Back
Home » ಬಾಲಿವುಡ್
ಕೆ.ಎಲ್ ರಾಹುಲ್ 'ಪ್ರೀತಿ' ವಿಷ್ಯ ಬಿಚ್ಚಿಡ್ತಾ ಈ ರೋಮ್ಯಾಂಟಿಕ್ ಫೋಟೋ?
Oneindia | 5th Nov, 2019 08:01 PM

ಭಾರತೀಯ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್ ರಾಹುಲ್ ಒಂದಲ್ಲೊಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ರಾಹುಲ್ ಮತ್ತೀಗ ಸುದ್ದಿಯಾಗಿರುವುದು ಕ್ರಿಕೆಟ್ ವಿಚಾರಕ್ಕೆ ಅಂತ ಅಂದ್ಕೋಬೆಡಿ. ಟೀಂ ಇಂಡಿಯಾದ ಈ ಹ್ಯಾಂಡ್ ಸಮ್ ಹಂಕ್ ಮತ್ತೆ ಗರ್ಲ್ ಫ್ರೆಂಡ್ ವಿಚಾರಕ್ಕೆ ಸದ್ದು ಮಾಡುತ್ತಿದ್ದಾರೆ.

ಕನ್ನಡಿಗ ಕೆ ಎಲ್ ರಾಹುಲ್, ಬಾಲಿವುಡ್ ನ ಸ್ಟಾರ್ ನಟ, ಕನ್ನಡಿಗ ಸುನೀಲ್ ಶೆಟ್ಟಿ ಮಗಳ ಜೊತೆ ಡೇಟಿಂಗ್ ನಲ್ಲಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ನಟಿ ಅತಿಯಾ ಶೆಟ್ಟಿ ಮತ್ತು ರಾಹುಲ್ ಇಬ್ಬರು ಒಟ್ಟಿಗೆ ಓಡಾಡುತ್ತಿರುವ ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ಬಗ್ಗೆ ಕೇಳಿದರೆ ಇಬ್ಬರು ಬೆಸ್ಟ್ ಫ್ರೆಂಡ್ಸ್ ಅಷ್ಟೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ.

ಬಾಲಿವುಡ್ ಸ್ಟಾರ್ ನಟನ ಮಗಳ ಜೊತೆ ಕೆಎಲ್ ರಾಹುಲ್ ಡೇಟಿಂಗ್.?

ಇವತ್ತು ನಟಿ ಅತಿಯಾ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮ. ಗೆಳತಿ, ರೂಮರ್ಸ್ ಗರ್ಲ್ ಫ್ರೆಂಡ್ ಅತಿಯಾ ಹುಟ್ಟುಹಬ್ಬಕ್ಕೆ ರಾಹುಲ್ ವಿಶೇಷವಾಗಿ ಶುಭಕೋರಿ ಮತ್ತೆ ಸುದ್ದಿಯಾಗಿದ್ದಾರೆ. ಕೇವಲ ವಿಶ್ ಮಾಡಿದ್ದು ಮಾತ್ರವಲ್ಲದೆ, ಇಬ್ಬರ ರೋಮ್ಯಾಂಟಿಕ್ ಫೋಟೋವನ್ನು ಶೇರ್ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಕೋತಿಯ ಇಮೋಜಿ ಹಾಕಿದ್ದಾರೆ.

ಈ ಫೋಟೋ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಒಂದು ಕೆಫೆಯೊಂದರಲ್ಲಿ ಕುಳಿತಿರುವ ಫೋಟೋ ಇದಾಗಿದ್ದು, ಇಬ್ಬರು ಒಬ್ಬರಿಗೊಬ್ಬರು ನೋಡಿಕೊಂಡು ನಾಚಿಕೊಳ್ಳುತ್ತಿರುವ ಪೋಸ್ ಇದೆ. ಈ ಫೋಟೋ ಶೇರ್ ಮಾಡಿರುವ ಉದ್ದೇಶ ಇಬ್ಬರ ಲವ್ ರಿಲೇಶನ್ ಶಿಫ್ ಬಹಿರಂಗಗೊಳಿಸುವುದಕ್ಕಾಗಿಯೆ ಈ ರೋಮ್ಯಾಂಟಿಕ್ ಫೋಟೋ ಶೇರ್ ಮಾಡಿದ್ದಾರಾ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ.

ಇಬ್ಬರು ಡೆಟಿಂಗ್ ನಲ್ಲಿ ಇದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದರು ಬಹಿರಂಗವಾಗಿ ಎಲ್ಲಿಯೂ ಫೋಟೋವನ್ನು ಶೇರ್ ಮಾಡಿದ್ದಾಗಲಿ, ಅಥವಾ ಒಬ್ಬರ ಬಗ್ಗೆ ಮತ್ತೊಬ್ಬರು ಮಾತನಾಡಿದ್ದಾಗಲಿ ಇರಲಿಲ್ಲ. ಆದರಿವತ್ತು ರೋಮ್ಯಾಂಟಿಕ್ ಫೋಟೋ ಹಂಚಿಕೊಳ್ಳುವ ಮೂಲಕ ಹರಿದಾಡುತ್ತಿದ್ದ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದಾಗೆ ಆಗಿದೆ. ಅತಿಯಾ ಹೀರೋ ಚಿತ್ರದ ಮೂಲಕ 2015ರಲ್ಲಿ ಬಾಲಿವುಡ್ ಗೆ ಪ್ರವೇಶ ಮಾಡುತ್ತಿದ್ದಾರೆ. ಬಾಲಿವುಡ್ ನಲ್ಲಿ ಹೆಚ್ಚು ಮಿಂಚದಿದ್ದರು ಅತಿಯಾ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ಅತಿಯಾ ಅಭಿನಯದ ಮೋತಿಚೂರ್ ಚಕ್ನಾಚೂರ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.

   
 
ಹೆಲ್ತ್