Back
Home » ಇತ್ತೀಚಿನ
ಅಪಾಯದಲ್ಲಿದ್ದಾಗ ನಿಮ್ಮ ಸಹಾಯಕ್ಕೆ ಬರಲಿದೆ ಹೊಸ ಆಪ್‌..!
Gizbot | 20th Oct, 2019 06:05 PM
 • ವೈ-ಫೈ ಸಿಗ್ನಲ್‌

  ಡಿಸ್ಟ್ರೆಸ್ ಸಿಗ್ನಲ್ ಅಪ್‌ನ್ನು ಬಳಕೆದಾರರು ಸಕ್ರಿಯಗೊಳಿಸಿದಾಗ ನಿಯಮಿತವಾಗಿ ವೈ-ಫೈ ಸಿಗ್ನಲ್‌ನ್ನು ಹೊರಸೂಸುತ್ತದೆ, ಇದು ತೊಂದರೆಯ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ, ಈ ಸಂಕೇತಗಳು ಹಲವು ಕಿಲೋಮೀಟರ್ ದೂರದವರೆಗೂ ಹರಡುವುದರಿಂದ ಕಂಡುಹಿಡಿಯಲು ಸುಲಭವಾಗಿದೆ. ಇದಲ್ಲದೇ, ಬಳಕೆದಾರರು "ನಾನು ಗಾಯಗೊಂಡಿದ್ದೇನೆ" ಅಥವಾ "ನಾನು ದಿಗ್ಭ್ರಮೆಗೊಂಡಿದ್ದೇನೆ" ಎಂಬ ಪಠ್ಯ ಸಂದೇಶವನ್ನು ಒಳಗೊಂಡ ಅಗತ್ಯ ಮಾಹಿತಿಯನ್ನು ಜಿಪಿಎಸ್‌ ಮೂಲಕ ಕಳುಹಿಸಲಾಗುತ್ತದೆ.


 • ಸಣ್ಣ ಆಂಟೆನಾ ರಿಸೀವರ್

  ಸಿಗ್ನಲ್‌ನ್ನು ಸ್ವೀಕರಿಸಲು ಸಣ್ಣ ಆಂಟೆನಾ ಹೊಂದಿದಾ ಸುಸಜ್ಜಿತ ಗ್ರಾಹಕ ಸಾಧನದ ಅಗತ್ಯವಿದ್ದು, ಸಿಗ್ನಲ್ ರವಾನಿಸುವ ವ್ಯಕ್ತಿಯ ಸ್ಮಾರ್ಟ್‌ಫೋನ್‌ಗೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಅಪಾಯದಲ್ಲಿರುವ ವ್ಯಕ್ತಿಯನ್ನು ಸುಲಭವಾಗಿ ರಕ್ಷಿಸಬಹುದಾಗಿದ್ದು, ರಕ್ಷಣಾ ಕಾರ್ಯದಲ್ಲಿ ಬಹುಉಪಕಾರಿಯಾಗುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಬಹಳಷ್ಟು ಜೀವಗಳ ಉಳಿವಿಗೆ ಕಾರಣವಾಗಬಹುದಾದ ಕ್ರಾಂತಿಕಾರಿ ವ್ಯವಸ್ಥೆಯಾಗುವ ಸಾಧ್ಯತೆಯಿದೆ.


 • ಮೊದಲ ವ್ಯವಸ್ಥೆ

  ಸ್ಮಾರ್ಟ್‌ಫೋನ್‌ನ್ನು ಜಿಯೋ-ಲೊಕೇಟ್ ಮಾಡಲು ವೈ-ಫೈ ಸಿಗ್ನಲ್‌ಗಳನ್ನು ಬಳಸುವ ಯಾವುದೇ ವ್ಯವಸ್ಥೆ ಜಗತ್ತಿನಲ್ಲಿ ಇಲ್ಲ ಎಂದು ಯೋಜನೆಯ ಮುಂದಾಳತ್ವ ವಹಿಸಿರುವ ಪ್ರೊ. ಜೋಸ್ ಏಂಜೆಲ್ ಬರ್ನೆ ಹೇಳುತ್ತಾರೆ. ಸ್ಮಾರ್ಟ್‌ಫೋನ್‌ನಿಂದ ಮೊಬೈಲ್ ಫೋನ್ ಸಿಗ್ನಲ್‌ಗಳನ್ನು ಪತ್ತೆಹಚ್ಚಲು ಮತ್ತು ಅದರ ಸ್ಥಳವನ್ನು ತ್ರಿಕೋನದ ಮೂಲಕ ಗುರುತಿಸಲು ಅನುವು ಮಾಡಿಕೊಡುವ ಸಾಧನಗಳಿವೆ, ಆದರೆ, ಇದರ ಬೆಲೆ ಸುಮಾರು 95,629 ಡಾಲರ್‌ ಆಗಿರುತ್ತದೆ ಮತ್ತು ಹೆಲಿಕಾಪ್ಟರ್‌ನ ಅಗತ್ಯ ಕೂಡ ಇರುತ್ತದೆ.


 • ಅಗ್ಗದ ದರ

  ಮೇಲಿನ ದುಬಾರಿ ವೆಚ್ಚದ ವಿಧಾನಕ್ಕ ಹೋಲಿಸಿದರೆ ಹೊಸ ವಿಧಾನ ಬಹಳಷ್ಟು ಅಗ್ಗವಾಗಿದ್ದು, ಸಾಧನವನ್ನು ಖರೀದಿ ಮತ್ತು ಬಳಕೆಗೆ 717 ಡಾಲರ್‌ನಷ್ಟು ಖರ್ಚಾಗಲಿದೆ. ಈ ತಂತ್ರಜ್ಞಾನವನ್ನು ಈಗಾಗಲೇ ಗಾರ್ಡಿಯಾ ಸಿವಿಲ್‌ನ ವಿಶೇಷ ಪರ್ವತ ಹಸ್ತಕ್ಷೇಪ ರಕ್ಷಣಾ ತಂಡಗಳು ಮತ್ತು ಸಶಸ್ತ್ರ ಪಡೆಗಳ ಕಡಲ ಸೇವೆ ಮತ್ತು ಕಡಲ ರಕ್ಷಣಾ ಕಾರ್ಯಗಳಲ್ಲಿ ಬಳಸಲಾಗಿದೆ.
ನೀವು ಯಾವತ್ತಾದರೂ ನೆಟ್‌ವರ್ಕ್‌ ಸಿಗದ ಪ್ರದೇಶದಲ್ಲಿ ಗಾಯಗೊಂಡು ಯಾರ ಸಂಪರ್ಕಕ್ಕೂ ಸಿಗದ ಪರಿಸ್ಥಿತಿಯನ್ನು ಎದುರಿಸಿದ್ದೀರಾ..? ನಿಮಗೆ ಸರಿಯಾಗಿ ಚಲಿಸಲು ಆಗದ ಮತ್ತು ಯಾವುದೇ ನೆಟ್‌ವರ್ಕ್‌ ಆಯ್ಕೆಗಳು ಇರೋದೆ ಇಲ್ಲ. ಸಹಾಯಕ್ಕಾಗಿ ಒಂದು ಕಾಲ್‌ ಮಾಡಲು ಆಗಲ್ಲ ಅಂದ್ರೆ ಏನ್‌ ಮಾಡ್ತೀರಾ..? ಇಂತಹ ಸಮಯದಲ್ಲಿ ರಕ್ಷಣಾ ತಂಡ ಬರುವವರೆಗೂ ಕಾಯುವುದು ಬಿಟ್ಟರೆ ಮತ್ತೇನು ಮಾಡಲು ಸಾಧ್ಯ ಅಲ್ವಾ..? ಆದರೆ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೀವು ಕೂಡ ಏನಾದರೂ ಮಾಡಬಹುದು ಎಂಬುದನ್ನು ಹೊಸ ಆಪ್‌ ಒಂದು ನಿರೂಪಿಸಿದೆ. ಹೌದು, ಸ್ಪೇನ್‌ ಯುನಿವರ್ಸಿಡಾಡ್‌ ಡಿ ಅಲಿಕ್ಯಾಂಟ್‌ನಲ್ಲಿ ಹೊಸ ಆಪ್‌ನ್ನು ವಿನ್ಯಾಸಗೊಳಿಸಲಾಗಿದ್ದು, ಅಗತ್ಯವಿದ್ದಲ್ಲಿ ತೊಂದರೆಯ ಸಂಕೇತವನ್ನು ರವಾನಿಸುತ್ತದೆ.

   
 
ಹೆಲ್ತ್