಮೇಳದಲ್ಲಿ ಬೆಸ್ಟ್‌ ಡೀಲ್‌ನಲ್ಲಿ ಲಭ್ಯವಾಗುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.


 • ಧಮಾಕಾ ಡೀಲ್ ಆಫರ್

  ಫ್ಲಿಪ್‌ಕಾರ್ಟ್‌ ಸಂಸ್ಥೆಯು ಬಿಗ್ ದೀಪಾವಳಿ ಸೇಲ್ ಮೇಳದಲ್ಲಿ ಗ್ರಾಹಕರಿಗೆ ಮತ್ತೊಂದು ಸರ್‌ಪ್ರೈಸ್‌ ನೀಡಿದ್ದು, ಅದುವೇ ಧಮಾಕಾ ಡೀಲ್ಸ್‌. ಸೇಲ್ ಮೇಳದ ಅವಧಿಯಲ್ಲಿ 12AM, 8AM ಮತ್ತು 4PM ಸಮಯದಲ್ಲಿ ಧಮಾಕಾ ಡೀಲ್ ನಡೆಸಲಿದ್ದು, ಈ ಅವಧಿಯಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌, ಮತ್ತು ಇನ್ನಿತರ ಗ್ಯಾಜೆಟ್ಸ್‌ಗಳಿಗೆ ಎಕ್ಸ್‌ಟ್ರಾ ಡಿಸ್ಕೌಂಟ್‌ ಲಭ್ಯವಾಗುವ ಅವಕಾಶ ಇರಲಿದೆ. ಹಾಗೆಯೇ ಎಸ್‌ಬಿಐ ಕ್ರೆಡಿಟ್‌ ಅಥವಾ ಡೆಬಿಟ್ ಕಾರ್ಡ್‌ ಬಳಸುವ ಗ್ರಾಹಕರಿಗೆ ಶೇ.10 ಡಿಸ್ಕೌಂಟ್‌ ಸಿಗಲಿದೆ.


 • ರೆಡ್ಮಿ ನೋಟ್ 7 ಪ್ರೊ

  ಶಿಯೋಮಿಯ ರೆಡ್ಮಿ ನೋಟ್‌ 7 ಪ್ರೊ 13,999ರೂ.ಗಳಾಗಿದ್ದು, ಆದರೆ ಈ ಸೇಲ್ ಮೇಳದಲ್ಲಿ 11,999ರೂ.ಗಳಿಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್ 6.3 ಇಂಚಿನ ವಾಟರ್‌ಡ್ರಾಪ್ ನಾಚ್ ಮಾದರಿಯ ಡಿಸ್‌ಪ್ಲೇ ಹೊಂದಿದ್ದು, ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ 4000 mAh ಬ್ಯಾಟರಿ ಬಾಳಿಕೆ, 48ಎಂಪಿ ರಿಯರ್ ಕ್ಯಾಮೆರಾ ಸೌಲಭ್ಯಗಳನ್ನು ಒಳಗೊಂಡಿದೆ.


 • ರಿಯಲ್‌ ಮಿ 5

  ರಿಯಲ್‌ ಮಿ 5 ಸ್ಮಾರ್ಟ್‌ಫೋನ್ 6.5 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್‌ನ ಸಾಮರ್ಥ್ಯ ಪಡೆದುಕೊಂಡಿದೆ. ಹಿಂದರಿಯಲ್ಲಿ ನಾಲ್ಕು ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, 5000mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಈ ಫೋನ್ 9,999ರೂ.ಗಳ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದ್ದು, ಆದರೆ ಬಿಗ್ ದೀಪಾವಳಿ ಸೇಲ್ ಮೇಳದಲ್ಲಿ 8,999ರೂ.ಗಳಿಗೆ ದೊರೆಯಲಿದೆ.


 • ವಿವೋ Z1 ಪ್ರೊ

  ವಿವೋ ಸಂಸ್ಥೆಯ ಹೊಸ ವಿವೋ Z1 ಪ್ರೊ ಸ್ಮಾರ್ಟ್‌ಫೋನ್ 6.53 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಸ್ನ್ಯಾಪ್‌ಡ್ರಾಗನ್ 712 ಪ್ರೊಸೆಸರ್‌ನ ಸಾಮರ್ಥ್ಯ ಪಡೆದುಕೊಂಡಿದೆ. ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಆಯ್ಕೆ ಇದ್ದು, 5000mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಈ ಫೋನ್ 14,990ರೂ.ಗಳ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದ್ದು, ಆದರೆ ಬಿಗ್ ದೀಪಾವಳಿ ಸೇಲ್ ಮೇಳದಲ್ಲಿ 12,990ರೂ.ಗಳಿಗೆ ದೊರೆಯಲಿದೆ.


 • ರೆಡ್ಮಿ ನೋಟ್ 7S

  ಜನಪ್ರಿಯ 'ರೆಡ್ಮಿ ನೋಟ್ 7S' ಬಿಗ್ ದೀಪಾವಳಿ ಸೇಲ್‌ ಮೇಳದಲ್ಲಿ 8,999ರೂ.ಗಳಿಗೆ ಸಿಗಲಿದ್ದು, ಇದರ ಬೆಲೆಯು 10,999ರೂ.ಗಳು ಆಗಿದೆ. ಈ ಸ್ಮಾರ್ಟ್‌ಫೋನ್ ಸಹ 6.3 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದ್ದು, ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ 4000 mAh ಬ್ಯಾಟರಿ ಬಾಳಿಕೆ, 48ಎಂಪಿ ರಿಯರ್ ಕ್ಯಾಮೆರಾ, 13ಎಂಪಿ ಸೆಲ್ಫಿ ಕ್ಯಾಮೆರಾ ಸೌಲಭ್ಯಗಳನ್ನು ಒಳಗೊಂಡಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ಫ್ಲಿಪ್‌ಕಾರ್ಟ್‌ ಇ-ಕಾಮರ್ಸ್‌ ಇತ್ತೀಚಿಗಷ್ಟೆ ಸೇಲ್ ಮೇಳವನ್ನು ಆಯೋಜಿಸಿತ್ತು. ಆದ್ರೆ ದೀಪಾವಳಿ ಹಬ್ಬಕ್ಕಾಗಿಯೇ ಈಗ ಮತ್ತೊಮ್ಮೆ ಮಹಾ ಸೇಲ್ ಮೇಳವನ್ನು ಘೋಷಿಸಿದೆ. ಈ ಬಾರಿಯ ಸೇಲ್ ಮೇಳದಲ್ಲಿ ಸ್ಮಾರ್ಟ್‌ಫೋನ್, ಸ್ಮಾರ್ಟ್‌ವಾಚ್, ಲ್ಯಾಪ್‌ಟಾಪ್‌ ಸೇರಿದಂತೆ ಇತರೆ ಗ್ಯಾಜೆಟ್‌ ಉತ್ಪನ್ನಗಳಿಗೂ ಸಹ ಅತ್ಯುತ್ತಮ ರಿಯಾಯಿತಿ ಕೊಡುಗೆಗಳು ಲಭ್ಯವಾಗಲಿವೆ.

   
 
ಹೆಲ್ತ್