Back
Home » ಸಮ್ಮಿಲನ
ಮೊಟ್ಟೆ ತಿಂದು ಪ್ರಾಣ ಕಳೆದುಕೊಂಡ ವ್ಯಕ್ತಿ
Boldsky | 6th Nov, 2019 12:12 PM

ಮೊಟ್ಟೆ ತಿಂದರೆ ಸಾಯುತ್ತಾರಾ? ಹೌದು ಅಂಥದ್ದೊಂದು ವಿಚಿತ್ರ ಘಟನೆ ಉತ್ತರ ಪ್ರದೇಶದ ಜೌನಾಪುರ್ ಜಿಲ್ಲೆಯಲ್ಲಿ ನಡೆದಿದೆ. ಅಷ್ಟಕ್ಕೂ ಆ ವ್ಯಕ್ತಿ ಸಾಯುವ ಮಟ್ಟಿಗೆ ಮೊಟ್ಟೆ ತಿಂದ್ದದ್ದು ಕೇವಲ ಎರಡು ಸಾವಿರ ರುಪಾಯಿ ಬೆಟ್ಟಿಗಾಗಿ! ಮೊಟ್ಟೆ ತಿಂದು ಸಾವಿಗೀಡದ ವ್ಯಕ್ತಿಯನ್ನು ಸುಭಾಶ್‌ ಯಾದವ್‌ ಎಂದು ಗುರುತಿಸಲಾಗಿದೆ.

ನೀವು ಮೊಟ್ಟೆ ಪ್ರಿಯರಾಗಿದ್ದರೆ ಭಯ ಪಡಬೇಡಿ, ಏಕೆಂದರೆ ಆ ವ್ಯಕ್ತಿ ನೀವು ತಿನ್ನುವ ರೀತಿ 2-3 ಮೊಟ್ಟೆ ತಿಂದಿದ್ದಲ್ಲ, ಬರೋಬರಿ 41 ಮೊಟ್ಟೆ ತಿಂದಿದ್ದಾರೆ, ಇನ್ನೇನು 42ನೇ ಮೊಟ್ಟೆ ತಿನ್ನಬೇಕು ಎನ್ನುವಷ್ಟರಲ್ಲಿ ಪ್ರಜ್ಞೆತಪ್ಪಿ ಕುಸಿದು ಬಿದ್ದಿದ್ದಾರೆ, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ. ಅಧಿಕ ಮೊಟ್ಟೆ ತಿಂದಿರುವುದೇ ವ್ಯಕ್ತಿಯ ಸಾವಿಗೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.

ಅಷ್ಟಕ್ಕೂ ಆ ವ್ಯಕ್ತಿ ಅಷ್ಟೊಂದು ಮೊಟ್ಟೆ ತಿನ್ನಲು ಮುಂದಾಗಿರುವುದಾದರೂ ಏಕೆ, ಏನಾದರೂ ಮೊಟ್ಟೆ ತಿನ್ನುವ ಸ್ಪರ್ಧೆ ಇತ್ತಾ ಅಂತ ನೋಡಿದರೆ ಹಾಗೇನು ಇರಲಿಲ್ಲ. ಈ ವ್ಯಕ್ತಿ ತನ್ನ ಸ್ನೇಹಿತನ ಜತೆ ಮೊಟ್ಟೆ ತಿನ್ನಲೆಂದು ಅಲ್ಲಿಯ ಬಿಬಿಗನಿ ಮಾರ್ಕೆಟ್‌ಗೆ ಹೋಗಿದ್ದಾರೆ, ಆದ್ದರೆ ಇಬ್ಬರ ನಡುವೆ ಮೊಟ್ಟೆ ವಿಷಯಕ್ಕೆ ಚರ್ಚೆ ನಡೆದಿದೆ. ಆಗ ಈತ 2000 ರೂಪಾಯಿ ಬೆಟ್ಟಿಂಗ್‌ಗೆ 50 ಮೊಟ್ಟೆ ತಿನ್ನುವುದಾಗಿ ಒಪ್ಪಿಕೊಂಡು ತಿನ್ನಲು ಶುರು ಮಾಡಿದ್ದಾನೆ. ಮೊಟ್ಟೆ ತಿನ್ನುತ್ತಾ-ತಿನ್ನುತ್ತಾ ಹಾಗೆ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ಆದ್ದರಿಂದ ಮುಂದೆ ಯಾರಾದರೂ ಈ ರೀತಿ ಮೊಟ್ಟೆ ಚಾಲೆಂಜ್‌ ನಿಮ್ಮ ಮುಂದಿಟ್ಟರೆ ಚಾಲೆಂಜ್‌ ಗೆಲ್ಲದಿದ್ದರೂ ಪರ್ವಾಗಿಲ್ಲ, ಹುಷಾರು ಆಗಿರಿ.

 
ಹೆಲ್ತ್