Back
Home » ಬಾಲಿವುಡ್
ಬುರ್ಜ್ ಖಲೀಫಾ ಮೇಲೆ ಶಾರುಖ್ ಬರ್ತಡೇ ವಿಶ್ ನೋಡಿ ಬೆರಗಾದ ಅಭಿಮಾನಿಗಳು
Oneindia | 4th Nov, 2019 07:01 AM

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಇತ್ತೀಚಿಗೆ ಹುಟ್ಟಹಬ್ಬವನ್ನು ಆಚರಿಸಿಕೊಂಡಿದ್ದಾರೆ. 55ನೇ ವಸಂತಕ್ಕೆ ಕಾಲಿಟ್ಟ ಶಾರುಖ್ ಗೆ ಸ್ನೇಹಿತರು ಮತ್ತು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೆ ಹರಿದುಬಂದಿದೆ.

ಪ್ರತಿವರ್ಷದಂತೆ ಈ ವರ್ಷ ಸಹ ಅಪಾರ ಸಂಖ್ಯೆಯ ಅಭಿಮಾನಿಗಳು ಶಾರುಖ್ ಮನೆ ಮುಂದೆ ಜಮಾಯಿಸಿದ್ದರು. ಮುಂಬೈನಲ್ಲಿರುವ ಮನ್ನತ್ ನಿವಾಸದ ಹೊರಗೆ ನೆರೆದಿದ್ದ ಅಭಿಮಾನಿಗಳಿಗೆ ದರ್ಶನ ನೀಡಿ ಅಭಿಮಾನಿಗಳ ಶುಭಾಶಯ ಸ್ವೀಕರಿಸಿದರು. ಇನ್ನು ಈ ಬಾರಿಯ ಮತ್ತೊಂದು ವಿಶೇಷ ಅಂದರೆ ವಿಶ್ವ ಪ್ರಸಿದ್ಧ ದುಬೈನ ಬುರ್ಜ್ ಖಲೀಫಾ ಶಾರುಖ್ ಹುಟ್ಟುಹಬ್ಬದ ರಂಗನ್ನು ಮತ್ತಷ್ಟು ಹೆಚ್ಚಿಸಿತ್ತು.

''ನನ್ನ ತಂದೆ ಒಬ್ಬ ಸಕ್ಸಸ್ ಫುಲ್ ಫೆಲ್ಯೂರ್''- ಶಾರೂಖ್ ಖಾನ್ ಹೃದಯಸ್ಪರ್ಶಿ ಮಾತುಗಳು

ಬುರ್ಜ್ ಖಲೀಫಾ ಶಾರುಖ್ ಖಾನ್ ಗೆ ವಿಶೇಷವಾಗಿ ಶುಭಾಶಯ ಕೋರಿದೆ. ಬುರ್ಜ್ ಖಲೀಫಾ ಮೇಲೆ ಶಾರುಖ್ ಖಾನ್ ಹೆಸರನ್ನು ಲೈಟ್ ಗಳೊಂದಿಗೆ ಅಲಂಕಾರ ಮಾಡಲಾಗಿತ್ತು. ಬುರ್ಜ್ ಖಲೀಫಾ ಮೇಲೆ ಹ್ಯಾಪಿ ಬರ್ತಡೇ ಶಾರುಖ್ ಖಾನ್ ಎನ್ನುವ ವಿಶ್ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ. ಇದೆ ಮೊದಲ ಬಾರಿಗೆ ಬುರ್ಜ್ ಖಲೀಫಾ ಮೇಲೆ ನಟನೊಬ್ಬನ ಹುಟ್ಟುಹಬ್ಬವನ್ನು ಇಷ್ಟು ಅದ್ದೂರಿಯಾಗಿ ಆಚರಿಸಿರುವುದು ವಿಶೇಷ.

ಅಭಿಮಾನಿಗಳು ಮಾತ್ರವಲ್ಲದೆ ಸ್ವತಹ ಶಾರುಖ್ ಖಾನ್ ಕೂಡ ಸಂತಸಗೊಂಡಿದ್ದಾರೆ. ಈ ವಿಡಿಯೋ ಶೇರ್ ಮಾಡುವ ಮೂಲಕ ಟ್ವಿಟ್ಟರ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ. "ನನ್ನನ್ನು ತುಂಬ ಪ್ರಾಕಾಶಮಾನವಾಗಿ ಬೆಳಗಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಪ್ರೀತಿ ಮತ್ತು ದಯೆ ಮೀರಿಸಲಾಗದು. ಇದು ನಿಜಕ್ಕು ಎತ್ತರವಾಗಿದೆ. ಲವ್ ಯು ದುಬೈ, ಇದು ನನ್ನ ಹುಟ್ಟುಹಬ್ಬ, ನಾನೇ ಗೆಸ್ಟ್" ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ.

ಕಿರುತೆರೆಯಿಂದ ಪ್ರಾರಂಭವಾದ ಶಾರುಖ್ ಬಣ್ಣದ ಲೋಕದ ಜರ್ನಿ ನಂತರ ಬಾಲಿವುಡ್ ನ ಖ್ಯಾತ ನಟನನ್ನಾಗಿ ಮಾಡಿದೆ. ಇಂದು ಸ್ಟಾರ್ ನಾಗಿ ಬೆಳೆದು ನಿಂತಿದ್ದಾರೆ. ಝೀರೊ ಚಿತ್ರದ ನಂತರ ಶಾರುಖ್ ಮತ್ತೆ ಬಣ್ಣಹಚ್ಚಿಲ್ಲ. ಸತತ ಸೋಲಿನಿಂದ ಕಂಗೆಟ್ಟಿರುವ ಕಿಂಗ್ ಖಾನ್ ಉತ್ತಮ ಕಥೆಗಾಗಿ ಕಾಯುತ್ತಿದ್ದಾರೆ. ಸದ್ಯ ಕೇಳಿ ಬರುತ್ತಿರುವ ಮಾಹಿತಿಗಳ ಪ್ರಕಾರ ಕಾಲಿವುಡ್ ನ ಖ್ಯಾತ ನಿರ್ದೇಶಕ ಅಟ್ಲೀ ಶಾರುಖ್ ಮುಂದಿನ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ಆಟ್ಲೀ ಶಾರುಖ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

   
 
ಹೆಲ್ತ್