Back
Home » ಗಾಸಿಪ್
ಹೆಚ್ಚಾಯ್ತು ಶ್ರೀಮುರಳಿ ಸಂಭಾವನೆ, ಒಂದು ಸಿನಿಮಾಗೆ ಎಷ್ಟು ಕೋಟಿ?
Oneindia | 4th Nov, 2019 03:22 PM
 • ತೆಲುಗು ನಿರ್ಮಾಣ ಸಂಸ್ಥೆಯಿಂದ ಆಫರ್

  ತೆಲುಗು ನಿರ್ಮಾಣ ಸಂಸ್ಥೆ ನಟ ಶ್ರೀಮುರಳಿ ಜೊತೆಗೆ ಸಿನಿಮಾ ಮಾಡಲು ನಿರ್ಧಾರ ಮಾಡಿದೆ. ಒಂದರ ಎರಡಲ್ಲ ಶ್ರೀಮುರಳಿ ಜೊತೆಗೆ ಮೂರು ಸಿನಿಮಾಗಳಿಗೆ ಬಂಡವಾಳ ಹಾಕುತ್ತಿದೆ. ಈ ಮೂರು ಸಿನಿಮಾಗಳನ್ನು ಸೇರಿ ಒಂದೊಂದು ಸಿನಿಮಾಗೆ 7 ಕೋಟಿ ಸಂಭಾವನೆ ನೀಡಲು ಮುಂದೆ ಬಂದಿದೆ. ಈ ಸಿನಿಮಾವನ್ನು ಕನ್ನಡ ಹಾಗೂ ತೆಲುಗಿನಲ್ಲಿ ನಿರ್ಮಾಣ ಮಾಡಲು ಯೋಜನೆ ಇದೆ.


 • ಮೂರು ಸಿನಿಮಾದಿಂದ 21 ಕೋಟಿ

  ಶ್ರೀಮುರಳಿ ಜೊತೆಗೆ ಮೂರು ಸಿನಿಮಾಗೆ 21 ಕೋಟಿ ಸಂಭಾವನೆ ಆಫರ್ ನೀಡಿದೆ. ಈ ಮೂರು ಸಿನಿಮಾಗಳು ಎರಡು ವರ್ಷಗಳಲ್ಲಿ ಮುಗಿಯಲಿದೆ. ಪ್ರಾಜೆಕ್ಟ್ ಓಕೆ ಆದ್ರೆ ಮುರಳಿ ಎರಡು ವರ್ಷ ಕಾಲ್ ಶೀಟ್ ನೀಡಬೇಕು. ಆಗ ಪ್ರತಿ ಸಿನಿಮಾಗೆ 7 ಕೋಟಿ ಸಂಭಾವನೆ ಶ್ರೀಮುರಳಿ ಪಾಲಾಗುತ್ತಿದೆ. 'ಭರಾಟೆ' ಸಿನಿಮಾದ ಕಲೆಕ್ಷನ್ 25 ಕೋಟಿ ದಾಟಿದ್ದು, ಅದರ ಪರಿಣಾಮ ಶ್ರೀಮುರಳಿ ಸಂಭಾವನೆ ಮೇಲೆ ಬಿದಿದ್ದೆ.

  'ನಿಮ್ಮಿಂದಲೇ ನಾವು, ಈ ಕೆಲಸ ಮಾಡಬೇಡಿ': ಶ್ರೀಮುರಳಿ ಮನವಿ


 • ಸಂಭಾವನೆಯಲ್ಲಿ ಸುಮಾರು 2 ಕೋಟಿ ಹೆಚ್ಚು

  ಗಾಂಧಿನಗರದ ಮೂಲಗಳ ಪ್ರಕಾರ ಶ್ರೀಮುರಳಿ ಒಂದು ಸಿನಿಮಾ 4 ದಿಂದ 5 ಕೋಟಿ ಸಂಭಾವನೆ ಪಡೆಯುತ್ತಿದ್ದರು. ಈಗ ಒಂದು ಸಿನಿಮಾ 7 ಕೋಟಿಯಂತೆ ನೀಡಲು ತೆಲುಗು ಸಂಸ್ಥೆ ಮುಂದೆ ಬಂದಿದೆ. ಹೀಗಾಗಿ ಶ್ರೀಮುರಳಿ ಸಂಭಾವನೆ ಸುಮಾರು 2 ಕೋಟಿ ಹೆಚ್ಚಾಗಿದೆ. 'ಉಗ್ರಂ', 'ರಥಾವರ', 'ಮಫ್ತಿ' ನಂತರ 'ಭರಾಟೆ' ಕೂಡ ಹಣ ಮಾಡಿ ಶ್ರೀ ಮುರಳಿ ಮಾರ್ಕೆಟ್ ಹೆಚ್ಚು ಮಾಡಿದೆ.


 • 'ಮದಗಜ' ನವೆಂಬರ್ 28ಕ್ಕೆ ಶುರು

  'ಭರಾಟೆ' ನಂತರ 'ಮದಗಜ' ಸಿನಿಮಾಗೆ ಶ್ರೀಮುರಳಿ ಚಾಲನೆ ನೀಡಲಿದ್ದಾರೆ. ಈ ಸಿನಿಮಾ ಇದೇ ತಿಂಗಳ 28ಕ್ಕೆ ಶುರು ಆಗುತ್ತಿದೆ. ಸದ್ಯ, ಸಿನಿಮಾದ ಮೋಷನ್ ಪೋಸ್ಟರ್ ಒಂದು ಮಿಲಿಯನ್ ಗಡಿ ದಾಟಿದೆ. ಸಿನಿಮಾದಲ್ಲಿ ಶ್ರೀಮುರಳಿ ಲುಕ್ ಹಾಗೂ ಪಾತ್ರದ ಬಗ್ಗೆ ನಿರೀಕ್ಷೆ ಇದೆ. ಮಹೇಶ್ ಕುಮಾರ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. 'ಅಯೋಗ್ಯ' ನಂತರ ಮಹೇಶ್ ಎರಡನೇ ಸಿನಿಮಾ ಇದಾಗಿದೆ.

  'ವನ್ಯಜೀವಿ ಸಂರಕ್ಷಣಾ' ರಾಯಭಾರಿಯಾದ ನಟ ಶ್ರೀಮುರಳಿ
ಒಂದು ಸಿನಿಮಾ ಹಿಟ್ ಆದ್ರೆ, ಆ ಸಿನಿಮಾಗೆ ನಾಯಕರು ಪಡೆಯುವ ಸಂಭಾವನೆ ಕೂಡ ಹೆಚ್ಚಾಗುತ್ತದೆ. ಇದೀಗ ಶ್ರೀಮುರಳಿ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಸಂಭಾವನೆ ಹೆಚ್ಚಾಗಿದ್ದು, ಅವರ ನಿರ್ಧಾರ ಎನ್ನುವುದಕ್ಕಿಂತ ನಿರ್ಮಾಣ ಸಂಸ್ಥೆಯೊಂದು ಈ ಆಫರ್ ನೀಡಿದೆ.

'ಭರಾಟೆ' ಸಿನಿಮಾದ ಜೋರು ಮುಂದುವರೆದಿದೆ. ಮಾಸ್ ಪ್ರೇಕ್ಷಕರು ಸಿನಿಮಾವನ್ನು ಇಷ್ಟ ಪಟ್ಟಿದ್ದಾರೆ. ಈ ಸಿನಿಮಾಗೆ ಪಾಸಿಟಿವ್, ನೆಗೆಟಿವ್ ಏನೇ ರೆಸ್ಪಾನ್ಸ್ ಇದ್ದರೂ, ಸಿನಿಮಾದ ಕಲೆಕ್ಷನ್ ಚೆನ್ನಾಗಿ ಆಗಿದೆ. ಸಿನಿಮಾ ಸದ್ಯಕ್ಕೆ 25 ಕೋಟಿ ಗಡಿ ದಾಟಿದೆ.

ಅಗಸ್ತ್ಯ ಶ್ರೀಮುರಳಿ ಜೊತೆಗೆ 'ಉಗ್ರಂ' ಡೈರೆಕ್ಟರ್

ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾದ ಯಶಸ್ಸು ಶ್ರೀಮುರಳಿ ಸ್ಟಾರ್ ಗಿರಿಯನ್ನು ಮತ್ತಷ್ಟು ಹೆಚ್ಚು ಮಾಡಿದೆ. ಹೀಗಾಗಿ, ಶ್ರೀಮುರಳಿಗೆ ತಮ್ಮ ಮುಂದಿನ ಸಿನಿಮಾಗಾಗಿ ಹೆಚ್ಚು ಸಂಭಾವನೆಯ ಅವಕಾಶಗಳು ಪಡೆದಿದ್ದಾರೆ. 'ಭರಾಟೆ' ಸಿನಿಮಾದ ನಂತರ 'ಮದಗಜ' ಶುರು ಆಗಬೇಕಿದೆ. ಇದರ ನಡುವೆ ದೊಡ್ಡ ಅವಕಾಶವೊಂದು ಮುರಳಿ ಬಳಿಗೆ ಬಂದಿದೆ.

   
 
ಹೆಲ್ತ್