Back
Home » ಬಾಲಿವುಡ್
'ಸೂರ್ಯವಂಶ' ನಟಿಗೆ 'ಒಬ್ಬಳೆ ಬಾ' ಎಂದು ಕರೆದ ಸೂಪರ್ ಸ್ಟಾರ್ ಯಾರು?
Oneindia | 4th Nov, 2019 06:05 PM
 • ಇದೇ ಕಾರಣಕ್ಕೆ ಸಿನಿಮಾ ಅವಕಾಶಗಳನ್ನು ಕಳೆದುಕೊಂಡೆ

  ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆ ಎಂದು ಇಶಾ ಕೊಪ್ಪಿಕರ್ ಹೇಳಿದ್ದಾರೆ. ಇದೇ ಕಾರಣದಿಂದ ಅವರಿಗೆ ಬಂದ ಎಷ್ಟೋ ಆಫರ್ ಗಳು ಕೈತಪ್ಪಿವೆಯಂತೆ. ತಮಗೆ ಬಂದಿದ್ದ ಸಿನಿಮಾ ಅವಕಾಶಗಳು, ಆ ನಂತರ ಬೇರೆಯವರ ಪಾಲಾಗುತ್ತಿದ್ದವು ಎಂದು ಇಶಾ ಕೊಪ್ಪಿಕರ್ ಹೇಳಿದ್ದಾರೆ. ಇದರ ಜೊತೆಗೆ ಸ್ಟಾರ್ ನಟನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

  ರಾತ್ರಿ ವೇಳೆ ಸಿನಿಮಾ ಆಫೀಸ್ ಗೆ ಹುಡುಗಿಯರು ಯಾಕೆ ಹೋಗ್ತಾರೆ? ನಿರ್ಮಾಪಕ ಹೇಳಿದ್ದೇನು?


 • 'ಒಬ್ಬಳೆ ಬಾ' ಎಂದ ಸ್ಟಾರ್ ನಟ

  ಒಂದು ಹೊಸ ಸಿನಿಮಾ ಶುರು ಆಗುತ್ತಿದೆ ಎಂದು ನಿರ್ಮಾಪಕರೊಬ್ಬರು ಇಶಾ ಕೊಪ್ಪಿಕರ್ ಗೆ ಹೇಳಿದ್ದರಂತೆ. ಇಂತಹ ದೊಡ್ಡ ನಟರ ಜೊತೆಗೆ ನೀನು ಸಿನಿಮಾ ಮಾಡಬೇಕು ಎಂದು ಹೇಳಿ ನಟನಿಗೆ ಕರೆ ಮಾಡಲು ತಿಳಿಸಿದರಂತೆ. ಅವರ ಮಾತಿನಂತೆ ಆ ಸ್ಟಾರ್ ಗೆ ಇಶಾ ಕೊಪ್ಪಿಕರ್ ಕಾಲ್ ಮಾಡಿದ್ದಾರೆ. ಆದರೆ, ಆ ನಟ ನಾಳೆ ನೀನು ಒಬ್ಬಳೆ ನನ್ನನ್ನು ಭೇಟಿ ಮಾಡು ಎಂದು ಹೇಳಿದ್ದಾರೆ.


 • ನಟನಿಂದ ದೂರ ಸರಿದ ಇಶಾ

  ನೀನು ಯಾರ ಜೊತೆಗೆ ಬರ್ತಿಯಾ? ಎಂದು ಕೇಳಿದಾಗ, ಡ್ರೈವರ್ ಜೊತೆಗೆ ಎಂದು ಇಶಾ ಉತ್ತರಿಸಿದ್ದಾರೆ. ಆಗ ಆ ನಟ ನೀನು ಒಬ್ಬಳೆ ಬಾ ಎಂದು ಪೀಡಿಸಿದನಂತೆ. ಇದರಿಂದ ಪರಿಸ್ಥಿತಿಯನ್ನು ಅರಿತ ಇಶಾ ಕೊಪ್ಪಿಕರ್ ಆ ನಟನಿಂದ ದೂರ ಸರಿದರಂತೆ. ನನ್ನ ಪ್ರತಿಭೆ ನೋಡಿ ಅವಕಾಶ ನೀಡುವ ಆಗಿದ್ದರೆ ಮಾತ್ರ ತಿಳಿಸಿ ಎಂದು ನಿರ್ಮಾಪಕರಿಗೆ ಹೇಳಿದರು.

  ಕಿಸ್ಸಿಂಗ್ ಸೀನ್ ರಿಹರ್ಸಲ್ ಮಾಡೋಣ ಬಾ ಎಂದ ನಿರ್ದೇಶಕನಿಗೆ ಈ ನಟಿ ಹೇಳಿದ್ದೇನು?


 • ಆ ಸೂಪರ್ ಯಾರು?

  ಒಬ್ಬ ಸೂಪರ್ ಸ್ಟಾರ್ ಬಗ್ಗೆ ಮಾತ್ರವಲ್ಲದೆ, ಕೆಲ ಸೆಕ್ರೆಟರಿಗಳು ಕೂಡ ತನ್ನ ಜೊತೆಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಇಶಾ ಕೊಪ್ಪಿಕರ್ ಮಾಡಿದ್ದಾರೆ. ತಮ್ಮ ಜೀವನದ ಈ ಕಹಿ ಘಟನೆ ಬಗ್ಗೆ ಹೇಳಿದ ಇಶಾ, 'ಆ ಸೂಪರ್ ಸ್ಟಾರ್ ಯಾರು?' ಎಂದು ಹೆಸರು ತಿಳಿಸಿಲ್ಲ. ನಾಲ್ಕೈದು ಭಾಷೆಗಳಲ್ಲಿ ನಟಿಸಿರುವ ಇಶಾ ಕೊಪ್ಪಿಕರ್ ಯಾರ ಬಗ್ಗೆ ಈ ಮಾತನ್ನು ಹೇಳಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ.
ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ನಡೆಯುತ್ತಲೇ ಇರುತ್ತದೆ. ಇಂಡಸ್ಟ್ರಿ ಬೆಳೆಯುತ್ತಿದ್ದರೂ, ಹೊಸ ಸಿನಿಮಾಗಳು ಹುಟ್ಟುತ್ತಿದ್ದರೂ, ಕಾಸ್ಟಿಂಗ್ ಕೌಚ್ ಎನ್ನುವ ಕೆಟ್ಟ ಸಂಸ್ಕೃತಿ ಇರಲು ಜಾರಿಯಲ್ಲಿ ಇದೆ.

ಕಾಸ್ಟಿಂಗ್ ಕೌಚ್ ವಿರುದ್ಧ ಆಗಾಗ ನಾಯಕಿಯರು ಸಮರ ಸಾರುತ್ತಾರೆ. ಇದೀಗ, ನಟಿ ಇಶಾ ಕೊಪ್ಪಿಕರ್ ಈ ಬಗ್ಗೆ ಮಾತನಾಡಿದ್ದಾರೆ. ಸೂಪರ್ ಸ್ಟಾರ್ ಒಬ್ಬರ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಬಾಲಿವುಡ್ ಸಿನಿಮಾ ವೆಬ್ ಸೈಟ್ ವೊಂದು ನಡೆಸಿರುವ ಸಂದರ್ಶನದಲ್ಲಿ ಈ ವಿಷಯವನ್ನು ಇಶಾ ಹೇಳಿಕೊಂಡಿದ್ದಾರೆ.

'ನಿನ್ನ ದೇಹದ ಬಗ್ಗೆ ಇಂಚಿಂಚೂ ತಿಳಿಯಬೇಕು' ಎಂದಿದ್ದನಂತೆ ಸೌತ್ ನಿರ್ದೇಶಕ

ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದ ಇಶಾ ಕೊಪ್ಪಿಕರ್ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಲ ತಿಂಗಳ ಹಿಂದೆ, ಕನ್ನಡದ 'ಕವಚ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಇಶಾ, ಈಗ ಒಂದು ಹಿಂದಿ ಸಿನಿಮಾ ಮಾಡುತ್ತಿದ್ದಾರೆ. ಸುಮಾರು 21 ವರ್ಷಗಳಿಂದ ಚಿತ್ರರಂಗದಲ್ಲಿ ಇರುವ ಇಶಾ ಕಾಸ್ಟಿಂಗ್ ಕೌಚ್ ವಿರುದ್ಧ ಹೇಳಿಕೆ ನೀಡಿದ್ದಾರೆ.

   
 
ಹೆಲ್ತ್