Back
Home » ಆರೋಗ್ಯ
ಚಳಿಗಾಲದಲ್ಲಿ ಈ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದನ್ನು ಮರೆಯಲೇಬೇಡಿ!!
Boldsky | 4th Nov, 2019 11:21 AM
  • 1. ಸಿಟ್ರಸ್ ಹಣ್ಣುಗಳು

    ಕಿತ್ತಳೆ, ನಿಂಬೆಹಣ್ಣು, ದ್ರಾಕ್ಷಿ, ಮೂಸಂಬಿ, ಕಿವಿ ಈ ಹಣ್ಣುಗಳನ್ನು ತಿನ್ನಿ. ಇವುಗಳ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚುವುದು, ಇನ್ನು ಚಳಿಗಾಲದಲ್ಲಿ ತ್ವಚೆ ಒಣಗುವುದು ಹಾಗೂ ಒಡೆಯುವ ಸಮಸ್ಯೆ ತಡೆಗಟ್ಟುವಲ್ಲಿಯೂ ಈ ಹಣ್ಣುಗಳು ಸಹಕಾರಿ. ಈ ಹಣ್ಣುಗಳ ಸೇವಿಸಿದಾಗ ಇವು ದೇಹದಲ್ಲಿರುವ ಬೇಡದ ಕಶ್ಮಲಗಳನ್ನು ಹೊರಹಾಕುವುದರಿಂದ ತ್ವಚೆ ಕಾಂತಿ ಹೆಚ್ಚಾಗುವುದು.


  • 2. ದಾಳಿಂಬೆ

    ಚಳಿಗಾಲದಲ್ಲಿ ತಿನ್ನಬೇಕಾದ ಮತ್ತೊಂದು ಹಣ್ಣೆಂದರೆ ದಾಳಿಂಬೆ. ಇದರಲ್ಲಿ ಪಾಲಿಪಿನೋಲ್ ಆ್ಯಂಟಿಅಕ್ಸಿಡೆಂಟ್ ಹಾಗೂ ಉರಿಯೂತವನ್ನು ಕಡಿಮೆ ಮಾಡುವ ಅಂಶವಿದ್ದುಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ತುಂಬಾ ಸಹಕಾರಿ. ದಾಳಿಂಬೆಯನ್ನು ತಿನ್ನುವುದರಿಂದ ದೇಹದಲ್ಲಿ ಕೆಂಪು ರಕ್ತಕಣಗಳು ಅಧಿಕವಾಗುವುದು, ಕೊಲೆಸ್ಟ್ರಾಲ್ ನಿಯಂತ್ರಿಸುವಲ್ಲಿ ತುಂಬಾ ಸಹಕಾರಿ. ದಾಳಿಂಬೆ ಚಳಿಗಾಲದಲ್ಲಿ ಕಾಡುವ ಶೀತವನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ.


  • 3. ಸೀಬೆಕಾಯಿ

    ಸೇಬು ಬೆಳೆ ನಮ್ಮ ಕರ್ನಾಟಕದಲ್ಲಿ ಬೆಳೆಯಲ್ಲ, ಅದನ್ನು ಕಾಶ್ಮೀರದಿಂದ ತರಿಸಲಾಗುವುದು. ಈ ಸೇಬು ಹಣ್ಣಿಗಿಂತ ಕಡಿಮೆಯೇನಿಲ್ಲ ನಮ್ಮ ಮನೆಯ ತೋಟದ ಹಿತ್ತಲಿನಲ್ಲಿ ಬೆಳೆಯುವ ಸೀಬೆ ಹಣ್ಣು. ಹೌದು ಸೀಬೆ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ6, ಮ್ಯಾಂಗನೀಸ್, ಪೊಟಾಷ್ಯಿಯಂ ಹಾಗೂ ಇತರ ವಿಟಮಿನ್ಸ್ ಹಾಗೂ ಖನಿಜಾಂಶಗಳಿದ್ದು ಚಳಿಗಾಲದಲ್ಲಿ ತಿನ್ನಲೇಬೇಕಾದ ಹಣ್ಣು ಇದಾಗಿದೆ.

    ಕೆಲವರು ಸೀಬೆಕಾಯಿ ತಿಂದರೆ ಶೀತವಾಗುತ್ತದೆ ಎಂದು ಹೇಳುವುದನ್ನು ಕೇಳಿರಬಹುದು ಆ ಮಾತುಗಳನ್ನು ನಂಬಬೇಡಿ, ನೆಗಡಿ ಬಾರದಂತೆ ತಡೆಗಟ್ಟುವಲ್ಲಿ ಸೀಬೆಕಾಯಿ ಪರಿಣಾಮಕಾರಿಯಾಗಿದೆ.


  • 4. ಸೀತಾಫಲ

    ಸಿತಾಫಲ ಹಣ್ಣೂ ಚಳಿಗಾಲದಲ್ಲಿ ದೊರೆಯುವ ಸೀಸನ್ ಹಣ್ಣಾಗಿದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ, ಕಬ್ಬಿಣಂಶ, ಮೆಗ್ನಿಷ್ಯಿಯಂ, ವಿಟಮಿನ್ ಬಿ6 ಹೀಗೆ ಆನೇಕ ವಿಟಮಿನ್ ಹಾಗೂ ಪೋಷಕಾಂಶಗಳಿವೆ. ಈ ಹಣ್ಣುಗಳನ್ನು ತಿನ್ನುವುದರಿಂದ ರೋಗ ನಿರೋಧಕ ಸಾಮರ್ಥ್ಯ ಹೆಚ್ಚುವುದು. ಇನ್ನು ಚಳಿಗಾಲದಲ್ಲಿ ತ್ವಚೆ ಸಮಸ್ಯೆ ಹೆಚ್ಚಾಗಿ ಕಾಡುವುದು, ಇದನ್ನು ತಡೆಗಟ್ಟುವಲ್ಲಿ, ತ್ವಚೆ ಆರೋಗ್ಯ ಕಾಪಾಡುವಲ್ಲಿ ಸೀತಾಫಲ ಸಹಕಾರಿಯಾಗಿದೆ.


  • 5. ಬೆರ್ರಿ ಹಣ್ಣುಗಳು

    ಬೆರ್ರಿ ಹಣ್ಣುಗಳಾದ ಸ್ಟ್ರಾಬೆರ್ರಿ, ರಾಸ್‌ಬೆರ್ರಿ, ಬ್ಲ್ಯಾಕ್‌ಬೆರ್ರಿ, ನೇರಳೆಹಣ್ಣು, ನೆಲ್ಲಿಕಾಯಿ ಇವುಗಳಲ್ಲಿ ವಿಟಮಿನ್ ಸಿ ಹಾಗೂ ಪಾಲಿಪಿನೋಲ್ ಆ್ಯಂಟಿಆಕ್ಸಿಡೆಂಟ್ ಅಧಿಕವಿದ್ದು ದೇಹದಲ್ಲಿ ರೋಗನಿರೊಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ. ಇನ್ನು ಚಳಿಗಾಲದಲ್ಲಿ ಸಾಮಾನ್ಯವಾಗಿ ಅಲರ್ಜಿ ಸಮಸ್ಯೆ ಕಾಡುವುದು, ಅಲರ್ಜಿಯಿಂದಾಗಿ ಮೂಗು, ಕಣ್ಣುಗಳಲ್ಲಿ ನೀರು ಬರುವುದು, ಒಣಕೆಮ್ಮು ಈ ರೀತಿಯ ಸಮಸ್ಯೆಗಳು ಉಂಟಾಗುವುದು. ದಿನಾ ಬೆಳಗ್ಗೆ ಒಂದು ಬೌಲ್ ಬೆರ್ರಿ ಹಣ್ಣುಗಳನ್ನು ತಿಂದು ನೋಡಿ ನಿಮ್ಮ ಅಲರ್ಜಿ ಸಮಸ್ಯೆ ದೂರವಾಗುವುದು.


  • ಚಳಿಗಾಲದಲ್ಲಿ ತಿನ್ನಬೇಕಾದ ತರಕಾರಿಗಳು

    1. ಕೇಲ್(kale)

    ಈ ಸೊಪ್ಪಿನಲ್ಲಿ ಅನೇಕ ಆರೋಗ್ಯಕರ ಅಂಶಗಳಿವೆ. ಇದರಲ್ಲಿ ಫ್ಲೇವೋನಾಯ್ಡ್ ಆ್ಯಂಟಿಆಕ್ಸಿಡೆಂಟ್ ಅಂಶ ಅಧಿಕವಿರುವುದರಿಂದ ಉರಿಯೂತದ ಸಮಸ್ಯೆ ಇರವವರು ಈ ಸೊಪ್ಪು ತಿನ್ನುವುದರಿಂದ ತುಂಬಾ ಪ್ರಯೋಜನ ಪಡೆಯಬಹುದು. ಇದನ್ನು ತಿನ್ನುವುದರಿಂದ ಅಲರ್ಜಿ, ಸೋಂಕು ಬರುವುದನ್ನು ತಡೆಗಟ್ಟಬಹುದು, ಕ್ಯಾನ್ಸರ್‌ನಂಥ ಮಾರಕ ರೋಗ ತಡೆಗಟ್ಟುವ ಸಾಮರ್ಥ್ಯ ಈ ಸೊಪ್ಪಿಗಿದೆ. ಇದರಲ್ಲಿ ವಿಟಮಿನ್ ಸಿ ಹಾಗೂ ಇ ಇದ್ದು ದೇಹದಲ್ಲಿರುವ ಬೇಡದ ರಾಸಾಯನಿಕಗಳನ್ನು ಹೊರಹಾಕುವಲ್ಲಿ ಸಹಕಾರಿಯಾಗಿದೆ. ದೇಹದಲ್ಲಿ ಬಿಳಿ ರಕ್ತಕಣಗಳನ್ನು ಉತ್ತೇಜಿಸುತ್ತದೆ.


  • 2. ಕ್ಯಾರೆಟ್‌

    ಚಳಿಗಾಲದಲ್ಲಿ ತಪ್ಪದೆ ತಿನ್ನಬೇಕಾದ ತರಕಾರಿಯೆಂದರೆ ಕ್ಯಾರೆಟ್‌. ಇದನ್ನು ಹಸಿಯಾಗಿ ಸಲಾಡ್‌ನಲ್ಲಿ ಬಳಸಿದರೆ ತುಂಬಾ ಒಳ್ಳೆಯದು. ಇನ್ನು ಮಕ್ಕಳಿಗೆ ಕೊಡುವುದಾದರೆ ಕ್ಯಾರೆಟ್ ಅನ್ನು ಬೇಯಿಸಿ ಕೊಡುವುದು ಒಳ್ಳೆಯದು. ಇದರಲ್ಲಿ ವಿಟಮಿನ್ ಎ ಇದ್ದು ಕಣ್ಣಿನ ಆರೋಗ್ಯ ವೃದ್ಧಿಸುತ್ತದೆ. ಇನ್ನು ಕ್ಯಾರೆಟ್‌ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಚಳಿಗಾಲದ ಆರೋಗ್ಯ ಸಮಸ್ಯೆಯಿಂದ ದೂರವಿರಬಹುದು.


  • 3. ಪಾರ್ಸ್ನಿಪ್

    ಪಾರ್ಸ್ನಿಪ್ ಎಪಿಯಾಸೀ ಕುಟಂಬಕ್ಕೆ ಸೇರಿದ ಪರಿಮಳಯುಕ್ತ ಬೇರಿನ ತರಕಾರಿ. ಇದನ್ನು ಬಿಳಿ ಮೂಲಂಗಿ ಎಂದು ಕೂಡ ಕರೆಯುತ್ತಾರೆ. ಇದನ್ನು ಸಲಾಡ್ ಹಾಗೂ ಅಡುಗೆಯಲ್ಲಿ ಬಳಸಬಹುದು. ಈ ತರಕಾರಿ ತಿನ್ನುವುದರಿಂದ ಹೃದಯಕ್ಕೆ ತುಂಬಾ ಒಳ್ಳೆಯದು, ಇನ್ನು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುವ ಸಾಮಾರ್ಥ್ಯ ಈ ತರಕಾರಿಗೆ ಇರುವುದರಿಂದ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಈ ತರಕಾರಿಯಲ್ಲಿ ವಿಟಮಿನ್ ಸಿ ಇದ್ದು ಚಳಿಗಾಲದ ಆರೋಗ್ಯ ಸಮಸ್ಯೆ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.


  • 4. ಮೂಲಂಗಿ

    ಮೂಲಂಗಿ ಅಂದರೆ ಸಾಕು ಹೆಚ್ಚಿನವರು ಮೂಗು ಮುರಿಯುತ್ತಾರೆ, ಅದಕ್ಕೆ ಪ್ರಮುಖ ಕಾರಣ ಅದರ ವಾಸನೆ. ಆದರೆ ರಕ್ತವನ್ನು ಶುದ್ಧೀಕರಿಸುವ ಅತ್ಯುತ್ತಮವಾದ ಆಹಾರ ಇದಾಗಿದೆ. ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು, ಕಾಮಲೆ ರೋಗ ಇರುವವರು ಇದನ್ನು ತಿಂದರೆ ತುಂಬಾ ಒಳ್ಳೆಯದು, ಮೂಲವ್ಯಾಧಿ ಸಮಸ್ಯೆ ಹೋಗಲಾಡಿಸುವಲ್ಲಿ ಪರಿಣಾಮಕಾರಿಯಾಗಿದೆ. ಶೀತ, ಕೆಮ್ಮು ಬಾರದಂತೆ ತಡೆಗಟ್ಟುವಲ್ಲಿ ಕೂಡ ಈ ತರಕಾರಿ ಪ್ರಯೋಜನಕಾರಿಯಾಗಿದೆ.


  • 5. ಕೆಂಪು ಎಲೆಕೋಸು

    ಇದರಲ್ಲಿ ಮ್ಯಾಂಗನೀಸ್, ಪೊಟಾಷ್ಯಿಯಂ, ವಿಟಮಿನ್ ಇದ್ದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕ್ಯಾನ್ಸರ್ ಕಣಗಳನ್ನು ತಡೆಗಟ್ಟುವ ಸಾಮರ್ಥ್ಯ ಈ ತರಕಾರಿಗಿದೆ. ಆದ್ದರಿಂದ ಕ್ಯಾನ್ಸರ್ ರೋಗಿಗಳು ತಮ್ಮ ಆಹಾರಕ್ರಮದಲ್ಲಿ ಈ ತರಕಾರಿ ಬಳಸುವುದು ಒಲ್ಳೆಯದು. ಇನ್ನು ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುವುದರಿಂದ ಚಳಿಗಾಲದ ಆಹಾರಕ್ರಮದಲ್ಲಿ ಈ ತರಕಾರಿಯನ್ನು ಹೆಚ್ಚಾಗಿಯೇ ಬಳಸಿ.




ಆರೋಗ್ಯಕರ ಅಹಾರ ಶೈಲಿ ಹೇಗಿರಬೇಕು ಗೊತ್ತೆ? ಕಾಲಕ್ಕೆ ತಕ್ಕಂತೆ ನಿಮ್ಮ ಆಹಾರಕ್ರಮದಲ್ಲಿ ಬದಲಾವಣೆಯಾಗಬೇಕು. ಪ್ರಕೃತಿಯನ್ನು ಗಮನಿಸಿ ನೋಡಿ, ಆಯಾ ಕಾಲಕ್ಕೆ ತಕ್ಕಂತೆ ಹಣ್ಣು-ತರಕಾರಿಗಳು ಬೆಳೆಯುತ್ತವೆ, ಅವುಗಳನ್ನು ನಾವು ತಿನ್ನುವ ಆಹಾರದಲ್ಲಿ ಸೇರಿಸಿದರೆ ಸಾಕು, ನಿಮಗೆ ಆ ಕಾಲಕ್ಕೆ ನಿಮ್ಮ ಆರೋಗ್ಯವನ್ನು ಕಾಪಾಡುವ ಪೋಷಕಾಂಶಗಳು ದೊರೆಯುತ್ತವೆ. ಇಲ್ಲಿ ನಾವು ಚಳಿಗಾಲದಲ್ಲಿ ಯಾವ ಹಣ್ಣು ಮತ್ತು ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಬೇಕು ಹಾಗೂ ಏಕೆ ಸೇರಿಸಬೇಕು ಎಂಬ ಮಾಹಿತಿ ನೀಡಿದ್ದೇವೆ ನೋಡಿ.

ಚಳಿಗಾಲದಲ್ಲಿ ನೆಗಡಿ, ಕೆಮ್ಮು, ಸೈನಸ್‌ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ತಣ್ಣನೆಯ ವಾತಾವರಣ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಇದನ್ನು ತಡೆಗಟ್ಟಲು ದೇಹದಲ್ಲಿ ರೋಗನಿರೋಧಕ ಸಾಮರ್ಥ್ಯ ಹೆಚ್ಚಬೇಕು. ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸಲು ವಿಟಮಿನ್ ಸಿ ಹಾಗೂ ಆ್ಯಂಟಿಅಕ್ಸಿಡೆಂಟ್ ಇರುವ ಆಹಾರಗಳನ್ನು ಸೇವಿಸಬೇಕು. ಆದ್ದರಿಂದ ಚಳಿಗಾಲದಲ್ಲಿ ಈ ಹಣ್ಣು ಹಾಗೂ ತರಕಾರಿಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ, ಕಾಯಿಲೆಯನ್ನು ತಡೆಗಟ್ಟಿ.

ಚಳಿಗಾಲದಲ್ಲಿ ತಿನ್ನಬೇಕಾದ ಹಣ್ಣುಗಳು
   
 
ಹೆಲ್ತ್