Back
Home » ಸಮ್ಮಿಲನ
ವಾರ ಭವಿಷ್ಯ- ನವೆಂಬರ್ 3ರಿಂದ ನವೆಂಬರ್ 9ರ ತನಕ
Boldsky | 3rd Nov, 2019 06:01 AM
 • ಮೇಷ: 21 ಮಾರ್ಚ್ - 19 ಏಪ್ರಿಲ್

  ಈ ವಾರ ನಿಮ್ಮ ಅನಾರೋಗ್ಯದಿಂದಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ತೊಂದರೆಗೊಳಗಾಗುತ್ತೀರಿ. ಈ ಅವಧಿಯಲ್ಲಿ ನಿಮ್ಮ ಕೆಲವು ದೀರ್ಘಕಾಲದ ಕಾಯಿಲೆಗಳು ನಿಮ್ಮ ಅಸ್ವಸ್ಥತೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಆರೋಗ್ಯ ಸಮಸ್ಯೆಯಿಂದಾಗಿ ಅನೇಕ ಪ್ರಮುಖ ಕಾರ್ಯಗಳು ವಾರದ ಆರಂಭದಲ್ಲಿ ಅಪೂರ್ಣವಾಗುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಏರಿಳಿತದ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ನಿರ್ಲಕ್ಷ್ಯವು ನಿಮಗೆ ಹಾನಿಕಾರಕವಾಗಿರುವುದರಿಂದ, ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಹಾಗೂ ಎಲ್ಲರೊಂದಿಗೆ ವಿನಯಶೀಲವಾಗಿ ವರ್ತಿಸಿ. ನಿಮ್ಮ ಆಕ್ರಮಣಕಾರಿ ಸ್ವಭಾವದಿಂದ ವಿವಾದಗಳಿಂದ ಸುತ್ತುವರೆಯಬಹುದು. ವ್ಯಾಪಾರಿಗಳಿಗೆ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಈ ವಾರ ನಿಮ್ಮ ಕಠಿಣ ಪರಿಶ್ರಮ ಯಶಸ್ವಿಯಾಗುತ್ತದೆ ಮತ್ತು ನೀವು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯುತ್ತೀರಿ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ವಾರದ ಮಧ್ಯದಲ್ಲಿ ಕೆಲವು ಸಣ್ಣ ಸಮಸ್ಯೆಗಳು ಉದ್ಭವಿಸಬಹುದು, ಆದರೆ ಅದನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಸಂಗಾತಿ ಮತ್ತು ಮಗುವಿನೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ. ವಾರದ ಕೊನೆಯಲ್ಲಿ ನಿಮ್ಮ ಇಡೀ ಕುಟುಂಬದೊಂದಿಗೆ ನೀವು ಯಾವುದೇ ಶುಭ ಸಮಾರಂಭದಲ್ಲಿ ಭಾಗವಹಿಸಬಹುದು. ಆರ್ಥಿಕ ಪರಿಸ್ಥಿತಿ ಸಹ ಈ ವಾರ ಉತ್ತಮವಾಗಿರುತ್ತದೆ.
  ಅದೃಷ್ಟ ಬಣ್ಣ: ಗುಲಾಬಿ
  ಅದೃಷ್ಟ ಸಂಖ್ಯೆ: 19
  ಅದೃಷ್ಟ ದಿನ: ಭಾನುವಾರ


 • ವೃಷಭ ರಾಶಿ: 20 ಏಪ್ರಿಲ್ - 20 ಮೇ

  ಈ ವಾರವು ನಿಮಗೆ ಮಿಶ್ರ ಫಲಿತಾಂಶಗಳು ಉಂಟಾಗಲಿದೆ. ಮೊದಲ ಕೆಲವು ದಿನಗಳು ಅತ್ಯಂತ ಕಷ್ಟಕರವಾಗುತ್ತವೆ. ಮನೆಯಲ್ಲಿ ಯಾವುದೂ ಸರಿಯಾಗುವುದಿಲ್ಲ ಮತ್ತು ಸಂಬಂಧಿಕರ ನಡುವಿನ ವ್ಯತ್ಯಾಸಗಳು ಉದ್ಭವವಾಗಬಹುದು, ಅದು ನಿಮ್ಮ ಚಡಪಡಿಕೆಯನ್ನು ಹೆಚ್ಚಿಸುತ್ತದೆ. ಪರಿಸ್ಥಿತಿಯನ್ನು ನಿಭಾಯಿಸಲು ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತೀರಿ ಆದರೆ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದಲ್ಲಿ ನಿಮ್ಮನ್ನು ಒಪ್ಪುವುದಿಲ್ಲ, ಆದರೆ ನೀವು ಭರವಸೆಯನ್ನು ಇಟ್ಟುಕೊಳ್ಳುತ್ತೀರಿ ಮತ್ತು ಕೊನೆಯಲ್ಲಿ ಗೆಲ್ಲುತ್ತೀರಿ. ನೀವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲು ಹೊರಟಿದ್ದರೆ, ಗಂಭೀರವಾದ ಪರಿಗಣನೆಯ ನಂತರವೇ ನಿರ್ಧಾರ ತೆಗೆದುಕೊಳ್ಳಿ. ನಿಮ್ಮ ವೈವಾಹಿಕ ಜೀವನದಲ್ಲಿ ಬಹಳಷ್ಟು ಸಕಾರಾತ್ಮಕ ಸಂಗತಿಗಳು ನಡೆಯಬಹುದು ಮತ್ತು ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಪ್ರೀತಿ ಗಾಢವಾಗುತ್ತದೆ. ನಿಮ್ಮ ಮಗುವಿನ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಸಹ ನಿರೀಕ್ಷಿಸಲಾಗಿದೆ. ನೀವು ಉದ್ಯೋಗಿಗಳಾಗಿದ್ದರೆ ಈ ವಾರ ನೀವು ಸೆಮಿನಾರ್ ಅಥವಾ ಸಮ್ಮೇಳನದಲ್ಲಿ ಭಾಗವಹಿಸಬಹುದು, ಅಲ್ಲಿ ಕೆಲವು ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಬಹುದು. ಅಂತಹ ಪ್ರಭಾವಿ ವ್ಯಕ್ತಿಗಳ ಮುಂದೆ ನಿಮ್ಮ ಮಾತು ಮತ್ತು ನಡವಳಿಕೆಯನ್ನು ಸಮತೋಲನಗೊಳಿಸಿ. ಈ ವಾರ ಆರ್ಥಿಕವಾಗಿ ಅಂತಹ ವಿಶೇಷ ಲಾಭವೇನೂ ಇರುವುದಿಲ್ಲ. ಆರೋಗ್ಯವ ಸುಧಾರಿಸಲು ಆಲೋಚನೆಗಳು ಸಹ ಬದಲಾಯಿಸಬೇಕಿದೆ.
  ಅದೃಷ್ಟ ಬಣ್ಣ: ನೀಲಿ
  ಅದೃಷ್ಟ ಸಂಖ್ಯೆ: 28
  ಅದೃಷ್ಟ ದಿನ: ಶನಿವಾರ


 • ಮಿಥುನ: 21 ಮೇ - 20 ಜೂನ್

  ಹಣದ ದೃಷ್ಟಿಯಿಂದ ಈ ವಾರ ಪ್ರಯೋಜನಕಾರಿಯಾಗಿರಲಿದೆ. ಆರಂಭಿಕ ದಿನಗಳಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು, ಆದರೆ ನಿಮ್ಮ ಆದಾಯವೂ ಹೆಚ್ಚಾಗುವ ಬಲವಾದ ಸಾಧ್ಯತೆಯಿದೆ, ಇದು ಎಲ್ಲಾ ಹಣಕಾಸಿನ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಅವಧಿಯಲ್ಲಿ ನೀವು ಹೊಸ ಆದಾಯದ ಮೂಲವನ್ನು ಸಹ ಪಡೆಯುವ ಸಾಧ್ಯತೆಯಿದೆ. ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ತಂದೆ ಅಥವಾ ಇತರ ಆಪ್ತ ಸ್ನೇಹಿತರಿಂದ ಆರ್ಥಿಕ ಸಹಾಯವನ್ನು ಪಡೆಯಬಹುದು. ಕೆಲಸದ ಸ್ಥಳದಲ್ಲಿ ಈ ವಾರ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ. ಈ ವಾರದಲ್ಲಿನ ನಿಮ್ಮ ಕಠಿಣ ಪರಿಶ್ರಮವು ಭವಿಷ್ಯದಲ್ಲಿ ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ಗ್ರಹಗಳ ಚಲನೆಯು ನಿಮ್ಮ ಪ್ರಗತಿಯತ್ತ ಮುಖಮಾಡುತ್ತಿದೆ. ಉದ್ಯಮಿಗಳು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಲು ಸೂಚಿಸಲಾಗುತ್ತದೆ. ನೀವು ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಈಗ ಶುಭ ಸಮಯವಲ್ಲ. ಆರೋಗ್ಯವು ಉತ್ತಮವಾಗಿರುತ್ತದೆ, ಸದೃಢರಾಗುತ್ತೀರಿ.
  ಅದೃಷ್ಟ ಬಣ್ಣ: ಮರೂನ್
  ಅದೃಷ್ಟ ಸಂಖ್ಯೆ: 19
  ಅದೃಷ್ಟ ದಿನ: ಮಂಗಳವಾರ


 • ಕರ್ಕ: 21 ಜೂನ್ - 22 ಜುಲೈ

  ಈ ವಾರ ನಿಮ್ಮ ಕುಟುಂಬದ ವಿಷಯಗಳಲ್ಲಿ ನೀವು ತುಂಬಾ ಕಾರ್ಯನಿರತರಾಗಿರುತ್ತೀರಿ. ಕುಟುಂಬ ಸದಸ್ಯರ ನಡುವಿನ ವಿವಾದಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತೀರಿ ಮತ್ತು ದೃಢ ನಿರ್ಧಾರ ತೆಗೆದುಕೊಳ್ಳುತ್ತೀರಿ. ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧವೂ ಬಲಗೊಳ್ಳುತ್ತದೆ ಮತ್ತು ನೀವು ಅವರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ತಾಯಿಯಿಂದ ಕೆಲವು ದೊಡ್ಡ ಲಾಭವನ್ನು ನಿರೀಕ್ಷಿಸಲಾಗಿದೆ ಮತ್ತು ಎಲ್ಲಾ ಸಂದರ್ಭಗಳಲ್ಲೂ ಅವಳು ನಿಮ್ಮೊಂದಿಗೆ ನಿಲ್ಲುತ್ತಾರೆ. ನಿಮ್ಮ ತಂದೆ ನಿಮ್ಮನ್ನು ಒಪ್ಪುವುದಿಲ್ಲ. ಅವರ ನಂಬಿಕೆಯನ್ನು ಗೆಲ್ಲಲು ಬಯಸಿದರೆ, ನಿಮ್ಮ ದೃಷ್ಟಿಕೋನವನ್ನು ಬಹಿರಂಗವಾಗಿ ಅವರಿಗೆ ತಿಳಿಸಿ. ವಿವಾಹಿತರಿಗೆ ಒಳ್ಳೆಯ ಸಮಯ. ನಿಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧ ಕಾಪಾಡಿಕೊಳ್ಳಲು ನೀವು ಬಯಸಿದರೆ, ಅವರ ಮಾತುಗಳನ್ನು ನಿರ್ಲಕ್ಷಿಸಬೇಡಿ, ಭಾವನೆಗಳನ್ನು ಅರ್ಥಮಾಡಿಕೊಳ್ಳಿ. ವಿದ್ಯಾರ್ಥಿಗಳಿಗೆ ತುಂಬಾ ಶುಭವಾಗಲಿದೆ. ಯಾವುದೇ ಫಲಿತಾಂಶಕ್ಕಾಗಿ ಕಾಯುತ್ತಿದ್ದರೆ ಒಳ್ಳೆಯ ಸುದ್ದಿ ನಿಮ್ಮದಾಗಲಿದೆ.
  ಅದೃಷ್ಟ ಬಣ್ಣ: ಹಳದಿ
  ಅದೃಷ್ಟ ಸಂಖ್ಯೆ: 32
  ಅದೃಷ್ಟ ದಿನ: ಸೋಮವಾರ


 • ಸಿಂಹ 23 ಜುಲೈ - 22 ಆಗಸ್ಟ್

  ಪ್ರೀತಿಯ ವಿಷಯಗಳಲ್ಲಿ ಈ ವಾರ ನಿಮಗೆ ಬಹಳ ಮುಖ್ಯವಾಗಲಿದೆ. ನಿಮ್ಮ ಸಂಗಾತಿಯ ನಿಷ್ಠೆ ಮತ್ತು ಪರಿಪೂರ್ಣತೆಯನ್ನು ನೀವು ನೋಡಲು ಸಾಧ್ಯವಾಗುತ್ತದೆ. ನಿಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನೀವಿಬ್ಬರೂ ನಿರ್ಧರಿಸಬಹುದು. ಆದರೆ ನಿಮ್ಮ ಕುಟುಂಬ ಸದಸ್ಯರೊಂದಿಗೆ ಈ ಬಗ್ಗೆ ಮಾತನಾಡಲು ಇದು ಸರಿಯಾದ ಸಮಯ ಅಲ್ಲವಾದ್ದರಿಂದ ಅವಸರ ಬೇಡ. ನೀವು ವಿವಾಹಿತರಾಗಿದ್ದರ ಈ ವಾರ ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲು ಅವಕಾಶ ಸಿಗುತ್ತದೆ. ಸಂಬಂಧದಲ್ಲಿ ಸಾಮರಸ್ಯ ಇರುತ್ತದೆ ಮತ್ತು ನಿಮ್ಮ ವೈವಾಹಿಕ ಜೀವನವನ್ನು ನೀವು ಪೂರ್ಣವಾಗಿ ಆನಂದಿಸುವಿರಿ. ಮನೆಯಲ್ಲಿನ ವಾತಾವರಣವು ಶಾಂತವಾಗಿರುತ್ತದೆ ಮತ್ತು ನಿಮ್ಮ ಪೋಷಕರ ನಿರೀಕ್ಷೆಗೆ ತಕ್ಕಂತೆ ನೀವು ಬದುಕುತ್ತೀರಿ. ಮನೆ ಅಥವಾ ಕೆಲಸದ ಸ್ಥಳದಲ್ಲಿ ನಿಮ್ಮ ಎಲ್ಲಾ ಜವಾಬ್ದಾರಿಗಳನ್ನು ನೀವು ಚೆನ್ನಾಗಿ ನಿರ್ವಹಿಸುವಿರಿ. ಯಾವುದೇ ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನಿಮ್ಮ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ಈ ವಾರ ಆ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ. ಹಣಕಾಸಿನ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಂಡರೆ ಮುಂದಿನ ದಿನಗಳಲ್ಲಿ ದೊಡ್ಡ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ತಿನ್ನುವುದು ಮತ್ತು ಕುಡಿಯುವುದರಲ್ಲಿ ನಿರ್ಲಕ್ಷ್ಯ ವಹಿಸಬೇಡಿ.
  ಅದೃಷ್ಟ ಬಣ್ಣ: ಹಸಿರು
  ಅದೃಷ್ಟ ಸಂಖ್ಯೆ: 12
  ಅದೃಷ್ಟ ದಿನ: ಭಾನುವಾರ


 • ಕನ್ಯಾ: 23 ಆಗಸ್ಟ್ - 22 ಸೆಪ್ಟೆಂಬರ್

  ಕೆಲಸದ ಸ್ಥಳದಲ್ಲಿ ನೀವು ತುಂಬಾ ಶ್ರಮಿಸಬೇಕಾಗಬಹುದು. ಇದು ನಿಮ್ಮನ್ನು ಸುಸ್ತಾಗಿಸಿದರೂ, ಹಿರಿಯರ ಪ್ರಶಂಸೆಯು ನಿಮ್ಮ ಉತ್ಸಾಹ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತದೆ. ಈ ವಾರ ಉನ್ನತ ಸ್ಥಾನವನ್ನು ಪಡೆಯಬಹುದು. ಎಲ್ಲವೂ ನಿಮ್ಮ ಕಠಿಣ ಪರಿಶ್ರಮದ ಫಲವಾಗಿರುವುದರಿಂದ ಆಶ್ಚರ್ಯಪಡಬೇಡಿ. ಉದ್ಯಮಿಯಾಗಿದ್ದರೆ ನಿಮ್ಮ ಕೆಲಸವು ವೇಗದಲ್ಲಿ ಚಲಿಸುತ್ತದೆ, ಅದು ನಿಮಗೆ ನಿರೀಕ್ಷೆಗಿಂತ ಹೆಚ್ಚಿನ ಲಾಭವನ್ನು ನೀಡುತ್ತದೆ. ಈ ವಾರ ಹೊಸ ವ್ಯವಹಾರವನ್ನು ಸಹ ಪ್ರಾರಂಭಿಸಬಹುದು. ಆರ್ಥಿಕವಾಗಿ ಸದೃಢರಾಗಿರುತ್ತೀರಿ. ಹಣದ ಬಗ್ಗೆ ಚಿಂತಿಸದೆ ನೀವು ಸಾಕಷ್ಟು ಐಷಾರಾಮಿ ವಸ್ತುಗಳಿಗೆ ಖರ್ಚು ಮಾಡುತ್ತೀರಿ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಕುಟುಂಬದೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ. ನಿಮ್ಮ ಪೋಷಕರಿಂದ ನೀವು ವಿಶೇಷ ಉಡುಗೊರೆಯನ್ನು ಪಡೆಯಬಹುದು. ಈ ವಾರ ಆರೋಗ್ಯ ಉತ್ತಮವಾಗಿರುತ್ತದೆ.
  ಅದೃಷ್ಟ ಬಣ್ಣ: ನೇರಳೆ
  ಅದೃಷ್ಟ ಸಂಖ್ಯೆ: 45
  ಅದೃಷ್ಟ ದಿನ: ಸೋಮವಾರ


 • ತುಲಾ: 23 ಸೆಪ್ಟೆಂಬರ್ - 22 ಅಕ್ಟೋಬರ್

  ಈ ವಾರ ನೀವು ತುಂಬಾ ಜಾಗರೂಕರಾಗಿರಬೇಕು ಮತ್ತು ಕೆಲಸದ ಸ್ಥಳದಲ್ಲಿ ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ವ್ಯಾಪಾರಿಗಳಿಗೆ ಈ ವಾರ ಪಾಲುದಾರಿಕೆಯಿಂದ ಯಾವುದೇ ಪ್ರಯೋಜನ ಸಿಗುವುದಿಲ್ಲ. ಸಮಯವು ಅನುಕೂಲಕರವಾಗಿಲ್ಲದ ಕಾರಣ ಈ ಅವಧಿಯಲ್ಲಿ ಯಾವುದೇ ಹೊಸ ಕಾರ್ಯವನ್ನು ಪ್ರಾರಂಭಿಸಬೇಡಿ. ಆರೋಗ್ಯ ಸಮಸ್ಯೆಯಿಂದಾಗಿ ಉದ್ಯೋಗಿಗಳಿಗೆ ಕೆಲಸದ ಮೇಲೆ ಪರಿಣಾಮ ಬೀರಬಹುದು. ಈ ಸಮಯದಲ್ಲಿ ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗಬೇಡಿ. ವೈವಾಹಿಕ ಜೀವನದಲ್ಲಿ ಏರಿಳಿತದ ಪರಿಸ್ಥಿತಿಗಳು ಕಂಡುಬರುತ್ತವೆ. ನಿಮ್ಮ ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ಗಾಢವಾಗುತ್ತವೆ ಮತ್ತು ಅದು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಇದು ನಿಮ್ಮ ಒತ್ತಡವನ್ನು ಗಮನಾರ್ಹವಾಗಿ ಹೆಚ್ಚಿಸಬಹುದು. ಈ ಕಾರಣದಿಂದಾಗಿ ಮನೆಯಲ್ಲಿನ ವಾತಾವರಣ ಕೆಟ್ಟದಾಗಿರುತ್ತದೆ. ಆರ್ಥಿಕವಾಗಿ ಈ ವಾರ ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ಹಣಕಾಸಿನ ಸಂದರ್ಭಗಳು ಉತ್ತಮವಾಗಿರುತ್ತವೆ, ಆದರೆ ಸಾಲಗಳ ಹೊರೆ ಕಡಿಮೆ ಮಾಡಲು ಉಳಿತಾಯದಿಂದ ನೀವು ದೊಡ್ಡ ಮೊತ್ತವನ್ನು ಹಿಂತೆಗೆದುಕೊಳ್ಳಬಹುದು.
  ಅದೃಷ್ಟ ಬಣ್ಣ: ಬಿಳಿ
  ಅದೃಷ್ಟ ಸಂಖ್ಯೆ: 26
  ಅದೃಷ್ಟ ದಿನ: ಶುಕ್ರವಾರ


 • ವೃಶ್ಚಿಕ: 23 ಅಕ್ಟೋಬರ್ - 21 ನವೆಂಬರ್

  ನಿಮ್ಮ ಪ್ರಣಯ ಜೀವನದಲ್ಲಿ ಸ್ವಲ್ಪ ಸಮಯದವರೆಗೆ ಸಾಕಷ್ಟು ತೊಂದರೆಗಳಿವೆ, ಆದರೆ ಈ ವಾರ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ನೀವಿಬ್ಬರೂ ಒಟ್ಟಿಗೆ ಉತ್ತಮ ಸಮನ್ವಯದೊಂದಿಗೆ ಸಮಯವನ್ನು ಆನಂದಿಸುವಿರಿ. ವಿವಾಹಿತರಾಗಿದ್ದರೆ ಕುಟುಂಬದ ವಿರುದ್ಧ ಯಾವುದೇ ಕೆಲಸ ಮಾಡದಂತಿರಿ. ಹಿರಿಯರ ಸಲಹೆಯನ್ನು ಅನುಸರಿಸಿ, ಇಲ್ಲದಿದ್ದರೆ ಕುಟುಂಬದಲ್ಲಿ ಪ್ರತ್ಯೇಕತೆ ಉಂಟಾಗಬಹುದು. ಯಾವುದೇ ರೀತಿಯ ಒತ್ತಡದಿಂದ ದೂರವಿರಿ. ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲು ತುಂಬಾ ಶ್ರಮಿಸಬೇಕಾಗಬಹುದು. ನಿಮ್ಮ ದಾರಿಯಲ್ಲಿ ಹಲವು ಅಡೆತಡೆಗಳು ಇರಬಹುದು ಆದರೆ ನೀವು ಧೈರ್ಯವನ್ನು ಕಳೆದುಕೊಳ್ಳಬಾರದು. ಪ್ರಯತ್ನಿಸುತ್ತಲೇ ಇರಿ ಮತ್ತು ಶೀಘ್ರದಲ್ಲೇ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಸೃಜನಶೀಲತೆ ನಿಮ್ಮನ್ನು ಇತರರಿಗಿಂತ ಮುಂದಿರುತ್ತದೆ ಮತ್ತು ನಿಮ್ಮ ಬಾಸ್ ಕೆಲಸದ ಬಗ್ಗೆ ಸಂತೋಷ ವ್ಯಕ್ತಪಡಿಸಬಹುದು. ಅತಿಯಾದ ಒತ್ತಡದಿಂದಾಗಿ ಅಸ್ವಸ್ಥರಾಗುವ ಕಾರಣ ಆರೋಗ್ಯದ ದೃಷ್ಟಿಯಿಂದ ಈ ವಾರ ಉತ್ತಮವಾಗಿಲ್ಲ.
  ಅದೃಷ್ಟ ಬಣ್ಣ: ಕಂದು
  ಅದೃಷ್ಟ ಸಂಖ್ಯೆ: 10
  ಅದೃಷ್ಟ ದಿನ: ಶನಿವಾರ


 • ಧನು: 22 ನವೆಂಬರ್ - 21 ಡಿಸೆಂಬರ್

  ಈ ವಾರವು ಅನೇಕ ಸಂದರ್ಭಗಳಲ್ಲಿ ಉತ್ತಮವಾಗಿರಲಿದೆ. ನಿಮ್ಮ ಯಾವುದೇ ಪ್ರಯತ್ನಗಳಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ಈ ವಾರ ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ನೀವು ಶ್ರಮಿಸುತ್ತೀರಿ. ವ್ಯವಹಾರ ಅಥವಾ ಉದ್ಯೋಗವಾಗಿರಲಿ, ಪ್ರತಿಯೊಂದು ಸಂದರ್ಭದಲ್ಲೂ ನೀವು ಅತ್ಯುತ್ತಮವಾದದನ್ನು ನೀಡುತ್ತೀರಿ. ನಿರುತ್ಸಾಹಗೊಳ್ಳಬೇಡಿ, ಉತ್ತಮ ಫಲಿತಾಂಶವನ್ನು ಪಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ವಾರವು ವಿದ್ಯಾರ್ಥಿಗಳಿಗೆ ಮಿಶ್ರ ಫಲಿತಾಂಶಗಳನ್ನು ತರುತ್ತದೆ. ಪಠ್ಯೇತರ ಚಟುವಟಿಕೆಗಳಲ್ಲಿ ನೀವು ನಿರತರಾಗಿರುತ್ತೀರಿ ಅದು ನಿಮ್ಮ ಅಧ್ಯಯನಗಳಿಂದ ನಿಮ್ಮನ್ನು ದೂರವಿರಿಸುತ್ತದೆ. ಆಹಾರಕ್ರಮದ ಬಗ್ಗೆ ವಿಶೇಷ ಕಾಳಜಿ ವಹಿಸುವಿರಿ. ಸದೃಢವಾಗಿರಲು ಯೋಗ, ಧ್ಯಾನ ಅಥವಾ ಜಿಮ್ ಅನ್ನು ಆರಂಭಿಸಬಹುದು, ಇದರಿಂದ ಆರೋಗ್ಯವು ಪರಿಪೂರ್ಣವಾಗಿರುತ್ತದೆ. ಹಣಕಾಸಿನ ಪರಿಸ್ಥಿತಿಗಳು ಉತ್ತಮವಾಗಿ ಉಳಿಯುತ್ತವೆ. ಈ ವಾರ ಯಾವುದೇ ವಿಶೇಷ ವೆಚ್ಚಗಳು ಇರುವುದಿಲ್ಲ ಅದು ನಿಮ್ಮ ಉಳಿತಾಯವನ್ನು ಹೆಚ್ಚಿಸುತ್ತದೆ. ಕುಟುಂಬ ಜೀವನವು ಸಂತೋಷವಾಗಿರುತ್ತದೆ ಮತ್ತು ಕುಟುಂಬ ಸದಸ್ಯರೊಂದಿಗೆ ಸಂಬಂಧ ತೀವ್ರಗೊಳ್ಳುತ್ತದೆ. ಎಲ್ಲರಿಗೂ ಬೆಂಬಲ ಮತ್ತು ವಾತ್ಸಲ್ಯ ಸಿಗುತ್ತದೆ.
  ಅದೃಷ್ಟ ಬಣ್ಣ: ತಿಳಿ ನೀಲಿ
  ಅದೃಷ್ಟ ಸಂಖ್ಯೆ: 25
  ಅದೃಷ್ಟ ದಿನ: ಗುರುವಾರ


 • ಮಕರ: 22 ಡಿಸೆಂಬರ್ - 19 ಜನವರಿ

  ಕೆಲಸಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ನಿಮಗೆ ಸಾಧ್ಯವಾಗದ ಕಾರಣ ಈ ವಾರ ನೀವು ಗೊಂದಲಕ್ಕೊಳಗಾಗುತ್ತೀರಿ. ನಿಮ್ಮ ಕೆಲಸವನ್ನು ಬದಲಾಯಿಸಲು ನೀವು ಯೋಚಿಸುತ್ತಿದ್ದರೆ, ಕೋಪ ಅಥವಾ ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ. ಕಚೇರಿಯಲ್ಲಿ ಏನಾದರೂ ತಪ್ಪು ಮಾಡಿದ್ದರೆ, ನಿಮ್ಮ ಅಹಂಕಾರವನ್ನು ಬದಿಗಿಟ್ಟು ತಪ್ಪನ್ನು ಸ್ವೀಕರಿಸಿ. ಉದ್ಯಮಿಗಳಿಗೆ ಈ ವಾರ ಕೆಲವು ಉತ್ತಮ ಅವಕಾಶಗಳನ್ನು ನಿರೀಕ್ಷಿಸಬಹುದು. ವ್ಯಾಪಾರವನ್ನು ವಿಸ್ತರಿಸುವ ನಿಮ್ಮ ಕನಸನ್ನು ಈಡೇರಿಸುವಂತಹ ಕೆಲವು ಕೆಲಸವನ್ನು ನೀವು ಪಡೆಯಬಹುದು. ಈ ವಾರ ನೀವು ಹೂಡಿಕೆ ಮಾಡಿದರೆ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ವಾರದ ಮಧ್ಯದಲ್ಲಿ ಕಾನೂನು ವಿಷಯವನ್ನು ಪರಿಹರಿಸಬಹುದು, ನಿರ್ಧಾರವು ನಿಮ್ಮ ಪರವಾಗಿ ಬರುತ್ತದೆ. ಕುಟುಂಬದಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸಬಹುದು, ಇದು ಕುಟುಂಬದ ಸದಸ್ಯರೊಂದಿಗಿನ ಸಂಘರ್ಷದಿಂದಾಗಿ ಪರಿಸ್ಥಿತಿಯನ್ನು ಹೆಚ್ಚು ಉದ್ವಿಗ್ನಗೊಳಿಸುತ್ತದೆ. ಅಂತಹ ಸಂದರ್ಭಗಳಲ್ಲಿ ನಿಮ್ಮ ನಡವಳಿಕೆಯನ್ನು ಸರಿಯಾಗಿ ಇಟ್ಟುಕೊಳ್ಳುವುದು ಉತ್ತಮ. ಈ ವಾರ ಆರೋಗ್ಯ ಉತ್ತಮವಾಗಿರುತ್ತದೆ.
  ಅದೃಷ್ಟ ಬಣ್ಣ: ಹಳದಿ
  ಅದೃಷ್ಟ ಸಂಖ್ಯೆ: 36
  ಅದೃಷ್ಟ ದಿನ: ಮಂಗಳವಾರ


 • ಕುಂಭ: 20 ಜನವರಿ - 18 ಫೆಬ್ರವರಿ

  ಈ ವಾರ ನೀವು ಕೆಲಸದ ಸ್ಥಳದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ದೊರೆಯುವ ನಿರೀಕ್ಷೆಯಿದೆ. ನೌಕರರು ತಮ್ಮ ಅತ್ಯುತ್ತಮ ಸಾಧನೆಗಾಗಿ ಕಚೇರಿಯಲ್ಲಿ ಗೌರವ ಪಡೆಯಬಹುದು. ಸರ್ಕಾರಿ ಉದ್ಯೋಗವನ್ನು ಪಡೆಯಲು ಬಯಸುವವರು ಯಶಸ್ಸನ್ನು ಪಡೆಯುವ ನಿರೀಕ್ಷೆಯಿದೆ. ಹಣಕಾಸಿನ ದೃಷ್ಟಿಯಿಂದ ಈ ವಾರ ನೀವು ಹೆಚ್ಚುವರಿ ಹಣವನ್ನು ಗಳಿಸುವ ಸುವರ್ಣಾವಕಾಶವನ್ನು ಪಡೆಯಬಹುದು. ಯಾವುದೇ ಹಣಕಾಸಿನ ಯೋಜನೆಗಳನ್ನು ಮಾಡುವಾಗ ಜಾಗರೂಕರಾಗಿರಿ. ನಿಮ್ಮ ಕುಟುಂಬದೊಂದಿಗೆ ನೀವು ಸಾಕಷ್ಟು ಮೋಜು ಮಾಡಲು ಹೋಗುವುದರಿಂದ ವಾರದ ಮಧ್ಯಭಾಗವು ತುಂಬಾ ವಿಶೇಷವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಹೊರಗಡೆ ಹೋಗಲು ಸಹ ನೀವು ಯೋಜಿಸಬಹುದು, ಅದು ನಿಮ್ಮಿಬ್ಬರ ನಡುವಿನ ಪರಸ್ಪರ ಬಂಧ ಹೆಚ್ಚಿಸುತ್ತದೆ. ಆರೋಗ್ಯವನ್ನು ನೋಡಿಕೊಳ್ಳಿ, ಕೆಲವು ಸಣ್ಣ ಕಾಯಿಲೆಗಳು ಭಯಾನಕ ರೂಪವನ್ನು ಪಡೆಯಬಹುದು.
  ಅದೃಷ್ಟ ಬಣ್ಣ: ಗಾಢ ಕೆಂಪು
  ಅದೃಷ್ಟ ಸಂಖ್ಯೆ: 14
  ಅದೃಷ್ಟ ದಿನ: ಗುರುವಾರ


 • ಮೀನ: 19 ಫೆಬ್ರವರಿ - 20 ಮಾರ್ಚ್

  ಕೆಲವು ಪ್ರಮುಖ ವಿಷಯಗಳು ಈ ವಾರ ನಿಮಗೆ ತೊಂದರೆಯಾಗಬಹುದು. ನಿಮ್ಮ ಕಠಿಣ ಪರಿಶ್ರಮದ ಅಪೇಕ್ಷಿತ ಫಲಿತಾಂಶವನ್ನು ನೀವು ಪಡೆಯದಿದ್ದರೆ ನಿರಾಶೆಯನ್ನು ಎದುರಿಸಬೇಕಾಗುತ್ತದೆ. ನಿಮ್ಮ ಆಲೋಚನೆಯು ಪ್ರಗತಿಯಲ್ಲಿರುವ ಮಾರ್ಗವನ್ನು ಪ್ರಶ್ನಿಸುವಂತೆ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕಠಿಣ ಪರಿಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ ಎಂಬುದನ್ನು ನೆನಪಿಡಿ. ಕುಟುಂಬ ಸದಸ್ಯರ ನಡುವಿನ ಅಂತರವು ಕಡಿಮೆಯಾಗುವುದರಿಂದ ಕುಟುಂಬಕ್ಕೆ ಒಳ್ಳೆಯ ಸಮಯ ನೀಡಿ. ಪ್ರಣಯ ಜೀವನದಲ್ಲಿ ಒಂದು ದೊಡ್ಡ ಸಮಸ್ಯೆ ಇದ್ದಕ್ಕಿದ್ದಂತೆ ಉದ್ಭವಿಸಬಹುದು. ತಾಳ್ಮೆಯಿಂದಿದ್ದರೆ ಮತ್ತು ಭರವಸೆ ಕಳೆದುಕೊಳ್ಳದಿದ್ದರೆ ಉತ್ತಮ. ಈ ವಾರ ನಿಮ್ಮ ಸಂಗಾತಿಯ ವರ್ತನೆ ಸರಿಯಾಗುವುದಿಲ್ಲ. ಸಣ್ಣ ವಿಷಯಗಳ ಬಗ್ಗೆ ವಾದಿಸುವುದರಿಂದ ನಿಮ್ಮಿಬ್ಬರ ನಡುವೆ ದೊಡ್ಡ ವಿವಾದ ಉಂಟಾಗಬಹುದು. ಈ ವಾರ ಆರ್ಥಿಕ ಪರಿಸ್ಥಿತಿಗಳು ಉತ್ತಮವಾಗಿರುವುದಿಲ್ಲ. ಯಾವುದೇ ಪ್ರಮುಖ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮಯ ಸೂಕ್ತವಲ್ಲ. ಆರೋಗ್ಯದ ವಿಷಯದಲ್ಲಿ ವಾರ ಸಾಮಾನ್ಯವಾಗಿರುತ್ತದೆ ಮತ್ತು ಯಾವುದೇ ದೊಡ್ಡ ಸಮಸ್ಯೆಗಳಿಲ್ಲ.
  ಅದೃಷ್ಟ ಬಣ್ಣ: ನೇರಳೆ
  ಅದೃಷ್ಟ ಸಂಖ್ಯೆ: 5
  ಅದೃಷ್ಟ ದಿನ: ಶುಕ್ರವಾರ
ಸಮಯ ಎನ್ನುವುದು ನಮ್ಮ ಬದುಕಿನ ಪಾಠವನ್ನು ಕಲಿಸುತ್ತದೆ. ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಬದಲಿಸಿಕೊಳ್ಳುವ ಕೌಶಲ್ಯವನ್ನು ಕಲಿತಿರಬೇಕು. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಬದಲಾವಣೆ ಎನ್ನುವುದು ನಿರಂತರವಾಗಿ ಹರಿಯುವ ನದಿಯಂತೆ ಅದು ಹೇಗೆ ಬರುತ್ತದೆಯೋ ಹಾಗೆ ನಾವು ಸ್ವೀಕರಿಸಬೇಕಾಗುವುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರ ಸಾಕಷ್ಟು ಗ್ರಹಗಳ ಬದಲಾವಣೆಗಳು ಉಂಟಾಗುವುದು ಅವುಗಳ ಪ್ರಭಾವ ರಾಶಿಚಕ್ರಗಳ ಮೇಲೆ ಗಣನೀಯವಾಗಿರುತ್ತವೆ. ಆ ಬದಲಾವಣೆಗಳು ನಿಮ್ಮ ಜೀವನದಲ್ಲಿ ಈ ವಾರ ನವೆಂಬರ್ 3ರಿಂದ ನವೆಂಬರ್ 9ರವರೆಗೆ ಹೇಗಿರುತ್ತದೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

 
ಹೆಲ್ತ್