Back
Home » ಆರೋಗ್ಯ
ಬಂಜೆತನಕ್ಕೆ ಕಾರಣವಾದ ಪಿಸಿಒಎಸ್ ಹೋಗಲಾಡಿಸಲು ಸಸ್ಯಾಹಾರಿ ಆಹಾರಕ್ರಮ ಹೀಗಿರಲಿ
Boldsky | 31st Oct, 2019 12:08 PM
 • ಪಿಸಿಒಎಸ್ (ಪಾಲಿಸಿಸ್ಟಿಕ್ ಓವರಿ ಸಿಂಡ್ರಮ್) ಎಂದರೇನು?

  ಪಿಸಿಒಎಸ್‌ ಸಮಸ್ಯೆ ಇರುವವರಲ್ಲಿ ಈಸ್ಟ್ರೋಜಿನ್ ಹಾಗೂ ಪ್ರೊಗೆಸ್ಟಿರೋನೆ ಪ್ರಮಾಣ ಕಡಿಮೆಯಾಗಿ ಆಂಡ್ರೋಜಿನ್ ಪ್ರಮಾಣ ಅಧಿಕವಿರುತ್ತದೆ, ದೇಹದಲ್ಲಿ ಪುರುಷ ಹಾರ್ಮೋನ್ ಅಧಿಕವಾಗುವುದರಿಂದ ಅನಿಯಮಿತ ಮುಟ್ಟಿನ ಉಂಟಾಗುವುದು. ಇದರ ಪರಿಣಾಮ ದೇಹದಲ್ಲಿ ಇನ್ಸುಲಿನ್‌ ಪ್ರಮಾಣ ಹೆಚ್ಚಾಗಿ ಮಧುಮೇಹ ಕೂಡ ಬರಬಹುದು.

  ಯಾರಿಗೆ ನಿಯಮಿತವಾದ ಋತುಚಕ್ರ ಇರುತ್ತದೆ ಅವರಿಗೆ ಮುಟ್ಟಾದ 10-14 ದಿನದೊಳಗೆ ಅಂಡಾಣು ಬಿಡುಗಡೆಯಾಗುತ್ತದೆ. ಇದನ್ನು ಓವ್ಯೂಲೇಶನ್ ಪಿರಿಯಡ್(ಅಂಡೋತ್ಪತ್ತಿ ಅವಧಿ) ಅಂತಾರೆ.


 • ಪಿಸಿಒಎಸ್‌ ಸಮಸ್ಯೆ ಇಲ್ಲವಾಗಿಸಬಹುದೇ?

  ಪಿಸಿಓಎಸ್‌ ಸಮಸ್ಯೆಯನ್ನು ಆರೋಗ್ಯಕರ ಡಯಟ್‌ ಹಾಗೂ ಜೀವನಶೈಲಿ ರೂಢಿಸಿಕೊಳ್ಳುವ ಮೂಲಕ ಇಲ್ಲವಾಗಿಸಬಹುದು. ಇನ್ನು ಪಿಸಿಒಎಸ್‌ ಸಮಸ್ಯೆ ಇರುವವರು ಚಿಕಿತ್ಸೆಯ ಮೊರೆ ಹೋಗಿ ಕೂಡ ಈ ಸಮಸ್ಯೆಯಿಂದ ಹೊರಬರಬಹುದು. ಚಿಕಿತ್ಸೆಯಲ್ಲಿ ದೇಹದಲ್ಲಿ ಪುರುಷ ಹಾರ್ಮೊನ್ ಟೆಸ್ಟೊಸ್ಟಿರೊನ್ ಉತ್ಪತ್ತಿಯನ್ನು ಕಡಿಮೆ ಮಾಡಿ ಈಸ್ಟ್ರೋಜಿನ್ ಹೆಚ್ಚು ಉತ್ಪತ್ತಿಯಾಗುವಂತೆ ಮಾಡುವುದು.

  ಇನ್ನು ಸಮಸ್ಯೆಯನ್ನು ಔಷಧಿ ಮಾತ್ರ ಹೋಗಲಾಡಿಸಲು ಸಾಧ್ಯವಿಲ್ಲ ಎನ್ನುವ ರೋಗಿಗೆ ಓವರಿನ್ ಡ್ರಿಲ್ಲಿಂಗ್ ಎಂಬ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಈ ಚಿಕಿತ್ಸೆಯ ಮೂಲಕ ಅಂಡಾಣು ಉತ್ಪತ್ತಿಯ ಸಾಮರ್ಥ್ಯ ಹೆಚ್ಚಿಸಿ, ಗರ್ಭಧಾರಣೆ ಆಗುವಂತೆ ಮಾಡಲಾಗುವುದು.

  ಪಿಸಿಒಎಸ್‌ ಸಮಸ್ಯೆ ಇರುವವರು ವ್ಯಾಯಾಮ ಮಾಡಬೇಕು
  ಪಿಸಿಒಎಸ್‌ ಸಮಸ್ಯೆ ಹೋಗಲಾಡಿಸಲು ದೈಹಿಕ ವ್ಯಾಯಾಮ ಅವಶ್ಯಕವಾಗಿ ಮಾಡಬೇಕು. ಮೈ ತೂಕ ಹೆಚ್ಚಾಗಿದ್ದರೆ ವ್ಯಾಯಾಮ ಮಾಡುವ ಮೂಲಕ ಮೈ ತೂಕ ಕರಗಿಸಬೇಕು, ಯೋಗ ಕೂಡ ಪಿಸಿಒಎಸ್‌ ಸಮಸ್ಯೆಯಿಂದ ಹೊರಬರುವಲ್ಲಿ ಸಹಕಾರಿಯಾಗಿದೆ. ಕಟ್ಟುನಿಟ್ಟಿನ ವ್ಯಾಯಾದ ಜತೆಗೆ ಈ ರೀತಿಯ ಆಹಾರಕ್ರಮ ಪಾಲಿಸಿದರೆ ಪಿಸಿಒಎಸ್‌ ಸಮಸ್ಯೆ ಇಲ್ಲವಾಗಿಸಬಹುದು.


 • ಪಿಸಿಒಎಸ್‌ ಸಮಸ್ಯೆ ಇರುವವರಿಗೆ ಸಸ್ಯಾಹಾರ ಅಹಾರಕ್ರಮ

  ಪಿಸಿಒಎಸ್‌ ಸಮಸ್ಯೆ ಇರುವವರು ಅಧಿಕ ಕೊಬ್ಬಿನಂಶವಿರುವ ಆಹಾರಗಳಿಂದ ದೂರವಿರಬೇಕು. ಅಧಿಕ ಕ್ಯಾಲೋರಿ ಇರುವ ಆಹಾರ ಸೇವಿಸಿದರೆ ಮೈ ತೂಕ ಹೆಚ್ಚುವುದು. ಆದ್ದರಿಂದ ಇಲ್ಲಿ ನೀಡಿರುವ ಆಹಾರಕ್ರಮ ಪಾಲಿಸಿ.

  ಬೆಳಗ್ಗೆ (ಇವುಗಳಲ್ಲಿ ನಿಮಗೆ ಇಷ್ಟವಾಗಿದ್ದನ್ನು ಕುಡಿಯಬಹುದು)
  *1 ಕಪ್ ಗ್ರೀನ್ ಟೀ: ಗ್ರೀನ್ ಟೀ ದೇಹವನ್ನು ಡಿಟಾಕ್ಸ್ ಮಾಡುವುದರಿಂದ ತೂಕ ಇಳಿಕೆಗೆ ಸಹಾರಿ.
  * 1 ಕಪ್ ಹರ್ಬಲ್ ಟೀ
  * 1 ಕಪ್ ಬಿಸಿ ನೀರಿಗೆ ಜೇನು ಹಾಗೂ ನಿಂಬೆರಸ ಹಾಕಿ ಕುಡಿಯಿರಿ
  * 1ಕಪ್ ಚಕ್ಕೆ ಟೀ
  * ಒಂದು ಲೋಟ ಹಸಿರು ಜ್ಯೂಸ್(ಸೋರೆಕಾಯಿ, ಸೌತೆಕಾಯಿ, ಪುದೀನಾ, ಪಾಲಾಕ್ ಇವುಗಳಲ್ಲಿ ಯಾವುದನ್ನು ಬೇಕಾದರೂ ಜ್ಯೂಸ್ ಮಾಡಬಹುದು)


 • ಬ್ರೇಕ್‌ಫಾಸ್ಟ್ (ಇವುಗಳಲ್ಲಿ ನಿಮಗೆ ಇಷ್ಟವಾಗಿದ್ದನ್ನು ತಿನ್ನಬಹುದು)


  * ಓಟ್ಸ್ ಹಾಗೂ ಹಣ್ಣುಗಳು
  * ಜೋಳದ ರೊಟ್ಟಿ ಹಾಗು ತರಕಾರಿ ಪಲ್ಯ
  * 2 ಇಡ್ಲಿ, ಸಾಂಬಾರ್
  * ಒಂದು ಗೋಧಿ ದೋಸೆ
  * ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಹಣ್ಣುಗಳಾದ ಚೆರ್ರಿ, ಬೆರ್ರಿ

  ಸ್ನ್ಯಾಕ್ಸ್(ನಿಮ್ಮ ಆಯ್ಕೆಗೆ ಬಿಟ್ಟದ್ದು)
  1 ಕಪ್ ವೆಜೆಟೆಬಲ್ ಸೂಪ್
  1 ಬಾಳೆಹಣ್ಣು ಅಥವಾ ಸಪೊಟಾ
  ಗ್ರೀನ್ ಟೀ
  ಅರ್ಧ ಕಪ್ ಡ್ರೈ ಫ್ರೂಟ್ಸ್ ಹಾಗೂ ಬೀಜಗಳು


 • ಮಧ್ಯಾಹ್ನದ ಊಟ


  1 ಕಪ್ ಕೆಂಪಕ್ಕಿ ಅನ್ನ+ 1 ಕಪ್ ತರಕಾರಿ +ದಾಲ್
  2-3 ಚಪಾತಿ+ 1 ಕಪ್ ತರಕಾರಿ+ 1 ಕಪ್ ಮೊಸರು
  1 ಚಪಾತಿ+ ಅರ್ಧ ಕಪ್ ಕೆಮಪಕ್ಕಿ ಅನ್ನ+ಸಲಾಡ್
  ಸ್ನ್ಯಾಕ್ಸ್
  ಸ್ವಲ್ಪ ಡ್ರೈ ಫ್ರೂಟ್ಸ್
  ಮೊಳಕೆ ಕಾಳುಗಳು 1 ಕಪ್
  ಹಣ್ಣುಗಳು
  ಬೇಕಿದ್ದರೆ ಮಲ್ಟಿಗ್ರೈನ್ ಬಿಸ್ಕೆಟ್ ತಿನ್ನಬಹುದು


 • ರಾತ್ರಿಯ ಊಟ

  2 ಚಪಾತಿ+ 1 ಕಪ್ ಬೇಳೆ/ರಾಯತ
  * 1 ಕಪ್ ಹಸಿರು ತರಕಾರಿಗಳು
  8 1 ಕಪ್ ನವಣೆ
  * ರೋಟಿ+ದಾಲ್+ರಾಯತ
  * ತರಕಾರಿ ಸೂಪ್

  ಮಲಗುವ ಮುನ್ನ
  ಬಿಸಿ ಬಿಸಿಯಾದ ನೀರಿಗೆ ಚಕ್ಕೆ ಪುಡಿ ಹಾಕಿ ಕುಡಿಯಿರಿ.


 • ಕೆಳಗೆ ನೀಡಿರುವ ಮಾರ್ಗದರ್ಶನ ಪಾಲಿಸಿದರೆ ಪಿಸಿಒಎಸ್‌ ಸಮಸ್ಯೆ ಇಲ್ಲವಾಗಿಸಬಹುದಾಗಿದೆ

  * ಗೋಧಿ ಬದಲಿಗೆ ನವಣೆ, ಧಾನ್ಯಗಳನ್ನು ಬಳಸಿ
  * ಸಂಸ್ಕರಿಸಿದ ಆಹಾರ ತಿನ್ನಬೇಡಿ, ಜಂಕ್‌ ಫುಡ್‌ನಿಂದ ದೂರವಿರಿ.
  * ದಿನದಲ್ಲಿ ಒಂದು ಬಾರಿಯಾದರೂ 1 ಕಪ್ ತರಕಾರಿ ಸೂಪ್ ಕುಡಿಯಿರಿ.
  * 2 ಚಪಾತಿ ಒಟ್ಟಿಗೆ ತಿನ್ನುವ ಬದಲು ಒಂದು ತಿಂದು ಒಂದು ಗಂಟೆ ಬಿಟ್ಟು ಮತ್ತೊಂದು ತಿನ್ನಿ. ಹೀಗೆ ತಿಂದರೆ ತೂಕ ನಿಯಂತ್ರಣಕ್ಕೆ ಸುಲಭ.
  * ಕನಿಷ್ಠ 2-3 ಬಗೆಯ ಹಣ್ಣುಗಳನ್ನು ತಿನ್ನಿ.
  * ಹೊಸ ರುಚಿಯ ಅಡುಗೆಯನ್ನು ಆರೋಗ್ಯಕರವಾಗಿ ಮಾಡಿ ಸವಿಯಿರಿ.
  * ಚಕ್ಕೆ ನೀರು ದೆಹದಲ್ಲಿರುವ ಕಶ್ಮಲಗಳನ್ನು ಹೊರಹಾಕುವಲ್ಲಿ ಸಹಕಾರಿ.
  * 6-8 ತಾಸು ನಿದ್ದೆ ಮಾಡಿ.
ತಿಂಗಳ ಮುಟ್ಟು ಸರಿಯಾಗಿ ಆಗುತ್ತಿಲ್ಲ, 4 ತಿಂಗಳು 6 ತಿಂಗಳಿಗೊಮ್ಮೆ ಮುಟ್ಟು ಬರುತ್ತಿದೆ, ಗರ್ಭಧಾರಣೆಗೆ ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಗರ್ಭಧಾರಣೆಯಾಗುತ್ತಿಲ್ಲ, ಆಗಾಗ ಗರ್ಭಪಾತವಾಗುತ್ತಿದೆ, ಇತ್ತೀಚೆಗೆ ಮೈ ತೂಕ ಹೆಚ್ಚಾಗುತ್ತಿದೆ ಈ ರೀತಿಯ ಸಮಸ್ಯೆಗಳು ಕಂಡು ಬರುತ್ತಿದೆಯೇ ಹಾಗಾದರೆ ಪಿಸಿಒಎಸ್ ಸಮಸ್ಯೆ ಇರಬಹುದು.

ಇತ್ತೀಚೆಗೆ ಪಾಲಿಸಿಸ್ಟಿಕ್ ಓವರಿ ಸಿಂಡ್ರಮ್ ಅಂದರೆ ಪಿಸಿಒಎಸ್ ಸಮಸ್ಯೆ ಬಗ್ಗೆ ಹೆಚ್ಚಾಗಿಯೇ ಕೇಳಿ ಬರುತ್ತಿದೆ. ಮಹಿಳೆಯರಲ್ಲಿ ಹಾರ್ಮೋನ್‌ ವ್ಯತ್ಯಾಸದಿಂದಾಗಿ ಈ ಸಮಸ್ಯೆ ಉಂಟಾಗುವುದು. ಪಿಸಿಒಎಸ್‌ ಬಂದರೆ ಪ್ರಮುಖ ಸಮಸ್ಯೆಯೆಂದರೆ ಮಹಿಳೆಯರ ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆಯಾವುದು. ಪಿಸಿಒಎಸ್‌ ಸಮಸ್ಯೆಯಿದ್ದವರಿಗೆ ಗರ್ಭಧಾರಣೆ ಕಷ್ಟವಾಗಿವುದು.

ಪಿಸಿಒಎಸ್‌ ಸಮಸ್ಯೆಗೆ ಪ್ರಮುಖ ಕಾರಣ ಜೀವನಶೈಲಿ ಹಾಗೂ ಆಹಾರಶೈಲಿ ಆಗಿದೆ. ಕೆಲವು ವರ್ಷಗಳಿಂದ ಗರ್ಭಧಾರಣೆಗೆ ಪ್ರಯತ್ನಿಸಿ ಸಾಧ್ಯವಾಗದಿದ್ದಾಗ, ಅನಿನಿಯಮಿತ ಮುಟ್ಟಿನ ಸಮಸ್ಯೆ ಕಾಡುತ್ತಿದ್ದರೆ ಅದಕ್ಕೆ ಪ್ರಮುಖ ಕಾರಣ ಪಿಸಿಒಎಸ್‌ ಇರಬಹುದು.

ಪಿಸಿಒಎಸ್‌ ಎಂದರೆ ಅಂಡಾಶಯದ ಸುತ್ತ ಚಿಕ್ಕ-ಚಿಕ್ಕ ಗುಳ್ಳೆಗಳು (Follicles ಕಂಡು ಬರುವುದು, ಈ ಗುಳ್ಳೆಗಳು ಅಂಡಾಣು ಬಿಡುಗಡೆಗೆ ತೊಂದರೆ ಉಂಟು ಮಾಡುತ್ತದೆ.

   
 
ಹೆಲ್ತ್