Back
Home » ಬಾಲಿವುಡ್
ನಿರ್ದೇಶಕ ವೆಟ್ರಿಮಾರನ್ ಜೊತೆ ಶಾರೂಖ್ ಖಾನ್ ಸಿನಿಮಾ?
Oneindia | 4th Nov, 2019 01:42 PM

ನಟ ಶಾರೂಖ್ ಖಾನ್ ತಮಿಳು ನಿರ್ದೇಶಕ ಅಟ್ಲೀ ಜೊತೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಇತ್ತು. ಆದರೆ, ಇದೀಗ ಕಾಲಿವುಡ್ ನ ಮತ್ತೊಬ್ಬ ನಿರ್ದೇಶಕನ ಜೊತೆಗೆ ಕಿಂಗ್ ಖಾನ್ ಕಾಣಿಸಿಕೊಂಡಿದ್ದಾರೆ.

'ಅಸುರನ್' ನಿರ್ದೇಶಕ ವೆಟ್ರಮಾರನ್ ಹಾಗೂ ಶಾರೂಖ್ ಖಾನ್ ಭೇಟಿ ಮಾಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಶಾರೂಖ್ ಖಾನ್ ಹುಟ್ಟುಹಬ್ಬ (ನವೆಂಬರ್ 2) ದಂದು ವೆಟ್ರಿಮಾರನ್ ಹಾಗೂ ಶಾರೂಖ್ ಖಾನ್ ಮೀಟ್ ಮಾಡಿದ್ದಾರೆ.

''ನನ್ನ ತಂದೆ ಒಬ್ಬ ಸಕ್ಸಸ್ ಫುಲ್ ಫೆಲ್ಯೂರ್''- ಶಾರೂಖ್ ಖಾನ್ ಹೃದಯಸ್ಪರ್ಶಿ ಮಾತುಗಳು

ಸೌತ್ ಸ್ಟಾರ್ ಡೈರೆಕ್ಟರ್ ಹಾಗೂ ಬಾಲಿವುಡ್ ನ ಸೂಪರ್ ಸ್ಟಾರ್ ಭೇಟಿ ಆಗುತ್ತಿದ್ದಾರೆ ಎಂದಾಗ ಇಬ್ಬರು ಸೇರಿ ಸಿನಿಮಾ ಮಾಡುತ್ತಿದ್ದಾರೆಯೇ ಎನ್ನುವ ಕುತೂಹಲ ಮೂಡುತ್ತದೆ. ಅಲ್ಲದೆ, ಶಾರೂಖ್ ಖಾನ್ ಮುಂದಿನ ಸಿನಿಮಾಗಾಗಿ ಬೇರೆ ಬೇರೆ ನಿರ್ದೇಶಕರ ಹುಡುಕಾಟದಲ್ಲಿ ಇದ್ದಾರೆ.

ಶಾರೂಖ್ ಖಾನ್ ಭೇಟಿಯ ಬಗ್ಗೆ ಮಾತನಾಡಿರುವ ವೆಟ್ರಿಮಾರನ್ ಹೊಸ ಸಿನಿಮಾ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ. ಸಿನಿಮಾದ ಬಗ್ಗೆ ಚರ್ಚೆಗಾಗಿ ಅವರನ್ನು ಭೇಟಿ ಮಾಡಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

'ಬಾಯ್ ಫ್ರೆಂಡ್ ಬಿಟ್ಟಾಕು' ಮಗಳಿಗೆ ಶಾರೂಖ್ ಖಾನ್ ಬುದ್ದಿ ಮಾತು

ವೆಟ್ರಿಮಾರನ್ ಸೌತ್ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ. 'ವಿಸಾರಣೈ', 'ವಡಾ ಚೆನ್ನೈ', 'ಕಾಕ ಮುಟ್ಟೈ', 'ಆಡುಕಾಲಂ' ಸೇರಿದಂತೆ ವಿಭಿನ್ನ ಸಿನಿಮಾಗಳ ಮೂಲಕ ದೊಡ್ಡ ಹೆಸರು ಮಾಡಿದ್ದಾರೆ. ಇತ್ತೀಚಿಗಷ್ಟೆ 'ಅಸುರನ್' ಚಿತ್ರವನ್ನು ವೆಟ್ರಿಮಾರನ್ ನಿರ್ದೇಶನ ಮಾಡಿದ್ದರು.

   
 
ಹೆಲ್ತ್